ಸಿದ್ದಾಪುರ ತಾಲೂಕಿನಲ್ಲಿ ಹಳ್ಳಿಹಳ್ಳಿಗಳಲ್ಲಿ ಹೆಂಡವನ್ನು ಮಾರುತ್ತಿದ್ದಾರೆ ಪ್ರತಿಗ್ರಾಮದಲ್ಲಿ ಓಸಿ, ಇಸ್ಪೀಟಾಟ ಶುರುವಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಾಗಿ ಹದಗೆಟ್ಟಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹೇಳಿದರು ಅವರು ಶನಿವಾರ ಪಕ್ಷದ ಕಚೇರಿ ಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ಈ ಆರೋಪ ಮಾಡಿದರು. ತಾಲೂಕಿನ
ಯಾವುದೇ ಇಲಾಖೆಯಲ್ಲೂ ಕೆಲಸಗಳು ಆಗುತ್ತಿಲ್ಲ ಅಧಿಕಾರಿಗಳ ಹಾಗೂ ಜನಪ್ರತಿನಿದಿನಗಳ ನಿರ್ಲಕ್ಷದಿಂದ ಜನ ಬೇಯುತಿದ್ದಾರೆ, ಅಕ್ರಮ ಚಟುವಟಿಕೆಗಳಾದ ಇಸ್ಪೀಟ್ ಹಾಗೂ ಹೆಂಡ ಓಸಿ ಸಂಪೂರ್ಣವಾಗಿ ಬಂದ್ ಆಗಬೇಕು. ಜನಸಾಮಾನ್ಯರಿಗೆ ಆಧಾರ ಕಾರ್ಡ್ ರೇಷನ್ ಕಾರ್ಡ್ ತ್ವರಿತವಾಗಿ ಸಿಗುವಂತಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಕುರಿತು ಉಗ್ರವಾದ ಪ್ರತಿಭಟನೆ ಮಾಡಲಾಗುವುದು. ಶಿಕ್ಷಕ ಸಂಘದಿಂದ ಆದ ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಬಗ್ಗೆ ಯಾವುದೇ ರೀತಿಯ ಕ್ರಮ ಆಗಿಲ್ಲ ಈ ಕುರಿತು ಮನವಿ ನೀಡಿದರೂ ಕ್ರಮ ಕೈಗೊಳ್ಳದ ಸಹಾಯಕ ಕಮಿಷನರ್ ಶಿರಸಿ ರವರ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಅನುಮತಿ ಕೇಳಿದ್ದೇವೆ ಆದರೆ ಈವರೆಗೂ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಜಿಲ್ಲಾಧಿಕಾರಿಗಳಿಂದ ಉತ್ತರ ಬರದಿದ್ದಲ್ಲಿ ಸೆಪ್ಟೆಂಬರ್ ಒಂದನೇ ತಾರೀಕು ಶಿರಸಿ ಎ ಸಿ ಕಚೇರಿ ಮುಂದೆ ಧರಣಿ ಮಾಡಲಿದ್ದೇವೆ ಇಲ್ಲಿ ಏನು ಮಾಡಿದರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆ ಇಲ್ಲವಾಗಿರುವುದು ಬೇಸರದ ಸಂಗತಿ ಎಂದರು.
ಕಳೆದ ಮೂರು ತಿಂಗಳ ಹಿಂದೆ ಆಧಾರ್ ಕಾರ್ಡ್ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಕೆಲಸ ಬಿಟ್ಟಿದ್ದಾರೆ ಆದರೆ ಈವರೆಗೂ ಬೇರೆಯವರನ್ನು ನೇಮಿಸಿಕೊಂಡು ಆಧಾರ್ ಕಾರ್ಡ್ ಅಪ್ಲೋಡ್ ಮಾಡುವ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಈ ಕುರಿತು ತಸಿಲ್ದಾರ್ ರಿಗೆ ವಿಷಯ ತಿಳಿಸಿದ್ದೇವೆ ಆದರೆ ಈವರೆಗೆ ಆಧಾರ್ ಕಾರ್ಡ್ ಕೆಲಸ ಪ್ರಾರಂಭವಾಗಿಲ್ಲ
ಹಲಗೇರಿಯ ಜನಸ್ನೇಹಿ ಕೇಂದ್ರ ದಲ್ಲಿ ಕಳೆದ ಮೂರು ತಿಂಗಳಿಂದ ಜಿಪಿಎಸ್ ಹಾಳಾಗಿದೆ ಕೇಳಿದರೆ ಸದ್ಯದಲ್ಲಿ ಸರಿಪಡಿಸಲಾಗುವುದು ಎಂಬ ಉತ್ತರ ನೀಡುತ್ತಾರೆ ಈ ಕುರಿತು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದೆ. ಒಂದು ವಾರದಲ್ಲಿ ಸರಿಪಡಿಸುವುದಾಗಿ ತಿಳಿಸಿರುತ್ತಾರೆ
