Yakshagana-ದೀರ್ಘಕಾಲದ ಅನಾರೋಗ್ಯದಿಂದ ಯಕ್ಷಗಾನ ಭಾಗವತಿಕೆ ಕಲಾವಿದ ಕೃಷ್ಣ ಭಂಡಾರಿ ನಿಧನ

ಕನ್ನಡದ ಪ್ರಸಿದ್ದ ಕಾವ್ಯಕ್ಕೆ ಯಕ್ಷಗಾನ ಸ್ಪರ್ಷ
ಸಿದ್ದಾಪುರ: ಕನ್ನಡ ಸಾಹಿತ್ಯದಲ್ಲಿ ಯಕ್ಷಗಾನದ ಸಾಹಿತ್ಯ ಕೂಡ‌ ಮುಖ್ಯವಾಹಿನಿಗೆ ಸೇರ್ಪಡೆಯಾಗಬೇಕು ಎಂಬ ಕಾರಣಕ್ಕೆ ಪ್ರಥಮ ಹಂತದಲ್ಲಿ ಕನ್ನಡದ ಪ್ರಸಿದ್ದ ಕವಿಗಳ ಪದ್ಯಗಳಿಗೆ ಯಕ್ಷ ‘ಗಾನ’ದ ಸ್ಪರ್ಷ ನೀಡುವ ಕಾರ್ಯವನ್ನು ಸಿದ್ದಾಪುರದ ಶ್ರೀ ಅನಂತ‌ ಯಕ್ಷ ಕಲಾ ಪ್ರತಿಷ್ಠಾನ ನಡೆಸಿತು.
ಬೆಂಗಳೂರಿನ‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕನ್ನಡದ ಪ್ರಸಿದ್ದ ಕವಿಗಳ ಪದ್ಯಗಳಿಗೆ ಪ್ರಸಿದ್ದ ಕಲಾವಿದರ ಮೂಲಕ ಯಕ್ಷಗಾನದ ಹೊದಿಕೆ ನೀಡುವ ಪ್ರಯೋಗ ನಡೆಸಲಾಯಿತು. ಈ ಪ್ರಯೋಗ ನಡೆಸಲು ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಆಶಯ ವ್ಯಕ್ತಪಡಿಸಿದ್ದರೆ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೋ. ಎಂ.ಎ.ಹೆಗಡೆ ಅವರು ಪದ್ಯಗಳನ್ನು ಆಯ್ಕೆ ಮಾಡಿಕೊಟ್ಟಿದ್ದರು.
ಕೆ.ಎಸ್.ನರಸಿಂಹ ಸ್ವಾಮಿ, ಪಂಜೆ‌ ಮಂಗೇಶರಾಯರು, ಗೋಪಾಲಕೃಷ್ಣ ಅಡಿಗರು, ಸಿದ್ದಲಿಂಗಯ್ಯ ಅವರ ಕಾವ್ಯಗಳ ತನಕ ಹಾಡಲಾಯಿತು. ಪಡುವಣ‌ ಕಡಲಿಗೆ ಕು.ತುಳಸಿ ಹೆಗಡೆ, ಎಲ್ಲಿ ಭೂ ರಮೆ ದೇವ ಸನ್ನಿಧಿ ಹಾಡಿಗೆ ಹಿರಿಯ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ ನರ್ತನ‌ ಕೂಡ ಮಾಡಿದರು.
ಪ್ರಸಿದ್ದ ಭಾಗವತ ಕೇಶವ ಹೆಗಡೆ ಕೊಳಗಿ ಅವರ ಗಾನದಲ್ಲಿ ಯಕ್ಷಗಾನದ ಮಟ್ಟು ತಿಟ್ಟಿನಲ್ಲೇ ಕನ್ನಡದ ಪ್ರಸಿದ್ದರ ಕಾವ್ಯಗಳು ಬಿಚ್ಚಿಕೊಂಡರೆ ಮದ್ದಲೆಯಲ್ಲಿ ಶಂಕರ ಭಾಗವತ್, ಚಂಡೆಯಲ್ಲಿ ವಿಘ್ನೇಶ್ವರ ಗೌಡ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಿದರು. ಇದಕ್ಕೂ‌ ಮುನ್ನ ಭರತ‌ ಮತ್ತು ರಾಮನ ಕುರಿತಾದ ತಾಳ ‌ಮದ್ದಲೆಯ ವೈಭವ ನಡೆಯಿತು.
ಇದಕ್ಕೂ‌ ಮುನ್ನ ಚಾಲನೆ ನೀಡಿದ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಯಕ್ಷಗಾನ ಸಾಹಿತ್ಯ ಗುರುತಾಗಬೇಕು. ಈ‌ಕಾರಣದಿಂದ ಇದೊಂದು ಅಪರೂಪದ ಪ್ರಯೋಗ ಎಂದರು.
ವೇದಿಕೆಯಲ್ಲಿ ವಿನಾಯಕಬಹೆಗಡೆ ಕಲಗದ್ದೆ, ವಿನಯ ಹೆಗಡೆ ಹೊಸ್ತೋಟ, ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ, ವಿಘ್ಬೇಶ್ವರ ಗೌಡ ವೆಂಕಟೇಶ ಹೆಗಡೆ ಬಗ್ರಿಮಕ್ಕಿ ಇತರರು ಇದ್ದರು.

ಹೊನ್ನಾವರ: ದೀರ್ಘಕಾಲದ ಅನಾರೋಗ್ಯದಿಂದ ಯಕ್ಷಗಾನ ಭಾಗವತಿಕೆ ಕಲಾವಿದ ಕೃಷ್ಣ ಭಂಡಾರಿ ನಿಧನ 

ದೀರ್ಘಕಾಲದ ಅನಾರೋಗ್ಯದಿಂದ ಯಕ್ಷಗಾನ ಕಲಾವಿದ ಕೃಷ್ಣ ಭಂಡಾರಿ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ

ಹೊನ್ನಾವರ: ದೀರ್ಘಕಾಲದ ಅನಾರೋಗ್ಯದಿಂದ ಯಕ್ಷಗಾನ ಕಲಾವಿದ ಕೃಷ್ಣ ಭಂಡಾರಿ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.

ಒಂದು ವರ್ಷದ ಹಿಂದೆ ಅಪಘಾತಕ್ಕೀಡಾದ ನಂತರ ತೀವ್ರ ಅನಾರೋಗ್ಯಕ್ಕೊಳಗಾಗಿ ಮನೆಯಲ್ಲಿಯೇ ಇದ್ದರು. ಇಡಗುಂಜಿ ಮೇಳದಲ್ಲಿ ಭಾಗವತಿ ಮಾಡುತ್ತಿದ್ದ ಕೃಷ್ಣ ಭಂಡಾರಿಯವರು ಚಿಕಿತ್ಸೆ ಫಲಕಾರಿಯಾಗದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗುಣವಂತೆಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ನಮ್ಮ ಪ್ರತಿನಿಧಿ ವರದಿ ಮಾಡಿದ್ದಾರೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗ್ರಾಮ ಪಂಚಾಯತ್‌ ಗಳಿಗೆ ಖರ್ಗೆ ನಿರ್ಧೇಶನ ಏನು ಗೊತ್ತೆ?

ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಹೆಚ್ಚಳ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ನಿರ್ದೇಶನ ಅಂಗನವಾಡಿ, ಶಾಲಾ-ಕಾಲೇಜುಗಳು, ವಸತಿ ಶಾಲೆಗಳ ಮೇಲ್ಪಾವಣಿಗಳು ಮತ್ತು ಆವರಣಗಳಲ್ಲಿ...

ಅಪಘಾತಕ್ಕೊಳಗಾದ ಹಿರಿಯ ಪತ್ರಕರ್ತ ರಾ. ಸೋಮನಾಥ್‌

ಕನ್ನಡ ಟ್ಯಾಬ್ಲಾಯ್ಡ್‌ ಪತ್ರಿಕೆಗಳ ದೊಡ್ಡ ಹೆಸರು ಉತ್ತರ ಕನ್ನಡ ಮೂಲದ ರಾ. ಸೋಮನಾಥ್‌ ಅಪಘಾತಕ್ಕೀಡಾಗಿದ್ದಾರೆ. ನಾಲ್ಕೈದು ದಶಕಗಳಿಂದ ಕನ್ನಡದ ಪ್ರಮುಖ ಪತ್ರಿಕೆಗಳ ಅಪರಾಧ ಸುದ್ದಿ,...

ವಿಪರೀತ ಮಳೆ ವಾಸ್ತವ್ಯ & ನಿರ್ಮಾಣ ಹಂತದ ಒಂದೇ ಕುಟುಂಬದ ಎರಡೂ ಮನೆಗಳಿಗೆ ಹಾನಿ

ನಿರ್ಮಾಣ ಹಂತದ ಆಶ್ರಯ ಮನೆ ಮತ್ತು ವಾಸ್ತವ್ಯದ ಕಚ್ಚಾ ಮನೆ ಸೇರಿ ಒಂದೇ ಕುಟುಂಬದ ಎರಡೂ ಮನೆಗಳಿಗೆ ಹಾನಿಯಾಗಿರುವ ದುರ್ಘಟನೆ ಸಿದ್ಧಾಪುರ ತಾಲೂಕು ಕಂಸಲೆಯಿಂದ...

ಸುರಿಯುವ ಮಳೆ ಲೆಕ್ಕಿಸದೇ ಗುರುಗಳಿಗೆ ಗೌರವ ಸಲ್ಲಿಸಲು ಬಂದ ಜನಸಮೂಹ!

ಕಾಲು ಶತಮಾನ ಒಂದೇ ಶಾಲೆಯಲ್ಲಿ ಸೇವೆಗೆ ಗ್ರಾಮಸ್ಥರ ಪ್ರೀತಿಯೇ ಕಾರಣ- ಉಮೇಶ ನಾಯ್ಕ.ಸಿದ್ದಾಪುರ:ಆದರ್ಶ ಶಿಕ್ಷಕ ಉಮೇಶ‌ ನಾಯ್ಕ 31 ರಂದು ಸೇವಾನಿವೃತ್ತರಾಗಿದ್ದು ಇಂದು ತಾಲೂಕಿನ...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *