

ಸಿದ್ಧಾಪುರ ಬಿದ್ರಕಾನಿನ ಶ್ರೀಕೃಷ್ಣ ಕ್ಲಾಥ್ ಎಂಪೋರಿಯಮ್ ಏರ್ಪಡಿಸಿದ್ದ ಫೇಸ್ಬುಕ್ ಆನ್ಲೈನ್ ಶ್ರೀಕೃಷ್ಣ ವೇಷದ ಚಿತ್ರ ಸ್ಫರ್ಧೆಯಲ್ಲಿ 1200 ರಷ್ಟು ಮಕ್ಕಳ ಚಿತ್ರಗಳು ಸ್ಫರ್ಧೆಗೆ ಬಂದಿದ್ದು ಅವುಗಳಲ್ಲಿ ಮೂರು ಜನರ ಚಿತ್ರಗಳನ್ನು ಟ್ರೋಫಿ ವಿಜೇತರು ಮತ್ತು 5 ಪ್ರಶಂಸನಾ ಪತ್ರ ವಿಜೇತರು ಎಂದು ಆಯ್ಕೆಮಾಡಲಾಗಿದೆ.
ಸಿಂಚನಾ ಭಟ್ ಯಲ್ಲಾಪುರ, ಆತ್ರೇಯ ಮಳಲಗದ್ದೆ ಸೊರಬಾ, ಕುಶಾಲ್ ನಾಯ್ಕ ಕುಮಟಾ ಕ್ರಮವಾಗಿ ಮೂರು ಟ್ರೋಫಿಗಳನ್ನು ಜಯಿಸಿದ್ದಾರೆ. ಆರ್ಯ ನೀರಕೋಣೆ ಮಾಯ್ರ ಪ್ರಸನ್ನ ಶಿರಸಿ, ಅಮಯಶೇಟ್ ಬೆಳಗಾವಿ, ವಿರಾಜ್ ಭಟ್ ಐಯರ್ಲ್ಯಾಂಡ್, ನಿಹಿತಾ ಗಣಪತಿ ಬೋಳುಗುಡ್ಡೆ ಪ್ರಶಂಸನಾ ಪತ್ರ ಪಡೆದಿದ್ದಾರೆ.







ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಸ್ಲರ್ ( ಹಸಲರು) ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಕಾನಳ್ಳಿಸಭಾಭವನದಲ್ಲಿ ನಡೆದ ಹಸ್ಲರ್ (ಹಸಲರು) ಮಾಹಿತಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ : ಶ್ರೀಗೋಪಾಲ ಕಾನಳ್ಳಿ.
ಕಾರ್ಯದರ್ಶಿ ಶಂಕರ ಕುಳೀಬಿಡು
ಖಜಾಂಚಿ: ಸಂದೇಶ ಬಾಳೇಸರ
ಸಂಘಟನಾ ಕಾರ್ಯದರ್ಶಿಯಾಗಿ ಪ್ರತಿ ಗ್ರಾಮ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯನ್ನು
ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಹಸಲರು ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲೇಶಪ್ಪ ಕವಲಿ, ಮಾರುತಿ ಸ್ವಾಮಿ ಹೀರೆಕಸವಿ ನಿರಂಜನಪ್ಪ ಸೊರಬ
ನಾಗೇಶ್ ಕಾನಳ್ಳಿ ವೆಂಕಟರಮಣ ಗೊದ್ಲುಮನೆ ಮುಂತಾದ ಗಣ್ಯರು ಹಾಗೂ ಸಿದ್ದಾಪುರದ ಎಲ್ಲಾ ಹಸ್ಲರ್ ( ಹಸಲರು) ಗ್ರಾಮದ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು ಉದಯ್ ಕಲ್ಲಾಳ ಕಾರ್ಯಕ್ರಮ ನಿರೂಪಿಸಿದರು.





