

ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ
13 ಜನರ ತಂಡದಲ್ಲಿದ್ದ ನಾಲ್ವರು ಯುವಕರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾರೆ. ನಂತರ ಓರ್ವ ಈಜಿಕೊಂಡು ದಡಕ್ಕೆ ಬಂದಿದ್ದು, ಮತ್ತೆ ಮೂವರನ್ನು ಅಲ್ಲಿನ ಬೀಚ್ ಮೇಲ್ವಿಚಾರಕ ಹಾಗೂ ಲೈಫ್ ಗಾರ್ಡ್ ಅಡ್ವೆಂಚರ್ಸ್ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ..
ಭಟ್ಕಳ : ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಮುರುಡೇಶ್ವರ ಕಡಲ ತೀರದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ
ಲಾಕ್ಡೌನ್ ತೆರವು ಬಳಿಕ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಹೀಗೆ ಪ್ರವಾಸಕ್ಕೆಂದು ಶಿವಮೊಗ್ಗದಿಂದ ಬಂದ 13 ಜನರ ತಂಡ ಧರ್ಮಸ್ಥಳ, ಕೊಲ್ಲೂರು ಹಾಗೂ ವಿವಿಧ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶುಕ್ರವಾರ ಮುರುಡೇಶ್ವರಕ್ಕೆ ಬಂದಿದ್ದು, ಶಿವನ ದರ್ಶನ ಪಡೆದ ಬಳಿಕ ಮೋಜು-ಮಸ್ತಿಗೆ ಸಮುದ್ರಕ್ಕಿಳಿದಿದ್ದಾರೆ.

ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ..
ಈ ವೇಳೆ 13 ಜನರ ತಂಡದಲ್ಲಿದ್ದ ನಾಲ್ವರು ಯುವಕರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾರೆ. ನಂತರ ಓರ್ವ ಈಜಿಕೊಂಡು ದಡಕ್ಕೆ ಬಂದಿದ್ದು, ಮತ್ತೆ ಮೂವರನ್ನು ಅಲ್ಲಿನ ಬೀಚ್ ಮೇಲ್ವಿಚಾರಕ ಹಾಗೂ ಲೈಫ್ ಗಾರ್ಡ್ ಅಡ್ವೆಂಚರ್ಸ್ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ.
ಲೈಫ್ ಗಾರ್ಡ್ಗಳ ಸಮಯ ಪ್ರಜ್ಞೆಯಿಂದ ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರ ಕಾರ್ಯಕ್ಕೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಬೀಚ್ ಮೇಲ್ವಿಚಾರಕ ದತ್ತಾತ್ರೇಯ ಶೆಟ್ಟಿ, ಲೈಫ್ ಗಾರ್ಡ್ಗಳಾದ ಕೇಶವ, ಹನುಮಂತ, ವಿಘ್ನೇಶ್ವರ್, ರಾಮಚಂದ್ರ ಹಾಗೂ ಜಯರಾಮ ಭಾಗಿಯಾಗಿದ್ದರು. (kpc)

ಸಿದ್ದಾಪುರ: ತಾಲೂಕಿನಲ್ಲಿ ಜಾನುವಾರಗಳನ್ನು ಕಟ್ಟಿ ಹಾಕದೆ ಬಿಡಾಡಿಗಳಾಗಿ ಓಡಾಡಲು ಬಿಡುತ್ತಿರುವುದುರಿಂದ ಅಕ್ರಮವಾಗಿ ಕದ್ದು ಸಾಗಾಣಿಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಜಾನುವಾರುಗಳ ಮಾಲೀಕರು ಜಾನುವಾರುಗಳನ್ನು ಬಿಡದೆ ಕಟ್ಟಿಹಾಕಬೇಕು. ಜಾನುವಾರುಗಳಿಗೆ ಇನ್ಸೂರೆನ್ಸ್ ಮಾಡಿಸಬೇಕು. ಸಾಕಲು ಸಾಧ್ಯವಾಗದೆ ಇದ್ದವರು ಜಾನುವಾರುಗಳನ್ನು ಗೋಶಾಲೆಗೆ ನೀಡಬೇಕು. ದನಗಳನ್ನು
ಬಿಡಾಡಿಯಾಗಿ ಓಡಾಡಲು ಬಿಡುವುದು ತಪ್ಪು. ಅದ್ದರಿಂದ ಜಾನುವಾರು ಕಳ್ಳತನವಾಗಿದೆ ಎಂದು ದೂರು ನೀಡುವವರ ವಿರುದ್ದವೂ ಪ್ರಕರಣ ದಾಕಲಿಸಲಾಗುವುದು ಎಂದು ಸಿಪಿಐ ಕುಮಾರ ಕೆ ಹೇಳಿದರು.
- ದನವನ್ನು ವಾಹನದಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಸಾರ್ವಜನಿಕರ
ಸಹಾಯದಿಂದ ಪೊಲೀಸ್‌ರು ತಾಲೂಕಿನ ಬಿಳಗಿಯಲ್ಲಿ ಬುಧವಾರ ಬಂಧಿಸಿದ್ದಾರೆ.
ದನ ಸಾಗಾಟಕ್ಕೆ ಉಪಯೋಗಿಸಿದ್ದ ಟಾಟಾ ಜೀಪ್ ಹಾಗೂ ಆಕಳು ಮತ್ತು
ಒಂದು ಗಂಡು ಕರುವನ್ನು ವಶಕ್ಕೆ ಪಡೆಯಲಾಗಿದೆ.
ಶಿವಾನಂದ ಗಂಗಾಧರ ಗೌಡ ಬಿಳಗಿ (45) ಹಾಗೂ ಗೋವಿಂದ ಮಾಬ್ಲಾ ಗೌಡ ಕಿಲವಳ್ಳಿ(62) ಆರೋಪಿಗಳಾಗಿದ್ದಾರೆ. - ಪಟ್ಟಣದ ಜಾತಿಕಟ್ಟೆ ಸಮೀಪ ಗುರುವಾರ ರಾತ್ರಿ
ಗಂಟೆಯ ಸುಮಾರಿಗೆ ದನಕಳ್ಳತನ ಮಾಡಿ
ಪರಾರಿಯಾಗುತ್ತಿದ್ದ ಆರೋಪಿಗಳನ್ನು ಪಿಎಸ್‌ಐ
ಮಹಂತಪ್ಪ ಕುಂಬಾರ ನೇತೃತ್ವದ ಪೊಲೀಸ್ ತಂಡ
ಬೆನ್ನಟ್ಟಿ ನಾಲ್ಕು ಜನರನ್ನು ಹಿಡಿದಿದ್ದು ಇಬ್ಬರು
ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳು ಭದ್ರಾವತಿಯ ಸಲ್ಮಾನ್
ಅಶ್ವಾಖಾನ್(20)ಕಾಶೀಪ್ ಮಹಮ್ಮದ ರಫೀ(27)ಮುಬಾರಕ್
ಗೌಸ್ ಪೀರ್(24)ಜೈನುಲ್ಲಾ ಶಾಮೀರ(30) ಆಗಿದ್ದು
ಮಹಮ್ಮದ ವಸಿಂ ಹಾಗೂ ಜಮೀರ್ ಖಾನ ಪರಾರಿಯಾಗಿರುವ
ಆರೋಪಿಗಳಾಗಿದ್ದಾರೆ.
ತಾಲೂಕಿನಲ್ಲಿ ಇತ್ತೀಚೆಗೆ ದನಕಳ್ಳತನ ಹೆಚ್ಚಾಗುತ್ತಿದೆ.
ಕಳ್ಳರು ಬಿಡಾಡಿ ದನಗಳನ್ನು ಗುರಿಯಾಗಿಸಿಕೊಂಡು ರಾತ್ರಿ
ಸಮಯದಲ್ಲಿ ಕದ್ದು ವಾಹನದಲ್ಲಿ
ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ
ಆದ್ದರಿಂದ ದನಗಳ ಮಾಲಿಕರು ತಮ್ಮ ದನಗಳನ್ನು
ರಾತ್ರಿಸಮಯದಲ್ಲಿ ಓಡಾಡಲು ಬಿಡಬಾರದು ಕೊಟ್ಟಿಗೆಯಲ್ಲಿ ಕಟ್ಟುವ ವ್ಯವಸ್ಥೆ ಮಾಡಬೇಕು. ಹಾಗೇ ಜಾನುವಾರು ಗಳಿಗೆ ಇನ್ಸೂರನ್ಸ್ ಮಾಡಿಸಬೇಕು ಸಾಕಲು ಆಗದವರು
ಗೋಶಾಲೆಗೆ
ನೀಡಬೇಕು. ದನಕಳ್ಳತನವಾಗಿದೆ ಎಂದು ದೂರು ನೀಡುವವರ ವಿರುದ್ದವೂ ಪ್ರಕರಣ
ದಾಕಲಿಸಲಾಗುವುದು. ಬಿಡಾಡಿ
ದನಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು
ಪಪಂ ಹಾಗೂ ಗ್ರಾಪಂಗೆ ತಿಳಿಸಲಾಗಿದೆ.
ಸಾರ್ವಜನಿಕ ರು ತಾಲೂಕಿನಲ್ಲಿ ಅಕ್ರಮ ಬಂದೂಕು ಇಟ್ಟುಕೊಂಡಿರುವವರ ಬಗ್ಗೆ ಮಾಹಿತಿ ನೀಡಬೇಕು. ಅಲ್ಲದೇ
ಅಕ್ರಮ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಯು ಮಾಹಿತಿ ನೀಡಬೇಕು ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಸಾರ್ವಜನಿಕರು
ಸಹಕರಿಸಿದರೆ ಮಾತ್ರ ತಾಲ್ಲೂಕಿನಲ್ಲಿ ಅಪರಾಧ ಪ್ರಕರಣವನ್ನು
ತಡೆಯಲು ಸಾಧ್ಯ ವಾಗುತ್ತದೆ ಎಂದು ಸಿಪಿಐ ಕುಮಾರ ಕೆ. ತಿಳಿಸಿದ್ದಾರೆ.
