

ಸಿದ್ದಾಪುರ
ಭಾರತೀ ಸಂಪದ, ಸಂಸ್ಕೃತಿ ಸಂಪದ ಹಾಗೂ ಪ್ರಯೋಗ ಸ್ವಯಂಸೇವಾ ಸಂಸ್ಥೆ ಸಹಯೋಗದಲ್ಲಿ ಕಸಿ ಮಾಡಿ ಬೆಳೆಸಿದ ಅಪರೂಪದ ಕಣಸಿ ಕರಿ ಅಪ್ಪೆ ಸಸಿಗಳ ಹಸ್ತಾಂತರ ಹಾಗೂ ನರ್ಸರಿ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಪಟ್ಟಣದ ಹೊಸೂರಿನ ಅರಣ್ಯ ಇಲಾಖೆ ನರ್ಸರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪರಿಸರ ತಜ್ಞ ಎಂ.ಬಿ.ನಾಯ್ಕ ಕಡಕೇರಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ಪರಿಸರ ಹಾಗೂ ಸಸ್ಯ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಗಣಪತಿ ಹೆಗಡೆ ವಡ್ಡಿನಗದ್ದೆಯವರ ಕಾರ್ಯ ಮಾದರಿಯಾದದ್ದು. ಮರೆಯಾಗುತ್ತಿರುವ ಅಪರೂಪದ ಸಸ್ಯಗಳ ಬೀಜ ಸಂಗ್ರಹಣೆ, ಅವುಗಳ ಪೋಷಣೆ, ಅವನ್ನು ನೆಟ್ಟು ಬೆಳೆಸುವ ಕಾರ್ಯದ ಮೂಲಕ ಹಲವು ಸಸ್ಯಗಳನ್ನು ಸಂರಕ್ಷಿಸಿದ್ದಾರೆ. ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ಇಂಥ ಉತ್ತಮ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.


ಶಿಕ್ಷಿತ ಯುವಜನರೇ ಜಾತಿವಾದ, ಕೋಮುವಾದದ ಪೋಷಕರಾಗಿ ದೇಶವನ್ನು ಅಪಾಯಕ್ಕೆ ದೂಡುತ್ತಿರುವುದು ಆತಂಕಕಾರಿ- ಸಿದ್ದರಾಮಯ್ಯ
ಶಿಕ್ಷಿತ ಯುವಜನರೇ ಜಾತಿವಾದ, ಕೋಮುವಾದದ ಪೋಷಕರಾಗಿ ದೇಶವನ್ನು ಅಪಾಯಕ್ಕೆ ದೂಡುತ್ತಿರುವುದು ಆತಂಕಕಾರಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ಶಿಕ್ಷಿತ ಯುವಜನರೇ ಜಾತಿವಾದ, ಕೋಮುವಾದದ ಪೋಷಕರಾಗಿ ದೇಶವನ್ನು ಅಪಾಯಕ್ಕೆ ದೂಡುತ್ತಿರುವುದು ಆತಂಕಕಾರಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಶಿಕ್ಷಿತರು ಹೆಚ್ಚಾದಷ್ಟು ಪ್ರಜಾಪ್ರಭುತ್ವ ಗಟ್ಟಿಯಾಗಬೇಕಿತ್ತು. ಆದರೆ, ಶಿಕ್ಷಿತ ಯುವಜನರೇ ಇಂದು ಜಾತಿವಾದ, ಮತ್ತು ಕೋಮುವಾದದ ಪೋಷಕರಾಗಿದ್ದು, ವಿದ್ಯಾರ್ಥಿ ಯುವ ಜನರನ್ನು ಜಾಗೃತಗೊಳಿಸುವ ಹೊಣೆಗಾರಿಕೆ ವಿದ್ಯಾರ್ಥಿ ಕಾಂಗ್ರೆಸ್ ಮೇಲಿದೆ ಎಂದಿದ್ದಾರೆ.
ಶಿಕ್ಷಿತರು ಹೆಚ್ಚಾದಷ್ಟೂ ಪ್ರಜಾಪ್ರಭುತ್ವ ಗಟ್ಟಿಯಾಗಬೇಕಿತ್ತು.
ಆದರೆ ಶಿಕ್ಷಿತ ಯುವಜನರೇ ಇಂದು ಜಾತಿವಾದ ಮತ್ತು ಕೋಮುವಾದದ ಪೋಷಕರಾಗಿ ದೇಶವನ್ನು ಅಪಾಯಕ್ಕೆ ದೂಡುತ್ತಿರುವುದು ಆತಂಕಕಾರಿಯಾಗಿದೆ.
ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಒಪ್ಪಿಕೊಂಡರು. ಸಮಾನತೆ, ಭ್ರಾತೃತ್ವ ಮತ್ತು ಜಾತ್ಯತೀತೆಯ ಶುತ್ರಗಳಾದ ಬಿಜೆಪಿ ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ. ಈ ಹುನ್ನಾರಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಮಂಜುನಾಥ ಚಿನ್ನಣ್ಣನವರ್ ಮಾತನಾಡಿ ಇದೊಂದು ಉತ್ತಮ ಕಾರ್ಯ. ಪರಿಸರ ಪ್ರೇಮಿಯಾದ ಗಣಪತಿ ಹೆಗಡೆ ಅರಣ್ಯ ಇಲಾಖೆಯ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ಪರಿಸರದ ಕುರಿತು ಉತ್ತಮ ಕಾರ್ಯ ಮಾಡುತ್ತಿರುವದು ಮತ್ತು ಅರಣ್ಯ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವವರನ್ನು ಅಭಿನಂದಿಸುತ್ತಿರುವುದು ಶಾಘ್ಲನೀಯ ಎಂದರು.
ಪ್ರಯೋಗ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷ ಗಂಗಾಧರ ಕೊಳಗಿ ಪರಿಸರ ರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬನ ಜವಾಬ್ದಾರಿ. ಅರಣ್ಯ ಇಲಾಖೆಯ ಜೊತೆ ಪರಿಸರ ಮತ್ತು ಅರಣ್ಯ ರಕ್ಷಣೆಯ ಕಾರ್ಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದಾಗ ಉತ್ತಮ ಪರಿಸರ ರೂಪುಗೊಳ್ಳುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಪರಿಸರದ ಕುರಿತಾಗಿ ಕಾಳಜಿ ಇರುತ್ತದೆ. ಅವರನ್ನು ಋಣಾತ್ಮಕವಾಗಿ ಕಾಣುವದು ಸರಿಯಲ್ಲ.ಕಳೆದ ಎರಡು ದಶಕಗಳಿಂದ ಸ್ವಯಂಸ್ಪೂರ್ತಿಯಿಂದ ನಶಿಸುತ್ತಿರುವ ಅಪರೂಪದ ಸಸ್ಯಗಳ ಬೀಜ ಸಂಗ್ರಹ, ಅವುಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಗಣಪತಿ ಹೆಗಡೆ ಸ್ವಂತ ವೆಚ್ಚದಲ್ಲಿ ಇವನ್ನೆಲ್ಲ ನಿರ್ವಹಿಸುತ್ತ ಬಂದಿದ್ದಾರೆ. ಅವರಿಗೆ ಇನ್ನಷ್ಟು ಶಕ್ತಿ ದೊರಕಲಿ ಎಂದರು.
ಪ್ರಾಸ್ತಾವಿಕ ಮಾತನಾಡಿದ ಗಣಪತಿ ಹೆಗಡೆ ವಡ್ಡಿನಗದ್ದೆ ಭಾರತೀ ಸಂಪದದ ದಶಮಾನೋತ್ಸವ ಸಂದರ್ಭದಲ್ಲಿ ಸುಮಾರು ಮುನ್ನೂರು ವರ್ಷಗಳ ಹಳೆಯದಾದ ಕಣಸಿಯ ಕರಿ ಅಪ್ಪೆ ಮರದ ಗೆಲ್ಲುಗಳಿಗೆ ಕಸಿ ಮಾಡಿ, ಆ ಗಿಡಗಳನ್ನು ನರ್ಸರಿಯಲ್ಲಿ ಬೆಳೆಸಿ, ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುತ್ತಿದ್ದೇನೆ. ಈ ಹಿಂದೆ ಅರಣ್ಯ ಇಲಾಖೆ ಹಾಗೂ ಇನ್ನಿತರರ ಸಹಕಾರ ದೊರಕಿದೆ. ಇಲಾಖೆಯ ನರ್ಸರಿಯಲ್ಲಿ ಕಾರ್ಯನಿರ್ವಹಿಸುವ ಓರ್ವ ಸಿಬ್ಬಂದಿಯನ್ನು ಪ್ರತಿವರ್ಷ ಸನ್ಮಾನಿಸುತ್ತ ಬಂದಿದ್ದೇವೆ. ಈ ಬಾರಿ ಓರ್ವ ಅನುಭವಿ ಸಿಬ್ಬಂದಿ ಪಾಂಡು ಮೇಸ್ತ ರನ್ನು ಗೌರವಿಸುತ್ತಿದ್ದೇವೆ ಎಂದರು.
ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ಹೊಸುರು ನರ್ಸರಿಯ ಸಿಬ್ಬಂದಿ ಪಾಂಡು ಮೇಸ್ತ ರನ್ನು ಸನ್ಮಾನಿಸಿದರು. ಆರ್.ಎಫ್ .ಓ. ಶಿವಾನಂದ ನಿಂಗಾಣಿ, ಉದ್ಯಮಿ ಆರ್.ಎಸ್.ಭಟ್ಟ ಕಲ್ಲಾಳ, ಡಿ.ಆರ್.ಎಫ್ .ಓ.ಗಳಾದ ಮಂಜುನಾಥ ಚಿನ್ನಣ್ಣನವರ್, ವಿನಾಯಕ ಮಡಿವಾಳ, ಮಂಜುನಾಥ ಹುಲ್ಲೂರು, ಅಶೋಕ ಪೂಜಾರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಇಲಾಖೆಯ ತಾಲೂಕಿನ ವಿಭಾಗಗಳಿಗೆ ಸಾಂಕೇತಿಕವಾಗಿ ಕಣಸಿ ಕಸಿ ಅಪ್ಪೆ ಸಸಿಗಳನ್ನು ವಿತರಿಸಲಾಯಿತು. ಹೊಸೂರು ನರ್ಸರಿಯಲ್ಲಿ ಕೆಲವು ಸಸಿಗಳನ್ನು ನೆಡಲಾಯಿತು.
