

ಸಿದ್ದಾಪುರ: ತಾಲೂಕಿನ ಬಿದ್ರಕಾನ ಸೇವಾ ಸಹಕಾರಿ ಸಂಘದ ಲ್ಲಿ ಸ್ಮರಣ ಸಂಚಿಕೆ ಹಾಗೂ ಬೆಳ್ಳಿ ನಾಣ್ಯ ಬಿಡುಗಡೆ ಕಾರ್ಯ ಕ್ರಮ ನಡೆಯಿತು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಟಿ ಎಸ್ ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಸರಕಾರದ ಪಾತ್ರ ಹೆಚ್ಚುತ್ತಿರುವುದು, ವಿಷಾದನೀಯ, ಜನಪ್ರತಿನಿಧಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದರು.
ನಾಣ್ಯ ಬಿಡುಗಡೆಗೊಳಿಸಿದ ಟಿಎಂಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಬಾಳೇ ಸರ ಮಾತನಾಡಿ ಜಿಲ್ಲೆಯಲ್ಲಿ ಆಗಿ ಹೋದ ಸಹಕಾರಿ ಗಳಿಂದ ಅದ್ಭುತ ಕೊಡುಗೆ ನೀಡಿದ್ದಾರೆ, ಸಹಕಾರ ಚಳುವಳಿ ಮುಕ್ತವಾಗಿ ನಡೆಯಬೇಕಾದರೆ ಅಧಿಕಾರ ದಲ್ಲಿರುವ ಪಕ್ಷದವರು ಸ್ವಾ ತಂತ್ರ್ಯ ನೀಡಬೇಕು. ಸಂಘಗಳ ಬೇಕು ಬೇಡಿಕೆಗಳ ಬಗ್ಗೆ ಸ್ಪಂದಿಸಬೇಕು ಎಂದರು.
ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪ. ಹೆಗಡೆ ಕೆಳಗಿನಮನೆ ಅಧ್ಯಕ್ಷ ತೆ ವಹಿಸಿದ್ದರು.
ಸಹಕಾರಿ ಸಂಘದ ಅಧ್ಯಕ್ಷ ಪರಮೇಶ್ವರ ಸು. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಸ್ಥಿತರಿದ್ದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಸುಧೀರ್ ಗೌಡ, ಜಿ. ಜಿ. ಹೆಗಡೆ ಬಾಳಗೋಡ, ತಮ್ಮಣ್ಣ ಬೀಗಾರ,ಗ್ರಾಮ ಪಂಚಾಯತ್ ಸದಸ್ಯ ಎಂ. ಜಿ. ಗೌಡ, ಶ್ರೀ ಪಾದ ವಿ. ಹೆಗಡೆ ಮಘೆಗಾರ,ಮಾತನಾಡಿದರು.
ಪ್ರಕಾಶ ಹೆಗಡೆ, ಪ್ರಸನ್ನ ಎಸ್ ಹೆಗಡೆ ಶೀಬ್ಳಿ ಉಪಸ್ಥಿತರಿದ್ದರು.
ಸುಚೇತನ ಭಟ್ ರನ್ನು ಗೌರವಿಸಲಾಯಿತು.
ಲಕ್ಷ್ಮೀನಾರಾಯಣ ಹೆಗಡೆ ವರದಿ ವಾಚಿಸಿದರು, ಲಕ್ಷ್ಮೀಶ ಹೆಗಡೆ ಸನ್ಮಾನಿತರ ಯಾದಿ ವಾಚಿಸಿದರು.
ಡಿ. ಜಿ ಭಟ್ಟ ಮುತ್ತಿಗೆ ಸ್ವಾಗತಿಸಿದರು. ಎಚ್. ಎಲ್ ವೇಣು ಹಾಗೂ ಸುಬ್ರಹ್ಮಣ್ಯ ಗಣಪತಿ ಭಟ್ಟ ಕಾರ್ಯ ಕ್ರಮ ನಿರ್ವಹಿಸಿದರು. ಪ್ರಕಾಶ ಹೆಗಡೆ ವಂದಿಸಿದರು.


ದೇಶದ ವರ್ತಮಾನದಿಂದಗಾಂಧಿಯಆತ್ಮ ವಿಲವಿಲನೆ ಒದ್ದಾಡುತ್ತಿರಬಹುದು :
ಹಿರಿಯ ಸಾಹಿತಿಕೆ.ಆರ್‌ಉಮಾದೇವಿ ಉರಾಳ ವಿಷಾದ
ಬ್ರಿಟೀಷರನ್ನು ಓಡಿಸಿ ಸ್ವಾತಂತ್ರö್ಯ ಪಡೆಯುವುದೊಂದೇಗಾಂಧಿಯವರ ಹೋರಾಟದಉದ್ದೇಶವಾಗಿರಲಿಲ್ಲ. ದೇಶದ ಪ್ರಗತಿಗೆಅಡ್ಡಿಯಾಗಿರುವಕೋಮುಸಂಘರ್ಷ, ಅಸ್ಪೃಶ್ಯತೆಯಆಚರಣೆ, ಲಿಂಗತಾರತಮ್ಯಗಳನ್ನು ದೇಶದಜನರ ಮನಸ್ಸಿನಿಂದ ಕಿತ್ತೊಗೆಯುವುದುಅವರ ಹೋರಾಟದ ಪ್ರಮುಖಆದ್ಯತೆಯಾಗಿತ್ತು.ಪ್ರಸ್ತುತ ದಿನದಿನಕ್ಕೂ ಭೀಕರರೋಗದಂತೆದೇಶಾದ್ಯಂತ ವ್ಯಾಪಿಸುತ್ತಿರುವ ಮತಾಂಧತೆ, ದಲಿತರ ಮೇಲಿನ ದೌರ್ಜನ್ಯ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಘಟನೆಗಳಿಂದ ಇದೆಲ್ಲದರ ವಿರುದ್ಧಜೀವನಪರ್ಯಂತ ಹೋರಾಡಿದಗಾಂಧಿಯಆತ್ಮ ವಿಲವಿಲನೆ ಒದ್ದಾಡುತ್ತಿರಬಹುದುಎಂದು ಹಿರಿಯ ಸಾಹಿತಿಕೆ.ಆರ್.ಉಮಾದೇವಿ ಉರಾಳ ವಿಷಾದಿಸಿದರು.
ಅವರು ಶಿವಮೊಗ್ಗ ಹರಳಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜಯಂತಿಕಾರ್ಯಕ್ರಮದಲ್ಲಿಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿ ಮಾತನಾಡುತ್ತಿದ್ದರು.
ದಿನನಿತ್ಯಗಾಂಧಿಯ ಭಜನೆ ಮಾಡುವ ಈ ದೇಶದ ಪ್ರಜೆಗಳಾದ ನಾವು ತೋರುಗಾಣಿಕೆಗೆ ಮಾತ್ರ ನಾಗರಿಕರು.ಗಾಂಧಿಯ ತತ್ವಗಳನ್ನು ಭಾಷಣಕ್ಕಷ್ಟೇ ಸೀಮಿತಗೊಳಿಸಿರುವ ನಾವು ಅಂತರಂಗದಲ್ಲಿಅನಾಗರೀಕರಾಗಿದ್ದೇವೆ. ಏಕೆಂದರೆ ಈ ನಾಡಿನಲ್ಲಿ ನಮ್ಮಕಣ್ಮುಂದೆಯೇ ಮತಾಂಧತೆ, ಅಸ್ಪೃಶ್ಯತೆಯಆಚರಣೆ, ಮಹಿಳೆಯರ ಮೇಲೆ, ಪುಟ್ಟ ಮಕ್ಕಳ ಮೇಲೆ ನಿರಂತರಅತ್ಯಾಚಾರ ನಡೆಯುತ್ತಿದ್ದರೂ ನಾವು ಅದನ್ನು ಪ್ರತಿಭಟಿಸದೆ ಮೌನವಾಗಿದ್ದೇವೆಎಂದುಕೆ.ಆರ್‌ಉಮಾದೇವಿ ಅವರುಆಕ್ರೋಶ ವ್ಯಕ್ತಪಡಿಸಿದರು.
ಹಾರೋಗೊಳಿಗೆ ಗ್ರಾಮ ಪಂಚಾಯತಿಅಧ್ಯಕ್ಷರಾದ ಮಂಜುನಾಥ್ ಗಾಂಧಿಯವರು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ವಿವರಿಸಿ ಹರಳಿಮಠ ಶಾಲೆಯಅಭಿವೃದ್ಧಿಗೆ ಪಂಚಾಯತಿಯಿಂದಲಭ್ಯವಿರುವಎಲ್ಲ ಸೌಲಭ್ಯಗಳನ್ನು ತಕ್ಷಣವೇಒದಗಿಸಲುಕ್ರಮ ಕೈಗೊಳ್ಳಲಾಗುವುದು ಎಂದರು.
ಡಾ. ಸರ್ಜಾಶಂಕರ್ ಹರಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾಭಿವೃದ್ಧಿ ಸಮಿತಿಅಧ್ಯಕ್ಷರಾದಜಲೀಲ್‌ಅಧ್ಯಕ್ಷತೆ ವಹಿಸಿದ್ದರು.ಗ್ರಾಮಪಂಚಾಯತಿಉಪಾಧ್ಯಕ್ಷ ಪ್ರಸನ್ನ, ಸದಸ್ಯರಾದಇಂದಿರಮ್ಮ, ದಲಿತ ಸಂಘರ್ಷ ಸಮಿತಿಯ ಮುಖಂಡ ವಿಶ್ವನಾಥ್, ಸಹಕಾರಿಧುರೀಣರತ್ನಾಕರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪ್ರಕಾಶ್, ನಾಗಲಕ್ಷಿö್ಮ, ಪ್ರತಿಮಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಮುಖ್ಯೋಪಾಧ್ಯಾಯರಾದರಮೇಶ್‌ಸ್ವಾಗತಿಸಿದರು.ಶಿಕ್ಷಕರಾದಉಷಾಕುಮಾರಿಅತಿಥಿಗಳ ಪರಿಚಯ ಮಾಡಿಕೊಟ್ಟರು,ಶಿಕ್ಷಕ ಜಯಪ್ಪ ನಿರೂಪಿಸಿ,ವಂದಿಸಿದರು.
೫ನೇ ತರಗತಿಯಲ್ಲಿಅಶ್ವಿತ್ ಕೆ.ವಿ, ನಯಾಜ್ ಕೆ.ಎ, ಧೃತಿಎನ್,ವೈ, ಮಿಥುನ್‌ಎಚ್.ಡಿ,೧೦ನೇ ತರಗತಿಯಲ್ಲಿಶ್ರಾವ್ಯಎಚ್.ಎಸ್, ಪ್ರಜ್ಞಾಕೆ.ಟಿ, ಮತ್ತು ನವೀನ ಎಚ್.ಆರ್೨೮ನೇ ವರ್ಷದ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
