

ರಾಷ್ರೀಯ ಹಣಕಾಸು ನೀತಿ ಕೈಬಿಡುವಂತೆ ಆಗ್ರಹಿಸಲು ಮತ್ತು ಮಹಿಳಾ ದೌರ್ಜನ್ಯ ನಿಯಂತ್ರಣಕ್ಕೆ ಒತ್ತಾಯಿಸಿ ಇಂದು ಸಿದ್ಧಾಪುರದಲ್ಲಿ ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಗಳಿಂದ ಪ್ರತಿಭಟನಾ ಮೆರವಣಿಗೆ ನಡೆದು ಮನವಿ ನೀಡಲಾಯಿತು.
ಖಾಸಗೀಕರಣ ಉತ್ತೇಜಿಸುವ ರಾಷ್ಟ್ರೀಯ ಹಣಕಾಸು ನೀತಿಯಿಂದ ಶ್ರೀಮಂತರು, ಬಂಡವಾಳ ಶಾಹಿಗಳಿಗೆ ಲಾಭವಾಗುತ್ತದೆ. ಇದರ ಜಾರಿಯಿಂದ ಶ್ರೀಮಂತರು, ಬಿ.ಜೆ.ಪಿ.ಗೆ ಲಾಭವಿದೆ ಆದರೆ ಇದರಿಂದ ದೇಶಕ್ಕೆ ಅಪಾಯವಿದೆ. ಇಂಥ ಲಾಭದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಬಿ.ಜೆ.ಪಿ. ಮತ್ತು ನರೇಂದ್ರಮೋದಿ ಭಾರತದ ಜನಸಾಮಾನ್ಯರ ಸ್ವಾತಂತ್ರ್ಯವನ್ನು ಕಸಿದು ಉದ್ಯಮಿಗಳಿಗೆ ನೀಡುತಿದ್ದಾರೆ. ಇದು ಅಪಾಯದ ಸಂಕೇತ ಎಂದು ವಸಂತನಾಯ್ಕ ಈ ಪ್ರತಿಭಟನೆಯ ವೇಳೆ ಎಚ್ಚರಿಸಿದರು.
ತಹಸಿಲ್ಧಾರರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸುವ ವೇಳೆ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಹೆಗಡೆ ಬಿ.ಜೆ.ಪಿ. ಮತ್ತು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮಹಿಳೆಯರ ಮೇಲೆ ಗೌರವ, ಕಾಳಜಿ ಇಲ್ಲ ಇದರ ವಿರುದ್ಧ ಮಹಿಳೆಯರು ಸಂಘಟಿತವಾಗಿ ಹೋರಾಡುವುದೊಂದೇ ದಾರಿ ಎಂದರು.
ಯುವ ಕಾಂಗ್ರೆಸ್ ನ ಕುಮಾರ ಜೋಶಿ ಮತ್ತು ಪ್ರಶಾಂತ್ ನಾಯ್ಕ ಮಾತನಾಡಿ ಯುವಕರು, ಮಹಿಳೆಯರು, ಜನಸಾಮಾನ್ಯರ ವಿರೋಧಿಯಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಬಿ.ಜೆ.ಪಿ. ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ಮಾಡುತ್ತಿದೆ. ಜನ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಜನಾಂದೋಲನದ ಮೂಲಕ ಬಿ.ಜೆ.ಪಿ.ಯನ್ನು ಹಿಮ್ಮೆಟ್ಟಿಸುವ ಅನಿವಾರ್ಯತೆ ಉಂಟಾಗಲಿದೆ ಎಂದರು.




