

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಬಾಡಿಗಾರ್ಡ್ ವಾರ್ಷಿಕ 1.5 ಕೋಟಿ ರೂ. ಆದಾಯ ಆರೋಪದ ನಡುವೆ ಅವರನ್ನು ಎತ್ತಂಗಡಿ ಮಾಡಲಾಗಿದೆ. ಮುಂಬೈ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ ಟೇಬಲ್ 2015ರಿಂದಲೂ ಅಮಿತಾಬ್ ಬಚ್ಚನ್ ಅವರ ಬಾಡಿಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಮುಂಬೈ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಬಾಡಿಗಾರ್ಡ್ ವಾರ್ಷಿಕ 1.5 ಕೋಟಿ ರೂ. ಆದಾಯ ಆರೋಪದ ನಡುವೆ ಅವರನ್ನು ಎತ್ತಂಗಡಿ ಮಾಡಲಾಗಿದೆ. ಮುಂಬೈ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ ಟೇಬಲ್ 2015ರಿಂದಲೂ ಅಮಿತಾಬ್ ಬಚ್ಚನ್ ಅವರ ಬಾಡಿಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಹೆಡ್ ಕಾನ್ಸ್ ಟೇಬಲ್ ಜೀತೇಂದ್ರ ಶಿಂಧೆ ಅವರನ್ನು ದಕ್ಷಿಣ ಮುಂಬೈಯ ಡಿಬಿ ಮಾರ್ಗದ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು 15 ದಿನಗಳ ಹಿಂದೆ ವರ್ಗಾವಣೆ ಮಾಡಲಾಗಿದ್ದು, ಪೊಲೀಸ್ ನೋಟಿಸ್ ಒಂದರಲ್ಲಿ ಅದನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಅವರಿಗೆ ಮುಂಬೈ ಪೊಲೀಸರಿಂದ ‘X’ ಕೆಟಗರಿ ಭದ್ರತೆಯನ್ನು ಒದಗಿಸಲಾಗುತ್ತಿದೆ. 2015ರಿಂದಲೂ ಅಮಿತಾಬ್ ಬಚ್ಚನ್ ಅವರಿಗೆ ಬಾಡಿಗಾರ್ಡ್ ಆಗಿ ಶಿಂಧೆ ಕಾರ್ಯನಿರ್ವಹಿಸುತ್ತಿದ್ದರು. ಮಾರ್ಗಸೂಚಿಗಳ ಪ್ರಕಾರ, ಐದು ವರ್ಷ ಮುಗಿದರೂ ಪೊಲೀಸ್ ಕಾನ್ಸ್ ಟೇಬಲ್ ಅದೇ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಬಾಡಿಗಾರ್ಡ್ ಶಿಂಧೆ ಅವರು ವಾರ್ಷಿಕವಾಗಿ 1.5 ಕೋಟಿ ರೂಪಾಯಿ ಆದಾಯ ಸಂಪಾದನೆಯಿದೆ ಎಂದು ಮಾಧ್ಯಮವೊಂದು ಇತ್ತೀಚಿಗೆ ವರದಿ ಪ್ರಕಟಿಸಿತ್ತು. ಶಿಂಧೆ ಅವರು ನಂಬಿಕಾಸ್ಥ ಅಂಗರಕ್ಷಕರಲ್ಲಿ ಒಬ್ಬರಾಗಿದ್ದು, ಅಮಿತಾಬ್ ಬಚ್ಚನ್ ಅವರಿಗೆ ಭದ್ರತೆ ನೀಡಲು ಅವರನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸ್ ಇಲಾಖೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಶಿಂಧೆ ಪತ್ನಿ ಏಜೆನ್ಸಿಯೊಂದನ್ನು ನಡೆಸುತ್ತಿದ್ದು, ಇದು ಪ್ರಮುಖ ವ್ಯಕ್ತಿಗಳಿಗೆ ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತದೆ. ಶಿಂಧೆ ತಮ್ಮ ಆಸ್ತಿಯ ವಿವರಗಳನ್ನು ಪೊಲೀಸ್ ಇಲಾಖೆಗೆ ಒದಗಿಸಿದ್ದಾರೆಯೇ ಎಂಬುದನ್ನು ರಾಜ್ಯ ಸರ್ಕಾರವು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. (kpc)
