ಯಾರಿಗುಂಟು ಯಾರಿಗಿಲ್ಲ… ಎರಡೆರಡು ಕ್ಷೇತ್ರಗಳು,ಪಕ್ಷಗಳು ಎರಡ್ಮೂರು ಅವಕಾಶ! ದೇಶಪಾಂಡೆ ನಿವೃತ್ತಿಯ ಸುತ್ತ-ವದಂತಿಗಳ ಹುತ್ತ!

ಇನ್ನೊಂದೇ ವರ್ಷದಲ್ಲಿ ವಿಧಾನಸಭಾ ಚುನಾವಣೆಯ ತಯಾರಿ ನಡೆಯಲಿದೆ. ಎರಡು ವರ್ಷಗಳೊಳಗೆ ಹೊಸ ಶಾಸಕರು ಪ್ರತಿಷ್ಠಾಪನೆಯಾಗಲಿದ್ದಾರೆ. ಈ ಒಂದೆರಡು ವರ್ಷಗಳ ಅವಧಿ ಬಹುಮುಖ್ಯ ಯಾಕೆಂದರೆ… ಇನ್ನೊಂದು ಅವಧಿಯೊಳಗೆ ಉತ್ತರ ಕನ್ನಡ ಸೇರಿದಂತೆ ರಾಜ್ಯ-ದೇಶದ ಹಳೆಮುಖಗಳ ಕಾಂತಿ ಕರಗಿಹೋಗಲಿದೆ.

ಬರಲಿರುವ ರಾಜ್ಯದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳ, ಹಲವು ಕ್ಷೇತ್ರಗಳ ರಾಜಕೀಯ ಸಮೀಕ್ಷೆಯನ್ನು ಓದುಗರಿಗೆ ತಲುಪಿಸುವ ಗುರುತರ ಜವಾಬ್ಧಾರಿಯನ್ನು samajamukhi.net ನಿರ್ವಹಿಸಲಿದೆ. ಇದು ಮೊದಲ ಕಂತು. ನಮ್ಮ 20 ವರ್ಷಗಳ ಪತ್ರಿಕೋದ್ಯೋಗದಲ್ಲಿ ನಾವು ಸಾಮಾಜಿಕ ನ್ಯಾಯ, ಪಾರದರ್ಶಕತೆ, ನಿಷ್ಠೂರತೆ, ಜಾತ್ಯಾತೀತತೆ ಬಿಟ್ಟ ದೃಷ್ಟಾಂತಗಳಿಲ್ಲ. ವಿಶ್ವಾಸಾರ್ಹ ಮಾಹಿತಿ- ರಂಜನೆ ಪಡೆಯುತ್ತಿರುವ ನೀವು ನಮಗೆ ಸಹರಿಸದಿದ್ದರೆ ಹ್ಯಾಗೆ…. ನಿಮಗಾಗೇ ದೇಣಿಗೆ, ಜಾಹೀರಾತು, ನೀಡಿ ಬೆಂಬಲಿಸುವ subscribe ಆಗಿ ಉತ್ತೇಜಿಸುವ ಅವಕಾಶ ಇಟ್ಟಿದ್ದೇವೆ ಸಹಕರಿಸಿ.

ಎರಡೆರಡು ಕ್ಷೇತ್ರಗಳು- ಉತ್ತರ ಕನ್ನಡ ಜಿಲ್ಲೆ ಬಹುವಿಶಾಲ, ಅವಕಾಶ ವಂಚಿತ ಜಿಲ್ಲೆ, ಇಲ್ಲಿರುವ ಹನ್ನೆರಡು ತಾಲೂಕುಗಳು, ಕರಾವಳಿ, ಮಲೆನಾಡು, ಅರೆಬಯಲುಸೀಮೆಯ ವಿಭಿನ್ನ ತೆ ಈ ಜಿಲ್ಲೆಯ ವೈಶಿಷ್ಟ್ಯ, ಸಾಂಸ್ಕೃತಿಕ ವೈವಿಧ್ಯದ ಮೂಲ ಕೂಡಾ. ಹಳಿಯಾಳ ತಾಲೂಕು ಬೆಳಗಾವಿ,ಧಾರವಾಡ ಜಿಲ್ಲೆಗಳಿಗೆ ತಾಕಿಕೊಂಡಿರುವ ತಾಲೂಕು. ಈತಾಲೂಕು ಹಿಂದೆ ಯಲ್ಲಾಪುರ, ಮುಂಡಗೋಡುಗಳನ್ನು ಸೇರಿಸಿಕೊಂಡು ಹಳಿಯಾಳ ಕ್ಷೇತ್ರವಾಗಿತ್ತು. ಈಗ ಇದು ದಾಂಡೇಲಿ, ಜೊಯಡಾ,ಹಳಿಯಾಳಗಳನ್ನು ಒಳಗೊಂಡಿರುವ ಹಳಿಯಾಳ ಕ್ಷೇತ್ರ. ಈ ಕ್ಷೇತ್ರದಲ್ಲಿ ಮರಾಠಿಭಾಷಿಕರು ಬಹುಸಂಖ್ಯಾತರು, ಕನ್ನಡಿಗರ ಸಂಖ್ಯೆ ತುಸು ಕಡಿಮೆ ಆದರೆ ಈ ಕ್ಷೇತ್ರವನ್ನು ಆಳಿದವರುಕೊಂಕಣಿ ಭಾಷಿಕರು!.

ಮಾಜಿಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪ್ರತಿನಿಧಿಸಿದ ಈ ಕ್ಷೇತ್ರ ಅಭಿವೃದ್ಧಿ ದೃಷ್ಟಿಯಿಂದ ಹಿಂದಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಅತಿ ಹೆಚ್ಚು ವರ್ಷ ಪ್ರತಿನಿಧಿಸಿದ ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ನಿರಂತರವಾಗಿ ಆಯ್ಕೆಯಾಗುತ್ತಾ ರಾಜ್ಯದ ಹಿರಿಯ ವಿಧಾನಸಭಾ ಸದಸ್ಯ ಎನ್ನುವ ಹೆಗ್ಗಳಿಕೆ ಅವರಿಗಿದೆಯಾದರೂ ಅವರ ಕ್ಷೇತ್ರದ ಪ್ರಗತಿಯ ವಿಚಾರದಲ್ಲಿ ನಿರೀಕ್ಷೆ ಮುಟ್ಟದ ಕೊರಗು ಶಾಶ್ವತವಾಗುವಂತಿರಲು ಅವರೇ ಹೊಣೆಯಾಗಿರುವುದು ಅರಗಿಸಿಕೊಳ್ಳಲೇಬೇಕಾದ ಸತ್ಯ.

ಇವರೊಂದಿಗೆ ರಾಜಕಾರಣ ಮಾಡಿದ್ದ ವಿ.ಡಿ.ಹೆಗಡೆ ವಿ.ಪ.ಸದಸ್ಯರಾಗಿ ನಂತರ ಬಂಡೆದ್ದು ಅವರ ಮಗ ಸುನಿಲ್ ಹೆಗಡೆಯವರನ್ನು ಒಂದವಧಿ ಶಾಕರನ್ನಾಗಿಸಿದ ವಿ.ಡಿ.ಹೆಗಡೆ ಈಗ ಬಿ.ಜೆ.ಪಿ. ಯಲ್ಲಿದ್ದಾರೆ.ವಿ.ಡಿ. ಹೆಗಡೆ ಒಂದು ಅವಧಿಗೆ ವಿ.ಪ.ಸದಸ್ಯರಾಗಿ, ಅವರ ಮಗ ಒಂದು ಅವಧಿ ಜಾ.ದಳದಿಂದ ಶಾಸಕರಾಗಿ ದೇಶಪಾಂಡೆ ಎನ್ನುವ ದೈತ್ಯ ರಾಜಕಾರಣಿಯನ್ನು ಹಿಮ್ಮೆಟ್ಟಿಸಲಾರದೆ ಕೈ ಚೆಲ್ಲಿದ್ದಾರೆ.

ಈಗ ಸುನಿಲ್ ಹೆಗಡೆ ಹಳಿಯಾಳ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಎನ್ನಲಾಗುತ್ತಿದೆಯಾದರೂ ಕೊನೆ ಅವಧಿಯಲ್ಲಿ ವಿ.ಪ.ಸದಸ್ಯ ಎಸ್.ಎಲ್. ಘೊಟ್ನೇಕರ್ ಬಿ.ಜೆ.ಪಿ. ಅಭ್ಯರ್ಥಿಯಾದರೂ ಆಶ್ಚರ್ಯವಿಲ್ಲ. ಗೋಟ್ನೇಕರ್ ಬಿ.ಜೆ.ಪಿ. ಅಭ್ಯರ್ಥಿಯಾಗಬೇಕಾದರೆ ಸುನಿಲ್ ಹೆಗಡೆ ವಿ.ಪ.ಸದಸ್ಯರಾಗಬೇಕು. ಹಾಗಾಗಿ ಗೋಟ್ನೇಕರ್, ಸುನಿಲ್ ಹೆಗಡೆ ಒಂದಾಗಿ ಒಬ್ಬರು ವಿಧಾನಪರಿಷತ್ ಸದಸ್ಯರು, ಇನ್ನೊಬ್ಬರು ವಿಧಾನಸಭೆ ಸದಸ್ಯರಾಗಿ ಗುರು ದೇಶಪಾಂಡೆಯವರಿಗೆ ತಿರುಮಂತ್ರ ಕೊಡುವ ತಯಾರಿ ತೆರೆಮರೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳನ್ನು ಸ್ಥಿತಪ್ರಜ್ಞತೆಯಿಂದ ಕಾದುನೋಡುತ್ತಿರುವ ಹಳೆ ಹುಲಿ ಆರ್. ವಿ. ದೇಶಪಾಂಡೆ ಕಾಂಗ್ರೆಸ್ ಗೆ ವಿ.ಪ. ವಿ.ಸ.ಗಳಿಗೆ ತಮಗೇ ಪರಿಗಣಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಎರಡು ಬಾರಿ ವಿ.ಪ. ಸದಸ್ಯರಾಗಿ ಈಗ ಕಾಂಗ್ರೆಸ್ ವಿರುದ್ಧ ಬಂಡೇಳುವ ಸೂಚನೆ ನೀಡಿರುವ ಘೊಟ್ನೇಕರ್ ವಿರುದ್ಧ ಒಳಗೊಳಗೆ ಕುದಿಯುತ್ತಿರುವ ದೇಶಪಾಂಡೆ ಘೊಟ್ನೇಕರ್ ರಿಗೆ ಪರ್ಯಾಯವಾಗಿ ಉತ್ತರ ಕನ್ನಡದಿಂದ ಭೀಮಣ್ಣ ನಾಯ್ಕ, ಪ್ರಶಾಂತ್ ದೇಶಪಾಂಡೆ ಅಥವಾ ಜೆ.ಡಿ. ನಾಯ್ಕರಲ್ಲಿ ಯಾರಾದರೊಬ್ಬರು ವಿ.ಪ. ಪ್ರವೇಶಿಸಲು ಕಾಂಗ್ರೆಸ್ ಅವಕಾಶ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರಂತೆ! ಈ ಬೇಡಿಕೆಗೆ ಮನ್ನಣೆ ದೊರೆತರೆ ಭೀಮಣ್ಣ ನಾಯ್ಕ ಅಥವಾ ಪ್ರಶಾಂತ್ ದೇಶಪಾಂಡೆ ಕಾಂಗ್ರೆಸ್ ನ ವಿ.ಪ. ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳತ್ತ ಚಿತ್ತ ಹರಿಸಿರುವ ಮಾರ್ಗರೇಟ್ ಪುತ್ರ ನಿವೇದಿತ್ ಆಳ್ವ ಉತ್ತರ ಕನ್ನಡದಿಂದ ಪ್ರಶಾಂತ್ ದೇಶಪಾಂಡೆ, ಭೀಮಣ್ಣ ನಾಯ್ಕ, ಜೆ.ಡಿ. ನಾಯ್ಕ ವಿ.ಪ. ಅಭ್ಯರ್ಥಿಗಳಾಗುವುದಾದರೆ ಕ್ಷೇತ್ರವಿಲ್ಲದ ನನಗೂ ಉತ್ತರ ಕನ್ನಡ ದಿಂದ ವಿ.ಪ.ಅಭ್ಯರ್ಥಿ ಮಾಡಬಹುದು ಎಂದು ಬೆಂಗಳೂರಿನಲ್ಲಿ ಬಲಪ್ರದರ್ಶನ ನಡೆಸುತಿದ್ದಾರೆ ಎನ್ನಲಾಗುತ್ತಿದೆ.

ದೇಶಪಾಂಡೆ ಕುಟುಂಬದಲ್ಲಿ ಪ್ರಶಾಂತ್ ದೇಶಪಾಂಡೆ ಒಂದು ಬಾರಿ ಉತ್ತರ ಕನ್ನಡ ಸಂಸತ್ ಕ್ಷೇತ್ರದ ಅಭ್ಯರ್ಥಿಯಾಗಿ ಸೋತವರು, ಆರ್.ವಿ.ದೇಶಪಾಂಡೆ ಕೂಡಾ ಕೆನರಾ ಲೋಕಸಭೆ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿ. ಈಗ ದೇಶಪಾಂಡೆಯವರಿಗೆ ತಾವು ಶಾಸಕರು, ಸಚಿವರು ಆಗುವ ದರ್ದಿಗಿಂತ ತಮ್ಮ ಪುತ್ರರಾದ ಪ್ರಶಾಂತ ಮತ್ತು ಪ್ರಸಾದ್ ದೇ ಶಪಾಂಡೆಯವರನ್ನು ಜನಪ್ರತಿನಿಧಿಗಳು,ರಾಜಕಾರಣಿಗಳನ್ನಾಗಿ ಪ್ರತಿಷ್ಠಾಪಿಸುವ ಅನಿವಾರ್ಯತೆ ಇದೆ. ಈ ಉದ್ದೇಶದಿಂದಲೇ ಆರ್.ವಿ. ದೇಶಪಾಂಡೆ ಇರುವ ಮೂರು ಅವಕಾಶಗಳಲ್ಲಿ ವಿ.ಪ.. ವಿ.ಸ. ಅಥವಾ ಲೋಕಸಭೆಗಳಲ್ಲಿ ಎರಡು ಕಡೆ ತಮ್ಮ ಕುಟುಂಬಕ್ಕೆ ಅವಕಾಶ ಕೇಳುತಿದ್ದಾರೆ ಎನ್ನಲಾಗುತ್ತಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ, ವಿಧಾನ ಪರಿಷತ್ ಸದಸ್ಯತ್ವ, ಹಳಿಯಾಳ ಮತ್ತು ಯಲ್ಲಾಪುರ ವಿಧಾನಸಭಾ ಕ್ಷೇತ್ರಗಳು ಸೇರಿದ ಒಟ್ಟೂ ನಾಲ್ಕು ಅವಕಾಶಗಳಲ್ಲಿ ಎರಡು ತಮ್ಮ ಕುಟುಂಬಕ್ಕೆ,ಇನ್ನೆರಡು ತಮ್ಮ ಶಿಷ್ಯಂದಿರಿಗೆ ಎಂದು ದೂರಾಲೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ರಾಜಕೀಯ ನಿರೀಕ್ಷೆ, ಲೆಕ್ಕಾಚಾರಗಳಂತೆ ಯುವ ಉದ್ಯಮಿ, ಸಜ್ಜನ ಪ್ರಶಾಂತ್ ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಓಡಾಡಿ ಪಕ್ಷ ಸಂಘಟಿಸುತಿದ್ದಾರೆ. ಮಕ್ಕಳಾದ ಪ್ರಶಾಂತ್, ಪ್ರಸಾದ್ ತಮ್ಮ ರಾಜಕೀಯ ಉತ್ತರಾಧಿಕಾರಿಗಳಾದರೆ ತಾನು ವಾನಪ್ರಸ್ತದತ್ತ ಎಂದು ಆರ್.ವಿ.ಡಿ. ಮನಸ್ಸು ಮಾಡಿದ್ದಾರಂತೆ!

ಹೀಗೆ ದೇಶಪಾಂಡೆ ರಾಜಕೀಯ ನಿವೃತ್ತಿಗಾಗಿ ಖಾತರರಾಗಿರುವ ಸಮಯದಲ್ಲಿ ಅವರ ಶಿಷ್ಯಂದಿರಾದ ಸುನಿಲ್ ಹೆಗಡೆ ಮತ್ತು ಘೋಟ್ನೇಕರ್ ಅಪ್ಪಮಕ್ಕಳು ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ಪ್ರಾರಂಭಿಸಿದ್ದಾರೆ. ಈ ಹೋರಾಟಕ್ಕಾಗಿ ಸುನಿಲ್ ಹೆಗಡೆ ತಮಗೆ ಒಗ್ಗದ ಹಿಂದುತ್ವ, ರಾಷ್ಟ್ರೀಯತೆ ಪಠಿಸುತಿದ್ದರೆ, ಘೊಟ್ನೇಕರ್ ಕೆ.ಡಿ.ಸಿ.ಸಿ. ಸಂಪರ್ಕ, ವಿಧಾನಪರಿಷತ್ ಹುದ್ದೆಯ ಮೂಲಕ ತಮ್ಮ ಸಮಾಜಕ್ಕೆ ಇನ್ನೂ ಹತ್ತಿರವಾಗುತಿದ್ದಾರೆ. ವಿಧಾನಪರಿಷತ್ ನಲ್ಲಿ ಘೊಟ್ನೇಕರ್ ಮರಾಠ ಮೀಸಲಾತಿ ಪರ ಆರ್ಭಟಿಸುತ್ತಿರುವ ಹಿಂದೆ ಹಳಿಯಾಳದ ಬಹುಸಂಖ್ಯಾತ ಮರಾಠರನ್ನು ಒಂದುಗೂಡಿಸುವ ಸದುದ್ದೇಶವಿರುವುದು ಈ ವಿದ್ಯಮಾನಗಳ ಹಿನ್ನೆಲೆಯಿಂದ ಎನ್ನಲಾಗುತ್ತಿದೆ.

(ಮುಂದುವರಿಯಲಿದೆ………)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *