ಸ್ಕೌಂಡ್ರಲ್ ಯಾರು? ತಮಗಿರುವ ವಿದ್ವತ್ತಿನಿಂದ ಇದಕ್ಕೆ ಉತ್ತರಿಸಬೇಕು: ಸ್ಪೀಕರ್ ಕಾಗೇರಿಗೆ ರಮೇಶ್ ಕುಮಾರ್ ಪ್ರಶ್ನೆ
ವಿಧಾನಸಭಾ ಕಲಾಪದಲ್ಲಿ ಗಂಭೀರ ಚರ್ಚೆ, ವಿಷಯ ಮಂಡನೆಗಳ ಹೊರತಾಗಿಯೂ ಆಗಾಗ್ಗೆ ಹಲವಾರು ರಸವತ್ತಾದ ಮಾತುಕತೆಗಳೂ ನಡೆಯುತ್ತವೆ.
ಕಾನೂನು ಶಿಬಿರ
ಸಿದ್ದಾಪುರ : ʼಕಾಯ್ದೆಗಳಿಗೆ ಸಂಬಂಧಿಸಿದಂತೆ ಪ್ರಾಚೀನ ಕಾಲದ ಕಾನೂನುಗಳಿಗೂ ಇಂದಿನ ಕಾನೂನುಗಳಿಗೂ ವ್ಯತ್ಯಾಸವಿದೆ. ಈಗ ಹಲವು ಹೊಸ ಕಾನೂನುಗಳು ಬಂದಿವೆ. ದೇಶ ಎಲ್ಲ ಕಾನೂನುಗಳಿಗೂ ಸಂವಿಧಾನವೇ ತಾಯಿ ಎಂದು ಸಿವಿಲ್ ನ್ಯಾಯಾಧೀಶ ಸಿದ್ದರಾಮ ಎಸ್ ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆಯ ಆಶ್ರಯದಲ್ಲಿ ನ್ಯಾಯಾಲಯದಲ್ಲಿ ಶುಕ್ರವಾರ ನಡೆದ ಕಾನೂನು ಅರಿವು ಹಾಗೂ ನೆರವಿನ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು
ಕಾನೂನಿನ ದೃಷ್ಟಿಯಲ್ಲಿ ಬಡವರು, ಶ್ರೀಮಂತರು ಸಮಾನರು. ಕಾನೂನಿನ ಸದುಪಯೋಗ ಪಡೆದುಕೊಳ್ಳಲು, ಅದರ ಜ್ಞಾನ ಪಡೆದುಕೊಳ್ಳುವುದು ಅಗತ್ಯ.ಕಾನೂನು ಸೇವಾ ಪ್ರಾಧಿಕಾರ ಪ್ರತಿಯೊಬ್ಬರಿಗೂ ಕಾನೂನಿನ ಜ್ಞಾನ ನೀಡುವ ಕೆಲಸ ಮಾಡುತ್ತಿದೆ ಎಂದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರೆಯಬೇಕು. ನ್ಯಾಯ ಪಡೆಯಲು ತಮಗಿರುವ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಜನರಿಗೆ ಗೊತ್ತಿರಬೇಕು.ಆದ್ದರಿಂದ ಕಾನೂನು ಸೇವಾ ಪ್ರಾಧಿಕಾರ ಕಾನೂನಿನ ಅರಿವು ಮೂಡಿಸಲು ಕಾರ್ಯಕ್ರಮ ನಡೆಸುತ್ತಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ದಿನೇಶ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶಗಳ ಬಗ್ಗೆ ವಕೀಲ ಆರ್.ಪಿ.ಭಟ್ಟ ಉಪನ್ಯಾಸ ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಚಂದ್ರಶೇಖರ್ ಎಚ್.ಎಸ್. ಉಪಸ್ಥಿತರಿದ್ದರು. ವಕೀಲೆ ರೇಖಾ ನಿರೂಪಿಸಿದರು.
ಸಿದ್ದಾಪುರ: ಪಟ್ಟಣದ ಗಂಡುಮಕ್ಕಳ ಶಾಲೆಯಲ್ಲಿ ಲಕ್ಷ ಲಸಿಕೋತ್ಸವ ಕಾರ್ಯ ಕ್ರಮ ನಡೆಯಿತು.
ಕಾರ್ಯ ಕ್ರಮ ದ ಅಧ್ಯಕ್ಷ ತೆ ವಹಿಸಿದ್ದ ಪಟ್ಟಣ ಪಂಚಾಯಿತ ಸದಸ್ಯ ಗುರುರಾಜ ಶಾನಭಾ ಗ ಮಾತನಾಡಿ ಜನರ ಸಹಕಾರ ಇಲ್ಲದಿದ್ದರೆ ಅಭಿಯಾನ ಸಾಫಲ್ಯತೆ ಕಾಣುವುದಿಲ್ಲ. ಸರಕಾರ ಏನು ಹೇಳುತ್ತದೆ ಅದನ್ನು ಗಮನದಲ್ಲಿ ಟ್ಟುಕೊಂಡು ಲಸಿಕೆ ತೆಗೆದುಕೊಳ್ಳಬೇಕು. ಎಂದರು.
ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತ ಉಪಾಧ್ಯಕ್ಷ ರವಿಕುಮಾರ್ ನಾಯ್ಕ ಉದ್ಘಾಟಿಸಿ ಮಾತನಾಡಿ ಕೋವಿಡ್ ಲಸಿಕೆ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಇದರ ಪ್ರಯೋಜನ ಎಲ್ಲರೂ ಪಡೆಯಲು ಸರಕಾರ ಹಮ್ಮಿಕೊಂಡ ಅಭಿಯಾನ ಬೆಂಬಲಿಸಬೇಕು ಎಂದರು.
ತಹಸೀಲ್ದಾರ ಪ್ರಸಾದ ಎಸ್ ಎ. ತಾಲೂಕು ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ ರಾವ್, ನರೇಗಾದ ದಿನೇಶ್ ಇಡಿ, ಪಟ್ಟಣ ಪಂಚಾಯಿತ ಮುಖ್ಯಾಧಿಕಾರಿ ಕುಮಾರ ನಾಯ್ಕ, ಆರೋಗ್ಯ ಇಲಾಖೆಯ ಅರುಣಕುಮಾರ, ಗೀತಾ ಡಿ ಸಾವಂತ್ ಉಪಸ್ಥಿತರಿದ್ದರು.
ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಗಂಭೀರ ಚರ್ಚೆ, ವಿಷಯ ಮಂಡನೆಗಳ ಹೊರತಾಗಿಯೂ ಆಗಾಗ್ಗೆ ಹಲವಾರು ರಸವತ್ತಾದ ಮಾತುಕತೆಗಳೂ ನಡೆಯುತ್ತವೆ.
ಅಂತೆಯೇ ಇಂದಿನ ಕಲಾಪದಲ್ಲಿಯೂ ಮಾಜಿ ಸ್ವೀಕರ್, ಕಾಂಗ್ರೆಸ್ ಶಾಸಕ “ಸ್ಕೌಂಡ್ರಲ್ಸ್” ಪ್ರಸಂಗವೊಂದನ್ನು ಹಂಚಿಕೊಂಡು ಸಭೆ ನಕ್ಕು ಹಗುರಾಗುವಂತೆ ಮಾಡಿದರು. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಖ್ಯಾತ ವಕೀಲ ರಾಮ್ ಜೇಠ್ಮಲಾನಿಯವರನ್ನು ಕರೆಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದವರು ರಮೇಶ್ ಕುಮಾರ್.
“ನಾನು ಅಧ್ಯಕ್ಷನಾಗಿದ್ದ ಕಾರಣ ನನ್ನ ಭಾಷಣ ಕಡೆಯಲ್ಲಿತ್ತು. ಈ ನಡುವೆ ರಾಮ್ ಜೇಠ್ಮಲಾನಿ ತಮ್ಮ ಮುಖ್ಯ ಭಾಷಣದಲ್ಲಿ “ಆಲ್ ದಿಸ್ ಸ್ಕೌಂಡ್ರಲ್ಸ್ ಆಫ್ ಕಾಂಗ್ರೆಸ್ ಪಾರ್ಟಿ” ಎಂದು ಮಾತು ಶುರು ಮಾಡಿ ಪಕ್ಷವನ್ನು ಸಾಕಷ್ಟು ಬಣ್ಣಿಸಿದರು. “ನನಗೆ ಲಾ ಪಾ ಏನೂ ಗೊತ್ತಿಲ್ಲ. ಹೀಗಾಗಿ ಎಲ್ಲ ಪಕ್ಷಗಳಲ್ಲೂ ಸ್ಕೌಂಡ್ರಲ್ಸ್ ಇರುತ್ತಾರೆ. ಈ ಎಲ್ಲಾ ಸ್ಕೌಂಡ್ರಲ್ಸ್ ಗಳಿಗೆ ಅಡ್ವೊಕೇಟ್ ಆಗಿ ತಾವು ಲಭ್ಯವಿದ್ದೀರಿ ಎಂದೆ” ಎಂದರು. ಈ ಮಾತಿಗೆ ಸದಸ್ಯರೆಲ್ಲರ ಮೊಗದಲ್ಲಿ ನಗೆ ಚಿಮ್ಮಿತ್ತು.
ಬಳಿಕ, “ಸ್ಕೌಂಡ್ರಲ್ ಯಾರು, ಲುಮಿನರಿ ಯಾರು ಎಂಬುದು ನನಗಿನ್ನೂ ಸ್ಪಷ್ಟವಾಗಿಲ್ಲ. ತಮಗಿರುವ ವಿದ್ವತ್ತಿನಿಂದ ಇದಕ್ಕೆ ಉತ್ತರಿಸಬೇಕು” ಎಂದು ಸ್ಪೀಕರ್ ಕಾಗೇರಿಯವರನ್ನು ಕೇಳಿದರು. ಆಗಲಿ. ಸದನದ ಹೊರತಾಗಿ ಹೊರಗೆ ನಾವಿಬ್ಬರೂ ಸಿಕ್ಕಾಗ ಈ ಬಗ್ಗೆ ಚರ್ಚಿಸೋಣವಂತೆ ಎಂದು ಕಾಗೇರಿ ಹೇಳಿದಾಗ ರಮೇಶ್ ಕುಮಾರ್ ಸುಮ್ಮನಾದರು.