

ಬಂ. ಅಭಿಮಾನಿ ತುಕಾರಾಮ ನಾಯ್ಕ- ಹೊನ್ನಾವರ ತಾಲೂಕಿನ ಕರ್ಕಿ ಎಂಬಲ್ಲಿನ ಸಮಾಜ ಸೇವಕ ತುಕರಾಮ್ ನಾಯ್ಕ ಹಾಗೂ ಅವರ ಮಗಳು ಆಸ್ಪತ್ರೆಯ ಬಿಲ್ ಕಟ್ಟಿದ್ದಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮಿ ಕುಟುಂಬವನ್ನು ತಮ್ಮದೇ ಖರ್ಚಿನಲ್ಲಿ ಬೆಂಗಳೂರಿನಿಂದ ಹೊನ್ನಾವರಕ್ಕೆ ಕಾರ್‌ನಲ್ಲಿ ಕರೆತಂದು ಕರ್ಕಿಯಲ್ಲಿ ಮನೆ ನೀಡಿ ಆಶ್ರಯ ಒದಗಿಸಿದ್ದರು. ಇಂಥ ಸಮಾಜಸೇವೆಯ ತುಕಾರಾಮ ನಾಯ್ಕ ಹಿಂದೆ ಬಂಗಾರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದವರು. ಸಾಮಾಜಿಕ, ರಾಜಕೀಯ ಸೇವೆಯ ತುಕಾರಾಮ ನಾಯ್ಕರಿಗೆ ಉಪಕಾರ ಪಡೆದವರು ಅಪಕಾರ ಮಾಡಿರುವುದು ಇದೇ ಮೊದಲೇನಲ್ಲ…..

ಕಾರವಾರ: ಆರ್ಥಿಕ ತೊಂದರೆಯಲ್ಲಿದ್ದ ನಟಿ ವಿಜಯಲಕ್ಷ್ಮಿ ಅವರ ನೋವಿಗೆ ಮರುಕ ವ್ಯಕ್ತಪಡಿಸಿದ ಅಭಿಮಾನಿಯೋರ್ವರು ಆಸ್ಪತ್ರೆಯ ಬಿಲ್ ಕಟ್ಟಿ ಊಳಿದುಕೊಳ್ಳಲು ಮನೆಯನ್ನೂ ಮಾಡಿಕೊಟ್ಟಿದ್ದರಂತೆ. ಆದರೆ ನಟಿ ಮಾತ್ರ ಮೂರೇ ದಿನದಲ್ಲಿ ವಿವಿಧ ನೆಪ ಹೇಳಿ, ಮುನಿಸಿಕೊಂಡು ವಾಪಸ್ ಬೆಂಗಳೂರಿಗೆ ತೆರಳಿದ್ದಾರೆ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಅಭಿಮಾನಿಯ ಆಶ್ರಯ ತೊರೆದ ನಟಿ ವಿಜಯಲಕ್ಷ್ಮಿ
ಇತ್ತೀಚೆಗೆ ವಿಜಯಲಕ್ಷ್ಮಿ ಫೇಸ್ಬುಕ್ ಲೈವ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು, ನಾನು ಮತ್ತು ನಮ್ಮ ಕುಟುಂಬ ಆಸ್ಪತ್ರೆಯಲ್ಲಿದ್ದು, ನಮಗೆ ಉಳಿದುಕೊಳ್ಳಲು ಮನೆ ಇಲ್ಲ, ತುಂಬಾ ತೊಂದರೆಯಲ್ಲಿರುವುದಾಗಿ ಹೇಳಿ ಸಹಾಯ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಹೊನ್ನಾವರ ತಾಲೂಕಿನ ಕರ್ಕಿ ಎಂಬಲ್ಲಿನ ಸಮಾಜ ಸೇವಕ ತುಕರಾಮ್ ನಾಯ್ಕ ಹಾಗೂ ಅವರ ಮಗಳು ಆಸ್ಪತ್ರೆಯ ಬಿಲ್ ಕಟ್ಟಿದ್ದಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮಿ ಕುಟುಂಬವನ್ನು ತಮ್ಮದೇ ಖರ್ಚಿನಲ್ಲಿ ಬೆಂಗಳೂರಿನಿಂದ ಹೊನ್ನಾವರಕ್ಕೆ ಕಾರ್‌ನಲ್ಲಿ ಕರೆತಂದು ಕರ್ಕಿಯಲ್ಲಿ ಮನೆ ನೀಡಿ ಆಶ್ರಯ ಒದಗಿಸಿದ್ದರು.
, ಒಂದು ವರ್ಷದ ಬಾಡಿಗೆಯನ್ನೂ ತಾವೇ ತುಂಬುವುದಾಗಿಯೂ ತಿಳಿಸಿ ಉಳಿಯುವುದಕ್ಕೆ ಬೆಡ್, ಅಡಿಗೆಗೆ ವ್ಯವಸ್ಥೆ ಕಲ್ಪಿಸಿದ್ದರು. ಎರಡು ದಿನ ಅಡುಗೆ ಮಾಡಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ತಾವೇ ಊಟವನ್ನೂ ಪೂರೈಸಿದ್ದರಂತೆ. ಆದರೆ ನಟಿ ಮಾತ್ರ ಎರಡೇ ದಿನದಲ್ಲಿ ಮನೆಯಲ್ಲಿ ಜಿರಲೆ, ಹಲ್ಲಿ ಬರುತ್ತದೆ ಎಂದೆಲ್ಲಾ ನೆಪಗಳನ್ನು ಹೇಳಿ, ಮುನಿಸಿಕೊಂಡು ಇಂದು ಬೆಂಗಳೂರಿಗೆ ತೆರಳಿದ್ದಾರಂತೆ.
ವಿಜಯಲಕ್ಷ್ಮಿ ಅವರ ಊಟ ಸೇರಿದಂತೆ ಇತರೆ ಖರ್ಚುವೆಚ್ಚ ಎಲ್ಲವನ್ನೂ ನೋಡಿಕೊಂಡಿದ್ದ ತುಕರಾಮ್ ಆರು ದಿನಗಳಿಂದ ಅವರನ್ನು ಸಹಿಸಿಕೊಂಡು ಬಂದಿದ್ದಾರೆ. ಆದ್ರೆ ಮಾನವೀಯತೆ ನೆಲೆಯಲ್ಲಿ ಸಹಾಯ ಮಾಡಿದರೂ ಮನೆ ಸರಿ ಇಲ್ಲ ಎಂದು ಆಶ್ರಯ ಕೊಟ್ಟವರ ವಿರುದ್ಧವೇ ಅವರು ಮಾತಾಡುತ್ತಿದ್ದರು. ಇದು ನಮಗೆ ತೀವ್ರ ಬೇಸರ ತರಿಸಿದೆ ಎಂದು ತುಕರಾಮ್ ಹೇಳಿದರು. (etbk)
ತುಕಾರಾಮ ಅವರಿಗೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಹೃದಯ ಖಂಡಿತಾ ಇದೆ. ಅಪಘಾತ ಆದಾಗ ಅಥವಾ ಯಾರಾದರು ಮೃತರಾದಾಗ ಅವರು ಸಹಾಯಕ್ಕೆ ಧಾವಿಸುತ್ತಾರೆ. ಆದರೆ ಕೈಯಿಂದ 30 ಸಾವಿರ ಹಣ ನೀಡಿ ಸಹಾಯಕ್ಕೆ ಬಂದರು, ಅವರು ಸಹಾಯ ದ ಬಗ್ಗೆ ಕೃತಜ್ಞತೆ ಸಲ್ಲಿಸಿದಂತಹ ವ್ಯಕ್ತಿ ಗೆ ಇನ್ನೂ ಮುಂದೆ ಸಹಾಯ ಮಾಡುವಾಗ ತುಕಾರಾಂ ಅವರೂ ನೂರು ಸಲ ವಿಚಾರ ಮಾಡ ಬೇಕು. ಅವರನ್ನು ಕೆಲವು ರಾಜಕಾರಣಿಗಳು ಈಗಾಗಲೇ ಸಾಕಷ್ಟು ಉಪಯೋಗಿಸಿ ಕೊಂಡು ಮೇಲೇರಿ ಇವರನ್ನು ಕಡೆಗಣಿಸಿದ್ದನ್ನು ಸಹ ನಾನು ಹತ್ತಿರದಿಂದ ಬಲ್ಲೆ. -ಡಾ.ಶ್ರೀಧರ ನಾಯ್ಕ ಕೂಜಳ್ಳಿ,ಕುಮಟಾ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
