

ಸಿದ್ದಾಪುರ: ಮಾಜಿ ಸೈನಿಕರಿಗೆ ಇಂದು ಗೌರವ ಕಮ್ಮಿಯಾಗುತ್ತಿದೆ ಮಾಜಿ ಸೈನಿಕರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ಮುಟ್ಟುತ್ತಿಲ್ಲ ನಮ್ಮಲ್ಲಿ ಒಗ್ಗಟ್ಟು ಕಮ್ಮಿ ಆಗುತ್ತಿರುವುದು ಇದಕ್ಕೆಲ್ಲ ಕಾರಣ ಸರಕಾರ ದಿಂದ ಸಿಗುವ ಸೌಲಭ್ಯ ದೊರಕಿಸಲು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಗಳಲ್ಲಿ ಇಂತಹ ಸಂಘಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ರಾಜ್ಯ ಸಂಘಟನೆಯ ಸುಭಾಷ್ ಚಂದ್ರ ತೇಜಸ್ವಿ ತಿಳಿಸಿದರು
ಅವರು ಬಾಲ ಭವನದಲ್ಲಿ ಉದ್ಘಾ ಟನೆಗೊಂಡ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ದ ಕಾರ್ಯ ಕ್ರಮ ದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಮಗೆ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸಿಕೊಳ್ಳುವುದು ಮುಖ್ಯವಾಗುತ್ತದೆ ನಾವುಗಳು ಒಗ್ಗಟ್ಟಿನಿಂದ ಸಮಾಜಮುಖಿ ಕೆಲಸ ಮಾಡಬೇಕಾಗಿದೆ ಇದರಿಂದ ನಮಗೆ ಸಮಾಜದಲ್ಲಿ ಗುರ್ತಿಸಿ ನಮಗೆ ಸಹಾಯ ಮಾಡುತ್ತಾರೆ ಎಂದರು
ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿದ ಮಾಜಿ ಲಯನ್ ಗವರ್ನರ್ ರವಿಹೆಗಡೆ ಹೂವಿನ ಮನೆ ಮಾತನಾಡಿ ಸೈನಿಕರ ಕ್ಷೇಮಾಭಿವೃದ್ಧಿ ಸಂಸ್ಥೆ ಮೂಲಕ ದೇಶಭಕ್ತಿ ನಡೆಯುವುದು ಮುಖ್ಯ ಸೈನಿಕರನ್ನು ಇತ್ತೀಚಿನ ದಿನಗಳಲ್ಲಿ ಬಿನ್ನವಾಗಿ ನೋಡುತ್ತಿದ್ದಾರೆ ಅವರನ್ನು ಗೌರವದಿಂದ ನೋಡುವ ಕಾರ್ಯವಾಗಬೇಕು ಸೈನಿಕರ ಅನುಭವ ಸಮಾಜಕ್ಕೆ ಸಿಗುವಂತಾಗಬೇಕು ಕವಲುದಾರಿಯಲ್ಲಿ ನಿಂತ ಸಮಾಜ ನಿಶ್ಚಿತ ದಾರಿಯಲ್ಲಿ ತೆಗೆದುಕೊಂಡು ಹೋಗಲು ಪೂರಕವಾಗಿ ಇಂತಹ ಸಂಘಗಳು ಕೆಲಸ ಮಾಡಬೇಕು ಎಂದರು.
ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕ ಜಿ ಜಿ ಹೆಗಡೆ ಬಾಳಗೋಡ ಮಾತನಾಡಿ ದೇಶ ಕಟ್ಟುವಲ್ಲಿ ಸೈನಿಕರ ಪಾತ್ರ ಮುಖ್ಯ ಅವರ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಿದಾಗ ರಾಷ್ಟ್ರ
ಪ್ರೇಮದ ಕಲ್ಪನೆ ಮೂಡಿ ದೇಶ ಸೇವೆಗೆ ಪ್ರೇರಣೆ ಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ ಬಿ. ಪಾಟೀಲ್ ವಹಿಸಿದ್ದರು
ನಿವೃತ್ತ ನೌಕರ ಸಂಘದ ಅಧ್ಯಕ್ಷ ಸಿ ಎಸ್ ಗೌಡರ, ಎಂ ಆರ್ ಪಾಟೀಲ್, ರಾಜೇಶ್ ನಾಯ್ಕ, ಉಪಸ್ಥಿತರಿದ್ದರು.
ದತ್ತಾತ್ರೇಯ ಭಟ್ ನಿರೂಪಣೆ ಮಾಡಿದರು ಕಾರ್ಯ ದರ್ಶಿ ಕುಮಾರ್ ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.


ಸೇನೆಯಲ್ಲಿ 18 ವರ್ಷಗಳ ಸಾರ್ಥಕ ಸೇವೆ: ಯೋಧನಿಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ
ಭಾರತೀಯ ಸೇನೆಯಲ್ಲಿ 18 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಹಿಂದಿರುಗಿದ ಯೋಧನಿಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿದೆ.
ಬೆಳಗಾವಿ: ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧರೊಬ್ಬರಿಗೆ ಸ್ವಗ್ರಾಮದಲ್ಲಿ ಸಕಲ ವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ.
ಯೋಧನಿಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ
ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಅಜೀತ ಶಂಕರ ಮಗದುಮ್ಮ ಎಂಬುವವರು ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಅವರಿಗೆ ತೆರೆದ ವಾಹನದಲ್ಲಿ ಸಕಲ ವಾದ್ಯ ಮೇಳದೊಂದಿಗೆ ಪುಷ್ಪವೃಷ್ಟಿಯ ಮೂಲಕ ಗ್ರಾಮಸ್ಥರು ಭರ್ಜರಿ ಸ್ವಾಗತ ಕೋರಿದ್ರು.
ಗ್ರಾಮದ ಬೀರೇಶ್ವರ ಮಂದಿರದಿಂದ ಮೆರವಣಿಗೆ ಮುಖಾಂತರ ಬರಮಾಡಿಕೊಂಡರು. ಬಳಿಕ ಡೋಣವಾಡದ ದುರದುಂಡೇಶ್ವರಮಠದ ಶಿವಾನಂದ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು. ಸೇವಾ ನಿವೃತ್ತಿ ಹೊಂದಿದ ಸೈನಿಕ ಅಜೀತ್ ಮಗದುಮ್ಮ ಅವರಿಗೆ ಶಿವಾನಂದ ಮಹಾಸ್ವಾಮಿಗಳು ಸನ್ಮಾನಿಸುವ ಮೂಲಕ ಆಶೀರ್ವದಿಸಿದರು.
ಬಳಿಕ ಮಾತನಾಡಿದ ಸ್ವಾಮೀಜಿಗಳು, ದೇಶಕ್ಕೆ ಇಬ್ಬರು ಬೆನ್ನುಲುಬುಗಳಿದ್ದು, ಒಬ್ಬರು ದೇಶ ಕಾಯುವ ಸೈನಿಕರು ಮತ್ತು ದೇಶಕ್ಕೆ ಅನ್ನ ಕೊಡುವ ರೈತರು ಎಂದರು. ದೇಶ ಕಾಯುವ ಸೈನಿಕರು ಪ್ರತಿಯೊಂದು ಮನೆಯಲ್ಲಿಯೂ ಹುಟ್ಟಬೇಕು.
ಪ್ರತಿಯೊಬ್ಬ ತಂದೆ-ತಾಯಂದಿರು ಮಕ್ಕಳಲ್ಲಿ ದೇಶಾಭಿಮಾನ ಬೆಳೆಸುವ ಮುಖಾಂತರ ತಮ್ಮ ಮಕ್ಕಳನ್ನು ಸೈನಿಕರನ್ನಾಗಿಸಲು ಮುಂದಾಗಬೇಕು. ತಾಯಿ ಭಾರತಾಂಬೆಯ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ, ಅದಕ್ಕೂ ಯೋಗಬೇಕು. ಆ ಯೋಗ ಅಜೀತ್ ಶಂಕರ ಮಗದುಮ್ಮ ಅವರಿಗೆ ದೊರಕಿರುವುದು ಹೆಮ್ಮಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ವೀರಯೋಧ ಅಜೀತಶಂಕರ ಮಗದುಮ್ಮ ಮಾತನಾಡಿ, ತಂದೆ – ತಾಯಿ, ಗ್ರಾಮದ ಗುರು ಹಿರಿಯರ ಆಶೀರ್ವಾದದಿಂದ ನಾನು 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆ ಎಂದು ಹೇಳಿದರು. (etbk)

