

ಸೆ.13ರಿಂದ ನಡೆಯುವ ವಿಧಾನಸಭೆ ಅಧಿವೇಶನದ ಕಲಾಪಗಳಲ್ಲಿ ಎಲ್ಲಾ ಸಚಿವರು ಹಾಜರಿರುವಂತೆ ಸೂಚನೆ ನೀಡುವಂತೆ ಮುಖ್ಯಮಂತ್ರಿಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ ಹಾಗೂ ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು’’ ಎಂದು ಹೇಳಿದ ರಾಹುಲ್ ಗಾಂಧಿ ಮಾತು ಹೊಸತೇನಲ್ಲ, ಇದರಿಂದ ಆಶ್ಚರ್ಯ ಚಕಿತರಾಗಬೇಕಾಗದ ಅಗತ್ಯವೂ ಇಲ್ಲ. ಸಂಘ ಪರಿವಾರವನ್ನು ರಾಹುಲ್ ಗಾಂಧಿಯವರ ರೀತಿಯಲ್ಲಿ ಸೈದ್ದಾಂತಿಕ ಸ್ಪಷ್ಟತೆಯಿಂದ ವಿರೋಧಿಸುತ್ತಾ ಬಂದಿರುವ ಮತ್ತೊಬ್ಬ ಕಾಂಗ್ರೆಸ್ ನಾಯಕ ನಮಗೆ ರಾಷ್ಟ್ರಮಟ್ಟದಲ್ಲಿ ಕಾಣುವುದಿಲ್ಲ. ಆರ್ ಎಸ್ ಎಸ್ ಸಿದ್ದಾಂತದ ವಿರುದ್ಧ ಮಾತನಾಡಿದ ಕಾರಣಕ್ಕೆ ನ್ಯಾಯಾಲಯದಲ್ಲಿ ಕಟ್ಲೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷದ ಏಕೈಕ ಹಿರಿಯ ನಾಯಕ ರಾಹುಲ್ ಗಾಂಧಿ ಮಾತ್ರ ಇರಬೇಕು. ರಾಹುಲ್ ಗಾಂಧಿಯವರಿಗೆ ಇರುವ ಸೈದ್ಧಾಂತಿಕ ಸ್ಪಷ್ಟತೆ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಮಂದಿಗೆ ಇದೆ ಎನ್ನುವುದು ಪ್ರಶ್ನೆ. ಮೊನ್ನೆ ಮೊನ್ನೆ ನಮ್ಮೂರಿನ ಮಾಜಿ ಶಾಸಕರು ಸ್ಥಳೀಯ ಟಿವಿ ಚಾನೆಲ್ ಸಂದರ್ಶನದಲ್ಲಿ ಆರ್ ಎಸ್ ಎಸ್ ಒಂದು ಶಿಸ್ತಿನ ಸಂಘಟನೆ ಎಂದು ಹಾಡಿ ಹೊಗಳಿದರು. ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರ ಮಾತನ್ನು ಒಪ್ಪುವುದಾದರೆ ಮೊದಲು ಈ ಮಾಜಿ ಶಾಸಕರಿಗೆ ಶೋಕಾಸ್ ನೊಟೀಸಾದರೂ ನೀಡಬೇಕಾಗಿತ್ತು. ಇದು ಅವರೊಬ್ಬರ ಸೈದ್ಧಾಂತಿಕ ಭ್ರಷ್ಟತೆ ಅಲ್ಲ.ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೂ ಆರ್ ಎಸ್ ಎಸ್ ವಿರುದ್ಧ ನೇರಾನೇರವಾಗಿ ಸೈದ್ಧಾಂತಿಕ ದಾಳಿ ನಡೆಸುತ್ತಿದ್ದರು. ಇದಕ್ಕೆಲ್ಲ ಮಾಧ್ಯಮ ಸಲಹೆಗಾರನಾಗಿದ್ದ ನಾನೇ ಕಾರಣವೆಂಬಂತೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಗೊಣಗಾಡಿದ್ದುಂಟು. ನನ್ನ ವಿರುದ್ಧ ಆಗಾಗ ಮುಖ್ಯಮಂತ್ರಿಗಳ ಕಿವಿ ಊದಿದ್ದೂ ಉಂಟು. ಚುನಾವಣೆ ಕಾಲದಲ್ಲಿಯೂ ಸಿದ್ದರಾಮಯ್ಯನವರು ಆರ್ ಎಸ್ ಎಸ್ ವಿರುದ್ಧ ಮಾತ್ರವಲ್ಲ ನರೇಂದ್ರಮೋದಿಯವರ ವಿರುದ್ಧವೂ ಹೆಚ್ಚು ಮಾತನಾಡಬಾರದು, ಸರ್ಕಾರದ ಸಾಧನೆಯ ಬಗ್ಗೆ ಹೇಳಿಕೊಂಡರೆ ಸಾಕಲ್ಲವೇ? ಎಂದು ನನಗೆ ಬುದ್ದಿ ಮಾತು ಹೇಳಿ ಅದನ್ನು ಸಿದ್ದರಾಮಯ್ಯನವರಿಗೆ ತಲುಪಿಸಲು ಹೇಳಿದ್ದೂ ಉಂಟು.ಈಗಲೂ ನೀವು ಗೂಗಲ್‌ನಲ್ಲಿ ಸರ್ಚ್ ಮಾಡಿ ಯಾವ ಯಾವ ನಾಯಕರು ಆರ್ ಎಸ್ ಎಸ್ ಪರವಾಗಿ ಮತ್ತು ವಿರುದ್ಧವಾಗಿ ಮಾತನಾಡಿದ್ದಾರೆ ಹಾಗೂ ಯಾರ್ಯಾರೆಲ್ಲ ಈ ಬಗ್ಗೆ ತುಟಿಯನ್ನೆ ಬಿಚ್ಚಿಲ್ಲ ಎನ್ನುವ ಮಾಹಿತಿ ಸಿಗುತ್ತದೆ. ಕಳೆದ ವಿಧಾನಸಭಾ ಚುನಾವಣಾ ಕಾಲದಲ್ಲಿ ಯಾವ ಯಾವ ಕಾಂಗ್ರೆಸ್ ಅಭ್ಯರ್ಥಿಗಳು ಹನುಮಾನ್ ಚಾಲೀಸ್ ಪಠಿಸಿದ್ದರು, ಕೇಸರಿ ಶಾಲು ಹೊದ್ದುಕೊಂಡಿದ್ದರು, ಗೋವುಗಳ ದಾನ ಮಾಡಿದ್ದರು, ಕೇಸರಿ ನಾಮ ಹಾಕಿಕೊಂಡಿದ್ದರು, ಆರ್ ಎಸ್ ಎಸ್ ಸಂಘಟನೆಯನ್ನು ಹೊಗಳಿದ್ದರು ಎನ್ನುವುದನ್ನು ರಾಹುಲ್ ಗಾಂಧಿಯವರು ಜಿಲ್ಲೆಗಳಿಂದ ವರದಿ ತರಿಸಿದರೆ ಯಾರನ್ನು ಪಕ್ಷದದಲ್ಲಿ ಇಟ್ಟುಕೊಳ್ಳಬೇಕು, ಯಾರನ್ನು ಹೊರಗೆ ಕಳುಹಿಸಬೇಕು ಎನ್ನುವುದನ್ನು ಸುಲಭದಲ್ಲಿ ನಿರ್ಧರಿಸಲು ಸಾಧ್ಯವಿದೆ. ನನ್ನ ಪ್ರಕಾರ ಹನುಮಾನ್ ಚಾಲೀಸ್, ಕೇಸರಿ ಶಾಲು , ಗೋದಾನ, ಕುಂಕುಮ ಯಾವುದೂ ತಪ್ಪಲ್ಲ. ಅವುಗಳೆಲ್ಲ ವೈಯಕ್ತಿಕ ನಂಬಿಕೆ-ಆಚರಣೆಗಳು, ಮನೆಯೊಳಗೆ ನಡೆಯಬೇಕಾಗಿರುವುದು. ಅವುಗಳನ್ನು ರಾಜಕೀಯದ ಅಸ್ತ್ರವನ್ನಾಗಿ ಮಾಡಿಕೊಳ್ಳುವುದು ಸಂವಿಧಾನಕ್ಕೆ ವಿರುದ್ದ ಮಾತ್ರವಲ್ಲ ನಿಜವಾದ ಹಿಂದೂ ಧರ್ಮಕ್ಕೆ ಮಾಡುವ ಅಪಚಾರವೂ ಹೌದು. ರಾಜಕೀಯವಾಗಿಯೂ ಈ ಅಸ್ತ್ರ ಪ್ರಯೋಗ ಬಿಜೆಪಿಗಷ್ಟೇ ಲಾಭ ತಂದುಕೊಡಲು ಸಾಧ್ಯ, ಕಾಂಗ್ರೆಸ್ ಪಕ್ಷಕ್ಕೆ ಈ ಅಸ್ತ್ರ ಪ್ರಯೋಗದಿಂದ ಲಾಭ ಕೂಡಾ ಇಲ್ಲ ನಷ್ಟ ಮಾತ್ರ. ಮೆದು ಹಿಂದುತ್ವ ಎನ್ನುವುದು ನಕಲಿ ಹಿಂದುತ್ವ ಎಂಬ ಟೀಕೆಗೆ ಆಹ್ಹಾನ ನೀಡಿದಂತಾಗುತ್ತದೆ ಅಷ್ಟೆ.ದೇಶಕ್ಕೆ ಇಂದು ಬೇಕಾಗಿರುವುದು ರಾಜಕೀಯ ಪಕ್ಷದ ಬದಲಾವಣೆ ಅಲ್ಲ, ರಾಜಕೀಯ ಸಿದ್ಧಾಂತದ ಬದಲಾವಣೆ. ರಾಹುಲ್ ಮಾತಿನಲ್ಲಿ ಈ ಆಶಯದ ದನಿ ಇದೆ. ರಾಹುಲ್ ಗಾಂಧಿ ತಮ್ಮ ಮಾತನ್ನು ತಾವೇ ಗಂಭೀರವಾಗಿ ಸ್ವೀಕರಿಸುವುದಾದರೆ ಅವರು ಮೊದಲು ಒಂದು ಸವಾಲಿನ ನಿರ್ಧಾರ ಕೈಗೊಳ್ಳಬೇಕು. ಮುಂದಿನ ಚುನಾವಣೆಯ ಗೆಲುವಿಗಾಗಿ ಪಕ್ಷವನ್ನು ಕಟ್ಟಲು ಹೋಗದೆ, ಮುಂದಿನ ಹತ್ತು ವರ್ಷಗಳ ಅವಧಿಯನ್ನು ಗುರಿಯಾಗಿಟ್ಟುಕೊಂಡು ಸೈದ್ದಾಂತಿಕವಾಗಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಪ್ರಾರಂಭಿಸಬೇಕು.