

ಹಣ,ದುರಾಸೆ ಚಟಗಳಿಗೆ ದಾಸನಾದ ವ್ಯಕ್ತಿ ಮನುಷ್ಯತ್ವ ಕಳೆದುಕೊಳ್ಳಬಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಸಿದ್ಧಾಪುರದ ಕುಡೇಗೋಡು ಹಸ್ಲರ್ ಸಮೂದಾಯದ ಮನೆಗಳಿರುವ ಚಿಕ್ಕ ಗ್ರಾಮ. ಈ ಗ್ರಾಮಕ್ಕೆ ಸಾರಾಯಿ, ಬೇಟೆ, ಕೂಲಿ ನಿತ್ಯ ಅವಶ್ಯಕತೆಗಳು. ಎಲ್ಲರ ಮನೆಯಂತೇ ಸಮೀಪದ ಜಮೀನ್ಧಾರರ ಮನೆಯ ಕೂಲಿ,ನರೇಗಾ ಕೆಲಸ ಅವಲಂಬಿಸಿದ್ದ ನಾರಾಯಣ ಹಸ್ಲರ್ ಕುಟುಂಬದಲ್ಲಿ ಪಾರ್ವತಿ, ನಾರಾಯಣ ದಂಪತಿಗಳಿಗೆ ಹುಟ್ಟಿದ ಮೊದಲ ಮಗ ಮಂಜುನಾಥ ಅಲಿಯಾಸ್ ಜಯವಂತ, ಈತನಿಗೆ ಇಬ್ಬರು ತಂಗಿಯಂದಿರು. ಮೊದಲ ಸಹೋದರಿ ಪದವಿ ಓದುತ್ತಿರುವ ಹೆಣ್ಣುಮಗಳಾದರೆ ಇನ್ನಬ್ಬಳು ಒಂಬತ್ತನೇ ತರಗತಿಯವಿದ್ಯಾರ್ಥಿನಿ.
ಅಣ್ಣ ಜಯವಂತ ಊರಿನಲ್ಲಿ ಮಂಗ ಗಳನ್ನು ಓಡಿಸುತ್ತಾ ತನ್ನ ಕರ್ಚಿಗೂ ತಾಯಿಯ ಬಳಿ ಕೈ ಒಡ್ಡುತಿದ್ದ. 24 ರ ಹರೆಯದ ಮಗನ ಮಂಗಾಟಗಳಿಗೆ ಸೊಪ್ಪುಹಾಕದ 42 ರ ತಾಯಿ ಪಾರ್ವತಿ ಕಲಿಕೆಯ ಅಗತ್ಯಕ್ಕಾಗಿ ಹಿರಿಯ ಮಗಳು ರಮ್ಯಾಳಿಗೆ ಮೊಬೈಲ್ ಕೊಡಿಸಲು ಸ್ವಸಹಾಯ ಸಂಘದಲ್ಲಿ ಸಾಲ ಮಾಡಿದ್ದಾಳೆ.
ತನಗೆ ಹಣ ನೀಡದ ತಾಯಿ ತಂಗಿ ರಮ್ಯಾಳಿಗೆ ಮೊಬೈಲ್ ಕೊಡಿಸಲು ಸಾಲ ಮಾಡಿದ್ದಾಳೆ ಎಂದು ಜಗಳ ತೆಗೆದಿದ್ದಾನೆ. ಊರಿನ ಮಂಗ ಕಾಯಲು ಕೊಟ್ಟಿದ್ದ ನಾಡ ಬಂದೂಕೊಂದು ಈ ಮಂಜುನಾಥನ ಕೈಯಲ್ಲಿತ್ತು.
ಅದು ಅಕ್ಟೋಬರ್ 13 ರ ಬುಧವಾರದ ಮಧ್ಯಾಹ್ನ ಮನೆಯಲ್ಲಿ ತಾಯಿಯೊಂದಿಗೆ ಸಹೋದರಿಯರು ಹಬ್ಬದ ತಯಾರಿಯಲ್ಲಿದ್ದಾರೆ. ವಾರದ ಬಿಡುವಿನ ಬುಧವಾರ ಮಹಾನವಮಿ ಹಬ್ಬದ ಕರಿ ಕೆಲಸಬೇರೆ. ಗಂಡಸರು ಮನೆಯಲ್ಲಿಲ್ಲ ಎಂದು ಅಡುಗೆಯನ್ನೂ ಮಾಡದೆ ಕೆಲಸದಲ್ಲಿ ಮಗ್ನರಾಗಿದ್ದಾರೆ. ಮಂಗಗಳನ್ನು ಓಡಿಸುತ್ತಾ ಚಿಕ್ಕ ಪುಟ್ಟ ಶಿಕಾರಿ ಮಾಡುತಿದ್ದ ಮಗರಾಯ ಮಧ್ಯಾಹ್ನ ಮನೆಗೆ ಬಂದಾಗ ಊಟ ಸಿದ್ಧವಾಗಿರಲಿಲ್ಲ ಸಿಟ್ಟು-ಅಸಮಾ ಧಾನದ ಕೈಗೆ ಕೋವಿ ಕೊಟ್ಟು ಟ್ರಿಗರ್ ನೂಕಿದ್ದಾನೆ. ಬಂದೂಕಿಗೇನು ಗೊತ್ತು ಈ ಹುಡುಗ ಗುರಿ ಮಾಡಿದ್ದು ತನ್ನ ತಾಯಿ-ಮತ್ತು ತಂಗಿಯೆಂದು ಒಂದೇ ಏಟಿಗೆ ಎರಡು ಜನರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಹೀಗೆ ಕುಡುಕ, ಬೇಜವಾಬ್ಧಾರಿ ಮಗನ ಎಡವಟ್ಟಿಗೆ ಹೆಣಗಳಾದ ತಾಯಿ-ಮಗಳು ಮಧ್ಯಾಹ್ನದ ಮೂರರ ಸುಮಾರಿಗೆ ಹತ್ಯೆಯಾಗಿದ್ದಾರೆ. ಈ ವಿಷಯ ಹೊರಗೆ ಬರುವುದರೊಳಗಾಗಿ ಊರಿನಲ್ಲೇ ಮಾತುಕತೆಯಾಗಿ ಅಂತ್ಯಸಂಸ್ಕಾರ ಮಾಡುವ ತೀರ್ಮಾನವಾದ ಸಮಯಕ್ಕೆ ಸಿದ್ಧಾಪುರ ಪೊಲೀಸರ ಆಗಮನವಾಗಿದೆ.
ಪಕ್ಕಾ ಮಾಹಿತಿ ತಿಳಿದು ಪೊಲೀಸರು ಕುಡೇಗೋಡಿಗೆ ಬರುವ ಸಮಯಕ್ಕೆ ಕತ್ತಲಾಗಿದೆ. ತಾಯಿ ಅಕ್ಕನನ್ನು ಕಳೆದುಕೊಂಡ 15 ವರ್ಷಗಳ ಸಹೋದರಿ, ಕೊಲೆಗಾರನ ತಂದೆ ನಾರಾಯಣ ಹಸ್ಲರ್ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ದುರಂತದ ಬಗ್ಗೆ ಪೊಲೀಸ್ ದೂರು ದಾಖಲಾಗಿ ಹೆಣಗಳನ್ನು ಪೊಸ್ಟ್ ಮಾರ್ಟಮ್, ಪ್ಲೊರೆನ್ಸಿಕ ವದಿಗಾಗಿ ದೂರದ ಜಿಲ್ಲಾ ಕೇಂದ್ರ ಕಾರವಾರಕ್ಕೆ ರವಾನಿಸಲಾಗಿದೆ. ತುಂಬುಕುಟುಂಬದ ತಾಯಿ-ಮಗಳು ಹತ್ಯೆಯಾಗಿ ಹೆಣವಾದರೆ ಮಗ ಜೈಲುಪಾಲಾಗಿದ್ದಾನೆ. ಈಗ ತಂದೆಯೊಂದಿಗೆ ಅಪ್ರಾಪ್ತ ಬಾಲಕಿ ದಿಕ್ಕುತೋಚದೆ ಕಂಗಾಲಾಗಿದ್ದಾಳೆ.
ಎಸ್ಪಿ ಭೇಟಿ- ದೊಡ್ಮನೆ ಗ್ರಾ.ಪಂ. ಕುಡೇಗೋಡಿಗೆ ಇಂದು ಕಾರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಕೊಲೆಗಾರನಿಗೆ ನಿಶ್ಚಿತ ಉದ್ದೇಶಗಳೇನೂ ಇರಲಿಲ್ಲ. ತಾಯಿ, ತಂಗಿಯನ್ನು ಹತ್ಯೆ ಮಾಡಿದ ಆರೋಪಿ ಮಂಜುನಾಥ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಸೂಕ್ತ ವಿಚಾರಣೆ,ತನಿಖೆ ನಂತರ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿ. ಅಕ್ರಮ, ಅವ್ಯವಹಾರಗಳ ತಡೆಯಲು ಸಾರ್ವಜನಿಕರ ಸಹಕಾರ ಬೇಕು.ಸ್ಥಳಿಯರ ನೆರವು, ಸಹಕಾರದಿಂದ ಇಂಥ ಅಪರಾಧಗಳನ್ನೂ ತಡೆಯಬಹುದು ಎಂದರು.


