

ಸಿದ್ಧಾಪುರ ತಾಲೂಕಿನ ದಕ್ಷಿಣ ಭಾಗದ ಗ್ರಾಮ ಒಂದರ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಯತ್ನದ ಹಿನ್ನೆಲೆಯಲ್ಲಿ ಕಮಲಾಕರ ಎನ್ನುವ ಆರೋಪಿಯನ್ನು ಸ್ಥಳಿಯರು ಬಂಧಿಸಿದ್ದಾರೆ. ಈ ಆರೋಪಿ ತನ್ನ ದೂರದ ಸಂಬಂಧಿ ಶಾಲಾ ಬಾಲಕಿಗೆ ಕುರುಕಲು ತಿಂಡಿ ನೀಡಿ ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ ಬಾಲಕಿ ಪ್ರತಿಭಟಿಸಿ ಬಚಾವಾಗಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಕಾರವಾರಕ್ಕೆ ಸ್ಥಳಾಂತರಿಸಲಾಗಿದೆ.
ಸಿದ್ಧಾಪುರ ಗಡಿಯ ಚೂರಿಕಟ್ಟೆ ಬಳಿ ಗಾಂಜಾ ಮಾರಾಟ ಮಾಡುತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ರಂಜನ್ ಮಹಾಲೆ ಮತ್ತು ಮಂಜುನಾಥ ಎನ್ನುವ ಇಬ್ಬರು ಆರೋಪಿಗಳು ಮೋಟಾರ್ ಸೈಕಲ್ ಮೇಲೆ ಬಂದು ಗಾಂಜಾ ಮಾರುತಿದ್ದಾರೆ ಎನ್ನುವ ಮಾಹಿತಿ ಆಧರಿಸಿ ದಾಳಿ ಮಾಡಿದ ಮಹಾಂತೇಶ್ ಕುಂಬಾರ್ ತಂಡ ಗಾಂಜಾ, ಮೋಟಾರ್ ಸೈಕಲ್ ಮತ್ತು ಮೊಬೈಲ್ ವಶಕ್ಕೆ ಪಡೆದಿದೆ. ಆರೋಪಿಗಳು ಸಿದ್ಧಾಪುರ ನಗರವಾಸಿಗಳೆಂದು ತಿಳಿದುಬಂದಿದೆ.



