

ಶಹಾಪುರದ ಮಕ್ಕಳ ಸಾಹಿತ್ಯಾಸಕ್ತಿಯ ಸಂಧ್ಯಾ ಸಾಹಿತ್ಯ ವೇದಿಕೆಯು ಕಳೆದ ೨೨ ವರುಷಗಳಿಂದ ಪ್ರತಿವರ್ಷ ೧೬ ವರ್ಷ ದೊಳಗಿನ ಬಾಲ ಬರಹಗಾರರಿಗೆ ಕೊಡಮಾಡುವ ಪ್ರತಿಷ್ಠಿತ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಕ್ಕೆ ಅರ್ಜಿ ಆಹ್ವಾನಿಸಿದೆ.
ಎಳೆಯ ವಯಸ್ಸಿನಲ್ಲಿ ಅಪಾರ ಪ್ರತಿಭೆ ತೋರಿ ಕಣ್ಮರೆಯಾದ ಬಾಲ ಕವಿ ‘ವಿದ್ಯಾಸಾಗರ ಕುಕ್ಕುಂದಾ’ ಅವರ ನೆನಪಿನಲ್ಲಿ ಪ್ರತಿವರ್ಷ ಬಾಲ ಬರಹಗಾರರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಪುರಸ್ಕಾರವು ೫೦೦೦ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಬಾಲ ಬರಹಗಾರರು ಕಳೆದ ಅಕ್ಟೋಬರ್ ತಿಂಗಳಿನಿಂದ ಇಲ್ಲಿಯ ತನಕ ಬರೆದಿರುವ ಒಂದು ಸಂಕಲನಕ್ಕಾಗುವಷ್ಟು ಪ್ರಕಟಿತ ಅಥವಾ ಅಪ್ರಕಟಿತ ಕನ್ನಡ ಬರಹಗಳನ್ನು ಕಳುಹಿಸಬಹುದಾಗಿದೆ. ಕತೆ, ಕವಿತೆ, ಲಲಿತ ಬರಹ, ಪ್ರವಾಸ ಕಥನ, ನಾಟಕ ಹೀಗೆ ಯಾವುದೇ ಪ್ರಕಾರದಲ್ಲೂ ಬರವಣಿಗೆ ಇರಬಹುದಾಗಿದೆ.
ಜನ್ಮದಿನಾಂಕ ದೃಢೀಕರಣ ಮತ್ತು ಫೋಟೋ ಜೊತೆಗೆ ಬರಹಗಳನ್ನು ಈ ವಿಳಾಸಕ್ಕೆ ತಲುಪಿಸತಕ್ಕದ್ದು. ರವಿ ಹಿರೇಮಠ, ಅಧ್ಯಕ್ಷರು, ಸಂಧ್ಯಾ ಸಾಹಿತ್ಯ ವೇದಿಕೆ, ಅಮೃತ ನಿವಾಸ, ಸಿ.ಬಿ.ಕಮಾನಿನ ಹತ್ತಿರ, ಶಹಾಪುರ -೫೮೫ ೨೨೩ (ಯಾದಗಿರಿ ಜಿಲ್ಲೆ). ಬರಹಗಳನ್ನು ಕಳುಹಿಸುವ ಕೊನೆಯ ದಿನಾಂಕ ೨೦೨೧ರ ಅಕ್ಟೋಬರ್ ೧೦. ಹೆಚ್ಚಿನ ಮಾಹಿತಿಗಾಗಿ ೯೪೪೮೬೫೧೫೨೦/೯೯೮೬೫೯೦೮೯೪ ಸಂಪರ‍್ಕಿಸಿ ಎಂದು ವೇದಿಕೆಯ ಸಂಚಾಲಕ ರಾಜಶೇಖರ ಕುಕ್ಕುಂದಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



೨೦೨೧-೨೨ ನೇ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷದ ಬಿಎ, ಬಿಕಾಂ ಹಾಗೂ ಬಿಬಿಎ ಕೋರ್ಸ್ ಗ ಳ ಪ್ರವೇಶ ಪ್ರಾರಂಭ
ಸಿದ್ದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೧-೨೨ ನೇ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷದ ಬಿಎ, ಬಿಕಾಂ ಹಾಗೂ ಬಿಬಿಎ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ. ದಿ.