ಬಿಜೆಪಿ to ರೈತ ಸಂಘ -ರೈತಸಂಘದ ನಗರ ಘಟಕದ ಅಧ್ಯಕ್ಷರಾಗಿ ಜಿ.ಕೆ.ಕೊಪ್ಪ ಆಯ್ಕೆ

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಮತ್ತು ಕೃಷಿ ಕಾಯಿದೆ ಗಳ ವಿರುದ್ಧದ ಸೆ.27 ರ ಭಾರತ್ ಬಂದ್ ಗೆ ಸಹಕರಿಸಲು ರಾಜ್ಯ ರೈತ ಸಂಘ ಕೋರಿದೆ. ಇಂದು ನಗರದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಸಿದ್ಧಾಪುರ ತಾಲೂಕಾ ಅಧ್ಯಕ್ಷ ವೀರಭದ್ರ ನಾಯ್ಕ ಮಳಲವಳ್ಳಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಯಿಂದ ರೈತ ಸಂಘಕ್ಕೆ ಸೇರ್ಪಡೆಯಾದ ಪ್ರಮುಖ ಮುಖಂಡರನ್ನು ಸ್ವಾಗತಿಸಿ ಸೆ.27 ರ ಬಂದ್ ಗೆ ಬೆಂಬಲ ಕೋರಿದರು.

ಸೆ.27 ರಂದು ಎಲ್ಲರೂ ಸ್ವಯಂ ಪ್ರೇರಿತರಾಗಿ ಬಂದ್ ಗೆ ಸಹಕರಿಸಬೇಕು. ಕಾಂಗ್ರೆಸ್,ಬಿ.ಜೆ.ಪಿ.ಗಳಿಂದ ರೈತ ಸಂಘಕ್ಕೆ ಸೇರ್ಪಡೆಯಾಗುವವರ ಪಟ್ಟಿ ದೊಡ್ಡದಿದೆ. ರೈತರ ಪರವಾಗಿ ಕೆಲಸಮಾಡುತ್ತಾ ರೈತರ ಹಿತಾಸಕ್ತಿಗೆ ದುಡಿಯುವವರಿಗೆ ಯಾವಾಗಲೂ ಸ್ವಾಗತ ಎಂದರು.

ರೈತರ ಪರವಾಗಿ ಕೆಲಸ ಮಾಡದ ಮೋದಿ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಬಿಟ್ಟುಹೊಡೆದು ರೈತಸಂಘ ಬಲಪಡಿಸುವುದಾಗಿ ಇಂದು ರೈತಸಂಘ ಸೇರಿದ ಪ್ರಮುಖರು ತಿಳಿಸಿದರು.

ರೈತ ಸಂಘದ ನಗರ ಘಟಕದ ಅಧ್ಯಕ್ಷರಾಗಿ ಜಿ.ಕೆ.ನಾಯ್ಕ ಕೊಪ್ಪ- ಕಳೆದ ಹಲವು ವರ್ಷಗಳಿಂದ ಬಿ.ಜೆ.ಪಿ. ಯಲ್ಲಿದ್ದು ವಿವಿಧ ಹಂತದ ಪದಾಧಿಕಾರಿಯಾಗಿದ್ದ ಜಿ.ಕೆ.ನಾಯ್ಕ ಕೊಪ್ಪ ಇಂದು ಅಧೀಕೃತವಾಗಿ ರಾಜ್ಯ ರೈತ ಸಂಘ ಸೇರಿದರು. ಬಿ.ಜೆ.ಪಿ. ತೊರೆದು ರೈತಸಂಘ ಸೇರು ತಿದ್ದಂತೆ ರೈತ ಸಂಘ ಅವರನ್ನು ಸಂಘದ ನಗರ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಈ ಸಂಘರ್ಭದಲ್ಲಿ ಮಾತನಾಡಿದ ಜಿ.ಕೆ.ನಾಯ್ಕ ಬಹಳ ವರ್ಷಗಳಿಂದ ನಾನು ಬಿ.ಜೆ.ಪಿ.ಯಲ್ಲಿದ್ದರೂ ಬಿ.ಜೆ.ಪಿ. ರೈತರ ಪರವಾಗಿ ಕೆಲಸ ಮಾಡದೇ ಇರುವುದರಿಂದ ರೈತರ ಪರವಾಗಿ ಕೆಲಸ ಮಾಡಲು ನಾನು ಬಿ.ಜೆ.ಪಿ. ತೊರೆಯಬೇಕಾಯಿತು. ಅಲ್ಲಿದ್ದಾಗ ಅವರ ಪರವಾಗಿ ಕೆಲಸ ಮಾಡಿದಂತೆ ಈ ಕ್ಷಣದಿಂದ ರೈತರ ಪರ ರೈತಸಂಘದ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ.
ಸಿದ್ದಾಪುರ ನಗರ ಪದಾಧಿಕಾರಿಗಳ ಯಾದಿ
ಪದನಾಮ ಮೊಬೈಲ್ ನಂಬರ

ಅನಂ ಸದಸ್ಯರ ಹೆಸರು ಮತ್ತು ಊರು
1 ಗ್ರಾಸವಾಗಿ, ಚಾಲಕೊಪ್ಪ ಅಧ್ಯಕ್ಷರು 9483717327
7022874498
ಗಣಪತಿ ಅಣ್ಣಪ್ಪ ನಾಯ್ಕ * ಕೆ ..
9731917643
3) ನಿತ್ಯಾನಂದ ನಾಯ್ಕ ಹೊಂಡ್ತಿ
9740045382
ಮಹಾಬಲೇಶ್ವರ ನಾಯ್ಕ ಕೊಂಡ್ಲಿ
5) ಕೃಷ್ಣ ಬಸವಣ್ಣ ನಾಯ್ಕ
6 ಗಣಪತಿ ನಾಯ್ಕ ಕೊಳಗಿ
7) ಕೃಷ್ಣ ದ್ಯಾವ ನಾಯ್ಕ
8) ಆನಂದ ನಾರಾಯಣ ನಾಯ್ಕ ಚಿಕ್ಕಳಸೆ
ಬಸವರಾಜ ಕಾಳ ಕೊಂಡ್ಲಿ 9611631602
10) ಸದಾನಂದ ಬಂಗಾರ್ ಬಾಲಕೊಪ್ಪ
11) ಕೃಷ್ಣಮೂರ್ತಿ ಕೊಂಡ್ಡಿ 9481276781
12) ಮಂಜಪ್ಪ ಹೆಚ್. ನಾಯ್ಕ, ಹೊಸೂರು
13) ಜಗದೀಶ ಎನ್. ನಾಯ್ಕ ಕೊಂಡ್ಲಿ 7259459334
14) ಶ್ರೀಕಾಂತ ದಾಮೋದರ ಭಟ್ಟ, ಸಿದ್ದಾಪುರ 9900340025
15) ಮಾರುತಿ ಈರಾ ನಾಯ್ಕ, ತ್ಯಾ ರಸಿ 9449203459
ಸ್ಥಳ:-ಸಿದ್ದಾಪುರ
ದಿನಾಂಕ: 22-09-2021
ಅಧ್ಯಕ್ಷರು
ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ
ಸಿದ್ದಾಪುರ

ಸಿದ್ದಾಪುರದಲ್ಲಿ ಲಯನ್ಸ್ ವಲಯ ಸಮಾವೇಶ
ಸಿದ್ದಾಪುರ – : ಸಿದ್ದಾಪುರ ಲಯನ್ಸ್ ಆಶ್ರಯದಲ್ಲಿ ಹೊನ್ನಾವರ, ಮುರ್ಡೇಶ್ವರ, ಅಂಕೋಲಾ ಹಾಗೂ ಸಿದ್ದಾಪುರ ಲಯನ್ಸ್ ಕ್ಲಬ್ ಸದಸ್ಯರುಗಳ ವಲಯ ಮಟ್ಟದ ಸಮಾವೇಶ ಸ್ಥಳೀಯ ಬಾಲಭವನದಲ್ಲಿ ನೆರವೇರಿತು.
ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ರಾಜೇಶ ಸಾಲೆಹಿತ್ತಲ ವಹಿಸಿ, ಮಾತನಾಡುತ್ತಾ, ಪರಿಸರ ರಕ್ಷಣೆ ಹಾಗೂ ನಾಯಕತ್ವ ಬೆಳವಣಿಗೆ ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ವಲಯ ಮಟ್ಟದಲ್ಲಿ ಹೆಚ್ಚಿಸಬೇಕು. ಸದಸ್ಯತ್ವ ಹೆಚ್ಚಳದ ಬಗ್ಗೆ ಗಮನ ಅಗತ್ಯ ಎಂದು ಹೇಳಿದರು.
ಅಂಕೋಲಾ ಲಯನ್ಸ್ ಪರವಾಗಿ ಎನ್.ಎಚ್. ನಾಯ್ಕರವರು ಮಾತನಾಡಿ ಕಣ್ಣಿನ ಶಸ್ತçಚಿಕಿತ್ಸೆ ಕುರಿತು ಶಿಬಿರ ನಡೆಸುವುದಾಗಿ ಹೇಳಿದರು. ಮುರ್ಡೇಶ್ವರ ಲಯನ್ಸ್ ಪರವಾಗಿ ನಾಗೇಶ ಜನಪರ ಸೇವಾ ಕಾರ್ಯದ ಕುರಿತು ಮಾತನಾಡಿದರು.
ಹೊನ್ನಾವರ ಲಯನ್ಸ್ ಪರವಾಗಿ ವಿನೋದಾ ನಾಯ್ಕ ಮಾತನಾಡಿ ನಾಯಕತ್ವ ಬೆಳವಣಿಗೆಗೆ ತಮ್ಮ ಕ್ಲಬ್ಬಿನ ಪರವಾಗಿ ಆದ್ಯತೆ ನೀಡುವುದಾಗಿ ಹೇಳಿದರು.
ಉದಯ ನಾಯ್ಕ ಹೊನ್ನಾವರ, ಶಶಿಧರ ಶೇಣ್ವಿ, ಮಾಯಾ ಶೆಟ್ಟಿ, ತೃಪ್ತಿ ಶೇಟ್ ಹೊನ್ನಾವರ, ರಾಘವೇಂದ್ರ ಭಟ್ಟ ಸ್ವಸ್ತಿಕ್ ಮಾತನಾಡಿದರು.
ರಾಷ್ಟçಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಎಸ್.ಜೆ ಕೈರಾನ್ ಹಾಗೂ ಶಾಂತಾ ರಾಮ ನಾಯ್ಕ ಹೊನ್ನಾವರ ಅವರು ವಿಶೇಷ ಉಪನ್ಯಾಸ ನೀಡಿದರು.
ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನ್ಮನೆ ಸ್ವಾಗತಿಸಿದರು. ನಾಗರಾಜ ದೋಶೆಟ್ಟಿ ಧ್ವಜವಂದನೆ ನೆರವೇರಿಸಿದರು. ಸಿಎಸ್. ಗೌಡರ್ ಹೆಗ್ಗೋಡಮನೆ ವಂದಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *