ಪ್ರೊ|| ಬಂಗಾರಿ ಎಂ. ಶೆಟ್ಟಿ ನಿಧನ
ಸಿದ್ದಾಪುರ-೧೪ : ಪ್ರೊ. ಬಂಗಾರಿ ಎಂ. ಶೆಟ್ಟಿ (೭೦) ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಿನಾಂಕ : ೧೨ ರಂದು ನಿಧನ ಹೊಂದಿದರು. ಪತಿ, ಇಬ್ಬರು ಗಂಡುಮಕ್ಕಳು, ಓರ್ವ ಹೆಣ್ಣುಮಗಳನ್ನು ಹಾಗೂ ಸೊಸೆಯಂದಿರನ್ನು, ಬಂಧು-ಬಳಗವನ್ನು ಅಗಲಿದ್ದಾರೆ.
ಅವರು ಸಿದ್ದಾಪುರ ಎಂ.ಜಿ.ಸಿ. ಕಾಲೇಜಿನಲ್ಲಿ ದೀರ್ಘಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಹಿಂದೀ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಅವರ ನಿಧನಕ್ಕೆ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಿದ್ದಾಪುರ(ಉ.ಕ)
ದಿನಾಂಕ : ೧೪-೦೯-೨೦೨೧ ರ ಸಿದ್ದಾಪುರ ಪೇಟೆ ಧಾರಣೆ
ಅ.ನಂ. ಹುಟ್ಟುವಳಿಯ
ಹೆಸರು ಧಾರಣೆಗಳು (ಪ್ರತಿ ಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
೧ ರಾಶಿ ೪೭೧೬೯ ೫೧೧೩೩ ೫೦೮೯೯
೨ ತಟ್ಟಿಬೆಟ್ಟೆ ೩೪೦೯೯ ೪೭೪೮೯ ೪೪೮೦೯
೩ ಕೆAಪಗೋಟು ೩೩೬೯೯ ೩೪೦೯೯ ೩೪೦೯೯
೪ ಬಿಳಿಗೋಟು ೩೨೮೯೯ ೩೮೩೯೯ ೩೭೬೯೯
೫ ಚಾಲಿ ೪೦೯೫೯ ೪೬೧೦೯ ೪೫೮೯೯
೬ ಕೋಕಾ ೨೭೭೯೯ ೩೮೦೯೯ ೩೬೭೦೯
೭ ಕಾಳುಮೆಣಸು ೩೮೨೦೮ ೩೮೩೮೯ ೩೮೩೮೯
ಕರಾವಳಿ ಕರ್ನಾಟಕದಲ್ಲಿ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣಗಳು ಏರಿಕೆಯಾಗುತ್ತಿವೆ.
ಕಾರವಾರ: ಕರಾವಳಿ ಕರ್ನಾಟಕದಲ್ಲಿ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣಗಳು ಏರಿಕೆಯಾಗುತ್ತಿದೆ. ಅಧಿಕಾರಿಗಳು ಆರೋಪಿಗಳನ್ನು ಬಂಧಿಸುತ್ತಿರುವುದರಿಂದ ಕರಾವಳಿ ಭಾಗದಲ್ಲಿನ ಚಿನ್ನದ ಕಳ್ಳಸಾಗಾಣಿಕೆ ಏರಿಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಸೆ.20, 2020 ರಲ್ಲಿ 50 ಗ್ರಾಮ್ ಚಿನ್ನದೊಂದಿಗೆ ತೆರಳುತ್ತಿದ್ದ ಭಟ್ಕಳದ ವ್ಯಕ್ತಿಯೋರ್ವನನ್ನು ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಜ.7, 2021 ರಲ್ಲಿ 22 ಲಕ್ಷ ಮೌಲ್ಯದ 741 ಗ್ರಾಮ್ ಚಿನ್ನಾಭರಣಗಳನ್ನು ಕಳ್ಳಸಾಗಣೆಮಾಡುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಇದಾದ ಬಳಿಕ ಮೇ.18, 2021 ರಲ್ಲಿ 262 ಗ್ರಾಮ್ ತೂಗುವ 13.17 ಲಕ್ಷ ಮೌಲ್ಯದ ಚಿನ್ನವನ್ನು ವ್ಯಕ್ತಿಯೋರ್ವನಿಂದ ವಶಪಡಿಸಿಕೊಳ್ಳಲಾಗಿತ್ತು. ಆಗಸ್ಟ್ 25 ರಂದು ಮತ್ತೋರ್ವ ವ್ಯಕ್ತಿಯಿಂದ 5.58 ಲಕ್ಷದಷ್ಟು ಮೌಲ್ಯದ ಅಕ್ರಮ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು.
ಈ ಎಲ್ಲಾ ಪ್ರಕರಣಗಳಲ್ಲೂ ಇರುವ ಒಂದು ಸಾಮ್ಯತೆಯೆಂದರೆ ಎಲ್ಲಾ ಆರೋಪಿಗಳೂ ಭಟ್ಕಳದ ಮೂಲದವರಾಗಿದ್ದಾರೆ.
ಭಟ್ಕಳ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ನಂಟು, ಅಕ್ರಮ ವಲಸಿಗರಿಗೆ ನಕಾರಾತ್ಮಕ ಅಂಶಗಳಿಗೆ ಸುದ್ದಿಯಾಗುತ್ತಿದೆ. ಪ್ರತಿ ಬಾರಿಯೂ ಎಟಿಎಸ್ ಹಾಗೂ ಎನ್ಐಎ ಸಿಬ್ಬಂದಿಗಳು ಭೇಟಿ ನೀಡುವುದು ಸಾಮಾನ್ಯ ಸಂಗತಿಯಾಗಿದೆ.
ಈಗ ಈ ನಕಾರಾತ್ಮಕ ಅಂಶಗಳಿಗೆ ಚಿನ್ನದ ಕಳ್ಳಸಾಗಣೆ ಹೊಸದಾಗಿ ಸೇರ್ಪಡೆಯಾಗಿದೆ. ಮೂಲಗಳ ಪ್ರಕಾರ ಕೋವಿಡ್-19 ಸಂದರ್ಭದಲ್ಲಿ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿದ್ದವರನ್ನು ವಾಪಸ್ ಕರೆತರಲು ಭಾರತ ವಂದೇ ಭಾರತ್ ಮಿಷನ್ ನ್ನು ಕೈಗೊಂಡಾಗಲೂ ಚಿನ್ನದ ಕಳ್ಳಸಾಗಣೆ ವರದಿಯಾಗಿತ್ತು ಎಂದು ತಿಳಿದುಬಂದಿದೆ.
ಮಂಗಳೂರು, ಕಣ್ಣೂರು, ಭಟ್ಕಳ, ದುಬೈ ಗಳಲ್ಲಿ ಕಳ್ಳಸಾಗಣೆ ಮಾಡುವ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ, ಚಪ್ಪಲಿಗಳಲ್ಲಿ, ಹೇರ್ ಬ್ಯಾಂಡ್, ಬಟ್ಟೆ ಒಣಗಿಸುವ ವೈರ್ ಗಳು ಎನ್-95 ಮಾಸ್ಕ್ ಗಳಲ್ಲಿ ಚಿನ್ನದ ಕಳ್ಳಸಾಗಣೆ ಮಾಡುವ ಮಾರ್ಗಗಳನ್ನು ಕಳ್ಳಸಾಗಣೆ ಮಾಡುವವರು ಕಂಡುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. (kpc)