ಗೂಡು ಕಟ್ಟಿಸಿ ಮೊಟ್ಟೆ ಕಾವಿಟ್ಟುಗುಟುಕು ತುತ್ತುಣಿಸುವಜೀವ
ಜಗತ್ತಿನ ಬಂಧದಬಗ್ಗೆ ಬರೆವಾಗ ಇರುವ ಉತ್ಸಾಹಖಾಲಿ ಗೂಡಿನ ಆತ್ಮಕಥೆಕೇಳುವಾಗ ರೆಕ್ಕೆಗಳ ಬಗ್ಗೆ ಪಿಚ್ಚೆನಿಸಿಬದುಕಿನ ಅನಿಶ್ಚಿತತೆ ಕಾಡುತ್ತದೆ*********
****ತನ್ನ ನೇಯ್ದ ತಾಯಿ ಹಕ್ಕಿರೆಕ್ಕೆ ಬಲಿತ ಮರಿಗಳುನೆಗೆದು ಹಾರಿದ ನಂತರಮೌನವಾಗಿ ಬಿಕ್ಕಿದ್ದನ್ನುಕಂಡು ಗೂಡು ಮೌನವಾಯ್ತು*
************ಬಿಡಿಯನ್ನ ಇಡೀ ಆಗಿಸಿಬದುಕು ಕಟ್ಟುವ ಬಗ್ಗೆನಾ ಪಾಠ ಮಾಡುವಾಗಆಕೆ ಕಿಟಕಿಯಿಂದ ಜಗದ ಮೊದಲ ನೇಕಾರನ ನೆಯ್ಗೆಯ ನೋಡಿ ಪುಳಕಗೊಳ್ಳುತ್ತಿದ್ದಳು**************
ಈ ಪ್ರಾಣಿ ಪಕ್ಷಿಗಳುಪ್ರೇಮ ಕಾಮದ ಸುಖ ತಾಯ್ತನದ ಧನ್ಯತೆ ಎಲ್ಲಾಅನುಭವಿಸಿಯೂ ಸ್ವತಂತ್ರವಾಗುವುದರಲ್ಲಿಮನುಷ್ಯನಿಗೆ ಪಾಠವಿದೆಯೇ..?
-ಜಿ. ಟಿ ಸತ್ಯನಾರಾಯಣ ಕರೂರು.15-09-2021. ಬೆಳಿಗ್ಗೆ: 9:30 (ಕೃಪೆ: ಅದ್ಬುತ ಫೋಟೋ ಕ್ಲಿಕ್ಕಿಸಿದ ಲಕ್ಷ್ಮಿ ನಾರಾಯಣ ಸರ್ ಗೆ ಋಣಿ)
ರಾಕೆಟ್, ಉಪಗ್ರಹ, ಕ್ಷಿಪಣಿವಿಜ್ಞಾನ
ತಂತ್ರಜ್ಞಾನದ ಶೋಧಚಂದ್ರನ ದಾಟಿ ಮಂಗಳಕ್ಕೇರುವಾಗ
ಅಂಗಳದ ಕೊಳೆ ಅಡಿಕೆಬೋರ್ವೆಲ್ ನ ಚೀರುವ ಮಗು
ಏಕಕಾಲದಲ್ಲಿ ನೆಲದಟೀಕೆ ಟಿಪ್ಪಣಿ ಬರೆಯುತ್ತವೆ***********
ನೆಲದ ಅಂಟು ನಂಟಿಲ್ಲದೆಒಡ್ಡು ಬಿದ್ದ ಕಣ್ಣೀರ ಕೋಡಿಯ
ತೆವೆಗಣ್ಣಲೂ ನೋಡದೇಕ್ರೌರ್ಯ ಶೋಷಣೆಗೆ ಬೆನ್ನು ತಿರುವಿ
ಬರೀ ಬಿರಿದ ಹೂವಿನ ಬಗ್ಗೆಯೇಕವನ ಗೀಚುವ ಕವಿ
ಕೆಟ್ಟ ರಾಜಕಾರಣಿಗಿಂತಹೆಚ್ಚು ಅಪಾಯಕಾರಿ. ನಿಜವಲ್ಲವೇ..?
************ಕವಿಗಳನ್ನು ಹೊರಗಟ್ಟಿಆದರ್ಶ ರಾಜ್ಯ ಕಟ್ಟುವೆಎಂದಿದ್ದ ಪ್ರಾಚೀನ ಗ್ರೀಕ್ ಚಿಂತಕ
ರಕ್ತದ ಶ್ರೇಷ್ಠತೆಯಲ್ಲಿ ಮುಕ್ತ ಕಾಮವನ್ನ ಎತ್ತಿಹಿಡಿದ.ಗುಮಾನಿ
ಇಷ್ಟೇನಮ್ಮ ಘೋಷಿತ ಪರಮ ಶ್ರೇಷ್ಠರನ್ನಪ್ಲೇಟೋ ಪ್ರಭಾವಿಸಿರಬಹುದೇ..?
*ನಿನ್ನೊಳಗಿನ ನಿನ್ನನೀ ಹುಡುಕುತ್ತಿರುವೆಯೆಂದರೆ
ನನ್ನ ಕವಿತೆ ಕಾಲು ದಾರಿ ತೋರುವುದುಕಿಚ್ಚು ಹತ್ತಿಸಿಕೊಂಡರೂನೀ ಸುಡು ಬೆಂಕಿಯಾಗಲಾರೆ
ಖಚಿತಹಣತೆ ಹಿಡಿದು ನೆಲದ ಜತೆಗೆ ನಡೆವೆಇಷ್ಟೇ.. ಈ ಕ್ಷಣದ ಪ್ರಣಾಳಿಕೆ
-ಸತ್ಯನಾರಾಯಣ ಜಿ. ಟಿ ಕರೂರು(14-09-2021. ಬೆಳಿಗ್ಗೆ: 7 ಗಂಟೆ)
ಇಳಿ ಸಂಜೆ ಮತ್ತೆನಿನ್ನ ನೆನಪಾಯಿತು
ಸ್ವಲ್ಪ ಹೊತ್ತು ಹೂ ಅಂಗಡಿ ಬಳಿಯೇ ನಿಂತು
ತೋಪು ದಾಟಿ ಮನೆ ಬಂದುಅಬ್ಬಲಿಗೆ ಗಿಡಕೆ ಮಣ್ಣು ಹಾಕಿ
ದುಂಡು ಮಲ್ಲಿಗೆ ಕೊಯ್ದುಹೂವಂತ ಸೊಸೆ ಬೇಕೆಂದಅವ್ವನ ಕೈಗಿಟ್ಟೆ….
ಒಂಟಿ ರಾತ್ರಿಗಳಲ್ಲಿಉದಾಸ ಸಂಜೆಗಳಲಿಸುಡುಕೆಂಡದ ವಿರಹಮತ್ತು
ನೋವಿನ ಆಲಾಪನೆಯಲಿಪ್ರೀತಿ ಹುಡುಕಿ ಅಲೆವ ದಾರಿಯಲ್ಲಿ
ಗೋಕುಲದ ಅವಳುಪದೇ ಪದೇ ಎದುರಾಗುವಳು
ಕಂಗಳ ತುಂಟ ಭಾಷೆಮೌನದ ನಿಘಂಟು ಮುನಿಸಿನ
ವ್ಯಾಖರಣಜಗಳದ ವ್ಯಾಖ್ಯಾನ ನಗುವಿನ ಛಂದಸ್ಸಿನೆದುರುಪದವಿ ವಿದ್ವತ್ತುಗಳು ಸೋಲುತ್ತವೆಂಬ
ಪ್ರೇಮ ಪಂಡಿತರ ಅಭಿಪ್ರಾಯದಲ್ಲಿನಿಜವಿರಬಹುದೇ…?
– ಸತ್ಯನಾರಾಯಣ ಜಿ. ಟಿ ಕರೂರು.