

ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಮಾಡಿರುವುದನ್ನು ವಿರೋಧಿಸಿ ಆರಂಭವಾಗಿರುವ ಟ್ವಿಟ್ಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ವಿಶೇಷ ಚೇತನ ವಿದ್ಯಾರ್ಥಿಗಳು ಮುಖ್ಯವಾಹಿನಿಗೆ ಸೇರಬೇಕು – ಉಪನಿರ್ದೆಶಕಿ ಶ್ಯಾಮಲಾ
ಸಿದ್ದಾಪುರ- : ವಿಶೇಷ ಚೇತನ ವಿದ್ಯಾರ್ಥಿಗಳು ಪ್ರತಿಭೆಯನ್ನು ಹೊಂದಿದ್ದು, ಅವರುಗಳಿಗೆ ಸೂಕ್ತ ತರಬೇತಿ ಮಾರ್ಗದರ್ಶನ ಲಭಿಸಿದಾಗ ಅವರ ವಿಶೇಷ ಸಾಧನೆ ಅನಾವರಣಗೊಂಡು ಪ್ರಗತಿಯ ಮುಖ್ಯ ವಾಹಿನಿಗೆ ಸೇರಲು ಸಾಧ್ಯ. ಈ ದಿಸೆಯಲ್ಲಿ ಸಿದ್ದಾಪುರ ಜೆ.ಎಂ.ಆರ್. ಅಂಧ ಮಕ್ಕಳ ವಸತಿ ಶಾಲೆಯ ಆಶಾಕಿರಣ ಸಂಸ್ಥೆ ಪ್ರಯತ್ನಿಸುತ್ತಿದ್ದು, ಅದಕ್ಕೆ ತಮ್ಮ ಇಲಾಖೆಯ ಸಂಪೂರ್ಣ ಸಹಕಾರ ಇದೆ ಎಂದು ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ರವರು ಹೇಳಿದರು.
ಅವರು ಜೆ.ಎಂ.ಆರ್. ಅಂಧಮಕ್ಕಳ ಶಾಲೆ ಹಾಳದಕಟ್ಟಾದಲ್ಲಿ ಏರ್ಪಡಿಸಲಾಗಿದ್ದ ಮಹಾತ್ಮಾಗಾಂಧಿ ಜಯಂತಿ ಲಾಲಬಹಾದ್ದೂರ ಶಾಸ್ತಿç ಜಯಂತಿ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು: ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಮಾಡಿರುವುದನ್ನು ವಿರೋಧಿಸಿ ಆರಂಭವಾಗಿರುವ ಟ್ವಿಟ್ಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಕನ್ನಡ ನಾಡು, ನುಡಿಯ ಬಗ್ಗೆ ಸದಾ ವಿಕೃತ ಅವಹೇಳನ ಮಾಡುತ್ತಿದ್ದ ಹಾಗೂ ನಾಡಗೀತೆಯನ್ನು ವಿಲಕ್ಷಣವಾಗಿ ತಿರುಚಿ ಅವಮಾನಿಸಿದ್ದ ವ್ಯಕ್ತಿಯನ್ನು ಸರ್ಕಾರ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದು ಖಂಡನೀಯ ಎಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೂಡಲೇ ಆ ವಿಕೃತ ವ್ಯಕ್ತಿಯನ್ನು ಓಡಿಸಿ, ಅರ್ಹರನ್ನು ಕೂರಿಸುವಂತೆ ಒತ್ತಾಯಿಸಲಾಗಿದೆ. ಚಕ್ರತೀರ್ಥರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ನಡೆಯುತ್ತಿರುವ ಟ್ವೀಟರ್ ಅಭಿಯಾನಕ್ಕೆ ನನ್ನ ಬೆಂಬಲವಿದೆ ಎಂದು ಕೆಪಿಸಿಸಿ ವಕ್ತಾರೆ ಲಾವಣ್ಯ ಬಳ್ಳಾಲ್ ತಿಳಿಸಿದ್ದಾರೆ. (kpc)
