2A ಒಳಗೆ ಪಂಚಮಸಾಲಿಗಳು ಬೇಡ 2A ಯಲ್ಲಿ ಒಳ ಮೀಸಲಾತಿ ಸಿಗಲಿ – ಲೋಹಿತ್ ನಾಯಕ. & ಬಿಜೆಪಿಯದ್ದು ಡೋಂಗಿತನ, ಹುಸಿ ಹಿಂದುತ್ವ

ಸಿದ್ದಾಪುರ – BSNDP ಸಂಘಟನೆ ಸಿದ್ದಾಪುರ ಘಟಕ ಆಯೋಜಿಸಿದ್ದ ಮೀಸಲಾತಿ ಸಂವಾದದಲ್ಲಿ ಸ್ಥಳೀಯ ಸರ್ಕಾರಿ ನೌಕರರು, ಸ್ಥಳೀಯ ಸಮುದಾಯದ ಮುಖಂಡರು ಮತ್ತು ಸಂಘಟನೆಯ ಕಾರ್ಯಕರ್ತರರೊಂದಿಗೆ ಮಾತನಾಡಿದ BSNDP ರಾಜ್ಯ ಸಂಚಾಲಕರಾದ ಲೋಹಿತ್ ನಾಯಕ ಇತ್ತೀಚಿಗೆ ಮೀಸಲಾತಿ ಒಂದು ಗೊಂದಲದ ಗೂಡಾಗಿದೆ ಈ ಗೊಂದಲಕ್ಕೆ ಕಾಣದ ಕೈಗಳು ಸಹ ಕಾರಣ ವಾಗಿದ್ದಾರೆ ಆ ಕಾರಣದಿಂದ ನಾವು ಇರುವ ಮೀಸಲಾತಿಯನ್ನು ಸರಿಯಾಗಿ ತಿಳಿದುಕೊಳ್ಳಬೇಕು ಮತ್ತು ಮೀಸಲಾತಿ ಬದಲಾವಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಮತ್ತು ಚಿಂತಕರ ಮಾರ್ಗದರ್ಶನದಲ್ಲಿ ನಡೆಯುವುದರಿಂದ ಎಲ್ಲಾ ಗೊಂದಲಕ್ಕೆ ತೆರೆಎ ಳೆಯಬಹುದು.


ಮೀಸಲಾತಿ ವಿರೋಧಿಗಳ ಧ್ವನಿ ಹೆಚ್ಚುತ್ತಿ ರುವ ಈ ಕಾಲಘಟ್ಟದಲ್ಲಿ ನಾವು ನಾವೇ ಮೀಸಲಾತಿಯ ಗೊಂದಲವನ್ನು ಸೃಷ್ಟಿಸಿಕೊಳ್ಳುವುದು ಸರಿಯಲ್ಲ.
Cat 1 ನಲ್ಲಿರುವುದು ಕೇವಲ 4% ಮಾತ್ರ ನಾವಿಗಿರುವ 2A ನಲ್ಲಿರುವುದು 15% ನಾವು ನಾಮಧಾರಿ ಸಮಾಜವನ್ನು ಜಾಗ್ರತ ಗೊಳಿಸಿ ಸರಿಯಾಗಿ ಮೀಸಲಾತಿಯನ್ನು ಪಡೆಯಲು ಪ್ರಯತ್ನಿಸಬೇಕು ಮತ್ತು c1 ಮೀಸಲಾತಿ ಯಿಂದ ನಮ್ಮ ಸಮುದಾಯ ಶೇ 11%ಮೀಸಲಾತಿಯನ್ನು ಕಳೆದು ಕೊಳ್ಳುತ್ತದೆ. ಇದರಿಂದ ನಮ್ಮ ಸಮುದಾಯ ಶೈಕ್ಷಣಿಕವಾಗಿ, ರಾಜಕೀಯ ವಾಗಿ, ಆರ್ಥಿಕವಾಗಿ, ಉದ್ಯೋಗದಲ್ಲಿ ನಾವು ನಷ್ಟ ಅನುಭವಿಸ ಬೇಕಾಗುತ್ತದೆ ಎಂದು BSNDP ಸಿದ್ದಾಪುರ ಘಟಕ ಆಯೋಜಿಸಿದ ಮೀಸಲಾತಿ ಸಂವಾದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 50 ಕ್ಕು ಹೆಚ್ಚು ಸರ್ಕಾರಿ ನೌಕರರು ಭಾಗವಹಿಸಿದ ಸಂವಾದ ಕಾರ್ಯಕ್ರಮ ದಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಯಿತು.
ನಾಮಧಾರಿ ಧೀವರು ನಾಯಕರುಗಳಾದ ವಸಂತ್ ನಾಯ್ಕ್, ಹಿರಿಯ ರಾದ B R ನಾಯ್ಕ್, ಹಿತೇಂದ್ರ ನಾಯ್ಕ್, ದಿವಾಕರ್ ನಾಯ್ಕ್ ಹೆಮ್ಮನಬೈಲ್ ಪತ್ರಕತ್ರರಾದ ಕನ್ನೇಶ್ ನಾಯ್ಕ. BSNDP ಸಿದ್ದಾಪುರ ಘಟಕದ ಅಧ್ಯಕ್ಷಯರಾದ ವಿನಾಯಕ ನಾಯ್ಕ. ಊಪಾಧ್ಯಕ್ಷರಾದ A G ನಾಯ್ಕ BSNDP ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಅಧ್ಯಕ್ಷರಾದ ಜಗದೀಶ್ ಮಿಸ್ಕುಂಡ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಧಾನಸಭೆಗೆ ಅಪಮಾನ ಸಲ್ಲದು, ಬಿಜೆಪಿ ನೇತೃತ್ವದ ಸರ್ಕಾರಗಳು “ಕ್ರಿಮಿನಲ್ ಮತ್ತು ಲೂಟಿ” ಸರ್ಕಾರಗಳು: ಸಿದ್ದರಾಮಯ್ಯ

