ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ ಹೊರರಾಜ್ಯದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳಿಯರು

ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ವೃದ್ಧನ ಹತ್ಯೆ: ಒಡಿಶಾ ಮೂಲದ ಆರೋಪಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಕ್ಷುಲ್ಲಕ ಕಾರಣಕ್ಕೆ ವೃದ್ಧನೊಂದಿಗೆ ಜಗಳವಾಡಿದ ಒಡಿಶಾ ಮೂಲದ ಕೆಲಸಗಾರ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರವಾರ: ಕ್ಷುಲ್ಲಕ ಕಾರಣಕ್ಕೆ ವೃದ್ಧನೊಂದಿಗೆ ಜಗಳವಾಡಿದ ಒಡಿಶಾ ಮೂಲದ ಕೆಲಸಗಾರ ರಾಡ್​ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಇಂದು ಮುಂಜಾನೆ ಗೋಕರ್ಣದ ತದಡಿಯಲ್ಲಿ ನಡೆದಿದೆ. ತದಡಿಯ ವಿವೇಕಾನಂದ ಶಾನಭಾಗ್(70) ಮೃತ ವ್ಯಕ್ತಿ .

ಕ್ಷುಲ್ಲ ಕ ಕಾರಣಕ್ಕೆ ಜಗಳ ಮಾಡಿ ವೃದ್ಧನ ಹತ್ಯೆ

ಇಂದು ಮನೆಯ ಮೇಲ್ಮಹಡಿಯಲ್ಲಿ ವೃದ್ಧ ಹಾಗೂ ಒಡಿಶಾ ಮೂಲದ ಕೆಲಸಗಾರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಈ ವೇಳೆ ಒಡಿಶಾ ಮೂಲದ ವ್ಯಕ್ತಿ ರಾಡ್​​ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ನಂತರ ಗಂಭೀರ ಗಾಯಗೊಂಡವರನ್ನು ತಕ್ಷಣ 108ರ ಮೂಲಕ ಕುಮಟಾ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲು ಸಾಗಿಸಲಾಗಿತ್ತಾದರೂ ಅಷ್ಟರಲ್ಲಿಯೇ ಮೃತಪಟ್ಟಿದ್ದಾರೆ.

ಆರೋಪಿಯು ಸಮುದ್ರದಲ್ಲಿ ಈಜಾಡಿಕೊಂಡು ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (etbk)

ತ್ರಿದಿನ ಯಕ್ಷೋತ್ಸ ವ-೨೦೨೧

ಯಕ್ಷಗಾನ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇಟಗಿಯ ಕಲಾಭಾಸ್ಕರ ಸಂಸ್ಥೆಯು “ತ್ರಿದಿನ ಯಕ್ಷೋತ್ಸ ವ-೨೦೨೧” ನ್ನು ಹಮ್ಮಿಕೊಂಡಿದೆ. ಇಟಗಿಯ ಶ್ರೀ ರಾಮೇಶ್ವರ ದೇವಾಯಲದ ಪ್ರಾಂಗಣದಲ್ಲಿ ಇರುವ ಸೀತಾರಾಮ ಹೆಗಡೆ ಹರಗಿ ಸಭಾಂಗಣದಲ್ಲಿ ದಿ; ೨೬-೦೯-೨೦೨೧ರ ಭಾನುವಾರದಿಂದ ೨೮-೦೯-೨೦೨೧ರ ಮಂಗಳವಾರದ ವರೆಗೆ ಮೂರುದಿನಗಳಕಾಲ ನಡೆಯುವ ಈ ಯಕ್ಷೋ ತ್ಸವವು ಯಕ್ಷಗಾನ ಕವಿ ಕಲಾವಿದ ವಿದ್ವಾಂಸ ಪ್ರೋ ಎಮ್.ಏ.ಹೆಗಡೆ ದಂಟಕಲ್ ರಿಗೆ ಸಮರ್ಪಣೆ. ಈ ಉತ್ಸವವನ್ನು ಟಿ.ಎಂ.ಎಸ್. ಅಧ್ಯಕ್ಷ ಆರ್. ಎಮ್.ಹೆಗಡೆ ಬಾಳೆಸರ ಉದ್ಘಾಟಿಸಲಿದ್ದಾರೆ.

ರಾಮೇಶ್ವರ ದೇವಾಲಯದ ಆಡಳಿತ ಮೊಕ್ತೆಸರರಾದ ಚಂದ್ರಶೇಖರ ಹೆಗಡೆ ಕೊಡ್ತಗಣಿಯವರು ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಹಿರಿಯ ನ್ಯಾಯವಾದಿಗಳಾದ ಜೆ.ಪಿ.ಎನ್.ಹೆಗಡೆ ಹರಗಿಯವರು, ಕಲಾಪೋಷಕ ಶ್ರೀಕಾಂತ ಪೈ ಇಟಗಿಯವರು ಹಾಗೂ ಇಟಗಿ ಗ್ರಾಮ ಪಂಚಾಯತ ಸದಸ್ಯರಾದ ಮಹೇಶ ನಾಯ್ಕ ಐಗೋಡು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ಇಟಗಿ ಮಹಾಬಲೇಶ್ವರ ವಿರಚಿತ “ಜಯದ್ರಥ ಗರ್ವಭಂಗ” ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಭಾಗವತರಾಗಿ ಶ್ರೀಪಾದ ಹೆಗಡೆ ಬಾಳೆಗದ್ದೆ ಹಾಗೂ ಚಂಡೆ ವಾದಕರಾಗಿ ಸಂಪ ಲಕ್ಷ್ಮೀ ನಾರಾಯಣ ಮದ್ದಳೆವಾದಕರಾಗಿ ಶ್ರೀಪಾದ ಭಟ್ಟ ಮೂಡಗಾರು ಹಿಮ್ಮೇಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿವಿಧ ಪಾತ್ರಗಳನ್ನು ಅಶೋಕ ಭಟ್ಟ ಸಿದ್ಧಾಪುರ, ಇಟಗಿ ಮಹಾಬಲೇಶ್ವರ, ವೆಂಕಟೇಶ್ ಹೆಗಡೆ ಬೊಗರಿಮಕ್ಖಿ, ಮುರೂರು ನಾಗೇಂದ್ರ ಭಟ್ಟ, ಮಧುಸೂಧನ ನಾವಡ ಸೊರಬ, ಹಾರೆಕೊಪ್ಪ ಮಹಾಬಲೇಶ್ವರ ಗೌಡ ಮೊದಲಾದವರು ನಿರ್ವಹಿಸಲಿದ್ದಾರೆ.
ದಿ: ೨೭ರ ಸಂಜೆ ೬-೦೦ ಗಂಟೆಗೆ ಹೊಸತೋಟ ಮಂಜುನಾಥ ಭಾಗವತ ವಿರಚಿತ “ಸತ್ಯವತಿ ಸಂತಾನ” ಎಂಬ ಮಹಾಭಾರತ ಕಥೆಯ ಯಕ್ಷಗಾನ ತಾಳಮದ್ದಳೆಯು ನಡೆಯಲಿದೆ. ಸಾಗರದ ಬಿ.ಟಿ. ಅರುಣ , ಗೊರಮನೆ ಮಂಜುನಾಥ ರಾವ್, ಗುಂಜಗೋಡು ಗಣಪತಿ ಹೆಗಡೆ, ವಿನಾಯ ಹೆಗಡೆ ಕವಲಕೊಪ್ಪ, ಇಟಗಿ ಮಹಾಬಲೇಶ್ವರ ಮುಂತಾದವರು ಅರ್ಥಧಾರಿಗಳಾಗಿ ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್ ಹಾಗೂ ಅನಿರುದ್ದ ಹೆಗಡೆ ವರ್ಗಾಸರ ಕಾಣಿಸಿಕೊಳ್ಳಲಿದ್ದಾರೆ.
ದಿ:೨೮-೦೯-೨೦೨೧ ಮಂಗಳವಾರ ಸಂಜೆ ೬-೦೦ ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಟಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ ಹೆಗಡೆ ಕೊಡ್ತಗಣಿಯವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಟಿ.ಎಸ್.ಎಸ್. ನಿರ್ದೇಶಕ ಆರ್.ಟಿ.ಹೆಗಡೆ ಅಳಗೋಡು, ಇಟಗಿ ರಾ.ವಿ. ಪ್ರೌಢಶಾಲೆಯ ಮುಖ್ಯಾಧ್ಯಾಪಕ ಡಿ.ಜಿ.ಪೂಜಾರ, ಗ್ರಾಮ ಪಂಚಾಯತ ಅಧ್ಯಕ್ಷ ಸುರೇಂದ್ರ ಮಡಿವಾಳ ಹಾಗೂ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣೇಶ ಭಟ್ಟ ಸಿದ್ದಾಪುರ ಭಾಗವಹಿಸಲಿದ್ದಾರೆ.

ನಂತರ ಪ್ರೋ| ಎಮ್.ಎ.ಹೆಗಡೆ ದಂಟಕಲ್ ವಿರಚಿತ “ಸೀತಾ ಪರಿತ್ಯಾಗ” ಎಂಬ ಸುಂದರ ಕಥಾಭಾಗದ ಯಕ್ಷಗಾನ ಪ್ರದರ್ಶನವಿದೆ. ಭಾಗವತರಾಗಿ ದಂತಳಿಗೆ ಅನಂತ ಹೆಗಡೆ ಚಂಡೆ ಮದ್ದಳೆಯಲ್ಲಿ ಕೆ.ಎನ್. ಭಾರ್ಗವ ಹಾಗೂ ನಾಗಭೂಷಣ ರಾವ್ ಹೆಗ್ಗೋಡು ಪಾಲ್ಗೊಳ್ಳಲಿದ್ದಾರೆ. ಪಾತ್ರಧಾರಿಗಳಾಗಿ ಗೋಪಾಲಾಚಾರ್ಯ ತೀರ್ಥಹಳ್ಳಿ, ವಿನಾಯಕ ಹೆಗಡೆ ಕಲ್ಗದ್ದೆ, ಇಟಗಿ ಮಹಾಬಲೇಶ್ವರ ಬಟ್ಟ, ಗಣಪತಿ ಗುಂಜಗೋಡು, ನಾಗಪತಿ ಹೆಗಡೆ ಕೊಪ್ಪ, ನಾಗೇಂದ್ರ ಮುರೂರು ಮುಂತಾದ ಹಿರಿ ಕಿರಿಯ ಕಲಾವಿದರುಗಳು ಭಾಗವಹಿಸಲಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *