ಇಂದಿನ ಸಮಾಜಮುಖಿ ಸುದ್ದಿಗಳು- ದೇಶಕ್ಕೇ ನಂ.1 ಆದ ಕಾರವಾರದ ಬಾಲಕ & ಆ್ಯಂಬುಲೆನ್ಸ್​ಗಳಲ್ಲಿ ASV ಇಂಜೆಕ್ಷನ್ ಶೇಖರಣೆ

ಆ್ಯಂಬುಲೆನ್ಸ್​ಗಳಲ್ಲಿ ASV ಇಂಜೆಕ್ಷನ್ ಶೇಖರಣೆಗೆ ಶಾಸಕ ಹರತಾಳು ಹಾಲಪ್ಪ ಮನವಿ

Published on: 18 hours ago

ಗ್ರಾಮೀಣ ಪ್ರದೇಶಗಳಲ್ಲಿ ಹಾವು ಕಚ್ಚಿದ ಸಂದರ್ಭದಲ್ಲಿ 108 ಆ್ಯಂಬುಲೆನ್ಸ್​ಗಳ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ಸಾಗಿಸುವಾಗ ಆಗುವ ಅನಾಹುತಗಳನ್ನುತಪ್ಪಿಸಲು ಹಾಗೂ ತುರ್ತು ಚಿಕಿತ್ಸೆ ನೀಡಲು ಅಗತ್ಯವಿರುವ ASV ಇಂಜೆಕ್ಷನ್​ಗಳನ್ನು ಆ್ಯಂಬುಲೆನ್ಸ್​ಗಳಲ್ಲಿ ಶೇಖರಿಸಿಡಲು ಸಾಗರ ಶಾಸಕ ಹರತಾಳು ಹಾಲಪ್ಪ ಮನವಿ ಮಾಡಿದ್ದಾರೆ.

Karwar boy Purassar devanand achievement

ಬುದ್ಧಿಮತ್ತೆ ಪರೀಕ್ಷೆಯಲ್ಲಿ ಬಾಲಕನ ಸಾಧನೆ : ದೇಶಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಪುರಸ್ಕಾರ

ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಪುರಸ್ಸರ್‌ನಿಗೆ ಖ್ಯಾತ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹಿ ಇರುವ ಪಾರಿತೋಷಕ, ಆ್ಯಪಲ್ ಕಂಪನಿ ಮ್ಯಾಕ್​​​ಬುಕ್, ಬ್ಯಾಗ್, ಪೆನ್​​​ಡ್ರೈವ್ ಸೇರಿ ಮಕ್ಕಳ ಅಭ್ಯಾಸಕ್ಕೆ ಅನುಕೂಲವಾಗುವ ವಸ್ತುಗಳನ್ನು ಅಕಾಡೆಮಿ ನೀಡಿದೆ..

ಕಾರವಾರ : ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್​​​ ಗೀಳು ಹೆಚ್ಚಾಗಿದೆ. ಆನ್‌ಲೈನ್ ಕ್ಲಾಸ್ ಹೆಸರಲ್ಲಿ ಮೊಬೈಲ್​ ಅನ್ನು ಕಾಲಹರಣ ಮಾಡೋದಕ್ಕೆ ಬಳಕೆ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಬಾಲಕ ಲಾಕ್‌ಡೌನ್ ಅವಧಿಯಲ್ಲಿ ಬೇಸರ ಕಳೆಯಲು ಮೊಬೈಲ್ ತೆಗೆದುಕೊಂಡಿದ್ದು ಇದೀಗ ಆತನ ಸಾಧನೆಗೆ ಮೆಟ್ಟಿಲಾಗಿ ನಿಂತಿದೆ.

ಬಾಲಕ ಪುರಸ್ಸರ್ ದೇವಾನಂದ ಗಾಂವ್ಕರ ಸಾಧನೆ..

ಉತ್ತರಕನ್ನಡ ಜಿಲ್ಲೆಯ ಕಾರವಾರ ಮೂಲದ ಪುರಸ್ಸರ್ ದೇವಾನಂದ ಗಾಂವ್ಕರ್ ಎಂಬ ಬಾಲಕ ದೇಶದ ಪ್ರತಿಷ್ಠಿತ ಅನ್ ಅಕಾಡೆಮಿ ಎಮರ್ಜ್ ಟೀಚಿಂಗ್ ಸಂಸ್ಥೆ ಬುದ್ಧಿಮತ್ತೆ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾನೆ. ಇದನ್ನು ಮೆಚ್ಚಿ ಸಂಸ್ಥೆ ಈತನ ಸಾಧನೆಯನ್ನು ಗುರುತಿಸಿ ದೇಶದಲ್ಲಿಯೇ ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಿ ಪುರಸ್ಕರಿಸಿದೆ.

9ನೇ ತರಗತಿ ವಿದ್ಯಾರ್ಥಿಯಾಗಿರುವ ಪುರಸ್ಸರ್, ಲಾಕ್‌ಡೌನ್ ಸಂದರ್ಭದಲ್ಲಿ ಬೇಸರ ಕಳೆಯಲು ಕೆಲಹೊತ್ತು ತಾಯಿಯ ಮೊಬೈಲ್ ಪಡೆದುಕೊಂಡು ವೀಡಿಯೋಗಳನ್ನು ನೋಡುತ್ತಿದ್ದನು. ಒಮ್ಮೆ ಈತ ಮೊಬೈಲ್‌ನಲ್ಲಿ ನೋಡುತ್ತಿದ್ದ ವೇಳೆ ಅನ್ಅಕಾಡೆಮಿಯ ಬುದ್ದಿಮತ್ತೆ ಪರೀಕ್ಷೆಯ ಜಾಹೀರಾತೊಂದು ಕಾಣಿಸಿತ್ತು. ಅದನ್ನು ಕ್ಲಿಕ್ ಮಾಡಿದ್ದ.

ಬಳಿಕ ಕುತೂಹಲಕ್ಕೆ ಆ ಪರೀಕ್ಷೆ ಬರೆಯುವ ಮನಸ್ಸು ಮಾಡಿದ್ದು, ಒಂದು ತಾಸಿನ ಎಮರ್ಜ್ ಪರೀಕ್ಷೆಯಲ್ಲಿ ಬಾಲಕ ನೂರಕ್ಕೂ ಅಧಿಕ ಪ್ರಶ್ನೆಗಳಿಗೆ ಕೇವಲ 13 ನಿಮಿಷಗಳಲ್ಲಿ ಸರಿಯಾಗಿ ಉತ್ತರ ನೀಡಿದ್ದನು. ದೇಶದಲ್ಲಿ ಸುಮಾರು 76 ಸಾವಿರ ಮಕ್ಕಳು ಪರೀಕ್ಷೆ ಬರೆದಿದ್ದು, ನೂರಕ್ಕೂ ಅಧಿಕ ಮಂದಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಆದರೆ, ಈ ಬಾಲಕ ಕಡಿಮೆ ಅವಧಿಯಲ್ಲಿ ಸರಿಯಾದ ಉತ್ತರ ನೀಡಿದ್ದಕ್ಕಾಗಿ ಸಂಸ್ಥೆ ಪುರಸ್ಸರ್‌ನಿಗೆ ಪ್ರಥಮ ಬಹುಮಾನ ನೀಡಿದೆ.

ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಪುರಸ್ಸರ್‌ನಿಗೆ ಖ್ಯಾತ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹಿ ಇರುವ ಪಾರಿತೋಷಕ, ಆ್ಯಪಲ್ ಕಂಪನಿ ಮ್ಯಾಕ್​​​ಬುಕ್, ಬ್ಯಾಗ್, ಪೆನ್​​​ಡ್ರೈವ್ ಸೇರಿ ಮಕ್ಕಳ ಅಭ್ಯಾಸಕ್ಕೆ ಅನುಕೂಲವಾಗುವ ವಸ್ತುಗಳನ್ನು ಅಕಾಡೆಮಿ ನೀಡಿದೆ.

ಈ ಸಂಸ್ಥೆ 6 ರಿಂದ 12ನೇ ತರಗತಿವರೆಗಿನ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆ ಬಗ್ಗೆ ನಮ್ಮ ರಾಜ್ಯದ ಮಕ್ಕಳಿಗೆ ಮಾಹಿತಿ ಕೊರತೆ ಇದ್ದು, ಈ ರೀತಿ ಪರೀಕ್ಷೆಯಿಂದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ಕಡಿಮೆ ಅವಧಿಯಲ್ಲಿ ಮಗನ ಸಾಧನೆಗೆ ಪಾಲಕರು ಸಂತಸ ವ್ಯಕ್ತಪಡಿಸಿದ್ದು, ಆತನ ಬುದ್ಧಿಮತ್ತೆ ಕಂಡು ಹೆಮ್ಮೆ ಪಡುತ್ತಿದ್ದಾರೆ. ಅಲ್ಲದೆ ಪುರಸ್ಸರ್ ಪ್ರಥಮ ಸ್ಥಾನ ಗಳಿಸಿದ್ದರಿಂದ ಲಕ್ಷಾಂತರ ವೆಚ್ಚದ ಸಿಲೆಬಸ್ ಕೋರ್ಸ್, ಐಕಾನಿಕ್ ಸಾಫ್ಟ್​​​ವೇರ್ ಕೋಡಿಂಗ್ ಸೇರಿ ಹಲವು ಶಿಕ್ಷಣಕ್ಕೆ ಅನುಕೂಲವಾಗುವ ಕ್ಲಾಸ್‌ಗಳು ಉಚಿತವಾಗಿ ಸಿಕ್ಕಿದೆ. ಈ ಬಾಲಕನ ತಂದೆ ದೇವಾನಂದ ಗಾಂವ್ಕರ್ ಪ್ರಸಿದ್ಧ ಹಾಡುಗಾರರು.

ಶಿವಮೊಗ್ಗ: ಆ್ಯಂಬುಲೆನ್ಸ್​ಗಳಲ್ಲಿ Anti Venom Serum (ASV) ಶೇಖರಿಸಿಡಲು ಕ್ರಮ ಕೈಗೊಳ್ಳುವಂತೆ ಸಾಗರ ಶಾಸಕ ಹರತಾಳು ಹಾಲಪ್ಪ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಹಾವು ಕಚ್ಚಿದ ಸಂದರ್ಭದಲ್ಲಿ 108 ಆ್ಯಂಬುಲೆನ್ಸ್​ಗಳ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ಸಾಗಿಸುವಾಗ ಆಗುವ ಅನಾಹುತಗಳನ್ನುತಪ್ಪಿಸಲು ಹಾಗೂ ತುರ್ತು ಚಿಕಿತ್ಸೆ ನೀಡಲು ASV ಇಂಜೆಕ್ಷನ್​ಗಳು ಸಹಾಯಕವಾಗುತ್ತವೆ. ಹೀಗಾಗಿ ಈ ಇಂಜೆಕ್ಷನ್​ಗಳನ್ನು ಆ್ಯಂಬುಲೆನ್ಸ್​ಗಳಲ್ಲಿ ಶೇಖರಿಸಿಡಲು ಶಾಸಕರು ಸರ್ಕಾರ ಒತ್ತಾಯಿಸಿದ್ದಾರೆ.

ASV ಇಂಜೆಕ್ಷನ್ ಶೇಖರಣೆಗೆ ಶಾಸಕ ಹರತಾಳು ಹಾಲಪ್ಪ ಮನವಿ

ASV ಇಂಜೆಕ್ಷನ್ ಶೇಖರಣೆಗೆ ಶಾಸಕ ಹರತಾಳು ಹಾಲಪ್ಪ ಮನವಿ

ಇನ್ನು ಸಾಗರ ಉಪವಿಭಾಗೀಯ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ RT-PCR ಪ್ರಯೋಗಾಲಯಕ್ಕೆ ಪೂರಕ ಸಲಕರಣೆ ಒದಗಿಸುವಂತೆ ಹಾಗೂ ಸದರಿ ಆಸ್ಪತ್ರೆಯನ್ನು 100 ಹಾಸಿಗೆಯಿಂದ 150 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. (etbk)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *