

ಸಿದ್ಧಾಪುರ ತಾಲೂಕಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ 11 ಕಾಮಗಾರಿಗಳಿಗೆ 3 ಕೋಟಿ ಅನುದಾನ ಮಂಜೂರಿಯಾಗಿದ್ದು ಇದೇ ವರ್ಷ ಕ್ಷೇತ್ರಕ್ಕೆ ನೂರು ಕೋಟಿಗೂ ಹೆಚ್ಚು ಅನುದಾನ ಬರಲಿದೆ ಎಂದು ಪಟ್ಟಣ ಪಂಚಾಯತ್ ಸದಸ್ಯ ಮಾರುತಿ ನಾಯ್ಕ ಹೊಸೂರು ತಿಳಿಸಿದರು. ನಗರದಲ್ಲಿ ಮಾಧ್ಯಮಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಚಟುವಟಿಕೆ ನಡೆಯುತಿದ್ದು ಇದರ ಹಿಂದಿನ ಶಕ್ತಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಂದರು.



ಸಿದ್ಧಾಪುರದಲ್ಲಿ 10 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ನಗರದ ಅತಿ ಅವಶ್ಯ ಕೆಲಸಗಳಾದ ಮುಂಡ್ಗೆಹಳ್ಳದ ಗಟಾರ, ವಿದ್ಯಾರಣ್ಯಗಲ್ಲಿ ಮತ್ತು ಸಾಯಿನಗರದ ರಸ್ತೆ ಕಾಂಕ್ರೀಟಿಕರಣ, ಕನ್ನಳ್ಳಿ ರಸ್ತೆ ಕಾಮಗಾರಿ ಸೇರಿದಂತೆ 8 ವಾರ್ಡ್ಗಳ 11 ಕಾಮಗಾರಿಗಳಿಗೆ ಮೂರು ಕೋಟಿ ಮಂಜೂರಿಯಾಗಿದೆ. ಇನ್ನುಳಿದ 7 ವಾರ್ಡ್ ಗಳಿಗೆ ಅನುದಾನ ಬರಲಿದೆ. ಇದರ ಮಧ್ಯೆ ನಗರದ ಶಾಶ್ವತ ಕುಡಿಯುವ ನೀರಿನ ಯೋಜನೆ, ಕೆರೆಗಳ ಅಭಿವೃದ್ಧಿಗೆ ಕ್ರೀಯಾಯೋಜನೆ ಮಾಡಿ ಅವುಮಂಜೂರಿ ಹಂತದಲ್ಲಿದೆ. ಇವುಗಳ ವಿವರವನ್ನು ಶಾಸಕರು ಘೋಶಿಸಲಿದ್ದಾರೆ ಎಂದರು.
ಪ್ರವೇಶ ಪ್ರಕಟಣೆ- 2021-22 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷದ ಬಿಎ, ಬಿಕಾಂ ಹಾಗೂ ಬಿಬಿಎ ಕೋರ್ಸ್‍ಗಳ ಪ್ರವೇಶ ಪ್ರಾರಂಭ
ಸಿದ್ದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2021-22 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷದ ಬಿಎ, ಬಿಕಾಂ ಹಾಗೂ ಬಿಬಿಎ ಕೋರ್ಸ್‍ಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ. ದಿ.25/08/2021 ರಿಂದ ಕಾಲೇಜಿನ ಕಛೇರಿಯಲ್ಲಿ ಪ್ರವೇಶ ಅರ್ಜಿಯನ್ನು ಉಚಿತವಾಗಿ ವಿತರಿಸಲಾಗುವುದು. ಪಿಯುಸಿ ಪಾಸಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪ್ರವೇಶ ಅರ್ಜಿಯನ್ನು ತುಂಬಿ ಜೂತೆಗೆ ಅಗತ್ಯ ದಾಖಲಾತಿಗಳೊಂದಿಗೆ ದಿ. 04-09-2021 ರೊಳಗೆ ಪ್ರವೇಶ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಕಛೇರಿಯನ್ನು ಸಂಪರ್ಕಿಸಿರಿ. ದೂ: 08389-298027