ವಿಧಾನಸಭೆ ಅಧಿವೇಶನವನ್ನು ಕಾಲ,ಕಾಲಕ್ಕೆ ಕರೆಯದೇ ರಾಜ್ಯದ ಬಿಜೆಪಿ ಸರ್ಕಾರ ವಿಧಾನಸಭೆಗೆ ಅಪಮಾನ, ಅಪಚಾರ ಮಾಡುತ್ತಿದ್ದು, ಬಿಜೆಪಿ ನೇತೃತ್ವದ ಸರ್ಕಾರಗಳು “ಕ್ರಿಮಿನಲ್ ಮತ್ತು ಲೂಟಿ” ಸರ್ಕಾರಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Siddaramaiah

ನಿಯಮ 69ರ ಅಡಿ ಸಾರ್ವಜನಿಕ ಮಹತ್ವದ ವಿಷಯವಾದ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಆರು ತಿಂಗಳ ಅವಧಿಯಲ್ಲಿ ವಿಧಾನಮಂಡಲ ಕಲಾಪ ನಡೆಸಬೇಕಿತ್ತು. ನಾವು ಬೆಲೆ ಏರಿಕೆಯಂತಹ ಗಂಭೀರ ವಿಚಾರಗಳನ್ನು ಎಲ್ಲಿ ಪ್ರಸ್ತಾಪಿಸಬೇಕು, ಎಲ್ಲಿ ಉತ್ತರ ಪಡೆಯಬೇಕು. ಈಗ ಕೇವಲ 10 ದಿನಗಳ ಅಧಿವೇಶನ ಕರೆಯಲಾಗಿದೆ. ಸಾಕಷ್ಟು ವಿಷಯಗಳನ್ನು ಎಲ್ಲಾ ಸದಸ್ಯರು ಪ್ರಸ್ತಾಪಿಸಲು ಅವಕಾಶ ಸಿಗದು. ಕಡೆಯ ಪಕ್ಷ ಇನ್ನೂ 10 ದಿನಗಳ ಕಾಲ ಅಧಿವೇಶನ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯದ್ದು ಡೋಂಗಿತನ, ಹುಸಿ ಹಿಂದುತ್ವ
ಇದೇ ವೇಳೆ ಹಿಂದೂ ದೇಗುಲಗಳ ತೆರವು ವಿಚಾರವಾಗಿಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದ ಅವರು, ಬಿಜೆಪಿಯದ್ದು ಡೋಂಗಿತನ ಹಾಗೂ ಹುಸಿ ಹಿಂದುತ್ವ ಎಂದು ಹೇಳಿದರು. ‘ನಂಜನಗೂಡು ದೇವಸ್ಥಾನ ನೆಲಸಮ ಸರ್ಕಾರದ ಗಮನದಲ್ಲಿ ಇತ್ತು.‌ 15ರಿಂದ ಎಲ್ಲಾ ನೆಲಸಮ ಮಾಡಬೇಕು ಎಂದು ಸಿಎಎಸ್ ಪತ್ರ ಬರೆದಿದ್ದರು. ಈಗ ಸಾರ್ವಜನಿಕರಿಂದ ಒತ್ತಾಯ ಹೆಚ್ಚಾದ ನಂತರ ಸರ್ಕಾರ ಬಣ್ಣ ಬದಲಾಯಿದೆ. ಅಲ್ಲದೆ ಸರ್ಕಾರದ ಗಮನಕ್ಕೆ ಬರದೆ ದೇವಸ್ಥಾನ ತೆರವು ಸಾಧ್ಯನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅಂತೆಯೇ ನಂಜನಗೂಡು ದೇವಸ್ಥಾನ ಒಡೆಯಲು ಪ್ರೇರಣೆ, ಸೂಚನೆ ಮುಖ್ಯ ಕಾರ್ಯದರ್ಶಿ ಪತ್ರವಾಗಿದೆ. ಬಿಜೆಪಿಯವರು ಹೇಳೋದು ಹಿಂದುತ್ವ. ಹಿಂದು ದೇವಾಲಯವನ್ನು ಇವರ ಸರ್ಕಾರವೇ ನಾಶ ಮಾಡಿದೆ. ಮಾತು ರಾಮನ ಜಪ ಇಲ್ಲಿ ದೇವಸ್ಥಾನ ಕೆಡವೋದು.‌ ಗಮನಕ್ಕೆ ತರದೆ ಯಾವುದೇ ಚರ್ಚೆ ಮಾಡದೆ ನೆಲಸಮ ಮಾಡಿದ್ದು ಇವರ ಡೋಂಗಿತನ, ಹುಸಿ ಹಿಂದುತ್ವ ತೋರಿಸುತ್ತೆ. ಇವರಿಗೆ ರಾಜಕೀಯ ಹಿಂದುತ್ವ ದೇವರು ಹಾಗೂ ದೇವಸ್ಥಾನದ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ಸರ್ಕಾರ ‘ಕ್ರಿಮಿನಲ್ ಲೂಟ್’ ಮಾಡ್ತಿದೆ
ನಿಯಮ 69 ರ ಅಡಿಯಲ್ಲಿ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ‘ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ನಾವು ಎತ್ತಿನ ಗಾಡಿಯಲ್ಲಿ ಬಂದೆವು ಆದರೆ ಇದಕ್ಕೆ ಸಾಕಷ್ಟು ಟೀಕೆ ಬಂತು. 1973 ರಲ್ಲಿ ಪಾರ್ಲಿಮೆಂಟ್ ಗೆ ಮಾಜಿ ಪ್ರಧಾನಿ ವಾಜಪೇಯಿಯವರು ಸಹ ಎತ್ತಿನಗಾಡಿಯಲ್ಲಿ ಬಂದಿದ್ದರು. ಆಗ ಕೇವಲ ಏಳು ಪೈಸೆ ಇಂಧನ ದರ ಹೆಚ್ಚಾಗಿತ್ತು, ಅಷ್ಟಕ್ಕೇ ವಾಜಪೇಯಿಯವರು ‘ಕ್ರಿಮಿನಲ್ ಲೂಟ್’ ಎಂದು ಇಂದಿರಾಗಾಂಧಿ ಸರ್ಕಾರದ ಮೇಲೆ ಆರೋಪ ಮಾಡಿದ್ರು. ನಾನು ಕೆಟ್ಟ ಪದ ಬಳಸಲ್ಲ, ವಾಜಪೇಯಿ ಬಳಸಿದ ಪದ ಬಳಸುತ್ತೇನೆ. ಈ ಸರ್ಕಾರವೂ ಕ್ರಿಮಿನಲ್ ಲೂಟ್ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಕಿ ಅಂಶಗಳೊಂದಿಗೆ ಸರ್ಕಾರದ ವಿರುದ್ಧ ವಾಗ್ದಾಳಿ
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಸಿದ್ದರಾಮಯ್ಯ ಅಂಕಿ ಅಂಶಗಳ ಜೊತೆ ಸದನದಲ್ಲಿ ಗಮನ ಸೆಳೆದರು. 2012 – ಕಚ್ಚಾ ತೈಲ ದರ ಒಂದು ಬ್ಯಾರಲ್ ಗೆ 125.45 ಡಾಲರ್ ಇತ್ತು.‌ ಆ ಸಂದರ್ಭದಲ್ಲಿ 71.13 ಪೆಟ್ರೋಲ್ ದರ ಇದ್ದರೆ ಡೀಸೆಲ್ ದರ 40.91 ಇತ್ತು. 2013 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 107.97 ಇದ್ದಾಗ ಪೆಟ್ರೋಲ್ ದರ 71.13 ಇತ್ತು ಹಾಗೂ ಡೀಸೆಲ್ ದರ 46.13 ಇತ್ತು. 2014 ರಲ್ಲಿ ಕಚ್ಚಾ ತೈಲ ದರ ಬ್ಯಾರಲ್ ಗೆ 105.52 ಡಾಲರ್ ಇದ್ದಾಗ ಪೆಟ್ರೋಲ್ ದರ 80.11 ಹಾಗೂ ಡೀಸೆಲ್ ದರ 55.48 ಇತ್ತು. ಇದಾದ ಬಳಿಕ 2015 ರಲ್ಲಿ ಕಚ್ಚಾ ತೈಲ ದರ 84.16, 2016 ರಲ್ಲಿ 46.17, 2018 ರಲ್ಲಿ 56.43, 2019 ರಲ್ಲಿ 49.88, 2020 ರಲ್ಲಿ 63.93 ಹಾಗೂ ಇದೀಗ ಬ್ಯಾರಲ್ ಗೆ 69 ಡಾಲರ್ ಇದೆ ಆದರೂ ದರ ಏರಿಕೆ ಆಗುತ್ತಿದೆ ಎಂದು ಆರೋಪಿಸಿದರು. 

