

ಸಿದ್ದಾಪುರ:ತಾಲೂಕು ಗ್ರಾಮ ಒಕ್ಕಲಿಗರ ಯುವ ಬಳಗ ಆನ್ ಲೈನ್ ಮೂಲಕ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ಭಾವಚಿತ್ರ ಸ್ಪರ್ಧೆಯಲ್ಲಿ ಸಿದ್ದಾಪುರ ಬೆನ್ನಳ್ಳಿಯ ಸಾನ್ವಿ ನವೀನ್ ಗೌಡ ಪ್ರಥಮ, ಸಿದ್ದಾಪುರ ಕಾನಗದ್ದೆಯ ಗ್ರೀಷ್ಮಾ ಜಗನ್ನಾಥ ಗೌಡ ದ್ವಿತೀಯ ಹಾಗೂ ಹೊನ್ನಾವರ ತಾಲೂಕಿನ ಹೃದ್ವನ್ ಎಂ.ಕಡತೋಕ ಮತ್ತು ಸಿದ್ದಾಪುರ ಕುಂಬಾರಕುಳಿಯ ರುತ್ವಿಕ್ ವಿ.ಗೌಡ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಮಾಧಾನಕರ ಬಹುಮಾನ: ಹೊನ್ನಾವರ ತಾಲೂಕಿನ ಮನ್ವಿತ್ ಆರ್.ಗೌಡ ರಾಮತೀರ್ಥ, ಕುಮಟಾ ತಾಲೂಕಿನ ಸಾನ್ವಿ ಎಚ್.ಪಟಗಾರ ಹೆಗಡೆ ಹಾಗೂ ಪ್ರಥ್ವಿ ಜಿ.ಪಟಗಾರ ಹಳಕಾರ ಇವರು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ಕುಮಟಾ ತಾಲೂಕಿನ ಮಿರ್ಜಾನಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿಯವರ ಮೂಲಕ ವಿಜೇತರ ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.




ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ಟಿ.ಎಂ.ಎಸ್. ಸಿದ್ದಾಪುರ ಇದರ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅವರ ನಿವಾಸಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಟಿ.ಎಂ.ಎಸ್.ದ ಅಮೃತಮಹೋತ್ಸವ ಸಂಚಿಕೆಯನ್ನು ನೀಡಿ ಗೌರವಿಸುತ್ತಿರುವ ಸಂದರ್ಭ. ಅವರೊಂದಿಗೆ ಮುರಳಿಧರ ಪ್ರಭು, ಹೊಸಾಡು ಗೋ ಟ್ರಸ್ಟಿನ ಅಧ್ಯಕ್ಷರು ಹಾಗೂ ಬಾಲಸುಬ್ರಹ್ಮಣ್ಯ ಗೋಫಲ ಟ್ರಸ್ಟ್ ರಾಮಚಂದ್ರಾಪುರ ಮಠ ಇದರ ನಿರ್ದೇಶಕರು, ಉಷಾ ಭಟ್ ಗೋಫಲ ಟ್ರಸ್ಟ್ ರಾಮಚಂದ್ರಾಪುರ ಮಠ ಇದರ ನಿರ್ದೇಶಕರು, ಸುಶೀಲಾ ಆರ್. ಹೆಗಡೆ ಬಾಳೇಸರ, ರಾಜೀವ ಹೆಗಡೆ ಬಾಳೇಸರ, ಮತ್ತು ಜಿ. ಜಿ. ಹೆಗಡೆ ಬಾಳಗೋಡ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಸರಕಾರಿ ನಿವೃತ್ತಿ ನೌಕರರ ಸಂಘ ಘಟಕ, ಸಿದ್ದಾಪುರ (ಉ.ಕ)
ನಿವೃತ್ತ ನೌಕರ ಬಾಂಧ ವರಲ್ಲಿ ವಿನಂತಿ, ಮಾನ್ಯರೇ ದಿನಾಂಕ ೦೧-೧೦-೨೦೨೧ರಂದು ಶುಕ್ರವಾರ ಬೆಳಿಗ್ಗೆ ೧೦-೩೦ಕ್ಕೆ ಸಿದ್ದಾಪುರದ ಬಾಲಭವನ (ಲಯನ್ಸ್ ಕ್ಲಬ್) ದಲ್ಲಿ “ ಹಿರಿಯ ನಾಗರಿಕರ ದಿನಾಚರಣೆ” ಹಾಗೂ ವಾರ್ಷಿಕ ಸರ್ವಸಾಧಾ ರಣ ಸಭೆಯನ್ನು ಕರೆಯಲಾಗಿದೆ. ಹಿರಿಯ ನಿವೃತ್ತ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರಣ ತಮಗೆಲ್ಲರಿಗೂ ಆದರದ ಸ್ವಾಗತ.
ವಿ.ಎಸ್. ಶೇಟ್ ಸಿ.ಎಸ್.ಗೌಡರ್
ಕಾರ್ಯದರ್ಶಿ ಅಧ್ಯಕ್ಷರು
ಕರ್ನಾಟಕ ರಾಜ್ಯ ಸರಕಾರಿ ನಿವೃತ್ತಿ ನೌಕರ ಸಂಘ ಘಟಕ ಸಿದ್ದಾಪುರ

