

ಜಲಜೀವನ ಮಿಷನ್, ಘನವಸ್ತು ವಿಲೇವಾರಿ ಘಟಕ. ಸೇರಿದಂತೆ ಕೆಲವು ಯೋಜನೆಗಳಲ್ಲಿ ಉತ್ತರ ಕನ್ನಡವನ್ನು ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ತರುವ ಹಿನ್ನೆಲೆಯಲ್ಲಿ ಹಿಂದಿನ ಮುಖ್ಯಕಾರ್ಯದರ್ಶಿ ಮಹಮದ್ ರೋಷನ್ ವಿಶೇಶ ಪ್ರಯತ್ನ ನಡೆಸಿದ್ದರು. ಈ ಬಗ್ಗೆ ಈಗಿನ ಸಿ.ಎಸ್. ಪ್ರೀಯಾಂಗಾ ಎಮ್. ರನ್ನು samajamukhi.net ಪ್ರತಿನಿಧಿ ಪ್ರಶ್ನಿಸಿದಾಗ ಅಂಥಹ ಗುರಿ ನಮಗಿಲ್ಲ, ರಾಜ್ಯದಲ್ಲಿ ನಮ್ಮ ಜಿಲ್ಲೆಯ (ಯೋಜನೆ ಅನುಷ್ಠಾನ) ಸ್ಥಾನಮಾನ ದ ಮಾಹಿತಿ ತಿಳಿದಿಲ್ಲ . ಎಂದು ಉತ್ತರಿಸಿದರು.
ಸಿದ್ದಾಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ. ಎಂ. ತಾಲೂಕಿನ ಲ್ಲಿ ನಡೆಯುತ್ತಿರುವ ರುವ ಜಲಜೀವನ್ ಮಿಷನ್ ಕಾಮಗಾರಿ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಣೆ ನಡೆಸಿದರು.
ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಪ್ರಾರಂಭವಾಗಿದೆ ಅಕ್ಟೋಬರ್ 31ರ ಒಳಗೆ ಮುಗಿಸುವ ಗುರಿ ಹೊಂದಿದ್ದೇವೆ 2060 ಸಂಪರ್ಕ ಕಲ್ಪಿಸಲಾಗಿದ್ದು 28 ಟೆಂಡರ್ ಕರೆದಿದ್ದು,27ಕ್ಕೆ ಚಾಲನೆ ನೀಡಲಾಗಿದೆ 4200 ಗುರಿ ಹೊಂದಿದ್ದು ಅಕ್ಟೋಬರ್ 31ರೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದರು.
1800 ಮನೆಯವರು ನೀರು ಬೇಡ ಎಂದಿದ್ದಾರೆ. ಕೆಲವೆಡೆಗಳಲ್ಲಿ ದೂರ ದೂರ ಇರುವ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡುವುದು ಕಷ್ಟವಾಗಿದ್ದರಿಂದ ಅವಳಿಗೆ ಸಂಪರ್ಕ ನೀಡಲು ಸಾಧ್ಯವಾಗುತ್ತಿಲ್ಲ. ಕೋರ್ಲಕೈ ಮತ್ತು ಹಲಗೇರಿ ಗ್ರಾಮ ಪಂಚಾಯಿತಿಗಳಲ್ಲಿ ವೀಕ್ಷಣೆ ಮಾಡಿದ್ದೇನೆ. ಅಣಲೇಬೈಲ್ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರವಾಹ ಸಂದರ್ಭದಲ್ಲಿ ತೋಟ ಮತ್ತು ಗದ್ದೆಗಳಿಗೆ ಬಂದಿರುವ ಮಣ್ಣನ್ನು ನರೇಗಾ ಕಾಮಗಾರಿ ಮೂಲಕ ತೆಗಲು ಪ್ರಸ್ತಾವನೆಯನ್ನು ಕಳಿಸಿದ್ದೇವೆ 36 ಹೆಕ್ಟೇರ್ ತೋಟದ ಪ್ರದೇಶದಲ್ಲಿ 214 ರೈತರ ತೋಟದಲ್ಲಿ ಮಣ್ಣು ಬಂದಿದ್ದು ಅದನ್ನು ತೆಗೆಯಲು ಯೋಚನೆ ಮಾಡಲಾಗಿದೆ.15ನೇ ಹಣಕಾಸು ಯೋಜನೆಯಡಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಅನುದಾನದಲ್ಲಿ ಕಾಮಗಾರಿಗಳನ್ನು ಆರಂಭಿಸುತ್ತೇವೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ 125 ಕಡೆ ರೆಡಿ ಇದೆ 56 ಪ್ರಸ್ತಾವನೆ ನೀಡಲಾಗಿದೆ. ಅಕ್ಟೋಬರ್ 2 ಒಳ ಗೆ ಇವುಗಳೆಲ್ಲ ಕಾರ್ಯಾರಂಭ ಮಾಡಲಿದವೆ. ಘನ ತ್ಯಾಜ್ಯ ವಿಲೇವಾರಿ ಗೆ ಜಾಗ ಇಲ್ಲದವರು ಬೇರೆ ಪಂಚಾಯಿತಿ ಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ಯಾರಿಗೆ ಕೆಲಸ ಬೇಕು ಅಂತಹವರು ಗ್ರಾಮ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿದ ರೆ ಹದಿನೈದು ದಿನಗಳೊಳಗೆ ನೀಡಲಾಗುವುದು. ಸಂಬಂಧಿಸಿದ ಗ್ರಾಮ ಪಂಚಾಯತ್ ಉದ್ಯೋಗ ನೀಡದಿದ್ದರೆ ನಮಗೆ ದೂರು ನೀಡಬಹುದು ಎಂದರು.
ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ ರಾವ್, ತೋಟಗಾರಿಕೆ ಇಲಾಖೆ ಯ ಅರುಣ, ಮಾಬ್ಲೇಶ್ವರ ಹೆಗಡೆ, ಸಿಡಿಪಿಓ,ಸುಶೀಲಾ ಮೊಗೇರ ಉಪಸ್ಥಿತರಿದ್ದರು.




