

ಸಿದ್ದಾಪುರ
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡಿದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೇವಾಸ ಸಕಿಪ್ರಾ ಶಾಲಾ ಶಿಕ್ಷಕ ದತ್ತಾತ್ರಯ ಎಲ್.ಭಾಗವತ್ ಅವರನ್ನು ಶಾಲಾ ಎಸ್‍ಡಿಎಂ ಹಾಗೂ ಪಾಲಕ-ಪೋಷಕರು ಸೋಮವಾರ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದತ್ತಾತ್ರಯ ಭಾಗವತ ಪ್ರಶಸ್ತಿ ದೊರಕಿರುವುದು ನನಗಾದರೂ ಅದು ಈ ಶಾಲೆಗೆ ನೀಡಿದ ಗೌರವ . ಎಲ್ಲರ ಸಹಕಾರದಿಂದ ಶಾಲೆಯ ಅಭಿವೃದ್ಧಿಯ ಜೊತೆಗೆ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಪ್ರಾಮಾಣಿಕ ಪ್ರಯತ್ನಮಾಡಿದ್ದರಿಂದ ಪ್ರಶಸ್ತಿ ಬಂದಿದೆ ಎಂದು ಹೇಳಿದರು.
ಎಸ್‍ಡಿಎಂಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಅಧ್ಯಕ್ಷತೆವಹಿಸಿದ್ದರು. ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ದೇವಾಸ, ಎಂ.ಡಿ.ನಾಯ್ಕ ತೆಂಗಿನಮನೆ, ಹಳೆ ವಿದ್ಯಾರ್ಥಿ ರವಿ ನಾಯ್ಕ ಮಾತನಾಡಿದರು.
ಎಸ್‍ಡಿಎಂಸಿ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು. ಜಯಂತ ನಾಯ್ಕ ತೆಂಗಿನಮನೆ ನಿರ್ವಹಿಸಿದರು.



ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿ-ಡಾ|| ರವಿ ಹೆಗಡೆ
ಸಿದ್ದಾಪುರ- : ಶಿಕ್ಷಕ ವೃತ್ತಿ ಅತ್ಯಂತ ಮಹತ್ವದ್ದು. ತಮ್ಮ ನಡೆನುಡಿಗಳಿಂದ ವಿದ್ಯಾರ್ಥಿಗಳಿಗೆ ಮಾದರಿಯಾಗಲು ಸಾಧ್ಯ. ಉತ್ತಮ ಶಿಕ್ಷಕ ಅನೇಕ ವಿದ್ಯಾರ್ಥಿಗಳನ್ನು ಪ್ರಭಾವಗೊಳಿಸಬಲ್ಲ. ಅವರ ಜೀವನವನ್ನು ರೂಪಿಸಬಲ್ಲ ಎಂದು ಲಯನ್ಸ ಅಂತರಾಷ್ಟ್ರೀಯ ಸಂಸ್ಥೆ 317ಬಿ ಜಿಲ್ಲೆಯ ಮಾಜಿ ಜಿಲ್ಲಾ ಗವರ್ನರ್ ಡಾ|| ರವಿ ಹೆಗಡೆ ಹೂವಿನಮನೆ ಹೇಳಿದರು.
ಅವರು ಸಿದ್ದಾಪುರ ಲಯನ್ಸ ಕ್ಲಬ್‍ದಿಂದ ಬಾಲಭವನದಲ್ಲಿ ಏರ್ಪಡಿಸಲಾಗಿದ್ದ ಇಬ್ಬರು ರಾಷ್ಟ್ರಪ್ರಶಸ್ತಿ ಪುರಸ್ಕೃ ತ ನಿವೃತ್ತ ಮುಖ್ಯ ಶಿಕ್ಷಕರನ್ನು ಗೌರವಿಸುವುದರ ಮೂಲಕ ಶಿಕ್ಷಕ ದಿನಾಚರಣೆ ಆಚರಿಸಲಾಯಿತು.
ನಿವೃತ್ತ ಮುಖ್ಯಶಿಕ್ಷಕರು ಸಾಹಿತಿಗಳು ಆದ ತಮ್ಮಣ್ಣ ಬೀಗಾರರವರು ಗೌರವಕ್ಕೆ ಕೃತಜ್ಞತೆ ಹೇಳಿ ಪ್ರತಿಯೊಬ್ಬ ಶಿಕ್ಷಕನೂ ತನ್ನ ವೃತ್ತಿಯನ್ನು ಬಹುವಾಗಿ ಪ್ರೀತಿಸಿದಾಗ, ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತದೆ. ಅದು ಮಕ್ಕಳ ಭವಿಷ್ಯಕ್ಕೆ ಪೂರಕ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಬರಹಗಾರ ಜಿ.ಜಿ ಹೆಗಡೆ ಬಾಳಗೋಡ ಮಾತನಾಡಿ. ಶಿಕ್ಷಕರು ತಮ್ಮ ಬೋಧನೆಯ ಜೊತೆ ಮಾನವೀಯ ಮೌಲ್ಯಗಳನ್ನು ಸಹ ಅಳವಡಿಸಿಕೊಳ್ಳಲು ಕಲಿಸಬೇಕು ಎಂದರು.
ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ವಿಶೇಷ ಆಹ್ವಾನಿತರಾಗಿದ್ದರು.
ನಿಕಟಪೂರ್ವ ಅಧ್ಯಕ್ಷ ಸಿ.ಎಸ್.ಗೌಡರ್ ಹೆಗ್ಗೋಡ್ಮನೆ ಆರ್.ಎಂ. ಪಾಟೀಲ, ನಾಗರಾಜ ದೋಶೆಟ್ಟಿ ಮಾತನಾಡಿದರು.
ಮಾಜಿ ಅಧ್ಯಕ್ಷರು ಸತೀಶ ಗೌಡರ್ ಹೆಗ್ಗೋಡ್ಮನೆ, ನಾಗರಾಜ ಪಾಟೀಲ ಎಂ. ಆರ್. ಪಾಟೀಲ ವೀಣಾ ಶೇಟ, ಆನಂದ ಶೇಟ್, ಕುಮಾರ ಗೌಡರ್ ಹೊಸೂರು ಮುಂತಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನ್ಮನೆ ವಹಿಸಿ ಮಾತನಾಡಿ. ಶಿಕ್ಷಕವೃತ್ತಿ ಅತ್ಯಂತ ಪವಿತ್ರವಾದುದು. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಕಾರ್ಯದರ್ಶಿ ರಾಘವೇಂದ್ರ ಭಟ್ಟ ಸ್ವಸ್ತಿಕ್ ಸ್ವಾಗತಿಸಿದರು. ಕೋಶಧ್ಯಕ್ಷ ಪ್ರಶಾಂತ ಡಿ. ಶೇಟ್ ಹಾಳದಕಟ್ಟಾ ವಂದಿಸಿದರು.
ಸತತ ಅಧ್ಯಯನ ಶ್ರಮದಿಂದ ವ್ಯಕ್ತಿತ್ವ ಸಾಧ್ಯ.
ಸಿದ್ದಾಪುರ-: ಸತತ ಅಧ್ಯಯನದ ಹಾಗೂ ವಿಶೇಷ ಶ್ರಮದ ಮೂಲಕ ಉತ್ತಮ ವ್ಯಕ್ತಿತ್ವವನ್ನು ಪಡೆಯಲು ಸಾಧ್ಯ. ರಾಷ್ಟ್ರಮಟ್ಟದ ಪ್ರತಿಭಾ ಪರೀಕ್ಷೆಗಳನ್ನು ಎದುರಿಸಿ. ಭಾರತೀಯ ಆಡಳಿತಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ಉತ್ತೀರ್ಣರಾದರೆ ಉನ್ನತ ಸ್ಥಾನವನ್ನು ಹೊಂದಲು ಅವಕಾಶವಿದೆ. ವಿದ್ಯಾರ್ಥಿ ಸಮುದಾಯ ಇದರ ಸದುಪಯೋಗ ಪಡೆಯಬೇಕೆಂದು ಗುಜರಾತ್ ರಾಜ್ಯದ ಆರಕ್ಷಣ ಇಲಾಖೆಯ ಅಪರ ಮಹಾನಿರ್ದೇಶಕ ನರಸಿಂಹ ಕೋಮಾರ ಬೀಗಾರ ಐ.ಪಿ.ಎಸ್. ಹೇಳಿದರು.
ಅವರು ಸಿದ್ದಾಪುರಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮನ್ವಯ ಪ್ರಕಾಶನದ ಪರವಾಗಿ ಜಿ.ಜಿ. ಹೆಗಡೆ ಬಾಳಗೋಡ ಅವರು ಪುಸ್ತಕಗಳನ್ನು ನೀಡಿ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ತಮ್ಮಣ್ಣ ಬೀಗಾರ, ಸವಿತಾ ಶಾನಭಾಗ, ಸ್ವರ್ಣಲತಾ ಶಾನಭಾಗ ಮುಂತಾದವರು ಉಪಸ್ಥಿತರಿದ್ದರು.
