

ಪಿತ್ರಾರ್ಜಿತವಾಗಿ ಬರುವಂತಹ ಆಸ್ತಿಯನ್ನು ತಾನೊಬ್ಬಳೇ ಅನುಭವಿಸುವ ಉದ್ದೇಶದಿಂದ ಚಿಕಪ್ಪ ನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪೂರ್ತಿ ಅಸ್ತಿ ಯನ್ನ ತನ್ನ ಹೆಸರಿಗೆ ಮಾಡಿಕೊಂಡು ಅಸ್ತಿ ಕಬಳಿಸಲು ಹೊರಟ ಮಹಿಳೆಯ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನಸೂಯಾ ವಿಜಯ್ ಕುಮಾರ್ ನಾಯ್ಕ್ ಮೆಣಸಿ ಹಾಲಿ ಬೆಂಗಳೂರು ವಾಸಿ ಮತ್ತು ಗೋವಿಂದ ನಾಗಾ ನಾಯ್ಕ ಚಂದ್ರ ಘಟಕಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗೋವಿಂದ ನಾಗಾ ನಾಯ್ಕ ಮೆಣಸಿ ನಿವೃತ್ತ ಕೆ ಇ ಬಿ ನೌಕರ ಹಾಲಿವಾಸ ಹರಿಗೆ ವಿದ್ಯಾನಗರ ಶಿವಮೊಗ್ಗ ಇವರು
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ
ಪ್ರಕರಣವನ್ನು ದಾಖಲಿಸಿದ್ದಾರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ವಿವರ- ಸಿದ್ಧಾಪುರ ತಾಲೂಕಿನ ಮೆಣಸಿಯ ಮೂವರು ಅಣ್ಣತಮ್ಮಂದಿರಲ್ಲಿ ಹಾಲಾ ನಾಯ್ಕ ಮತ್ತು ಚೌಡಾ ನಾಯ್ಕ ನಿಧನರಾಗಿದ್ದಾರೆ. ಬದುಕಿರುವಗೋವಿಂದ ನಾಗಾ ನಾಯ್ಕ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ.ಈ ಮೂವರು ಸಹೋದರರಲ್ಲಿ ಮೃತ ಚೌಡಾ ನಾಯ್ಕರಿಗೆ ಇಬ್ಬರು ಪುತ್ರಿಯರು. ಈ ಕುಟುಂಬದ ಸಾಮೂಹಿಕ ಆಸ್ತಿಯಲ್ಲಿ ಮೂರು ಕುಟುಂಬಗಳಿಗೆ ಪಿತ್ರಾರ್ಜಿತ ಆಸ್ತಿ ಸಲ್ಲಬೇಕು. ಆದರೆ ದಿ. ಚೌಡಾ ನಾಯ್ಕರ ಮಗಳುಅನುಸೂಯಾ ತಮ್ಮ ಬದುಕಿರುವ ಚಿಕ್ಕಪ್ಪ ಗೋವಿಂದ ನಾಗಾ ನಾಯ್ಕ ಬದಲು ಚಂದ್ರಘಟಕಿಯ ಇದೇ ಹೆಸರಿನ ಇನ್ನೊಬ್ಬರಿಂದ ಸಹಿ ಹಾಕಿಸಿ ಒಂದೂಕಾಲು ಎಕರೆ ಭತ್ತದ ಗದ್ದೆ ಪರಬಾರೆ ಮಾಡಲು ಈ ಸರ್ಕಸ್ ಮಾಡಲಾಗಿದೆ. ಆರೋಪಿ ಅನುಸೂಯಾ ಮೇಲೆ ಅವರ ಚಿಕ್ಕಪ್ಪ ಗೋವಿಂದ ನಾಯ್ಕ ಈಗ ಪೊಲೀಸ್ ದೂರು ದಾಖಲಿಸಿದ್ದಾರೆ.
ಮೆಣಸಿಯ ಗೋವಿಂದ ನಾಯ್ಕರ ಪರವಾಗಿ ಸಹಿಮಾಡಿ ಪೋರ್ಜರಿಗೆ ಸಹಕರಿಸಿದ ಚಂದ್ರಘಟಕಿ ಗೋವಿಂದ ನಾಗು ನಾಯ್ಕ ಈ ಬಗ್ಗೆ ತಿಳುವಳಿಕೆ, ಮಾಹಿತಿ ಇಲ್ಲದೆ ತಾನು ಪ್ರಮಾದವಶಾತ್ ಲಾಭಕೋರರ ಸಂಚಿಗೆ ಬಲಿಯಾಗಿರುವುದಾಗಿ ತಿಳಿಸಿದ್ದರೆ, ಪ್ರಮುಖ ಆರೋಪಿ ಅನುಸೂಯಾ ತಮ್ಮ ಕುಟುಂಬದ ಚಿಕ್ಕಪ್ಪ ದೊಡ್ಡಪ್ಪಂದಿರ ವಾರಸುದಾರರು ತಮ್ಮ ಆಸ್ತಿ ವಾರಸಾಕ್ಕೆ ಸಹಕರಿಸದಿರುವುದರಿಂದ ಈ ತಂತ್ರ ಹೂಡಿರುವುದಾಗಿ ಸಮರ್ಥಿಸಿಕೊಂಡಿರುವ ಬಗ್ಗೆ samajamukhi.net ಗೆ ಮಾಹಿತಿ ದೊರೆತಿದೆ.
ದೊಡ್ಡ ನಗರಗಳಲ್ಲಿ ನಡೆಯುವ ಪೋರ್ಜರಿ ಪ್ರಕರಣಗಳು ಈಗ ಸುಶಿಕ್ಷಿತರ ಉತ್ತರ ಕನ್ನಡ ಜಿಲ್ಲೆಯಲ್ಲೂ ವ್ಯಾಪಕವಾಗಿ ನಡೆಯುತಿದ್ದು ಇದಕ್ಕೆ ಅಧಿಕಾರಿಗಳು, ರಾಜಕೀಯ ಪ್ರಭಾವಿಗಳ ಸಹಕಾರವೂ ದೊರೆಯುತ್ತಿದೆ. ಆದರೆ ಪ್ರಭಾವಿಗಳು,ಅಧಿಕಾರಿ ವರ್ಗ ಉಪಾಯದಿಂದ ಪಾರಾಗುವ ತಂತ್ರ ಅನುಸರಿಸುವುದರಿಂದ ಇಂಥ ಪ್ರಕರಣಗಳು ಬಹಿರಂಗವಾಗದಿದ್ದರೆ ವಾರಸುದಾರರಿಗೆ ಲಾಭ ಬಹಿರಂಗವಾದರೆ ವಾರಸುದಾರರೇ ಹೊಣೆ ಹಾಗಾಗಿ ಪೋರ್ಜರಿ ಪ್ರಕರಣದಲ್ಲಿ ವಾರಸುದಾರರಿಗೇ ತೊಂದರೆ ಕಟ್ಟಿಟ್ಟ ಬುತ್ತಿ


ರಾಜ್ಯದಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಜಾರಿ, ಕೃಷಿ ಪಂಪ್ ಸೆಟ್ ಗೆ ವಿನಾಯಿತಿ
ಮೂರು ಹಂತದಲ್ಲಿ ಸ್ಮಾರ್ಟ್ ಹಾಗೂ ಪ್ರೀಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೀಟರ್ ದರವನ್ನು ಗ್ರಾಹಕರ ಬದಲು ಎಸ್ಕಾಂಗಳೇ ಭರಿಸಲಿವೆಯಾದರೂ ಕೃಷಿ ಪಂಪ್ ಸೆಟ್ ಗಳಿಗೆ ಇವುಗಳ…

ಬೆಂಗಳೂರು: ಮೂರು ಹಂತದಲ್ಲಿ ಸ್ಮಾರ್ಟ್ ಹಾಗೂ ಪ್ರೀಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೀಟರ್ ದರವನ್ನು ಗ್ರಾಹಕರ ಬದಲು ಎಸ್ಕಾಂಗಳೇ ಭರಿಸಲಿವೆಯಾದರೂ ಕೃಷಿ ಪಂಪ್ ಸೆಟ್ ಗಳಿಗೆ ಇವುಗಳ ಅಳವಡಿಕೆ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಇಂದು ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂರು ಹಂತದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ, ಮೊದಲು ಸರ್ಕಾರಿ ಕಚೇರಿಗಳಲ್ಲಿ ಅಳವಡಿಕೆ ಮಾಡುತ್ತೇವೆ. ಈಗಾಗಲೇ 5792 ಕೋಟಿ ವಿದ್ಯುತ್ ಬಿಲ್ ಸರ್ಕಾರಿ ಕಚೇರಿಗಳಿಂದ ಬಾಕಿ ಬರಬೇಕಿದೆ. ಹಾಗಾಗಿ ಅಲ್ಲಿ ಮೊದಲು ಅಳವಡಿಕೆ ಮಾಡಲಾಗುತ್ತದೆ ಎಂದರು.
ಎರಡನೇ ಹಂತದಲ್ಲಿ ಹೊಸ ಕಟ್ಟಡ ನಿರ್ಮಾಣ ವೇಳೆ ಪಡೆಯುವ ತಾತ್ಕಾಲಿಕ ಸಂರ್ಪಕಕ್ಕೆ ಸ್ಮಾರ್ಟ್ ಮೀಟರ್(ಪ್ರೀಪೇಡ್) ಅಳವಡಿಸಲಾಗುತ್ತದೆ. ಮೂರನೆಯದಾಗಿ 27 ಅಮೃತ ಸಿಟುಗಳಿಗೆ ಅಳವಡಿಸಲಾಗುತ್ತದೆ ಎಂದರು.
ಶೇ. 15 ಕ್ಕೂ ಹೆಚ್ಚು ವಿದ್ಯುತ್ ಬಿಲ್ ನಷ್ಟವಾಗುತ್ತಿರುವ ಕಡೆ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರ ಸರ್ಕಾರ ಹೇಳಿದೆ. ಅದರಂತೆ ಅಳವಡಿಕೆ ಮಾಡಲಾಗುತ್ತದೆ. ಮೀಟರ್ ಅಳವಡಿಕೆಗೆ ಗ್ರಾಹಕರ ಮೇಲೆ ಹೊರಹಾಕಲ್ಲ, ಅದನ್ನು ಎಸ್ಕಾಂ ಗಳೇ ಭರಿಸಲಿವೆ. ಆದರೆ ಯಾವುದೇ ಕಾರಣಕ್ಕೂ ಸ್ಮಾರ್ಟ್ ಮೀಟರ್, ಪ್ರೀಪೇಡ್ ಮೀಟರ್ ಗಳನ್ನು ಕೃಷಿ ಪಂಪ್ ಸೆಂಟ್ ಗಳಿಗೆ ಹಾಕಲ್ಲ. ಅಂತಹ ಪ್ರಯೋಗವನ್ನೂ ಮಾಡುವುದಿಲ್ಲ ಎಂದು ಇಂಧನ ಸಚಿವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ಒಂದು ಲಕ್ಷ ಮೀಟರ್ ಅಳವಡಿಸಿದ್ದೇವೆ. ಇದರ ಸಾಧಕ ಬಾಧಕ ನೋಡಿ ಇತರ ಕಡೆ ವಿಸ್ತರಣೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
ರೈತರ ಕೃಷಿ ಪಂಪ್‌ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸ್ ಫಾರ್ಮರ್ ಸುಟ್ಟು ಹೋದ ಪಕ್ಷದಲ್ಲಿ 24 ಗಂಟೆಯಲ್ಲಿ ಬದಲಾಯಿಸಿಕೊಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಸುನೀಲ್ ಕುಮಾರ್ ಭರವಸೆ ನೀಡಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಾನೆ ಶ್ರೀನಿವಾಸ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟ್ರಾನ್ಸ್ ಫಾರ್ಮರ್ ಸುಟ್ಟರೆ ಅವುಗಳನ್ನು ಬದಲಾಯಿಸಲು ರೈತರ ವಾಹನ ಬಳಸಬೇಡಿ, ನಿಮ್ಮ ವಾಹನ ಬಳಸಿ ಎಂದು ಎಸ್ಕಾಂಗಳಿಗೆ ತಿಳಿಸಲಾಗಿದೆ,ಜೊತೆಗೆ ಟ್ರಾನ್ಸ್ ಫಾರ್ಮರ್ ಸುಟ್ಟರೆ 24 ಗಂಟೆಯಲ್ಲಿ ಬದಲಾವಣೆ ಮಾಡಬೇಕು, ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ, ಆದಷ್ಟು ಬೇಗ ಇದನ್ನು ಜಾರಿಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಟ್ರಾನ್ಸ್ ಫಾರ್ಮರ್ ಬದಲಾಯಿಸಲು ರೈತರಿಂದ ಹಣ ಪಡೆಯುವಂತಿಲ್ಲ ಯಾರಾದರೂ ಹಣ ಪಡೆದಿದ್ದರೆ ಆ ಬಗ್ಗೆ ಮಾಹಿತಿ ತಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
