Tarjaan – ರಿಯಲ್ ಲೈಫ್ ಟಾರ್ಜಾನ್ & ನಕಲಿ ನೋನಿ ಜಾಲ

ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆಯಾಗಿದೆ. ನಗರದ ಮಾರ್ನಮಿ ಬೈಯಲಿನಲ್ಲಿರುವ ಫಾರ್ಮಾ ಸಂಸ್ಥೆ ಮೇಲೆ ದಾಳಿ ನಡೆಸಿದ ಪೊಲೀಸರು 31 ಬಾಕ್ಸ್ ನಕಲಿ ಅಮೃತ್ ನೋನಿಯನ್ನು ವಶಕ್ಕೆ ಪಡೆದಿದ್ದಾರೆ.

Ho van Lang,
“ರಿಯಲ್ ಲೈಫ್ ಟಾರ್ಜಾನ್” ಎಂದು ದಂತಕತೆಯಾಗಿರುವ ಈತನ ಬದುಕು ನಮಗೆ ಕುತೂಹಲಕಾರಿ, ರೋಮಾಂಚಕ ಅನಿಸಿದರೂ ನಿಜಕ್ಕೂ ಅದೊಂದು ಕರುಣಾಜನಕ ಕತೆ.
ವಿಯೆಟ್ನಾಂ‌ನ ಆಂತರಿಕ ಯುದ್ದ(1959–1975)ದ ಸಮಯದಲ್ಲಿ1972 ರಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಈ ಬಾಲಕ ಟಾರ್ಜಾನನು ತಾಯಿ ಮತ್ತು ಇಬ್ಬರು ಸೋದರಿಯರನ್ನು ಕಳೆದುಕೊಂಡು ದಿಗ್ಭ್ರಾಂತನಾಗಿ ಮನುಷ್ಯರೆಂದರೆ ಅನುಮಾನ, ಅಂಜಿಕೆಯ ತೀವ್ರ ಭಯ (Profound phobia)ಕ್ಕೊಳಗಾಗುತ್ತಾನೆ. ಆಗ ತನ್ನ ತಂದೆ ಹೊ ವಾನ್ ತಾಂಗ್ ನೊಟ್ಟಿಗೆ ವಿಯೆಟ್ನಾಂ‌ನ ದಟ್ಟ ಅಡವಿಗೆ ಪಲಾಯನ ಮಾಡುತ್ತಾನೆ;ನಾಗರಿಕ ಜಗತ್ತಿನಿಂದ ಅಕ್ಷರಶಃ ಕಣ್ಮರೆಯಾಗುತ್ತಾನೆ.ಮನುಷ್ಯನ ಸುಳಿವು ಕಂಡರೆ ಹೆದರಿಕೆಯಿಂದ ತಪ್ಪಿಸಿಕೊಳ್ಳತೊಡಗಿ ಶುದ್ಧ “ಕಾಡು ಮನುಷ್ಯ” ನಾಗಿ ಅಲ್ಲಿನ ಪ್ರಕೃತಿ, ಪ್ರಾಣಿ,ಪಕ್ಷಿಗಳೊಂದಿಗಿನ ಬದುಕಿನಲ್ಲಿ ಲೀನವಾಗಿಬಿಡುತ್ತಾನೆ.ನಾಗರಿಕ ಬದುಕಿನಿಂದ, ಸಹಜ ಮನುಷ್ಯ ಭಾವನೆಗಳಿಂದ ಅದೆಷ್ಟು ದೂರವಾಗುತ್ತಾನೆಂದರೆ,ಮನುಷ್ಯರಲ್ಲಿ ಹೆಣ್ಣೆಂಬ ಜಾತಿ ಇದೆ ಗಂಡು ಹೆಣ್ಣಿನ ಗೆಳೆತನ ಸಹಜ,ಅನಿವಾರ್ಯ, ಅಗತ್ಯ ಎಂಬುದು ಕೂಡ ಅವನ ಜೀವಿತದಲ್ಲಿ ಅರಿವಿಗೇ ಬರುವುದಿಲ್ಲ‌.ಹೀಗೆಯೇ ನಾಲ್ಕು ದಶಕಗಳ ಕಾಲ ಅಜ್ಞಾತವಾಗಿಯೇ ಉಳಿದುಹೋಗುತ್ತಾನೆ.ತನ್ನ ಐವತ್ತೆರಡನೇ ವಯಸ್ಸಿನಲ್ಲಿ ಲಿವರ್ ಕ್ಯಾನ್ಸರಿನಿಂದ ತೀರಿಕೊಳ್ಳುತ್ತಾನೆ.
ಯುದ್ಧ ಮಾನ,ಪ್ರಾಣ,ಆರ್ಥಿಕತೆಯ….. ವಿನಾಶಕಾರಿ ಮಾತ್ರವಲ್ಲ;ಮನುಷ್ಯನನ್ನೇ ಪ್ರಾಣಿಯಾಗಿಸಬಲ್ಲ ವಿಕೃತ ಕ್ರೂರಿ. -deepak kalkere

ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆ

ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆಯಾಗಿದೆ. ನಗರದ ಮಾರ್ನಮಿ ಬೈಯಲಿನಲ್ಲಿರುವ ಫಾರ್ಮಾ ಸಂಸ್ಥೆ ಮೇಲೆ ದಾಳಿ ನಡೆಸಿದ ಪೊಲೀಸರು 31 ಬಾಕ್ಸ್ ನಕಲಿ ಅಮೃತ್ ನೋನಿಯನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ: ಅಮೃತ್ ನೋನಿಯನ್ನೇ ಹೋಲುವ ನಕಲಿ ಪ್ಯಾಕಿಂಗ್ ಮಾಡಿ ಜ್ಯೂಸ್ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಇಲ್ಲಿನ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಮೃತ್ ನೋನಿಯನ್ನು ಮಾರಾಟ ಮಾಡುತ್ತಿರುವ ವ್ಯಾಲ್ಯೂ ಪ್ರಾಡೆಕ್ಟ್ ಕಂಪನಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ಮಾರ್ನಮಿ ಬೈಯಲಿನಲ್ಲಿರುವ ಫಾರ್ಮಾ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅಮೃತ್ ನೋನಿಯನ್ನೇ ಹೋಲುವ ನಕಲಿ ಪ್ಯಾಕಿಂಗ್ ಮಾಡಿರುವ 31 ಬಾಕ್ಸ್ ನಕಲಿ ಅಮೃತ್ ನೋನಿಯನ್ನು ವಶಕ್ಕೆ ಪಡೆಯಲಾಗಿದೆ.

ನಾವು ಆಯುಷ್ ಇಲಾಖೆಯಿಂದ ಲೈಸೆನ್ಸ್ ಪಡೆದು ಔಷಧಿ ಎಂದು ಮಾರಾಟ ಮಾಡುತ್ತಿದ್ದೇವೆ. ಆದ್ರೆ ಕೆಲವರು ಇದನ್ನು ನಕಲು ಮಾಡಿ, ಮಾರುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದೇವೆ. ಪೊಲೀಸರು ದಾಳಿ ನಡೆಸಿ ನಕಲಿ ಅಮೃತ್ ನೋನಿ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವ್ಯಾಲ್ಯೂ ಪ್ರಾಡೆಕ್ಟ್ ಸಂಸ್ಥೆಯ ಕಾನೂನು ವಿಭಾಗದ ಶಶಿಕಾಂತ್ ನಾಡಿಗ್ ತಿಳಿಸಿದ್ದಾರೆ. (etbk)

ಜೂಸ್ ಎಂದು ತಿಳಿದು ಅಕಸ್ಮಿಕವಾಗಿ ಆಲ್ಕೊಹಾಲ್ ಸೇವಿಸಿದ 5 ವರ್ಷದ ಬಾಲಕ ದುರ್ಮರಣ

ತಾತ ಚಿನ್ನಸ್ವಾಮಿ (62) ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು. 

ವೆಲ್ಲೂರ್: ಹಣ್ಣಿನ ಜೂಸ್ ಎಂದು ತಪ್ಪಾಗಿ ತಿಳಿದು ಆಲ್ಕೊಹಾಲ್ ಸೇವಿಸಿದ್ದ 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಅಣ್ಣಾನಗರ್ ನಲ್ಲಿ ನಡೆದಿದೆ. 

ರಾಕೇಶ್ ಎನ್ನುವ ಬಾಲಕ ಮೃತಪಟ್ಟ ದುರ್ದೈವಿ. ಆತನ ತಾತ ಚಿನ್ನಸ್ವಾಮಿ (62) ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು. 

ತಾತನ ರೂಮಿನಲ್ಲಿ ಬ್ರಾಂಡಿ ಬಾಟಲಿಯನ್ನು ಜೂಸ್ ಎಂದು ತಪ್ಪು ತಿಳಿದ ರಾಕೇಶ್ ಅದರಲ್ಲಿದ್ದುದನ್ನು ಕುಡಿದಿದ್ದಾನೆ. ಆತ ಕುಡಿದ ಸಂಗತಿ ಯಾರಿಗೂ ತಿಳಿದಿರಲಿಲ್ಲ. ನಂತರ ರಾಕೇಶ್ ಏಕಾಏಕಿ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅದನ್ನು ಕಂಡು ರಾಕೇಶ್ ತಾತ ಚಿನ್ನಸ್ವಾಮಿ ಕೂಡಾ ಅನಾರೋಗ್ಯಕ್ಕೀಡಾದರು. 

ಇಬ್ಬರನ್ನೂ ಮನೆಯವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

viral news of india today…..! ಹುಡುಗರ ನಿದ್ದೆಗೆಡಿಸಿದ ಯುವತಿಯ ”ರೇಟ್ ಕಾರ್ಡ್”!

‘Rented Girlfriend’: ಬಾಡಿಗೆ ”ಗರ್ಲ್ ಫ್ರೆಂಡ್” ಬೇಕಾ?.. ಹುಡುಗರ ನಿದ್ದೆಗೆಡಿಸಿದ ಯುವತಿಯ ”ರೇಟ್ ಕಾರ್ಡ್”! ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ”ಗರ್ಲ್ ಫ್ರೆಂಡ್” ಅಥವಾ ಬಾಡಿಗೆ...

ಅಕ್ರಮ ಮರಳು: ಪೊಲೀಸರಿಗೆ ಕೈ ತುಂಬಾ ಕಾಸು!

ಅಕ್ರಮ ಮರಳು ಸಾಗಾಣಿಕೆಯಿಂದ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಭರ್ಜರಿ ಕಮಾಯಿ ಮಾಡುತಿದ್ದಾರೆ ಎನ್ನುವ ಮಾತು ಚರ್ಚೆಯಲ್ಲಿದೆ. ಗೇರಸೊಪ್ಪಾ ಅಥವಾ ಮಲೆನಾಡು, ಕರಾವಳಿಯ ಮರಳು...

ಕಾಂಗ್ರೆಸ್ ಅಲ್ಪಸಂಖ್ಯಾತರ ‘ಬಹುದೊಡ್ಡ ಶತ್ರು’; 2024ರ ಚುನಾವಣೆಯಲ್ಲಿ ಮೀಸಲಾತಿ ಮುಖ್ಯ ವಿಷಯ: ಪ್ರಧಾನಿ ಮೋದಿ

ಇಂಡಿಯಾ ಒಕ್ಕೂಟವು ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿರೋಧ ಪಕ್ಷಗಳು ಪರಿಶಿಷ್ಟ ಜಾತಿ (SC), ಪರಿಶಿಷ್ಟ...

‘ಕಾಂಗ್ರೆಸ್ ಕುಟುಂಬ’: ಬೂತ್ ಮಟ್ಟದಿಂದ ಪಕ್ಷ ಬಲಪಡಿಸಲು ಕಾರ್ಯಕ್ರಮ

ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ‘ಕಾಂಗ್ರೆಸ್ ಕುಟುಂಬ’ ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸುತ್ತಿದೆ. ಉಪಕ್ರಮದ ಭಾಗವಾಗಿ, ಪ್ರತಿ...

ಕರಾವಳಿಯಲ್ಲಿ ಅಕ್ರಮ ಮರಳು ದಂಧೆ ಹೆಚ್ಚಿಸಲಿದೆಯೆ ಹಸಿರು ಪೀಠದ ಆದೇಶ?

ಕರಾವಳಿಯಲ್ಲಿ ಮರಳು ಮಾರಾಟ, ಸಾಗಾಟಕ್ಕೆ ನಿರ್ಬಂಧ ಹೇರಿ ಆದೇಶ ಮಾಡಿರುವ ಹಸಿರು ಪೀಠದ ಹೊಸ ಆದೇಶ ಅಕ್ರಮ ಮರಳುಗಾರಿಕೆಗೆ ದಾರಿ ಮಾಡಲಿದೆಯೆ? ಎನ್ನುವ ಪ್ರಶ್ನೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *