

ಸ್ವಂತ: ತಾಯಿ ಮತ್ತು ಸಹೋದರಿಯನ್ನು ನಾಡ ಬಂದೂಕಿನಿಂದ ಹೊಡೆದು ಹತ್ಯೆ ಮಾಡಿದ ದುರ್ಘಟನೆ ಸಿದ್ಧಾಪುರ ತಾಲೂಕಿನ ದೊಡ್ಮನೆ ಗ್ರಾ.ಪಂ. ಕುಡೇಗೋಡಿನಲ್ಲಿ ನಡೆದಿದೆ.
ಮೃತ ತಾಯಿಪಾರ್ವತಿ ಮತ್ತು ಸಹೋದರಿ ರಮ್ಯ ತನ್ನ ಇಷ್ಟಕ್ಕೆ ವಿರುದ್ಧವಾಗಿ ವರ್ತಿಸುತಿದ್ದಾರೆ ಎನ್ನುವ ಬೇಸರದಿಂದ ಬುಧವಾರ ಮಧ್ಯಾಹ್ನದ ನಂತರ ಈ ಕೊಲೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೊಲೆಗಾರ ಜಯವಂತ ಯಾನೆ ಮಂಜುನಾಥನ ಸೆರೆ ಹಿಡಿಯಲು ಪೊಲೀಸರು ಪ್ರಯತ್ನಿಸುತಿದ್ದಾರೆ. ಮದುವೆಯ ವಿಚಾರ, ಕೌಟುಂಬಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
