

ಸಿದ್ದಾಪುರ
ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷರನ್ನು ಕೂಡಲೇ ಸರ್ಕಾರ ನೇಮಕ ಮಾಡಬೇಕು.ಕರೋನಾ ಸಾಂಕ್ರಮಿಕ ರೋಗದಿಂದಾಗಿ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕಲೆಯನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ ಎಂದು ಸಿದ್ದಾಪುರದ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.
ತಾಲೂಕಿನ ದೊಡ್ಮನೆ ಎಂಜಿವಿವಿ ಪ್ರೌಢಶಾಲೆಯ ಸಭಾಂಗಣದಲ್ಲಿ ಅನಂತ ಯಕ್ಷಕಲಾ ಪ್ರತಿಷ್ಠಾನ ಸಿದ್ದಾಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ದೊಡ್ಮನೆ ಸಹಯೋಗದಲ್ಲಿ ಆಯೋಜಿಸಿದ್ದ ಯಕ್ಷೋ ತ್ಸವ-೨೦೨೧ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಯಕ್ಷೋತ್ಸವ ಉದ್ಘಾಟಿಸಿ ಮಾತನಾಡಿ ಈ ಹಿಂದೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ.ಎಂ.ಎ.ಹೆಗಡೆ ಅವರ ಕಾಲದಲ್ಲಿ ಯಕ್ಷಗಾನವನ್ನು ಮತ್ತಷ್ಟು ಬೆಳೆಸುವುದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
ಯಕ್ಷಗಾನದ ಮದ್ದಳೆಗಾರ ಶಂಕರ ಭಾಗ್ವತ್ ಯಲ್ಲಾಪುರ, ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಶಂಕರನಾರಾಯಣ ಹೆಗಡೆ ದಾನ್ಮಾಂವ, ಅನಂತ ಯಕ್ಷಕಲಾ ಪ್ರತಿಷ್ಠಾನದ ಕೇಶವ ಹೆಗಡೆ ಕೊಳಗಿ, ಎಂಜಿವಿವಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಫ್.ಎನ್.ಹರನಗಿರಿ ಉಪಸ್ಥಿತರಿದ್ದರು.
ನಂತರ ಹೊಸ್ತೋಟ ಮಂಜುನಾಥ ಭಾಗವತ ರಚಿಸಿದ ಸುರತ ಆಂಜನೇಯ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮಹೇಶ ಹೆಗಡೆ ಕೊಳಗಿ, ಶಂಕರ ಭಾಗ್ವತ್, ಗಣೇಶ ಭಟ್ಟ ಕೆರೆಕೈ ಸಹಕರಿಸಿದರು. ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ವಿ.ದತ್ತಮೂರ್ತಿ ಭಟ್ಟ , ಪ್ರಭಾಕರ ಹೆಗಡೆ ಹಣಜೀಬೈಲ್, ವೆಂಕಟೇಶ ಹೆಗಡೆ ಬೊಗರಿಮಕ್ಕಿ, ಅವಿನಾಶ ಹೆಗಡೆ ಕೊಪ್ಪ, ಪ್ರಣವ್ ಭಟ್ಟ ಶಿರಳಗಿ ವಿವಿಧ ಪಾತ್ರನಿರ್ವಹಿಸಿದರು.
ನಂತರ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ದೊಡ್ಮನೆ ಇವರಿಂದ ಮಾಗಧ ವಧೆ ಯಕ್ಷಗಾನ ಪ್ರದರ್ಶನಗೊಂಡಿತು. ಕೇಶವ ಹೆಗಡೆ ಕಿಬ್ಳೆ ಸ್ವಾಗತಿಸಿದರು. ಕೇಶವ ಕೊಳಗಿ ವಂದಿಸಿದರು.
ನಾಗರಾಜ ದೋಶೆಟ್ಟಿ ಯರಿಗೆ ಸನ್ಮಾನ
ಸಿದ್ದಾಪುರ –
ಪಟ್ಟಣದ ಗಣ್ಯ ಜವಳಿ ವರ್ತಕರು ಲಯನ್ಸ್ ಕ್ಲಬ್ ಸಿದ್ದಾಪುರದ ಮಾಜಿ ಅಧ್ಯಕ್ಷರು ಲಯನ್ಸ್ ಅಂತರಾಷ್ಟ್ರೀ ಯ ಸಂಸ್ಥೆ ೩೧೭ ಃ ಜಿಲ್ಲೆಯ ಮಾಜಿ ಕೋಶಾಧ್ಯಕ್ಷರೂ ಆದ ನಾಗರಾಜ ಎಂ. ದೋಶೆಟ್ಟಿ ಅವರಿಗೆ ಅರವತ್ತು ವರ್ಷ ತುಂಬಿದ ಪ್ರಯುಕ್ತ ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ ಹೂವಿನಮನೆ ವಹಿಸಿದ್ದರು. ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ ಅಭಿನಂದನ ಪರ ಮಾತುಗಳನ್ನು ಹೇಳಿ ನಾಗರಾಜ ದೋಶೆಟ್ಟಿ ಅವರ ಸಾಮಾಜಿಕ ಕಳಕಳಿ, ಸ್ನೇಹಪರ ಚಿಂತನೆಯಿಂದಾಗಿ ೬೦ ವಸಂತಗಳನ್ನು ಸಾರ್ಥಕ ಗೊಳಿಸಿದ್ದಾರೆ ಎಂದರು.
ಸ್ಥಳೀಯ ಟಿ.ಎಂ.ಎಸ್. ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ಮಾತನಾಡಿ ಅವರ ಸಜ್ಜನಿಕೆ ವಿಶ್ವಾಸದ ಗುಣಗಳಿಂದ ಅಪಾರ ಜನರನ್ನು ಗಳಿಸಿಕೊಂಡಿದ್ದಾರೆ ಎಂದರು.
ಜಿ.ಜಿ.ಹೆಗಡೆ ಬಾಳಗೋಡ, ಸಿ.ಎಸ್. ಗೌಡರ್ ಹೆಗ್ಗೋಡ್ಮನೆ, ಕೆ.ಜಿ. ನಾಗರಾಜ, ಸತೀಶ ಗೌಡರ್ ಹೆಗೋಡ್ಮನೆ, ಡಾ. ಪ್ರಭಾಶಂಕರ ಹೆಗಡೆ, ಸುನಂದಾ ಪ್ರಭಾಶಂಕರ ಹೆಗಡೆ, ನಾಗರಾಜ ಪಾಟೀಲ ಮಳವತ್ತಿ, ಕುಮಾರ ಗೌಡರ್ ಹೊಸೂರು, ಡಾ. ಸುರೇಶ ಪಂಡಿತ್, ಎಂ.ಆರ್. ಪಾಟೀಲ, ಆರ್.ಎಂ ಪಾಟೀಲ, ರಾಘವೇಂದ್ರ ಶಾಸ್ತಿç ಬಿಳಗಿ, ಕುಮಾರ ಗೌಡರ್ ದೊಡ್ಡಗದ್ದೆಬೈಲು, ರಾಘವೇಂದ್ರ ಭಟ್ ಸ್ವಸ್ತಿಕ್, ಜೀವನ ಪೈ ರವರು ಮಾತನಾಡಿ ಶುಭಕೋರಿದರು.
ತಮ್ಮನ್ನ ಅಭಿನಂದಿಸಿದ ನಾಗರಾಜ ಎಂ ದೋಶೆಟ್ಟಿ ಕೃತಜ್ಞತೆ ಹೇಳಿ. ಪರರ ಏಳಿಗೆಯನ್ನು ಕಂಡು ಸಂತೋಷ ಪಡುವುದೇ ದೊಡ್ಡ ಗುಣ. ಬಡವ ಶ್ರೀಮಂತ ಎನ್ನುವ ಭೇದ ಎಣಿಸದೇ ಪ್ರೀತಿಯಿಂದ ನಡೆದುಕೊಳ್ಳುವುದು ಬಲು ದೊಡ್ಡಗುಣ ಎಂದು ಹೇಳಿದರು.


