ಎದೆಯೊಳಗೆ ಗಂಗಾವಳಿ ಹರಿಯುತ್ತಿದ್ದಾಳೆ
ನನ್ನವ್ವ ಪ್ರಶಾಂತತೆಯ ಹೊದ್ದು ಮಲಗಿದ್ದಾಳೆ
ಶತಮಾನಗಳ ದಣಿವು ತಬ್ಬಿದಂತೆ ಎದೆಯೊಳಗೆ
ನನ್ನವ್ವ ಪ್ರೀತಿ ಸೆರಗ ಹೊದ್ದು ನಗುತ್ತಿದ್ದಾಳೆ
ನನ್ನಕ್ಕ ಸಹ್ಯಾದ್ರಿಯ ನೀರಡಿಕೆ ಹಿಂಗಿಸಿದ್ದಾಳೆ
ಯಾರನ್ನು ಹಂಗಿಸದೇ ನನ್ನನ್ನ ಹರಿಯುತ್ತಿದ್ದಾಳೆ
ನನ್ನಳೊಗೆ ಪ್ರೀತಿಯ ತುಂಬಿ…………..
ನೂರು ಊರಿಗೆ ನೂರು ಜನ್ಮಕೆ ಹಾಲಕ್ಕಿ ಒಕ್ಕಲಿಗೆ ಒಲವು ತುಂಬಿದ್ದಾಳೆ
ಸಾವಿರಾರು ವರ್ಷಗಳಿಂದ ನನ್ನವ್ವ ಗಂಗಾವಳಿ
ಅದಕ್ಕೆ ನನ್ನವ್ವ ಹರಿವ ದಡಗಳಲ್ಲಿ ಪ್ರೀತಿಯ ಹಾಡು ಹರಿಯುತ್ತಿದೆ
ಎಂದೂ ಬತ್ತದ ಜೀವ ಸೆಲೆಯಂತೆ ನನ್ನವ್ವ ಎದೆಯೊಳಗೆ ಹರಿಯುತ್ತಿದ್ದಾಳೆ ………..
ಹಾಗಾಗಿಯೇ ಪುಟ್ಟಗುಡಿಸಲುಗಳಲ್ಲಿ ಬೆಳಕಿನ ದೀಪ ಅರಳಿದೆ
ಅಂಗಳದಿ ಆಡುವ ಕಂದನ ತುಟಿಗಳಲ್ಲಿ ನಗು ಕುಣಿಯುತ್ತಿದೆ…. ibbani (ನಾಗರಾಜ್ ಹರಪನಹಳ್ಳಿ)