ಈಗ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳಲ್ಲಿ ಆಧಾರ ಕಾರ್ಡ್ ಮಾಡುವ ವ್ಯವಸ್ಥೆ ಮಾಡಿದ್ದಾರೆ ಆದರೆ ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆದುಕೊಂಡು ಆಧಾರ್ ಕಾರ್ಡ್ ಮಾಡಿಕೊಳ್ಳಬೇಕಾಗಿದೆ ಅದು ಸಹ ದಿನವೊಂದಕ್ಕೆ ಕೇವಲ 15 ಕಾರ್ಡ್ ಆಗುತ್ತದೆ. ಸ್ಥಳೀಯ ಶಾಸಕ ಕಾಗೇರಿಯವರು ಹಿಂದುಳಿದ ವರ್ಗದವರ ಮತವನ್ನು ಪಡೆದು ಆಯ್ಕೆಯಾಗಿದ್ದಾರೆ. ಆದರೆ ತಾಲೂಕಿನಲ್ಲಿ ಇಂತಹ ಪರಿಸ್ಥಿತಿಯನ್ನು ಅವರು ಗಮನಿಸುತ್ತಿಲ್ಲ. ನಾನು ಉನ್ನತ ಸ್ಥಾನದಲ್ಲಿ ಇದ್ದೇನೆ ತಾಲೂಕಿನಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ ಎಂದು ಅವರು ತಿಳಿದುಕೊಂಡಿದ್ದರೆ ಅದನ್ನು ಮನಸ್ಸಿನಿಂದ ತೆಗೆದುಹಾಕಿ ಮತ ಹಾಕಿದ ಮತದಾರರ ಪರವಾಗಿ ಕೆಲಸ ಮಾಡಿ ಅವರ ಋಣ ತೀರಿಸುವ ಕೆಲಸ ಮಾಡಬೇಕು. ಕೆಲಸ ಮಾಡಲು ಸಾಧ್ಯವಾಗದೇ ಇದ್ದಲ್ಲಿ ರಾಜೀನಾಮೆ ನೀಡಿ ಮನೆಯಲ್ಲಿ ಯಾವುದಾದರೂ ಕೆಲಸಗಳಿದ್ದರೆ ಮಾಡಿಕೊಳ್ಳಲಿ. ಯಾಕೆ ಸಾರ್ವಜನಿಕರ ಬದುಕಿನಲ್ಲಿ ಆಟ ಆಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಅವರು ಹೇಳಿದರು
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿ. ಎನ್.ನಾಯ್ಕ ಮಾತನಾಡಿ
ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯಾಗ್ರಹ ಮಾಡುತ್ತಾರೆ ಪ್ರತಿಭಟನೆ ಮಾಡುತ್ತಾರೆ ಎಂದರೆ ಅದನ್ನು ಗೌರವಿಸಿ ಯಾವ ಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡುತ್ತಿದ್ದರು ಈ ಸರ್ಕಾರದಲ್ಲಿ ಪ್ರತಿಭಟನೆ ಮಾಡಲಿ ಸತ್ಯಾಗ್ರಹ ಮಾಡಲಿ ತಮಗೇನು ಸಂಬಂಧವಿಲ್ಲ ಎನ್ನುವಂತೆ ಇದ್ದುಬಿಡುತ್ತಾರೆ. ಪ್ರಜಾಪ್ರಭುತ್ವ ನಡೆಯುತ್ತಿದೆ ಎಂಬ ಬಗ್ಗೆ ಕುರುಹುಗಳು ಕಾಣುತ್ತಿಲ್ಲ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಸತ್ತುಹೋಗಿದೆ. ಜನಸಾಮಾನ್ಯರಿಗೆ ಎಷ್ಟೇ ತೊಂದರೆ ಆಗುತ್ತಿದ್ದರೂ ಪ್ರಜಾಪ್ರಭುತ್ವದ ಯಾವುದೇ ವ್ಯವಸ್ಥೆ ಇಲ್ಲಿ ಜಾರಿಯಾಗುತ್ತಿಲ್ಲ. ಜನಸಾಮಾನ್ಯರು ಅವರ ಕಷ್ಟಗಳನ್ನು ತಮ್ಮ ತಮ್ಮಲ್ಲೇ ಹೇಳಿಕೊಳ್ಳಬೇಕು ಕೂಗಿ ಕೊಳ್ಳಬೇಕು ಹಾಗೆ ಸುಮ್ಮನಿರಬೇಕು. ಈ ವ್ಯವಸ್ಥೆ ಕೂಡಲೇ ಸರಿಯಾಗಬೇಕು ಎಂದರು.
ಸುದ್ದಿಗೋಷ್ಠಿ ಯಲ್ಲಿದ್ದ ಕಾಂಗ್ರೆಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷ ಸೀಮಾ ಹೆಗಡೆ ಮಾತನಾಡಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಮಹಿಳೆಯರು ಭಯದಿಂದ ಓಡಾಡುವಂತಹ ವಾತಾವರಣ ನಿರ್ಮಾಣವಾಗಿದೆ ಸರ್ಕಾರವು ಇದನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಅತ್ಯಾಚಾರಿಗಳ ರಾಜ್ಯವಾಗಿ ಪರಿಣಮಿಸುತ್ತಿದೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಶಿಕ್ಷೆಯನ್ನು ನೀಡಬೇಕು ಹೆಣ್ಣುಮಕ್ಕಳು ರಾಜ್ಯದಲ್ಲಿ ನಿರ್ಭೀತಿಯಿಂದ ಓಡಾಡುವಂತಹ ವಾತಾವರಣ ನಿರ್ಮಾಣ ಆಗಬೇಕು ಎಂದರು
ಈ ಸಂದರ್ಭದಲ್ಲಿಕಾಂಗ್ರೆಸ್ನ ಪ್ರಮುಖರಾದ ಸಾವೆರಾ ಡಿಸಿಲ್ವ, ಮುನವರ ಗುರ್ಕಾರ್ ನಾಸಿರ್ ಖಾನ್, ಅಬ್ದುಲ್ಲಾ ಸಾಬ್ ಹೇರೂರು ಅರುಣ್ ಬಣಗಾರ್ ಮಾರುತಿ ಕಿಂದ್ರಿ ಪ್ರಶಾಂತ್ ಹೊಸೂರ್ ಮುಂತಾದವರು ಉಪಸ್ಥಿತರಿದ್ದರು