

ಸಿದ್ದಾಪುರ: ಮಂಗಳವಾರ ಬೇಡ್ಕಣಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಕೆಡಿಪಿ ಸಭೆ ನಡೆಯಿತು. ಸಭೆಗೆ ಪ್ರಮುಖ ಇಲಾಖೆಗಳು ಗೈರಾಗಿರುವುದರಿಂದ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆ ಮತ್ತು ಜನಪ್ರತಿನಿಧಿಗಳು ಸಮನ್ವಯತೆ ಯಿಂದ ಕೆಲಸ ಮಾಡಲು ಇಲಾಖೆಗಳಿಂದ ಸಿಗಬಹುದಾದ ಸೌಲಭ್ಯಗಳ ಸಮರ್ಪಕವಾದ ಮಾಹಿತಿ ಜನ ಪ್ರತಿನಿಧಿಗಳಿಗೆ ಇರಬೇಕು. ಇಲ್ಲದಿದ್ದರೆ ಯೋಜನೆಗಳು ಸರಿಯಾಗಿ ಅನುಷ್ಟಾನ ಆಗುವುದಿಲ್ಲ. ಜನ ಸಾಮಾನ್ಯ ರಿಗೆ ಹೆಚ್ಚಿನ ಸೌಲಭ್ಯ ಗಳು ಒದಗಬಹುದಾದ ಪ್ರಮುಖ ಇಲಾಖೆಗಳಾದ ಕಂದಾಯ, ಕೃಷಿ, ಸಮಾಜ ಕಲ್ಯಾಣ, ಬಿಸಿಎಮ್, ಪಶು ಸಂಗೋಪನೆ ಮುಂತಾದ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ಇಲಾಖೆಗಳಿಂದ ಮಾಹಿತಿಗಳು ದೊರೆಯದೆ ಯೋಜನೆ ಗಳ ಅನುಷ್ಟಾನ ಹೇಗೆ ಸಾಧ್ಯ ಎಂಬುದು ಜನ ಪ್ರತಿನಿಧಿಗಳು ಅಸಮಾಧಾನಕ್ಕೆ ಕಾರಣವಾಯಿತು.
ಈ ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಕಡಕೇರಿ
ಸಭೆಗೆ ಅಧಿಕಾರಿಗಳು ಬಾರದೆ ಇರುವುದು ಜನ ಪ್ರತಿನಿಧಿಗಳಿಗೆ ಅಗೌರವ ತೋರಿದಂತಾಗಿದೆ. ಅಧಿಕಾರಿಗಳು ಯೋಜನೆಗಳ ಕುರಿತು ಮಾಹಿತಿ ನೀಡದೆ ಇದ್ದರೆ ಜನರಿಗೆ ಮಾಹಿತಿ ಹೋಗುವುದು ಹೇಗೆ?.
ಹಾಗಾಗಿಯೇ ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ.
ಮುಂದಿನ ಸಭೆಗೆ ಅಧಿಕಾರಿಗಳು ಹಾಜರಾಗದೆ ಇದ್ದರೆ ಪಂಚಾಯತನಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಳಿದಂತೆ ತೋಟಗಾರಿಕೆ, ಅರಣ್ಯ, ಪೋಲಿಸ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ನೀರಾವರಿ ಮೊದಲಾದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಇಲಾಖೆಯ ಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ವಾಸಂತಿ ಪಿ ಹಸಲರ, ಉಪಾಧ್ಯಕ್ಷೆ ರೇಣುಕಾ ಪಿ ನಾಯ್ಕ, ಪಂಚಾಯತ ಸದಸ್ಯರು, ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಸಕಾಂಗಕ್ಕೆ ಮನೆಗಳ ಕೊರತೆ, ಅಧಿವೇಶನಕ್ಕೆ ಯಾರೂ ಗೈರಾಗುವಂತಿಲ್ಲ: ವಿಶ್ವೇಶ್ವರ ಹೆಗಡೆ ಕಾಗೇರಿ
ಶಾಸಕಾಂಗದ ಸಿಬ್ಬಂದಿಗೆ ಮನೆಗಳ ಕೊರತೆಯಿದ್ದು ಇದನ್ನು ಬೇಗ ನಿವಾರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಬೆಂಗಳೂರು: ಶಾಸಕಾಂಗದ ಸಿಬ್ಬಂದಿಗೆ ಮನೆಗಳ ಕೊರತೆಯಿದ್ದು ಇದನ್ನು ಬೇಗ ನಿವಾರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಸೆಪ್ಟೆಂಬರ್ 13 ರಿಂದ ವಿಧಾನಸಭೆ ಅಧಿವೇಶನ ಹಿನ್ನೆಲೆ ವಿಧಾನಸೌಧದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನೆ ಸಿಗದೆ ಇರುವ ವಿಚಾರ ಪ್ರಸ್ತಾಪ ಮಾಡಿ, ಶಾಸಕಾಂಗಕ್ಕೆ ಸಾಕಷ್ಟು ಮನೆಗಳು ಇಲ್ಲದಿದ್ದರೂ ನಾವು ನ್ಯಾಯಾಂಗಕ್ಕೆ ಹೆಚ್ಚಿನ ಮನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ಇದರಿಂದಾಗಿ ಶಾಸಕಾಂಗದಲ್ಲಿ ಗುರುತರ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವವರಿಗೆ ಮನೆಗಳು ಲಭ್ಯವಿಲ್ಲದಂತಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ಯತ್ನ ನಡೆಸಲಾಗಿದೆ ಎಂದೂ ಸ್ಪೀಕರ್ ಕಾಗೇರಿ ಹೇಳಿದರು.