ಮುಂದಿನ ಚುನಾವಣೆಯ ಗೆಲುವು ರಾಹುಲ್ ಗಾಂಧಿಯವರ ಉದ್ದೇಶ ಅಲ್ಲ ಎಂದು ಗೊತ್ತಾದರೆ ಅವರ ಸುತ್ತ ಜೈಕಾರ ಹಾಕುತ್ತಿರುವ ಮುಕ್ಕಾಲು ಪಾಲು ನಾಯಕರು ಜಾಗ ಖಾಲಿ ಮಾಡುತ್ತಾರೆ. ಆಗ ಹೊಸರಕ್ತದ ಪ್ರವೇಶಕ್ಕೂ ಅನುಕೂಲವಾಗುತ್ತ ದೆ. ಅವರ ಪಕ್ಷವೂ ಉಳಿಯುತ್ತದೆ, ದೇಶವೂ ಉಳಿಯುತ್ತದೆ. -ದಿನೇಶ್ ಅಮ್ಮಿನಮಟ್ಟು
ಬೆಂಗಳೂರು: ಸೆ.13ರಿಂದ ನಡೆಯುವ ವಿಧಾನಸಭೆ ಅಧಿವೇಶನದ ಕಲಾಪಗಳಲ್ಲಿ ಎಲ್ಲಾ ಸಚಿವರು ಹಾಜರಿರುವಂತೆ ಸೂಚನೆ ನೀಡುವಂತೆ ಮುಖ್ಯಮಂತ್ರಿಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ಈ ಸಂಬಂಧ ಎಲ್ಲಾ ಸಚಿವರಿಗೂ ಅಗತ್ಯ ಸೂಚನೆಗಳನ್ನು ನೀಡಬೇಕು. ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಚಿವರು ಕಲಾಪದಲ್ಲಿ ಹಾಜರಾಗುವ ಸಂಬಂಧ ವಿನಾಯಿತಿ ಕೋರುವುದು ಸಾಮಾನ್ಯವಾಗಿದೆ’ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಮಹತ್ವದ ವಿಚಾರಗಳ ಬಗ್ಗೆ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸಂಬಂಧಿತ ಸಚಿವರು ಉತ್ತರ ನೀಡಬೇಕಾಗುತ್ತದೆ. ಹೀಗಾಗಿ ಸಚಿವರು ಚರ್ಚೆಯ ವೇಳೆ ಸದನದಲ್ಲಿ ಗೈರಾಗುವುದು ಸರಿಯಲ್ಲ. ಸಚಿವರ ಅನುಪಸ್ಥಿತಿ, ಆಡಳಿತ ಪಕ್ಷದಿಂದ ಉತ್ತರ ಪಡೆಯುವ ಸದಸ್ಯರ ಅವಕಾಶವನ್ನು ವಂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಸಚಿವರು ಸದನದಲ್ಲಿ ಹಾಜರಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.
ಇದೇ ಸ್ವರೂಪದ ಪತ್ರವನ್ನು ಎಲ್ಲ ಸಚಿವರಿಗೂ ವ್ಯಕ್ತಿಗತವಾಗಿ ಕಳುಹಿಸಿರುವ ಸಭಾಧ್ಯಕ್ಷರು, ಸದನದ ಕಾರ್ಯ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಮತ್ತು ತಮ್ಮ ಕ್ಷೇತ್ರಗಳ ಅಧಿಕೃತ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಕಲಾಪದಿಂದ ವಿನಾಯಿತಿ ಕೋರದಂತೆಯೂ ಸೂಚಿಸಿದ್ದಾರೆಂದು ತಿಳಿದುಬಂದಿದೆ. (kpc)
