

ಮಳೆಯ ನಡುವೆಯೂ ಭಕ್ತಿ ಸಂಭ್ರಮದಿಂದ ನಡೆದ ಗೌರಿ ವಿಸರ್ಜನಾ ಕಾರ್ಯಕ್ರಮ
ಸಿದ್ದಾಪುರ: ತಾಲೂಕಿನ ಕಡಕೇರಿಯಲ್ಲಿ ಗೌರಿ ವಿಸರ್ಜನಾ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷ ದಂತೆ ಈ ವರ್ಷ ವು ಅರ್ಥಪೂರ್ಣ ವಾಗಿ ಸಂಪ್ರದಾಯ ದಂತೆ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಊರಿನಲ್ಲಿರುವ ಊರ ಮುಂದಿನ ಕೆರೆಗೆ ಗೌರಿಯನ್ನು ತರುವ ಮೊದಲು ಸಂಪೂರ್ಣ ಬಾಳೆ ದಿಂಡಿನಿಂದ ತೆಪ್ಪವನ್ನು ಮಾಡಲಾಗುತ್ತದೆ. ಪುಟ್ಟಗುಂಡಿ ಕುಟುಂಬ ದವರು ತೆಪ್ಪವನ್ನು ಮಾಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಅನಾದಿ ಕಾಲದಿಂದಲೂ ಇದೇ ಕುಟುಂಬ ವು ತುಪ್ಪವನ್ನು ಮಾಡುವ ಕಾರ್ಯವನ್ನು ಚಾಚು ತಪ್ಪದೆ ಮಾಡುತ್ತಾ ಬಂದಿದ್ದಾರೆ. ತೆಪ್ಪವು ಪೂರ್ಣ ಗೊಂಡ ನಂತರ ಮಾಡಿ ಊರಿನ ಮಹಿಳೆಯರು ಗೌರಿಯನ್ನು ಹೊತ್ತು ಕೆರೆಯ ದಂಡಿಗೆ ಬರುತ್ತಾರೆ. ನಂತರ ತೆಪ್ಪದಲ್ಲಿ ದೀಪ ಹಚ್ಚಿ ಎಲ್ಲರೂ ಕದಿರು ( ಗೌರಿಗೆ ಹಚ್ಚಿದ ದೀಪ) ನೀಡುತ್ತಾರೆ. ನಂತರ ತೆಪ್ಪಕ್ಕೆ ಹಣ್ಣು ಕಾಯಿ ಮಾಡಿ ಪೂಜೆ ಸಲ್ಲಿಸಿ ಗೌರಿ ಯನ್ನು ವಿಸರ್ಜಿಸುತ್ತಾರೆ. ಕದಿರು ನೀಡದಿರುವವರು ಗೌರಿಯನ್ನು ಕೆರೆಗೆ ವಿಸರ್ಜನೆ ಮಾಡುತ್ತಾರೆ. ತೆಪ್ಪವನ್ನು ಕೆರೆಯ ಮಧ್ಯ ಕೊಂಡೊಯ್ದು ಬಿಡಲಾಗುತ್ತದೆ. ಈ ಸಂಭ್ರಮವನ್ನು ಕಣ್ತುಂಬಿ ಕೊಳ್ಳಲು ಊರಿನ ನಾಗರಿಕರು ಕೆರೆಯ ದಂಡೆಯ ಸುತ್ತಲೂ ನೆರೆದಿರುತ್ತಾರೆ. ಈ ದೃಶ್ಯ ವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಇದು ತಾಲೂಕಿನ ನಲ್ಲಿಯೇ ಅಪರೂಪದ ಸಂಭ್ರಮದಿಂದ ಅಚರಿಸಲಾಗುವ ಕಾರ್ಯಕ್ರಮವಾಗಿದೆ. ಆದರೆ ಈ ವರ್ಷ ಕೋವಿಡ್ ಜೊತೆಗೆ ಮಳೆರಾಯನ ಅಬ್ಬರದಿಂದ ಸಂಭ್ರಮದ ಆಚರಣೆಯು ಕಳೆಗಟ್ಟಿತ್ತು.
ಲಕ್ಷ್ಮೀ ನಾರಾಯಣ ದೇವಸ್ಥಾನದ ೪೭ ನೇ ಗಣೇಶೋತ್ಸವ ಸಂಪನ್ನ
ಸಿದ್ದಾಪುರ : ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯದಲ್ಲಿ ದೈವಜ್ಞ ಬ್ರಾಹ್ಮಣ ಯುವಕ ಸಂಘದ ೪೭ನೇ ಗಣೇಶೋತ್ಸವ ಸರಳ ರೀತಿಯಲ್ಲಿ ಆಚರಿಸಲಾಯಿತು. ಬೆಳಿಗ್ಗೆ ೧೦:೩೦ ಘಂಟೆಗೆ ಗಣಪತಿ ಪ್ರತಿಷ್ಠಾಪನೆ, ರಾಜರಾಜೇಶ್ವರಿ ಮಹಿಳಾ ಮಂಡಳಿಯಿಂದ ಲಲಿತ ಸಹಸ್ರನಾಮ ಪಠಣ, ಭಜನೆ, ಗಣಹೋಮ, ವಿಸರ್ಜನಪೂಜೆ ಇತ್ಯಾಧಿ ಪೂಜಾ ಕರ‍್ಯಕ್ರಮ ನಡೆಯಿತು.
ಸಮಾಜದ ವತಿಯಿಂದ ಮನೋಹರ ಪದ್ಮಾಕರ ಕಾನಗೋಡ ಹಾಗೂ ಪಟ್ಟಣ ಪಂಚಾಯತ ಸದಸ್ಯೆ ರಾಧಿಕಾ ಮನೋಹರ ಕಾನಗೋಡ ದಂಪತಿಗಳಿಂದ ನೆರವೇರಿಸಲಾಯಿತು. ಈ ಪೂಜಾ ಕಾರ‍್ಯವನ್ನು ವೇದಮೂರ್ತಿ ನಾಗರಾಜ ಭಟ್ಟ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಮಾಜದ ಹಿರಿಯರು, ಸಮಾಜದ ಬಾಂಧವರು, ಯುವಕ ಸಂಘದ ಪದಾಧಿಕಾರಿಗಳು, ಮಹಿಳಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.





ಸಿದ್ದರಾಮಯ್ಯ ಅವರನ್ನು ಮತ್ತೆ ವಿರೋಧ ಪಕ್ಷದಲ್ಲಿ ಕೂರಿಸುವುದೇ ನನ್ನ ಗುರಿ: ಯಡಿಯೂರಪ್ಪ
ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಯಡಿಯೂರಪ್ಪ ಮೊದಲ ಬಾರಿಗೆ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೋಂಡರು, 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಪಣ ತೊಟ್ಟಿರುವುದಾಗಿ ಹೇಳಿದರು.


ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಯಡಿಯೂರಪ್ಪ ಮೊದಲ ಬಾರಿಗೆ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೋಂಡರು, 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಪಣ ತೊಟ್ಟಿರುವುದಾಗಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ, ಅವರಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಹೇಳಿದ್ದಾರೆ. ಇನ್ನೂ ಸದನ ಆರಂಭಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ಪಕ್ಷದ ಒಬ್ಬ ಸಾಮಾನ್ಯ ಶಾಸಕನಂತೆ ಕೆಲಸ ಮಾಡುತ್ತೇನೆ, ನಾವು ನಮ್ಮ ಅಧ್ಯಕ್ಷರು ರಾಜ್ಯಾದ್ಯಂತ ಪ್ರವಾಸ ಮಾಡ್ತೇವೆ. ಒಬ್ಬ ಶಾಸಕನಾಗಿ ಕೆಲಸ ಮಾಡ್ತೇನೆ. ಸಿಎಂ ಆಗಿಯೇ ಕೆಲಸ ಮಾಡಬೇಕು ಅಂತ ಏನು ಇಲ್ಲ. ಸರ್ಕಾರದ ಒಳ್ಳೆಯ ಕೆಲಸಗಳನ್ನು ಶ್ಲಾಘಿಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು. ಮುಂದಿನ ದಿನ ಸಿದ್ದರಾಮಯ್ಯ ಆಕಸ್ಮಾತ್ ಆಗಿ ಗೆದ್ದರೂ, ಅವರನ್ನು ವಿರೋಧ ಪಕ್ಷದಲ್ಲಿಯೇ ಕೂರಿಸುತ್ತೇನೆ ಎಂದು ತಿಳಿಸಿದರು.
ಕಲಾಪದಲ್ಲಿ ಮುಖ್ಯ ಸಚೇತಕರ ಪಕ್ಕದ ಆಸನವನ್ನು ನೀಡಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಲ್ಲಿ ಮನವಿ ಮಾಡಿದ್ದೆ, ಅವರು ನನ್ನ ಮನವಿಯನ್ನು ಪುರಸ್ಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
