

ಸಿದ್ಧಾಪುರ ಅವರಗುಪ್ಪಾ ಬಳಿ ಪವನ್ ಕುಮಾರ ಎನ್ನುವ ಬಳ್ಳಟ್ಟೆ ಯುವಕನಿಗೆ ಚೂರಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದ ಸಿದ್ಧಾಪುರ ಅರಳಿಕೊಪ್ಪದ ಸುಮಂತ್ ಗೌಡರ್ ನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಇಂದು ಆನವಟ್ಟಿಬಳಿಯ ಬೆನ್ನೂರಿನಲ್ಲಿ ಬಂಧಿಸಿದ್ದಾರೆ.
ಅವರಗುಪ್ಪಾ ಆಯ್.ಟಿ.ಆಯ್. ಕಾಲೇಜು ಬಳಿ ಸೋಮುವಾರ ಮಧ್ಯಾಹ್ನ ಸುಮಂತ್ ಗೌಡರ್ ಮತ್ತು ಸ್ನೇಹಿತರು ಗಲಾಟೆ ಮಾಡಿ ಪವನ್ ಕುಮಾರನನ್ನು ಇರಿದಿದ್ದರು. ಈ ಗಲಾಟೆಯ ಇತರ ಆರೋಪಿತರು ಪೊಲೀಸರಿಗೆ ಸೆರೆಯಾಗಿದ್ದರು. ಪ್ರಮುಖ ಆರೋಪಿ ಸುಮಂತ್ ಗೌಡರ್ ತಲೆಮರೆಸಿಕೊಂಡು ಸೊರಬಾ ಬೆನ್ನೂರಿನಲ್ಲಿ ಅವಿತಿದ್ದ ತನಿಖೆ ನಡೆಸಿದ ಉತ್ತರ ಕನ್ನಡ ಪೊಲೀಸರು ಸುಮಂತ್ ಗೌಡರ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ತಂಡದಿಂದ ಹಲ್ಲೆಗೊಳಗಾದ ಪವನ್ ಕುಮಾರ ನಾಯ್ಕ ಶಿವಮೊಗ್ಗದಲ್ಲಿ ಚೇತರಿಸಿಕೊಳ್ಳುತಿದ್ದಾನೆ ಎನ್ನಲಾಗಿದೆ. ಸುಮಂತ್ ಸಂಘಡಿಗರನ್ನು ಬಂಧಿಸಿದ ಪೋ ಲೀಸರ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.


ದಿನಾಂಕ 15/9/21 ರಂದು ಸಿದ್ದಾಪುರ ತಾಲೂಕಿನಲ್ಲಿ ನಡೆಯಲಿರುವ covid ಲಸಿಕೆ ಶಿಬಿರದ ಮಾಹಿತಿ…
1ಪ್ರಾರ್ಥಮಿಕ ಆರೋಗ್ಯ ಕೇಂದ್ರ :ಕ್ಯಾದಗಿ*
ಉಪಕೆಂದ್ರ: ಲಂಬಾಪೂರ
ಸ್ಥಳ: ಗ್ರಾಮ ಪಂಚಾಯತ್ ಸಭಾ ಭವನ 190 ಡೋಸ್
2) ಪ್ರಾರ್ಥಮಿಕ ಆರೋಗ್ಯ ಕೇಂದ್ರ ಕೋರ್ಲಕೈ
ಉಪಕೇಂದ್ರ: ಕವಚೂರು
ಸ್ಥಳ: ಗ್ರಾಮ ಪಂಚಾಯತ್ ಸಭಾ ಭವನ 100 dose
3) ಪ್ರಾರ್ಥಮಿಕ ಆರೋಗ್ಯ ಕೇಂದ್ರ: ದೊಡ್ಮನೆ
ಸ್ಥಳ: ಪ್ರಾರ್ಥಮಿಕ ಆರೋಗ್ಯ ಕೇಂದ್ರ 100 dose
4)ಪ್ರಾರ್ಥಮಿಕ ಆರೋಗ್ಯ ಕೇಂದ್ರ : ಬೀಳಗಿ
ಸ್ಥಳ: ಹಿರಿಯ ಪ್ರಾಥಮಿಕ ಶಾಲೆ ಬೀಳಗಿ 80 dose
5)ಪ್ರಾರ್ಥಮಿಕ ಆರೋಗ್ಯ ಕೇಂದ್ರ ಕೊಲ್ ಶಿರ್ಸಿ
ಸ್ಥಳ: ಉಪಕೇಂದ್ರ ಕಾನಗೊಡು
Ballatte ಸಭಾಭವನ 100 dose
6)ಪ್ರಾರ್ಥಮಿಕ ಆರೋಗ್ಯ ಕೇಂದ್ರ : ಕಾನಸುರು
ಸ್ಥಳ: ಪ್ರಾರ್ಥಮಿಕಆರೋಗ್ಯ ಕೇಂದ್ರ ಸಭಾ ಭವನ ಕಾನಸುರು
120 ಡೋಸ್
ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಸಿದ್ದಾಪುರ.

