

ರಾಜ್ಯದಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಜಾರಿ, ಕೃಷಿ ಪಂಪ್ ಸೆಟ್ ಗೆ ವಿನಾಯಿತಿ
ಮೂರು ಹಂತದಲ್ಲಿ ಸ್ಮಾರ್ಟ್ ಹಾಗೂ ಪ್ರೀಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೀಟರ್ ದರವನ್ನು ಗ್ರಾಹಕರ ಬದಲು ಎಸ್ಕಾಂಗಳೇ ಭರಿಸಲಿವೆಯಾದರೂ ಕೃಷಿ ಪಂಪ್ ಸೆಟ್ ಗಳಿಗೆ ಇವುಗಳ…
ಆರ್.ಜಿ.ನಾಯ್ಕ ನಿಧನ- ಕಾರವಾರ,ಬನವಾಸಿ,ಸಿದ್ಧಾಪುರಗಳಲ್ಲಿ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಎ.ಎಸ್.ಆಯ್. ಆಗಿ ನಿವೃತ್ತರಾಗಿದ್ದ ಕುಂಬಾರಕುಳಿಯ ಆರ್.ಜಿ.ನಾಯ್ಕ ಇತ್ತೀಚೆಗೆ ನಿಧನರಾದರು. 64 ವರ್ಷದ ಇವರಿಗೆ ಹೃದಾಯಾಘಾತವಾಗಿ ನಿಧನರಾದರು. ಸಜ್ಜನಿಕೆ,ಒಳ್ಳೆಯತನಗಳಿಂದ ಜನಾನುರಾಗಿಯಾಗಿದ್ದ ನಾಯ್ಕ ಹಲಗೇರಿ ವಿ.ಎಸ್.ಎಸ್. ಉಪಾಧ್ಯಕ್ಷರಾಗಿಯೂ ಕಾರ್ಯನಿ ರ್ವಹಿಸಿದ್ದರು. ರತ್ನಾಕರ ನಾಯ್ಕ 5 ಜನ ಒಡಹುಟ್ಟಿದವರೊಂದಿಗೆ ಪತ್ನಿ,ಪುತ್ರಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರಿಗೆ ಹಲಗೇರಿಯಲ್ಲಿ ಶೃದ್ಧಾಂಜಲಿ ಅರ್ಪಿಸಿ,ಅವರ ವ್ಯಕ್ತಿತ್ವವನ್ನು ಸ್ಮರಿಸಿದರು. ಇಲಾಖೆ,ಸಮಾಜದ ಅನೇಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದ ನಾಯ್ಕರ ಅಗಲಿಕೆ ಆತ್ಮೀಯರ ಬೇಸರಕ್ಕೆ ಕಾರಣವಾಗಿದೆ.

ಉತ್ತರಕನ್ನಡ ಜಿಲ್ಲೆ ಸಿದ್ಧಾಪುರದ ನಾಮಧಾರಿ ಅಭಿವೃದ್ಧಿ ಸಂಘದ ಸಭಾಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2 ಕೋಟಿ ರೂಪಾಯಿ ಅನುದಾನ ಮಂಜೂರಿ ಮಾಡಿದ್ದಾರೆ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷರ ಕಛೇರಿಯ ಪ್ರಕಟಣೆ ತಿಳಿಸಿದೆ. ನಾಮಧಾರಿ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷರ ಮನವಿ ಮೇರೆಗೆ ಈ ಅನುದಾನ ಬಿಡುಗಡೆ ಮಾಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದಿನಾಂಕ :21/09/2021 ಸಿದ್ದಾಪುರ ತಾಲೂಕಿನ ವಿವಿಧ ಸ್ಥಳಗಳಲ್ಲಿ ನಡೆಯುವ ಮಹಾಮೇಳ ಕೋವಿಡ್ ಲಸಿಕ ಶಿಬಿರದ ಮಾಹಿತಿ ಕೆಳಗಿನಂತಿದೆ.
1.ಪ್ರಾಥಮಿಕ ಆರೋಗ್ಯ ಕೇಂದ್ರ : ದೊಡ್ಮನೆ
A).ಉಪಕೇಂದ್ರ : ದೊಡ್ಮನೆ
180ಡೋಸ್ ಲಸಿಕೆ ಲಭ್ಯವಿದೆ
ಸ್ಥಳ : ಗ್ರಾಮ ಪಂಚಾಯತ್ ಸಭಾಭವನ
1.ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾದಿಗಿ
A).ಉಪಕೇಂದ್ರ : ಕ್ಯಾದಿಗಿ
200ಡೋಸ್ ಲಸಿಕೆ ಲಭ್ಯವಿದೆ
ಸ್ಥಳ : ಪ್ರಾಥಮಿಕ ಆರೋಗ್ಯ ಕೇಂದ್ರ
2ಪ್ರಾಥಮಿಕ ಆರೋಗ್ಯ ಕೇಂದ್ರ :ಕಾನಸೂರು**
A.ಉಪಕೇಂದ್ರ:ಕಾನಸೂರು
100 ಡೋಸ್ ಲಸಿಕೆ ಲಭ್ಯವಿದೆ
ಸ್ಥಳ*: ಸಮುದಾಯ ಭವನದಲ್ಲಿ
B).ಉಪಕೇಂದ್ರ :ಹಾರ್ಸಿಕಟ್ಟಾ
200 ಡೋಸ್ ಲಸಿಕೆ ಲಭ್ಯವಿದೆ
ಸ್ಥಳ : ಹಿರಿಯ ಪ್ರಾಥಮಿಕ ಶಾಲೆ
3.)ಪ್ರಾಥಮಿಕ ಆರೋಗ್ಯ ಕೇಂದ್ರ : ಬಿಳಿಗಿ*
*A.ಉಪಕೇಂದ್ರ :ಬಿಳಿಗಿ
200ಡೋಸ್ ಲಸಿಕೆ ಲಭ್ಯವಿದೆ
ಸ್ಥಳ :ಬಿಳಿಗಿ ಹಿರಿಯ ಪ್ರಾಥಮಿಕ ಶಾಲೆ
B).ಉಪಕೇಂದ್ರ :ಬೇಡ್ಕಣಿ
200ಡೋಸ್ ಲಸಿಕೆ ಲಭ್ಯವಿದೆ
ಸ್ಥಳ : ಹಿರಿಯ ಪ್ರಾಥಮಿಕ ಶಾಲೆ ಬೇಡ್ಕಣಿ
*4).ಪ್ರಾಥಮಿಕ ಆರೋಗ್ಯ ಕೇಂದ್ರ :ಕೊಲ್ ಸಿರ್ಸಿ
A).ಉಪಕೇಂದ್ರ : ಕೊಲ್ ಸಿರ್ಸಿ
200 ಡೋಸ್ ಲಸಿಕೆ ಲಭ್ಯವಿದೆ
ಸ್ಥಳ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ
ಸೊಚನೆ:ಮೊದಲನೇ ಡೋಸ್ಗೆ ಆದ್ಯತೆ ನೀಡಲಾಗುವುದು
ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಸಿದ್ದಾಪುರ.
ಬೆಂಗಳೂರು: ಮೂರು ಹಂತದಲ್ಲಿ ಸ್ಮಾರ್ಟ್ ಹಾಗೂ ಪ್ರೀಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೀಟರ್ ದರವನ್ನು ಗ್ರಾಹಕರ ಬದಲು ಎಸ್ಕಾಂಗಳೇ ಭರಿಸಲಿವೆಯಾದರೂ ಕೃಷಿ ಪಂಪ್ ಸೆಟ್ ಗಳಿಗೆ ಇವುಗಳ ಅಳವಡಿಕೆ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಇಂದು ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂರು ಹಂತದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ, ಮೊದಲು ಸರ್ಕಾರಿ ಕಚೇರಿಗಳಲ್ಲಿ ಅಳವಡಿಕೆ ಮಾಡುತ್ತೇವೆ. ಈಗಾಗಲೇ 5792 ಕೋಟಿ ವಿದ್ಯುತ್ ಬಿಲ್ ಸರ್ಕಾರಿ ಕಚೇರಿಗಳಿಂದ ಬಾಕಿ ಬರಬೇಕಿದೆ. ಹಾಗಾಗಿ ಅಲ್ಲಿ ಮೊದಲು ಅಳವಡಿಕೆ ಮಾಡಲಾಗುತ್ತದೆ ಎಂದರು.
ಎರಡನೇ ಹಂತದಲ್ಲಿ ಹೊಸ ಕಟ್ಟಡ ನಿರ್ಮಾಣ ವೇಳೆ ಪಡೆಯುವ ತಾತ್ಕಾಲಿಕ ಸಂರ್ಪಕಕ್ಕೆ ಸ್ಮಾರ್ಟ್ ಮೀಟರ್(ಪ್ರೀಪೇಡ್) ಅಳವಡಿಸಲಾಗುತ್ತದೆ. ಮೂರನೆಯದಾಗಿ 27 ಅಮೃತ ಸಿಟುಗಳಿಗೆ ಅಳವಡಿಸಲಾಗುತ್ತದೆ ಎಂದರು.
ಶೇ. 15 ಕ್ಕೂ ಹೆಚ್ಚು ವಿದ್ಯುತ್ ಬಿಲ್ ನಷ್ಟವಾಗುತ್ತಿರುವ ಕಡೆ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರ ಸರ್ಕಾರ ಹೇಳಿದೆ. ಅದರಂತೆ ಅಳವಡಿಕೆ ಮಾಡಲಾಗುತ್ತದೆ. ಮೀಟರ್ ಅಳವಡಿಕೆಗೆ ಗ್ರಾಹಕರ ಮೇಲೆ ಹೊರಹಾಕಲ್ಲ, ಅದನ್ನು ಎಸ್ಕಾಂ ಗಳೇ ಭರಿಸಲಿವೆ. ಆದರೆ ಯಾವುದೇ ಕಾರಣಕ್ಕೂ ಸ್ಮಾರ್ಟ್ ಮೀಟರ್, ಪ್ರೀಪೇಡ್ ಮೀಟರ್ ಗಳನ್ನು ಕೃಷಿ ಪಂಪ್ ಸೆಂಟ್ ಗಳಿಗೆ ಹಾಕಲ್ಲ. ಅಂತಹ ಪ್ರಯೋಗವನ್ನೂ ಮಾಡುವುದಿಲ್ಲ ಎಂದು ಇಂಧನ ಸಚಿವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ಒಂದು ಲಕ್ಷ ಮೀಟರ್ ಅಳವಡಿಸಿದ್ದೇವೆ. ಇದರ ಸಾಧಕ ಬಾಧಕ ನೋಡಿ ಇತರ ಕಡೆ ವಿಸ್ತರಣೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
ರೈತರ ಕೃಷಿ ಪಂಪ್‌ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸ್ ಫಾರ್ಮರ್ ಸುಟ್ಟು ಹೋದ ಪಕ್ಷದಲ್ಲಿ 24 ಗಂಟೆಯಲ್ಲಿ ಬದಲಾಯಿಸಿಕೊಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಸುನೀಲ್ ಕುಮಾರ್ ಭರವಸೆ ನೀಡಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಾನೆ ಶ್ರೀನಿವಾಸ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟ್ರಾನ್ಸ್ ಫಾರ್ಮರ್ ಸುಟ್ಟರೆ ಅವುಗಳನ್ನು ಬದಲಾಯಿಸಲು ರೈತರ ವಾಹನ ಬಳಸಬೇಡಿ, ನಿಮ್ಮ ವಾಹನ ಬಳಸಿ ಎಂದು ಎಸ್ಕಾಂಗಳಿಗೆ ತಿಳಿಸಲಾಗಿದೆ,ಜೊತೆಗೆ ಟ್ರಾನ್ಸ್ ಫಾರ್ಮರ್ ಸುಟ್ಟರೆ 24 ಗಂಟೆಯಲ್ಲಿ ಬದಲಾವಣೆ ಮಾಡಬೇಕು, ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ, ಆದಷ್ಟು ಬೇಗ ಇದನ್ನು ಜಾರಿಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಟ್ರಾನ್ಸ್ ಫಾರ್ಮರ್ ಬದಲಾಯಿಸಲು ರೈತರಿಂದ ಹಣ ಪಡೆಯುವಂತಿಲ್ಲ ಯಾರಾದರೂ ಹಣ ಪಡೆದಿದ್ದರೆ ಆ ಬಗ್ಗೆ ಮಾಹಿತಿ ತಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. (kpc)




ತಹಸಿಲ್ಧಾರರ ಕಛೇರಿ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.
ಸಿದ್ದಾಪುರ: ತಾಲೂಕಿನ ಗೋಳಗೋಡನ ನವೋದಯ ಯುವಕ ಸಂಘದ ನೂತನ
ಅಧ್ಯಕ್ಷರಾಗಿ ವಾಸು ನಾಯ್ಕ್, ಉಪಾಧ್ಯಕ್ಷರಾಗಿ ಸತೀಶ್ ನಾಯ್ಕ, ಕಾರ್ಯದರ್ಶಿಯಾಗಿ ತೇಜು ಹಾಗೂ ಸಹಕಾರ್ಯದರ್ಶಿಯಾಗಿ ಪವನ ನಾಯ್ಕ ಆಯ್ಕೆಯಾಗಿದ್ದಾರೆ. ಸಂಘವು ಅನೇಕ ವರ್ಷ ಗಳಿಂದ ಗ್ರಾಮದ ಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುವುದರ ಜೊತೆಗೆ ಅಭಿವೃದ್ಧಿ ಕೆಲಸಗಳಲ್ಲಿ ಕೈಜೊಡಿಸಿದೆ. ಈಗ 25 ನೇ ವರ್ಷ ಕ್ಕೆ ಪಾದಾರ್ಪಣೆ ಮಾಡಿದ್ದು ಅದ್ದೂರಿಯಾಗಿ ಆಚರಣೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ.



ಮರಣಹೊಂದಿ ಹತ್ತು ದಿನ ಕಳೆದರೂ ಕೊಳೆಯದೇ ಉಳಿದ ಮುಂಡಗೋಡು ಟಿಬೇಟಿಯನ್ ಕಾಲೋನಿ ಬೌದ್ಧ ಸನ್ಯಾಸಿ ದೇಹ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಟಿಬೇಟಿಯನ್ ಕಾಲೋನಿಯಲ್ಲಿ ಬೌದ್ಧ ಸನ್ಯಾಸಿಯೊಬ್ಬರು ಮೃತರಾಗಿ ಹತ್ತು ದಿನ ಕಳೆದರೂ ದೇಹ ಕೊಳೆಯದೇ ಯಥಾ ಸ್ಥಿತಿಯಲ್ಲಿರುವ ಮೂಲಕ ವಿಸ್ಮಯ ಮೂಡಿಸಿದೆ.
ಕಾಲೋನಿಯ ನಂ.1 ಕ್ಯಾಂಪ್ ನ ಶೇರ್ ಗಾಂದೇನ್ ಬೌದ್ಧ ಮಂದಿರದ ಹಿರಿಯ ಸನ್ಯಾಸಿ ಯಾಸಿ ಪೋಂಟ್ಸ್ (90) ಮೃತರಾದವರಾಗಿದ್ದಾರೆ.
ಸೆ. 9 ರಂದು ಇವರು ಕೊಠಡಿಯಲ್ಲಿ ಧ್ಯಾನದಲ್ಲಿ ಇರುವಾಗ ಮೃತರಾಗಿದ್ದು ಈ ವೇಳೆ ಅವರ ದೇಹವನ್ನು ಅದೇ ಕೊಠಡಿಯಲ್ಲಿ ಹಾಗೆಯೇ ಇರಿಸಲಾಗಿದೆ.ಆದರೇ ಹತ್ತು ದಿನ ಕಳೆದಿದ್ದು ದೇಹ ನೀರು ಒಡೆಯುವುದಾಗಲಿ ,ವಾಸನೆ ಬರುವುದಾಗಲಿ,ಕೊಳೆಯುವುದಾಗಲಿ ಆಗದೇ ಯಥಾ ಸ್ಥಿತಿಯಲ್ಲಿ ಇದ್ದು ಇದೀಗ ಅವರ ದೇಹಕ್ಕೆ ಕಿರಿಯ ಬೌದ್ಧ ಸನ್ಯಾಸಿಗಳು ದೀಪ ಬೆಳಗಿಸುವ ಮೂಲಕ ಪೂಜೆ ಮಾಡುತಿದ್ದಾರೆ.
ಈ ಸನ್ಯಾಸಿಯು ಕ್ಯಾಂಪ್ ನಲ್ಲಿ ಇರುವ ಕಿರಿಯ ಸನ್ಯಾಸಿಗಳಿಗೆ ಧರ್ಮ ಭೋದನೆ ಮಾಡುತಿದ್ದರು. ಇದೀಗ ಅವರು ಮೃತಪಟ್ಟಿದ್ದರೂ ದೇಹ ಯಥಾ ಸ್ಥಿತಿಯಲ್ಲಿ ಇರುವುದರಿಂದ ದೇಹ ಕೊಳೆಯುವ ವರೆಗೂ ಅವರ ದೇಹ ಅಂತ್ಯಸಂಸ್ಕಾರ ಮಾಡದಿರಲು ಡಿಬೇಟಿಯನ್ ಮುಖಂಡರು ತೀರ್ಮಾನಿಸಿದ್ದಾರೆ. (KannadaVaniNews)