೨೫/೦೮/೨೦೨೧ ರಿಂದ ಕಾಲೇಜಿನ ಕಛೇರಿಯಲ್ಲಿ ಪ್ರವೇಶ ಅರ್ಜಿಯನ್ನು ಉಚಿತವಾಗಿ ವಿತರಿಸಲಾಗುವುದು. ಪಿಯುಸಿ ಪಾಸಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪ್ರವೇಶ ಅರ್ಜಿಯನ್ನು ತುಂಬಿ ಜೂತೆಗೆ ಅಗತ್ಯ ದಾಖಲಾತಿಗಳೊಂದಿಗೆ ದಿ. ೦೪-೦೯-೨೦೨೧ ರೊಳಗೆ ಪ್ರವೇಶ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಕಛೇರಿಯನ್ನು ಸಂಪರ್ಕಿಸಿರಿ. ದೂ: ೦೮೩೮೯-೨೯೮೦೨೭
ನಾಣಿಕಟ್ಟಾ ಸರಕಾರಿ ಪದವಿ ಪೂರ್ವಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಪ್ರಾರಂಭ :
ಪಿ.ಯು. ಪ್ರವೇಶ- ಸರಕಾರಿ ಪದವಿ ಪೂರ್ವಕಾಲೇಜು ನಾಣಿಕಟ್ಟಾದಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಈ ಕಾಲೇಜಿಗೆ ಕಳೆದ ೧೦ ವರ್ಷಗಳಿಂದ ದ್ವಿತೀಯ ಪಿಯುಸಿಯಲ್ಲಿ ನಿರಂತರ ೯೦% ಗಿಂತಲೂಅಧಿಕ ಫಲಿತಾಂಶ ಬಂದಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಅನುಭವಿ ಉಪನ್ಯಾಸಕ ವೃಂದ ಹಾಗೂ ಪ್ರಾಚಾರ್ಯರ ಮಾರ್ಗದರ್ಶನದಲ್ಲಿ ಶಿಸ್ತು ಮತ್ತು ಶೈಕ್ಷಣಿಕ ಸಾಧನೆಗಳಿಗೆೆ ಹೆಚ್ಚಿನಒತ್ತುಕೊಡುತ್ತಿದ್ದು, ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಕಾಳಜಿ ತೋರಿಸುತ್ತಿರುವುದು ಶ್ಲಾಘನೀಯವಾಗಿದೆ.ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಾಕಷ್ಟು ಅವಕಾಶವಿದ್ದು ಸರಕಾರದಿಂದದೊರೆಯುವಎಲ್ಲಾಆರ್ಥಿಕ ಮತ್ತುಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಒತ್ತುಕೊಡುತ್ತಿದ್ದು, ಆನ್‌ಲೈನ್ ತರಗತಿಗಳು ನಿರಂತರವಾಗಿ ನಡೆಯುತ್ತಿವೆ. ಕಾಲೇಜಿಗೆ ಸುಸಜ್ಜಿತವಾದಕಟ್ಟಡವಿದ್ದು ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯ ಸೌಲಭ್ಯವಿದ್ದು, ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಕಳೆದ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಪಡೆದಿದ್ದು, ಇಲ್ಲಿನ ಹರ್ಷಿತಾ ಎಂ.ಮೇಸ್ತಾ (೫೩೪/೬೦೦) –ಕಲಾ ವಿಭಾಗ ಮೋಹಿನಿ ಎಚ್‌ಗೊಂಡ (೫೪೬/೬೦೦) -ವಾಣಿಜ್ಯ ವಿಭಾಗ, ಎಂ. ಮೇಘನಾ (೫೫೨/೬೦೦)–ವಿಜ್ಞಾನ ವಿಭಾಗದಲ್ಲಿಗರಿಷ್ಠ ಅಂಕಗಳನ್ನು ಪಡೆದು ಈ ಸಾಲಿನ ಹೆಮ್ಮೆಯ ಸಾಧಕರಾಗಿದ್ದಾರೆ.ಅವರನ್ನು ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

