

ಪಂಚಮಸಾಲಿಗಳನ್ನು 2ಎ ವರ್ಗಕ್ಕೆ ಸೇರಿ ಸುವ ಪ್ರಸ್ಥಾಪಕ್ಕೆ ಸರ್ಕಾರ ಸಮ್ಮತಿಸಬಾರದು ಈಡಿಗ ಉಪಪಂಗಡಗಳನ್ನು ಪ್ರವರ್ಗ1 ಕ್ಕೆ ಸೇರಿಸುವ ಪ್ರಯತ್ನದ ಬಗ್ಗೆ ಸ್ಪಷ್ಟತೆ ಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಸ್ಥೆ ಆಯೋಜಿಸಿದ್ದ ಸಂವಾದ ಸಭೆ ಸರ್ಕಾರವನ್ನು ಆಗ್ರಹಿಸಿದೆ. ಸಿದ್ಧಾಪುರದ ಬಾಲಭವನದಲ್ಲಿ ನಡೆದ ಚಿಂತನಾ (ಸಂವಾದಸಭೆ) ಸಭೆಯಲ್ಲಿಈ ಅಭಿಪ್ರಾಯ ವ್ಯಕ್ತಪಡಿಸಿದ ಚಿಂತಕರು ರಾಜಕೀಯ ಲಾಭಿಯ ಅಂಗವಾಗಿ ಪಂಚಮಸಾಲಿಗಳನ್ನು 2ಎ ವರ್ಗಕ್ಕೆ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪಂಚಮಸಾಲಿಗಳನ್ನು 2ಎ ವರ್ಗಕ್ಕೆ ಸೇರಿಸುವುದರಿಂದ ಹಿಂದುಳಿದವರಿಗೆ ಅನ್ಯಾಯವಾಗುವ ಬಗ್ಗೆ ಯಾಕೆ ಯಾರೂ ಯೋಚಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಸಂವಾದ ಸಭೆಯನ್ನು ಉದ್ಘಾಟಿಸಿದ ಬಿ.ಎಸ್.ಎನ್.ಡಿ.ಪಿ. ರಾಜ್ಯ ಸಂಚಾಲಕ ಲೋಹಿತ್ ನಾಯ್ಕ ಮೀಸಲಾತಿ ಮತ್ತು ಅಂಬೇಡ್ಕರ್ ವಿಚಾರಗಳ ಬಗ್ಗೆ ಸ್ಪಷ್ಟತೆ ಬೇಕು. ಯಾರೋ ಬೇಡಿಕೆ ವ್ಯಕ್ತಪಡಿಸಿದ ಮಾತ್ರಕ್ಕೆ ಸರ್ಕಾರ ಎಲ್ಲರಿಗೂ ಮೀಸಲಾತಿ ಕೊಡುತ್ತಾ ಹೋದರೆ ಮೀಸಲಾತಿಯ ಮಹತ್ವವೇ ಕಡಿಮೆಯಾಗುತ್ತದೆ.ಈಗ ಇಂಥ ಪ್ರಯತ್ನಗಳು ನಡೆಯುತ್ತಿರುವುದರಿಂದ ಸಾಮಾಜಿಕ ನ್ಯಾಯದ ಸವಾಲು ಎದುರಾಗಿದೆ ಎಂದು ಪೀಠಿಕೆ ಹಾಕಿದರು.
ಸಂವಾದ ಸಭೆಯಲ್ಲಿ ಉಪನ್ಯಾಸ ನೀಡಿದ ಲಕ್ಷಣ ನಾಯ್ಕ ನಾಯ್ಕ ಕಾನಗೋಡು ಈಡಿಗ ಉಪಪಂಗಡಗಳನ್ನು ಪ್ರವರ್ಗ1 ಕ್ಕೆ ಸೇರಿಸುವ ಬೇಡಿಕೆ ಪ್ರಸ್ಥಾಪಿಸಿ ಇದರಿಂದ ಈಡಿಗ ಉಪಪಂಗಡಗಳಿಗೆ ಅನ್ಯಾಯವಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರೀಯಿಸಿದ ಪತ್ರಕರ್ತ ಕನ್ನೇಶ್ ನಾಯ್ಕ ಕೋಲಶಿರ್ಸಿ,ಮತ್ತು ಬಿ.ಆರ್. ನಾಯ್ಕ ಹೆಗ್ಗಾರಕೈ ಈಡಿಗ ಉಪಪಂಗಡಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಪ್ರಸ್ಥಾಪ ಹಳೆಯದು 2ಎ ವರ್ಗದಲ್ಲಿ ಹೆಚ್ಚಿನ ಸಂಖ್ಯೆಯೊಂದಿಗೆ ಸ್ಫರ್ಧಿಸಬೇಕಾಗುತ್ತದೆ. ಪ್ರವರ್ಗ 1 ಕ್ಕೆ ಸೇರಿಸುವ ವಿಚಾರ ಚರ್ಚೆಯಾಗಿ ನಿರ್ಣಯಕ್ಕೆ ಬರಬೇಕು. ಆದರೆ ಪ್ರವರ್ಗ1 ಅಥವಾ ಅನೂಚಿತ ವರ್ಗಕ್ಕೆ ಸೇರ್ಪಡೆ ಆಗುವುದರಿಂದ ಈಡಿಗ ಉಪಪಂಗಡಗಳಿಗೆ ಅನ್ಯಾಯವಾಗುತ್ತದೆ ಎನ್ನುವುದಕ್ಕೆ ಸಾಕ್ಷ ಅಥವಾ ಸ್ಫಷ್ಟತೆ ಇಲ್ಲ ಎಂದರು.
ಬಿ.ಎಸ್.ಎನ್.ಡಿ.ಪಿ ತಾಲೂಕಾಧ್ಯಕ್ಷ ವಿನಾಯಕ ನಾಯ್ಕ ಸ್ವಾಗತಿಸಿದರು.ಅಣ್ಣಪ್ಪ ನಾಯ್ಕ ನಿರೂಪಿಸಿದರು. ಹಿತೇಂದ್ರ ನಾಯ್ಕ, ದಿವಾಕರ ನಾಯ್ಕ, ಕೆ.ಆರ್. ವಿನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