ಅಧಿವೇಶನಕ್ಕೆ ಯಾರೂ ಗೈರಾಗುವಂತಿಲ್ಲ
ಇದೇ ವೇಳೆ ಅಧಿವೇಶನಕ್ಕೆ ಯಾರೂ ಗೈರಾಗುವಂತಿಲ್ಲ ಎಂದು ಹೇಳಿದ ಅವರು, ಅಧಿವೇಶನದ ಅವಧಿಯಲ್ಲಿ ಯಾವುದೇ ಸಚಿವರು ರಜೆ ಕೇಳದಂತೆ ಮನವಿ ಮಾಡಲಾಗಿದೆ. ಅಲ್ಲದೇ ವಿಶೇಷ ಜಂಟಿ ಅಧಿವೇಶನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನೂ ಆಹ್ವಾನಿಸುತ್ತೇವೆ. ಸೆ.24 ರ ಮಧ್ಯಾಹ್ನದ ನಂತರ ಜಂಟಿ ಅಧಿವೇಶನ ನಡೆಯುತ್ತದೆ. ಈ ಸಂಬಂಧ ಸಿಎಂ ಮತ್ತು ವಿಧಾನ ಪರಿಷತ್ ಸಭಾಪತಿ ಜತೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

ಅಂತೆಯೇ ರಾಜ್ಯ ಸರ್ಕಾರದಿಂದ ನಮಗೆ 18 ಬಿಲ್‌ಗಳು ಬಂದಿವೆ. ಮೊದಲೇ ಬಿಲ್ ಬರಬೇಕೆಂದು ಸರ್ಕಾರಕ್ಕೆ ತಿಳಿಸಿದ್ದೆ. ಅಧಿವೇಶನದ ವೇಳೆ ರಜೆ ಕೇಳದಂತೆ ತಿಳಿಸಲಾಗಿದ್ದು, ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರ ಗಮನಕ್ಕೆ ಈ ವಿಷಯ ತರಲಾಗಿದೆ. ಸೆ.24ರಂದು ವಿಶೇಷ ಜಂಟಿ ಅಧಿವೇಶನ ಕರೆಯಲಾಗುತ್ತದೆ. ಅಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಜಂಟಿ ಅಧಿವೇಶನದಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ಮಾಡಲಾಗುವುದು, ಇದಕ್ಕಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಹ್ವಾನಿಸಲಾಗುತ್ತಿದೆ ಎಂದರು.
ಅಧಿವೇಶನದ ಕೊನೆಯ ಭಾಗದಲ್ಲಿ ಪ್ರಶಸ್ತಿ
ಬಹುಮುಖ್ಯವಾಗಿ ಅಧಿವೇಶನದ ಕೊನೆಯ ಭಾಗದಲ್ಲಿ ಪ್ರಶಸ್ತಿ ಕೊಡುವ ಬಗ್ಗೆ ಮಾತನಾಡಿದ್ದು, ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡುವ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದ ಅವರು, ಸೆಪ್ಟೆಂಬರ್ 24 ರಂದು ಊಟದ ಸಮಯ ಮುಗಿದ ಬಳಿಕ ವಿಶೇಷ ಜಂಟಿ ಅಧಿವೇಶನ ಕರೆಯಲಾಗುತ್ತದೆ. ಜಂಟಿ ಅಧಿವೇಶನದಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಜಂಟಿ ಅಧಿವೇಶನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಹ್ವಾನಿಸುತ್ತೇವೆ. ಇನ್ನಷ್ಟು ವಿಚಾರಗಳನ್ನು ಸದನ ಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ. 24 ರಂದು ಶುಕ್ರವಾರ ಮಧ್ಯಾಹ್ನ ನಂತರ ಮಾತ್ರ ಈ ಜಂಟಿ ಅಧಿವೇಶನ ನಡೆಯುತ್ತದೆ. ಅಧಿವೇಶನದ ಕೊನೆಯ ಭಾಗದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ನೀತಿ ನಿರೂಪಣಾ ಸಮಿತಿಯ ವಿಚಾರಗಳನ್ನು ಅಧಿವೇಶನದ ವೇಳೆ ಅಂತಿಮಗೊಳಿಸುತ್ತೇವೆ. ಕಾನ್ಸ್ಟಿಟ್ಯೂಷನಲ್ ಕ್ಲಬ್ ವಿಚಾರವನ್ನು ಕೂಡಾ ಚರ್ಚೆ ಮಾಡುತ್ತೇವೆ. ಈ ಬಾರಿ ಅಧಿವೇಶನದಲ್ಲಿ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಇದೆ. ಆದರೆ, ಹಾಗೆಂದ ಮಾತ್ರಕ್ಕೆ ಅಧಿವೇಶನದ ವೇಳೆ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಬರುವುದು ಬೇಡ ಎಂದು ತಿಳಿಸಿದ್ದಾರೆ. (kpc)



