

ಕಾರವಾರ: ಕೆಮಿಕಲ್ ತುಂಬಿದ್ದ ಟ್ಯಾಂಕರ್ ಸ್ಫೋಟ ಶಂಕೆ, ಆತಂಕ ಸೃಷ್ಟಿಸಿದ ಬೆಂಕಿಯ ಕೆನ್ನಾಲಿಗೆ
ಇಂದು ಬೆಳಗ್ಗೆ ಸುಮಾರು 5.30ರ ವೇಳೆಗೆ ಕೆಮಿಕಲ್ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಪರಿಣಾಮ, ಆರ್ತಿಬೈಲ್ ಕ್ರಾಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದಾರೆ.
ಕಾರವಾರ (ಉತ್ತರ ಕನ್ನಡ): ಕೆಮಿಕಲ್ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡು ಅಪಾರ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಯಲ್ಲಾಪುರ ಇಡಗುಂದಿಯ ಆರ್ತಿಬೈಲ್ ಕ್ರಾಸ್ ಬಳಿ ಮುಂಜಾನೆ ನಡೆದಿದೆ.
ಕೆಮಿಕಲ್ ತುಂಬಿದ್ದ ಟ್ಯಾಂಕರ್ ಸ್ಫೋಟ ಶಂಕೆ
ಕೆಮಿಕಲ್ ಟ್ಯಾಂಕರ್ ಸ್ಫೋಟಗೊಂಡಿದೆ ಎನ್ನಲಾಗುತ್ತಿದ್ದರೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡ ಕಾರಣ ತಕ್ಷಣ ಏನಾಗಿದೆ ಅನ್ನೋ ಮಾಹಿತಿ ಸಿಗದೇ ಅಧಿಕಾರಿಗಳು ಕೂಡ ಗೊಂದಲದಲ್ಲಿದ್ದಾರೆ.

ಟ್ಯಾಂಕರ್ನಿಂದ ಸೋರಿಕೆಯಾದ ಕೆಮಿಕಲ್ನಿಂದ ಹೊತ್ತಿದ ಬೆಂಕಿ
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರು ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ((etbk)

ಸಿದ್ದಾಪುರ: ಬಿಜೆಪಿ ಹಿಂದುಳಿದ ವರ್ಗಗಳ ವತಿಯಿಂದ ಇದೇ ತಿಂಗಳ 30 ರಂದು ಬೆಳಿಗ್ಗೆ 10-30 ಕ್ಕೆ ಪಟ್ಟಣದ ಶಂಕರ ಮಠದಲ್ಲಿ ತಾಲೂಕಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಬಲರಾಮ ನಾಮಧಾರಿ ತಿಳಿಸಿದರು.
ಅವರು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ನಾಯಕರು, ಜಿಲ್ಲಾ ಮಟ್ಟದ , ತಾಲೂಕು ಮಟ್ಟದ ನಾಯಕರು, ಶಕ್ತಿ ಕೇಂದ್ರ ಗಳ ಹಾಗೂ ಬೂತ್ ಮಟ್ಟದ ಹಿಂದುಳಿದ ವರ್ಗಗಳ ನಾಯಕರು, ಪ್ರತಿನಿಧಿ ಗಳನ್ನು ಸೇರಿಸಿ ಸಮಾವೇಶ ನಡೆಸಲಾಗುವುದು ಎಂದರು.
ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಕೆ. ಜಿ. ನಾಯ್ಕ ಮಾತನಾಡಿ ಜಿಲ್ಲಾ ಪಂಚಾಯತ್ ತಾಲೂಕ ಪಂಚಾಯತ್ ಸದಸ್ಯರ ಅಧಿಕಾರ ಅವಧಿ ಮುಗಿದಿರುವುದರಿಂದ ಈ ಹಿಂದೆ ಸದಸ್ಯ ರಾಗಿದ್ದ ಓಬಿಸಿ ವರ್ಗದ ಜನ ಪ್ರತಿನಿಧಿಗಳನ್ನು , ಪಟ್ಟಣ ಪಂಚಾಯತ ದಲ್ಲಿ ಯಾರ್ಯಾರು ಒಬಿಸಿ ವರ್ಗಕ್ಕೆ ಸೇರಿದವರು ಇದ್ದಾರೆ ಅವರನ್ನು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಕ್ತಿಕೇಂದ್ರದಲ್ಲಿ ಇರುವ ಓಬಿಸಿ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮಕ್ಕೆ ಸುಮಾರು ಒಂದರಿಂದ ಒಂದೂವರೆ ಸಾವಿರ ಜನ ಆಗಮಿಸುವ ಸಾಧ್ಯತೆ ಇದೆ ಕೋವಿಡ್ ನಿಯಮಗಳ ವ್ಯಾಪ್ತಿಗೆ ಒಳಪಟ್ಟು
ಜಿಲ್ಲೆಯಲ್ಲಿ ಎಲ್ಲೂ ನಡೆಯದ ರೀತಿಯಲ್ಲಿ ವ್ಯವಸ್ಥಿತವಾಗಿ ಈ ಸಮಾರಂಭವನ್ನು ನಡೆಸಲಾಗುತ್ತದೆ. ಎಂದರು.
ಓಬಿಸಿ ಮೋರ್ಚಾದ ಮಂಡಲ ಅಧ್ಯಕ್ಷ ಬಲರಾಮ ನಾಮಧಾರಿ, ಮಂಡಲದ ಅಧ್ಯಕ್ಷರಾಗಿರುವ ನಾಗರಾಜ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ್ ಮೇಸ್ತ , ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವಿ ನಾಯ್ಕ ಹಾಗೂ ಇತರರನ್ನು ಒಳಗೊಂಡ ಸಮಿತಿಯ ನೇತೃತ್ವದಲ್ಲಿ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಕೋಟಾ ಶಾಸಕ ಶ್ರೀನಿವಾಸ್ ಪೂಜಾರಿ, ಕಾರ್ಕಳದ ಎಂಎಲ್ಎ ಹಾಗೂ ಇಂಧನ ಸಚಿವರಾಗಿರುವ ಸುನಿಲ್ ಕುಮಾರ್ ಹಾಗೂ ಗೃಹ ಸಚಿವರಾದಂತಹ ಅರಗ ಜ್ಞಾನೇಂದ್ರ ರವರನ್ನು ರಾಜ್ಯ ಓಬಿಸಿ ಮೋರ್ಚಾದ ಅಧ್ಯಕ್ಷರಾಗಿರುವ ನರೇಂದ್ರಬಾಬು, ಅಧ್ಯಕ್ಷರಾದ ರವಿ ನಾಯ್ಕ, ಹಿಂದುಳಿದ ವರ್ಗಗಳ ರಾಜ್ಯ ಸಮಿತಿ ಸದಸ್ಯರಾದ ರಾಜೇಂದ್ರ ನಾಯ್ಕ, ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಶಾಸಕರಾದ ಹರತಾಳ ಹಾಲಪ್ಪ, ಕುಮಾರ್ ಬಂಗಾರಪ್ಪ ಹೀಗೆ ಸಾಕಷ್ಟು ಓಬಿಸಿ ವರ್ಗಕ್ಕೆ ಸೇರಿದ ಪ್ರಮುಖರನ್ನು ಕರೆಯಿಸಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲು ತೀರ್ಮಾನಿಸಿದ್ದೇವೆ. ಎಂದು ಮಾಹಿತಿ ನೀಡಿದರು.
ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು
ವಿಧಾನಪರಿಷತ್ ಚುನಾವಣೆಗಾಗಿ ಹಲವಾರು ಆಕಾಂಕ್ಷಿಗಳು ತಮ್ಮ ಇಚ್ಛೆಯನ್ನು ವ್ಯಕ್ತ ಪಡಿಸಿದ್ದು ಅವುಗಳಲ್ಲಿ ಮತದಾನ ಹೊಂದಿರುವ ವ್ಯಕ್ತಿ ನಾನೊಬ್ಬನೇ ಆಗಿದ್ದೇನೆ. ನಾನೊಬ್ಬ ಪಟ್ಟಣ ಪಂಚಾಯತ್ ಸದಸ್ಯನಾಗಿರುವುದರಿಂದ ನನಗೆ ಮತದಾನದ ಹಕ್ಕಿದೆ. ಕಳೆದ 25 ವರ್ಷಗಳಿಂದಲೂ ನಾನು ಮತದಾನದ ಹಕ್ಕನ್ನು ಪಡೆದಿದ್ದೇನೆ. ಪಕ್ಷದಲ್ಲಿ ವಿಧಾನಪರಿಷತ್ ಚುನಾವಣೆ ಸ್ಪರ್ಧಿಸುವ ನನ್ನ ಇಂಗಿತವನ್ನು ವ್ಯಕ್ತಪಡಿಸಿದ್ದೇನೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಕಳೆದ 32 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯ ಸಂಘಟನೆಯಲ್ಲಿ ಸಕ್ರಿಯವಾಗಿ ಇದ್ದೇನೆ. 1993 ರಲ್ಲಿ ಪ್ರಪ್ರಥಮವಾಗಿ ಬೀಳಗಿ ಗ್ರಾಮ ಪಂಚಾಯತಿಯಲ್ಲಿ 5 ಸ್ಥಾನಗಳನ್ನು ಗೆದ್ದು ಕೊಂಡೆವು. ಪಕ್ಷ ಮುಂದಿನ ದಿನಗಳಲ್ಲಿ ಬೆಳೆದು ಅಧಿಕಾರಕ್ಕೆ ಬಂದಾಗ ನಮಗೆ ಎಂಎಲ್ಸಿ ಅಥವಾ ಎಂಎಲ್ಎ ಸ್ಥಾನ ಸಿಗಬಹುದು ಎಂಬ ದೃಷ್ಟಿಯಿಂದ ನಾವು ಪಕ್ಷಕ್ಕೆ ಸೇರ್ಪಡೆಗೊಂಡ ವರಲ್ಲ. ಅಯೋಧ್ಯ ರಾಮಮಂದಿರ ನಿರ್ಮಾಣ ಉದ್ದೇಶ ಇಟ್ಟುಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡಿರುತ್ತೇನೆ . ಪಕ್ಷ ಬೆಳೆದಂತೆ ನಮ್ಮ ಪಕ್ಷದಿಂದ ಎಂಎಲ್ಎ ಎಂಪಿ ಅಭ್ಯರ್ಥಿಗಳು ಆಯ್ಕೆಯಾದರು, ತಾಲೂಕ ಪಂಚಾಯತ್, ಜಿಲ್ಲಾ ಪಂಚಾಯತ್ , ಪಟ್ಟಣ ಪಂಚಾಯತ್ ಗಳಲ್ಲಿ ಹೆಚ್ಚಿನ ಸದಸ್ಯರುಗಳು ಗೆಲುವು ಸಾಧಿಸಲು ಪ್ರಾರಂಭಿಸಿದರು. ಕ್ರಮೇಣವಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಪ್ರಾರಂಭವಾಯಿತು. ಕಳೆದ ಸುಮಾರು 25 ವರ್ಷಗಳಿಂದ ನಾನು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಾ ಬಂದಿರುತ್ತೇನೆ ಪಟ್ಟಣ ಪಂಚಾಯತಿಯಲ್ಲಿ ಮೂರು ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದೇವೆ. ಮಹಿಳಾ ಮೀಸಲಾತಿ ಇಲ್ಲದಿದ್ದರೆ ಈ ವರ್ಷವೂ ನಾನೇ ಅಧ್ಯಕ್ಷನಾಗಿ ಇರುತ್ತಿದ್ದೆ. ಎಂಜಿ ನಾಯ್ಕರವರು ಜಿಲ್ಲಾಧ್ಯಕ್ಷರಾಗಿ ಇದ್ದಾಗ ನನ್ನನ್ನು ಎಂಎಲ್ಸಿ ಚುನಾವಣೆಗೆ ನಿಲ್ಲುವಂತೆ ಹಲವಾರು ಬಾರಿ ಕೇಳಿಕೊಂಡಿದ್ದರು ಆದರೆ ನಾನಾಗ ಎಂಎಲ್ಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿರಲಿಲ್ಲ. ಸಂಘಟನೆಯಲ್ಲಿ ಜವಾಬ್ದಾರಿಯನ್ನು ನೀಡುವಲ್ಲಿ ಒಂದು ವಯಸ್ಸಿನ ಮಿತಿಯನ್ನು ತರುತ್ತಿದ್ದಾರೆ ಹಾಗೂ ಸರ್ಕಾರದ ಜವಾಬ್ದಾರಿಯನ್ನು ಹೊರಲು ಸಹ ವಯಸ್ಸಿನ ಮಿತಿಯನ್ನು ತೋರುತ್ತಿದ್ದಾರೆ ಆದ್ದರಿಂದ ಈಗ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಇನ್ನೊಂದೆರಡು ಚುನಾವಣೆಯಲ್ಲಿ ಮಾತ್ರ ಅವಕಾಶವಿರುವುದರಿಂದ ನಾನು ವಿಧಾನಪರಿಷತ್ ಚುನಾವಣೆಯಲ್ಲಿ ಭಾಗವಹಿಸಲು ಸಿದ್ಧನಾಗಿದ್ದೇನೆ. ರಾಜ್ಯ ಅಧ್ಯಕ್ಷರಿಂದ ಹಿಡಿದು ಜಿಲ್ಲಾಧ್ಯಕ್ಷರ ವರೆಗೂ ನಾನೊಬ್ಬ ಆಕಾಂಕ್ಷಿ ಪಕ್ಷದ ಟಿಕೆಟ್ ನೀಡಿದಲ್ಲಿ ಖಂಡಿತವಾಗಿಯೂ ನಿಲ್ಲುತ್ತೇನೆ ಹಾಗೂ ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ ನನಗೆ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ಟಿಕೆಟ್ ನೀಡದೆ ಇದ್ದರೂ ಸಹ ಸಂಘಟನೆಯ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ಕಳೆದ 32 ವರ್ಷಗಳಿಂದ ಜಿಲ್ಲೆಯ ಭಾರತೀಯ ಜನತಾ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಹಾಲಿ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಸುತ್ತಿದ್ದೇನೆ. ಪಕ್ಷ ನನ್ನನ್ನು ಗುರುತಿಸಿ ಮುಂದಿನ ದಿನಗಳಲ್ಲಿ ನನಗೆ ಒಂದು ಹುದ್ದೆ ನೀಡಬಹುದು ಎಂಬ ದೃಷ್ಟಿಯಿಂದ ಈ ಕೆಲಸವನ್ನು ಮಾಡಿಲ್ಲ – ಕೆ. ಜಿ. ನಾಯ್ಕ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು.
ಸುದ್ದಿಗೋಷ್ಠಿ ಯಲ್ಲಿ ನಾಗರಾಜ್ ನಾಯ್ಕ್ ಬೇಡ್ಕಣಿ, ಎಸ್ ಕೆ ಮೇಸ್ತ, ಈಶ್ವರ್ ನಾಯ್ಕ್,ವಿನಯ ಹೊನ್ನೇಗುಂಡಿ, ವಿಜಯೇಂದ್ರ ಗೌಡರ, ರವಿಕುಮಾರ್ ನಾಯ್ಕ,ಚಂದ್ರಕಲಾ ಎಸ್ ನಾಯ್ಕ,ಸುಧೀರ ಕೊಂಡ್ಲಿ,ಸೇರಿದಂತೆ ಪಕ್ಷದ ಪ್ರಮುಖ ರು ಉಪಸ್ಥಿತರಿದ್ದರು.

ಜನತಾದಳ (ಎಸ್) ಕಾರ್ಯಕ್ರಮ- ಸಿದ್ದಾಪುರ: ಸಿದ್ದಾಪುರ ಜೆಡಿಎಸ್ ತಾಲೂಕು ಪದಾಧಿಕಾರಿಗಳ ನೇಮಕಾತಿ ಪತ್ರ ಹಸ್ತಾಂತರ ಕಾರ್ಯಕ್ರಮ ಬಾಲಭವನದಲ್ಲಿ ನಡೆಯಿತು
ಪದಾಧಿಕಾರಿಗಳಿಗೆ ಪತ್ರ ಹಸ್ತಾಂತರಿಸಿದ ಜಿಲ್ಲಾ ಧ್ಯಕ್ಷ ಗಣಪಯ್ಯ ಗೌಡ ಮಾತನಾಡಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಆಗಬೇಕಿದೆ, ಎಲ್ಲಾ ಸಮಾಜದವರ ವಿಶ್ವಾಸ ತೆಗೆದುಕೊಂಡು ಜಿಲ್ಲೆಯ ಲ್ಲಿ ಹೆಚ್ಚಿನ ಸ್ಥಾನ ಗಳನ್ನು ಗೆಲ್ಲಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಡಾ. ಶಶಿಭೂಷಣ ಹೆಗಡೆ ಮಾತನಾಡಿ ಪಕ್ಷದ ಸಂಘಟನೆಗೆ ಚಾಲನೆ ನೀಡಲಾಗಿದ್ದು, ಈ ತಿಂಗಳೊಳಗಾಗಿ ಬೂತ್,ಮತ್ತು ತಾಲೂಕು ಕಮೀಟಿ ರಚನೆ ಮಾಡಬೇಕಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಂದ ಪಕ್ಷ ಕಟ್ಟುತ್ತೇವೆ. ನವೆಂಬರ್ 15 ರೊಳಗೆ ಮೆಂಬರಶಿಪ್ ಅಭಿಯಾನ ನಡೆಸಲಾಗುವುದು ಎಂದರು.
ಜೆಡಿಎಸ್ ಮುಖಂಡ ಜಿ ಕೆ ಪಟಗಾರ, ನೂತನ ತಾಲೂಕು ಅಧ್ಯಕ್ಷ ಕೆ ಎಂ ಹೆಗಡೆ ಮಾತನಾಡಿದರು.
ಮುಖಂಡರಾದ ಪಿ ಟಿ ನಾಯ್ಕ, ವಿ ಎಂ ಭಂಡಾರಿ, ಸತೀಶ್ ಹೆಗಡೆ ಉಪಸ್ಥಿತರಿದ್ದರು.
ಪರಮೇಶ್ವರ್ ಹಿತ್ಲಕೊಪ್ಪ ನಿರೂಪಿಸಿದರು.
ಬೇಡ್ಕಣಿ ಡಿಗ್ರಿ ಕಾಲೇಜ್ ಸಮೀಪ ಎರಡು ಬೈಕ್ ಗಳ ನಡುವೆ ಡಿಕ್ಕಿ ಮೂವರಿಗೆ ಗಾಯ
ಸಿದ್ದಾಪುರ ಕುಮಟಾ ಮುಖ್ಯರಸ್ತೆಯಲ್ಲಿ ಬೇಡ್ಕಣಿ ಕಡೆಯಿಂದ ಸಿದ್ದಾಪುರ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿ ತನದಿಂದ ಜ್ಞಾನೇಶ್ ಕಾಳಜ್ಜ ನಾಯ್ಕ ಕೊಂಡ್ಲಿ ಇತನು ತನ್ನ ಮೋಟಾರ್ ಸೈ ಕಲ್ ಅನ್ನು
ತನ್ನ ಬೈಕ್ ಚಲಾಯಿಸಿಕೊಂಡು ಬಂದು ಬೇಡ್ಕಣಿ ಡಿಗ್ರಿ ಕಾಲೇಜ್ ಹತ್ತಿರ ಎದುರಿನಿಂದ ಚೈತನ್ಯ ಗಣಪತಿ ಹೆಗಡೆ ಕೆರೆಹೊಂಡ ಇವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಪಡಿಸಿ ಚೈತನ್ಯ ಗಣಪತಿ ಹೆಗಡೆ ರವರಿಗೆ ಹಣೆಗೆ , ಹಲ್ಲಿಗೆ ಹಾಗೂ ಕಣ್ಣುಗಳ ಹತ್ತಿರ ಸಾಧ ಗಾಯ ನೋವು ಪಡಿಸಿದಲ್ಲದೆ ತನ್ನ ಬೈಕ್ ಮೇಲೆ ಹಿಂಬದಿಗೆ ಕುಳಿತ ದರ್ಶನ ತಂದೆ ರಾಜು ನಾಯ್ಕ ಹಲಗೇರಿ ಈತನಿಗೆ ಹಾಗೂ ತನಗೂ ಸಾದಾ ಗಾಯ ನೋವು ಪಡಿಸಿಕೊಂಡಿದ್ದು ಈ ಕುರಿತು ಪಿರ್ಯಾದಿ ಚೈತನ್ಯ ಗಣಪತಿ ಹೆಗಡೆ ನೀಡಿದ ದೂರಿನಂತೆ ಸಿದ್ದಾಪುರ ಠಾಣೆಯಲ್ಲಿ Crime no 129/2021 ಕಲಂ 279,337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ
