
ಸಿದ್ದರಾಮಯ್ಯ ಖಡಕ್, ನೀವು ಕುಡುಕ ಎಂದಿದ್ದಾರೆ: ನಿಮ್ಮ ಪಕ್ಷದ ನಾಯಕರ ವಿರುದ್ಧ ಫೈಟ್ ಮಾಡಿ; ತೇಜಸ್ವಿನಿ ಗೌಡ
ಮುಖ್ಯಮಂತ್ರಿಯಾಗ ಬೇಕು ಎನ್ನುವ ದುರಾಸೆ ಇಟ್ಟುಕೊಂಡು ಚಿಕ್ಕ ಮಕ್ಕಳಂತೆ ಹಠ ಮಾಡಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದರು

ಬೆಂಗಳೂರು: ಮುಖ್ಯಮಂತ್ರಿಯಾಗ ಬೇಕು ಎನ್ನುವ ದುರಾಸೆ ಇಟ್ಟುಕೊಂಡು ಚಿಕ್ಕ ಮಕ್ಕಳಂತೆ ಹಠ ಮಾಡಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದರು. ಆದರೆ ಇವತ್ತು ಅವರ ಪಕ್ಷದವರೇ ಅವರ ಮುಖವಾಡವನ್ನು ಬಿಚ್ಚಿಟ್ಡಿದ್ದಾರೆ ಎಂದು ಬಿಜೆಪಿ ನಾಯಕಿ ತೇಜಸ್ವಿನಿಗೌಡ ವ್ಯಂಗ್ಯವಾಡಿದರು.
ಮಾಜಿ ಸಂಸದ ಉಗ್ರಪ್ಪ, ನಿಮ್ಮನ್ನು ಕಮಿಷನ್ ಗಿರಾಕಿ ಎಂದು ಹೇಳಿದ್ದಾರೆ. ನೀವು ನಿಜವಾಗಿಯೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರೆ, ನಿಮ್ಮ ಮೇಲಿನ ಭ್ರಷ್ಟಾಚಾರದ ಬಗ್ಗೆ ನಿಮ್ಮವರೇ ಹೇಳಿದ್ದಾರಲ್ಲ, ಅವರ ವಿರುದ್ದ ಯಾಕೆ ನೀವು ಕ್ರಮ ಕೈಗೊಂಡಿಲ್ಲ. ನೀವು ಬಿಜೆಪಿ ವಿರುದ್ಧ ಫೈಟ್ ಮಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಫೈಟ್ ಮಾಡಿ. ಡಿ.ಕೆ ಶಿವಕುಮಾರ್ ಅವರೇ ನಿಮ್ಮ ಬೇಜಬ್ದಾರಿ ಹೇಳಿಕೆ ವಾಪಸ್ ಪಡೆಯಿರಿ ಎಂದು ಕುಟುಕಿದರು.
ಐಟಿ , ಇಡಿ ದಾಳಿ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವ ನಿಮ್ಮ ಬಗ್ಗೆಯೇ ನಿಮ್ಮ ಪಕ್ಷದವರೇ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಹೊಗಳುತ್ತಾರೆ. ನಿಮ್ಮನ್ನು ಕುಡುಕ ಎಂದು ಆಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಡಿಕೆಶಿ ಕಾಂಗ್ರೆಸ್ ಗೆ ಬಲ ತುಂಬಿಲ್ಲ. ಸಾಮಾನ್ಯ ಕಾರ್ಯಕರ್ತ ಕೂಡ ಡಿ.ಕೆ ಶಿವಕುಮಾರ್ ಹಿಡಿದು ಅಲ್ಲಾಡಿಸಬಹುದು. ಆದರೆ ನಮ್ಮ ಬಿಜೆಪಿ ಅತ್ಯುತ್ತಮವಾದ ಪಕ್ಷ ಬಿಜೆಪಿಯಿಂದಲೇ ಜನರು, ಜನರಿಗಾಗೀ ಬಿಜೆಪಿ. ಆದರೆ ನೀವು ಅಧ್ಯಕ್ಷರಾಗಿದ್ದರೂ ಸಹ ನಿಮ್ಮದೇ ಪಕ್ಷದ ಜಮೀರ್ ನಿಮ್ಮ ವಿರುದ್ಧ ಮಾತಾಡಿದರು. ನಿಮ್ಮದೇ ಅನುಯಾಯಿಗಳು ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಶಿಸ್ತು ಸಮಿತಿ ಏನಕ್ಕೆ ಇದೆ ಎಂದರು.(kpc)
