ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು ಈಗ ಚಿಕ್ಕಮಂಗಳೂರು ಎನ್.ಆರ್.ಪುರದಲ್ಲಿ ತಹಸಿಲ್ದಾರ್ ಆಗಿರುವ ಗೀತಾ ಸಿ.ಜಿ. ವಿವಾಹಿತ ಗ್ರಾಮ ಲೆಕ್ಕಾಧಿಕಾರಿಯನ್ನು ಮದುವೆ ಆಗಿರುವ ಬಗ್ಗೆ ಪಸರಿಸಿರುವ ಸುದ್ದಿಯೊಂದು ವೈರಲ್ ಆಗಿದೆ.
ಗೀತಾ ಸಿ.ಜಿ. ಗ್ರಾಮಲೆಕ್ಕಾಧಿಕಾರಿ ಶ್ರೀನಿಧಿಯನ್ನು ಮದುವೆ ಆಗಿರುವ ಬಗ್ಗೆ ಉಪನೋಂದಣಾಧಿಕಾರಿ ಕಛೇರಿಯಲ್ಲಿ ಮಾಹಿತಿ ದೊರೆತಿದೆ. ವಿವಾಹಿತೆಯಾಗಿರುವ ಗೀತಾ ಉನೋ ಕಛೇರಿಯ ದಾಖಲೆಯಲ್ಲಿ ಅವಿವಾಹಿತೆ ಎಂದು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ನ್ಯಾಯ ಒದಗಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವ ಶ್ರೀನಿಧಿ ಪತ್ನಿ. ಶ್ರೀನಿಧಿ ತಮಗೆ ಕಿರುಕುಳ ಕೊಡುತಿದ್ದು ತಮ್ಮ ವಿಚ್ಛೇದನದ ಅರ್ಜಿ ನ್ಯಾಯಾಲಯದಲ್ಲಿರುವಾಗಲೇ ವಿವಾಹಿತೆಯೊಂದಿಗೆ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಶೋಕಾಸ್ ನೋಟೀಸ್ ನೀಡಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ಉಮೇಶ್ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಅವಿವಾಹಿತೆ ಎಂದು ಮಾಹಿತಿ ಒದಗಿಸಿರುವುದು ಮತ್ತು ವಿವಾಹಿತ ಗ್ರಾಮಲೆಕ್ಕಾಧಿಕಾರಿಯನ್ನು ಮದುವೆಯಾಗಿರುವ ಬಗ್ಗೆ ಸ್ಷಷ್ಟನೆ ನೀಡಲು ತಹಸಿಲ್ಧಾರ್ ಗೀತಾ ಸಿ.ಜಿ.ಗೆ ಆದೇಶ ಮಾಡಿದ್ದಾರೆ.
2006 ರಲ್ಲಿ ಶ್ರೀನಿಧಿ ತಮ್ಮನ್ನು ಮದುವೆಯಾದ ಬಗ್ಗೆ ದಾವಣಗೆರೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಾಖಲೆ ಇದೆ. ತಮಗೆ ಇಬ್ಬರು ಮಕ್ಕಳಿದ್ದು ವಿಚ್ಛೇದನ ಪ್ರಕ್ರೀಯೆ ಮುಗಿದಿಲ್ಲ ಎಂದು ಶ್ರೀನಿಧಿಯ ಮಾಜಿ ಪತ್ನಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಜಿಲ್ಲಾಧಿಕಾರಿಗಳು ಕಾರಣ ಕೇಳಿದ ನೋಟೀಸ್ ತಲುಪಿದ ಮೇಲೆ ಉತ್ತರ ನೀಡುತ್ತೇನೆ ಎಂದು ಗೀತಾ ಸಿ.ಜಿ. ತಿಳಿಸಿದ್ದಾರೆ.