ಸಿದ್ಧಾಪುರ ನಗರದ ಹೊರವಲಯದಲ್ಲಿ ಯುವಕರಿಬ್ಬರು ಪರಸ್ಫರ ಕಾದಾಡಿ ಒಬ್ಬನಿಗೆತೀವೃ ಗಾಯಗಳಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಚಾಕುಇರಿತದಿಂದ ಗಾಯಾಳುವಾದ ಯುವಕನನ್ನು ಬಳ್ಳಟ್ಟೆಯ ಪವನ್ ಕುಮಾರ ಎಂದು ಗುರುತಿಸಲಾಗಿದ್ದು ಚಾಕುಇರಿದಾತನನ್ನು ಸುಮಂತ್ ಎಂದು ಪತ್ತೆಹಚ್ಚಲಾಗಿದೆ.
ಇಂದು ಮಧ್ಯಾಹ್ನದ ಸಮಯಕ್ಕೆ ಈ ಪ್ರಕರಣ ನಡೆದಿದ್ದು ಗಲಾಟೆಯ ಕಾರಣ, ಹಿನ್ನೆಲೆ ತಿಳಿದುಬಂದಿಲ್ಲ. ಘಟನೆಯ ನಂತರ ಪವನ್ ಕುಮಾರನನ್ನು ಸಿದ್ಧಾಪುರ ತಾಲೂಕು ಆಸ್ಫತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ರಕ್ತಸ್ರಾವ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ನಗರದ ಹೊರವಲಯ ತಾಂತ್ರಿಕ ಮಹಾವಿದ್ಯಾಲಯವಿರುವ ಅವರಗುಪ್ಪಾದ ಬಳಿ ಈ ಗಲಾಟೆ ನಡೆದಿದ್ದು ಚಾಕುಇರಿತ,ರಗಳೆಯ ಕಾರಣ ತಿಲಿದುಬಂದಿಲ್ಲ.ಈ ಪ್ರಕರಣದ ಪ್ರಮುಖ ಆರೋಪಿ ಸುಮಂತ್ ತಲೆಮರೆಸಿಕೊಂಡಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಸ್ತೆಯಲ್ಲಿ ಮಹಿಳೆಯ ಕೈಹಿಡಿದು ಎಳೆದಾಡಿದ್ದ ಜೆಡಿಎಸ್ ಮುಖಂಡನ ಬಂಧನ
ರಸ್ತೆಯಲ್ಲಿಯೇ ಮಹಿಳೆ ಕೈಹಿಡಿದು ಎಳೆದಾಡಿದ್ದ ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳನನ್ನು ಪೊಲೀಸರು ಬಂಧಿಸಿದ್ದಾರೆ.
ಧಾರವಾಡ: ರಸ್ತೆಯಲ್ಲಿಯೇ ಮಹಿಳೆ ಕೈಹಿಡಿದು ಎಳೆದಾಡಿದ್ದ ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳನನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಧಾರವಾಡ ನಗರದ ಸತ್ತೂರ ಬಡಾವಣೆಯಲ್ಲಿ ಸತ್ತೂರಿನ ಮಹಿಳೆ ಮನೆಗೆ ತೆರಳಿದ್ದ ಶ್ರೀಕಾಂತ ಜಮುನಾಳ ಈ ವೇಳೆ ಮಹಿಳೆಯ ಕೈಹಿಡಿದು ಎಳೆದಾಡಿರುವ ವಿಡಿಯೋ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಘಟನೆ ಬಳಿಕ ಆರೋಪಿ ಶ್ರೀಕಾಂತ ಜಮನಾಳ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. ಸವದತ್ತಿ ತಾಲೂಕಿನ ಪೊಲೀಸರಿಗೆ ಶ್ರೀಕಾಂತ ಸೆರೆಸಿಕ್ಕಿದ್ದು, ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ವಿಚಾರಣೆ ಬಳಿಕವಷ್ಟೇ ಹೆಚ್ಚಿನ ಮಾಹಿತಿ ದೊರಕಲಿದೆ. (kpc)