

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೋಜ ಕುಮಾರ ಶ್ರೀಕಂಠ ಗೌಡರ್ ದೊಡ್ಡಗದ್ದೆ (ವಯಸ್ಸು ೨೮,)ಬೈಕ್ ಅಪಘಾತದಲ್ಲಿ ಮೃತರಾಗಿದ್ದಾರೆ. ಇವರು ತಂದೆ ತಾಯಿ ಹಾಗೂ ಸಹೋದರಿ (ಮದುವೆ ಆಗಿದೆ) ಮತ್ತು ಅಪಾರ ಬಂದು- ಬಳಗವನ್ನು ಅಗಲಿದ್ದಾರೆ.

ಪ್ರತಿಭಾವಂತ ಯುವಕನಾಗಿದ್ದ ಮನೋಜ್ ಸ್ನಾತಕೋತ್ತರ ಪದವಿ ನಂತರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.ಗುರುವಾರ ಸಂಜೆ ಬೈಕ್ ಸ್ಕಿಡ್ ಆಗಿ ಬಿದ್ದ ನಂತರ (ಬೆಂಗಳೂರು) ಲಾರಿಯೊಂದು ದೇಹದ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು.ಪೋಲೀಸ್ ಪ್ರಕ್ರೀಯೆಗಳ ನಂತರ ಶುಕ್ರವಾರ ಸಿದ್ಧಾಪುರ ದೊಡ್ಗದ್ದೆಯಲ್ಲಿ ಇವರ ಅಂತ್ಯಸಂಸ್ಕಾರ ನಡೆಯಿತು. ಇವರ ಕುಟುಂಬ ಮೂಲತ: ಕೋಲಶಿರ್ಸಿಯದಾಗಿದ್ದು ಮನೋಜ್ ತಂದೆ ಶ್ರೀಕಂಠಗೌಡರ್ ಸಿದ್ಧಾಪುರದಲ್ಲಿ ಬೈಕ್ ಮೆಕ್ಯಾನಿಕ್ ಆಗಿ ಜನಾನುರಾಗಿಯಾಗಿದ್ದರು. ಈ ಯುವಕನ ಅಕಾಲಿಕ ಆಕಸ್ಮಿಕ ನಿಧನಕ್ಕೆ ಅಪಾರ ಶೋಕ,ನೋವು ವ್ಯಕ್ತವಾಗಿದೆ.