ಈ ವೇಳೆ ಮಧ್ಯಪ್ರವೇಶ ಮಾಡಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಇದು ಪಾರ್ಲಿಮೆಂಟ್ ಭಾಷಣವೋ? ಅಸೆಂಬ್ಲಿ ಭಾಷಣವೋ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಚಿವರಾದ ಆರ್.‌ಅಶೋಕ್ ಹಾಗೂ ಸುಧಾಕರ್ ಧ್ವನಿಗೂಡಿಸಿದರು. ಈ ವೇಳೆ ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ನಮಗೆ ಉತ್ತರದ ಅಪೇಕ್ಷೆ ಇಲ್ಲ ಆದರೆ ಸಿದ್ದರಾಮಯ್ಯ ಬೆಲೆ ಏರಿಕೆ ಬಗ್ಗೆ ಹೇಳುತ್ತಿದ್ದಾರೆ ಮಾತನಾಡಲು ಅವಕಾಶ ಕೊಡಿ ಎಂದು ಒತ್ತಾಯಿಸಿದರು.‌ 

ತೈಲ ಬಾಂಡ್ ಮೊದಲು ಪ್ರಸ್ತಾಪ ಮಾಡಿದ್ದೇ ವಾಜಪೇಯಿ
ಬಳಿಕ ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ, ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ, ಸದನದ ಮುಂದೆ ಸತ್ಯಾಂಶವನ್ನು ಇಡುತ್ತಿದ್ದೇನೆ. ಬೆಲೆ ಏರಿಕೆ ಬಗ್ಗೆ ನಾನು ಸುಮ್ಮನಿರಬೇಕಾ? ಎಂದು ಗರಂ ಆದರು. ಬೆಲೆ ಏರಿಕೆಗೆ ತೈಲ ಬಾಂಡ್, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ದರ ಏರಿಕೆ ಕಾರಣ ಎಂದು ಬಿಜೆಪಿಗರು ಹೇಳುತ್ತಾರೆ, ಇದು ಸರಿಯಲ್ಲ ಬೆಲೆ ಏರಿಕೆ ಬಗ್ಗೆ ಸದನದ ನಿರ್ಣಯ ಮಾಡಿ ಕೇಂದ್ರಕ್ಕೆ ಕಳಿಸೋಣ ಎಂದು ಸಲಹೆ ನೀಡಿದರು. ಕರ್ನಾಟಕ ಪೆಟ್ರೋಲ್ ಮೇಲೆ 35% ಅಬಕಾರಿ ಸುಂಕ ಹಾಕಿದೆ. 24% ಡೀಸೆಲ್ ಮೇಲೆ ಹಾಕಲಾಗಿದೆ.‌ ಕೇಂದ್ರ ಸರ್ಕಾರ ಕರ್ನಾಟಕದಿಂದ ಕಳೆದ ಏಳು ವರ್ಷದಲ್ಲಿ 1,20,000 ಕೋಟಿ ಅಬಕಾರಿ ಸುಂಕ‌ ಸಂಗ್ರಹಿಸಿದೆ ಎಂದು ತಿಳಿಸಿದರು.

ವಾಜಪೇಯಿಯವರ ಕಾಲದಲ್ಲಿ ತೈಲ ಬಾಂಡ್ ಪ್ರಸ್ತಾವವಿತ್ತು‌ ಅದನ್ನು ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಯಿತು.‌ ತೈಲ ಬಾಂಡ್ ಖರೀದಿಸಿದ್ದು ಗ್ರಾಹಕರ ಮೇಲೆ ಬರೆ ಬೀಳದಿರಲಿ ಎಂದು, ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಿಗೆ ಹೊರೆ ಆಗಬಾರದು ಎಂದು ತೈಲ ಬಾಂಡ್ ಖರೀದಿಸಿತ್ತು ಯುಪಿಎ ಸರ್ಕಾರ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *