ಗೋಕರ್ಣದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನ ರಕ್ಷಣೆ
ಕಾರವಾರ : ಸಮುದ್ರದಲ್ಲಿ ಈಜಲು ಹೋಗಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ.ಹುಬ್ಬಳ್ಳಿ ಮೂಲದ ರೋಹಿತ್ ಪಾಟೀಲ್ (21) ರಕ್ಷಣೆಗೊಳಗಾದವರಾಗಿದ್ದಾರೆ.
ಐದು ಜನರು ಹುಬ್ಬಳ್ಳಿಯ ರೇಣುಕಾ ನಗರದಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು.ಈ ವೇಳೆ ಸಮುದ್ರಕ್ಕೆ ಇಳಿದಿದ್ದ ರೋಹಿತ್ ಅಲೆಯ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿದ್ದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಮಂಜುನಾಥ್ ಉಪ್ಪಾರ್,ಪ್ರವಾಸಿ ಮಿತ್ರ ಶೇಖರ್ ಹರಿಕಾಂತ್,ಲೈಫ್ ಗಾರ್ಡ್ ರವಿ ಪೂಜಾರಿ ಅವರು ಸ್ಥಳೀಯರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
ಸಿದ್ಧಾಪುರ ಮಾಯ್ನೇರಮನೆಯಲ್ಲಿ ಗಾಂಜಾ ವಶ, ಆರೋಪಿ ಆರೆಸ್ಟ್-
ಸಿದ್ಧಾಪುರ ಅಳವಳ್ಳಿ ವ್ಯಾಪ್ತಿಯಲ್ಲಿ ಗಾಂಜಾ ಬೆಳೆ-ಮಾರಾಟದ ಪ್ರಕರಣಗಳು ಸುದ್ದಿಯಾಗುತಿದ್ದು ನಿನ್ನೆಯ ಪ್ರಕರಣದ ವಿವರ ಹೀಗಿದೆ.
ದಿನಾಂಕ:೨೭೦೯_ ೨೦೨೧ರಂದು ರಾತ್ರಿ ೯೧೫ ಗಂಟೆಗೆ ಸಿದ್ದಾಪುರ ತಾಲೂಕಿನ ವಾಜಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳವಳ್ಳಿ ಅಂಚೆ, ಕುಡಗುಂದ ಮಾಯ್ನೇರಮನೆ ಗ್ರಾಮದ ನಿವಾಸಿಯಾದ ಚಂದ್ರಶೇಖರ್ ಸುಬ್ರಾಯ ಭಟ್ ಈತನ ಮನೆಯಲ್ಲಿ ದಾಳಿ ನಡೆಸಲಾಗಿ, ಆರೋಪಿಯು ತನ್ನ ಜೇಬಿನಲ್ಲಿ ಹಾಗೂ ಮನೆಯ ಅಡುಗೆ ಕೋಣೆಯ ಕಟ್ಟೆಯ ಕೆಳಗಡೆ ಒಟ್ಟು ೧೬ ಪ್ಯಾಕೆಟ್ ಗಳಲ್ಲಿ ಬೀಜ ಮತ್ತು ಹೂವುಗಳನ್ನು ಒಳಗೊಂಡ ೧೩೦ ಗ್ರಾಮ್ ಒಣ ಗಾಂಜಾವನ್ನು ಮಾರಾಟಕ್ಕಾಗಿ ಹೊಂದಿರುವುದನ್ನು ಪತ್ತೆಹಚ್ಚಿ ಅವುಗಳನ್ನು ಜಪ್ತುಪಡಿಸಿ, ಆರೋಪಿಯನ್ನು ದಸ್ತಗೀರ್ ಮಾಡಿ, ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ.. ಶೈಲಜಾ ಕೋಟೆ, ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗದ ನಿರ್ದೇಶನದಂತೆ, ವನಜಾಕ್ಷಿ ಎಮ್. ಅಬಕಾರಿ ಉಪ ಆಯುಕ್ತರು ಉ.ಕ. ಜಿಲ್ಲೆ ಕಾರವಾರ ರವರ ಮಾರ್ಗದರ್ಶನದಲ್ಲಿ, ಆರ್.ವಿ.ತಳೇಕರ್ ಅಬಕಾರಿ ಉಪ_ ಅಧೀಕ್ಷಕರು, ಉಪ ವಿಭಾಗ ಯಲ್ಲಾಪುರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಮಹೇಂದ್ರ ಎಸ್. ನಾಯ್ಕ ಅಬಕಾರಿ ನಿರೀಕ್ಷಕರು ಉಪ ವಿಭಾಗ ಶಿರಸಿ ಇವರು ಮೊಕದ್ದಮೆ ದಾಖಲಿಸಿಕೊಂಡಿದ್ದು, ದಾಳಿಯಲ್ಲಿ ಸಿಬ್ಬಂದಿಗಳಾದ ಎನ್.ಕೆ.ವೈದ್ಯ,ಲೋಕೇಶ್ವರ ಬೋರ್ಕರ್, ಗಜಾನನ ನಾಯ್ಕ, ಅಬ್ದುಲ್ ಮಕಾನದಾರ ಈರಣ್ಣ ಗಾಳಿ ಮತ್ತು ಧ್ರುವ ಪಾಲ್ಗೊಂಡಿದ್ದರು…