

ಜನತಾದಳ ಜಾತ್ಯಾತೀತ ಪಕ್ಷದ ಕಾರ್ಯಕರ್ತರು ಕೆಲಸಮಾಡುತಿದ್ದಾರೆ. ರಾಜ್ಯ ನಾಯಕತ್ವ ಪ್ರಾದೇಶಿಕ ಹಿತಾಸಕ್ತಿಗೆ ಅನುಗುಣವಾಗಿ ಶ್ರಮಿಸುತ್ತಿದೆ. ಇಂಥ ಸಮಯದಲ್ಲಿ ಸ್ಥಳಿಯ ನಾಯಕರು ಕಾರ್ಯಕರ್ತರಿಗೆ ಸ್ಫಂದಿಸದೆ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡುವುದು ಪಕ್ಷ,ನಾಯಕತ್ವದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಜೆ.ಡಿ.ಎಸ್. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಇಬ್ರಾಹಿಂ ಸಾಬ್ ವಿಷಾದಿಸಿದ್ದಾರೆ. ಸಿದ್ಧಾಪುರ ಲಯನ್ಸ್ ಬಾಲಭವನದಲ್ಲಿ ನಡೆದ ಜೆ.ಡಿ.ಎಸ್. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಸಮಾವೇಶದಲ್ಲಿ ಪ್ರಾಸ್ಥಾವಿಕ ಭಾಷಣ ಮಾಡಿದ ಅವರು ರಾಜ್ಯಮಟ್ಟದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಗಂಗಣ್ಣ, ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಸೇರಿದ ಅನೇಕರು ಪಕ್ಷದ ಸಂಘಟನೆ,ಕಾರ್ಯಕರ್ತರ ಭಾವನೆಗಳಿಗೆ ಸ್ಫಂದಿಸುತಿದ್ದಾರೆ ಆದರೆ ಕೆಲವು ನಾಯಕರು ಕಾರ್ಯಕರ್ತರಿಗೆ ಸ್ಪಂದಿಸದೆ ನಾಯಕರಾಗಲು ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದರು.
ಅಕ್ರಂ ಕುಮಟಾ, ಬಿ.ವಿ.ಭಂಡಾರಿ ಹೊನ್ನಾವರ,ಜಿ.ಕೆ.ಪಟಗಾರ ರಜಾಕ್ ಶಿರಸಿ ಸೇರಿದಂತೆ ಕೆಲವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ,ಪಕ್ಷದ ಉ.ಕ. ಉಸ್ತುವಾರಿ ಎಂ. ಗಂಗಣ್ಣ ಮಾತನಾಡಿ ಪಕ್ಷ-ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯಗಳು ಸಹಜ ಆದರೆ ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಹೊಂದಾಣಿಕೆಯಿಂದ ಬೆರೆತು ರಾಷ್ಟ್ರೀಯ ಪಕ್ಷಗಳ ಏಕಸ್ವಾಮ್ಯತ್ವದ ವಿರುದ್ಧ ಶ್ರಮಿಸುತ್ತಾ ಜನರಿಗೆ ನೆರವಾಗುವ ಜೆ.ಡಿ.ಎಸ್. ಅಧಿಕಾರಕ್ಕೆ ತರುವ ಹಿನ್ನೆಲೆಯಲ್ಲಿ ಶ್ರಮಿಸಬೇಕು ಎಂದರು.
ಜೆಡಿಎಸ್ ಸೇರ್ಪಡೆಗೂ ಮುನ್ನ ಸಮುದಾಯ ಸದಸ್ಯರ ಮನಸ್ಥಿತಿ ಅರಿಯಲು ಮುಂದಾದ ಸಿಎಂ ಇಬ್ರಾಹಿಂ!
ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್ ಎಂಎಲ್’ಸಿ ಸಿಎಂ ಇಬ್ರಾಹಿಂ ಅವರು, ಇದಕ್ಕೂ ಮುನ್ನು ಸಮುದಾಯ ಸದಸ್ಯರ ಮನಸ್ಥಿತಿ ಅರಿಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್ ಎಂಎಲ್’ಸಿ ಸಿಎಂ ಇಬ್ರಾಹಿಂ ಅವರು, ಇದಕ್ಕೂ ಮುನ್ನು ಸಮುದಾಯ ಸದಸ್ಯರ ಮನಸ್ಥಿತಿ ಅರಿಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಇದಕ್ಕಾಗಿ ಸಮುದಾಯದ ಸದಸ್ಯರ ನಡುವೆ ತಮ್ಮ ಜನರನ್ನು ನಿಲ್ಲಿಸಿ, ಅವರ ಮನಸ್ಥಿತಿ ಅರಿಯುವ ಪ್ರಯತ್ನ ಮಾಡುತ್ತಿದ್ದು, ನಂತರ ಪ್ರಾದೇಶಿಕ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ವರದಿಗಳು ತಿಳಿಸಿವೆ.
ದೇಶದ ಪ್ರಧಾನಿಯಾದ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆಗೆ ಹೆಚ್.ಡಿ.ದೇವೇಗೌಡ ಅವರು ಪಾತ್ರರಾಗಿದ್ದು, ದೇವೇಗೌಡ ನೇತೃತ್ವದ ಕೇಂದ್ರದ ಯುಡಿಎಫ್ ಸರ್ಕಾರದಲ್ಲಿ ಇಬ್ರಾಹಿಂ ಅವರು, 11 ತಿಂಗಳ ಕಾಲ ನಾಗರಿಕ ವಿಮಾನಯಾನ ಖಾತೆಯನ್ನು ನಿರ್ವಹಿಸಿದ್ದರು.
ತುಮಕೂರಿನಲ್ಲಿ ತಮ್ಮ ಸಮುದಾಯದ ಸದಸ್ಯರೊಂದಿಗೆ ನಿನ್ನೆಯಷ್ಟೇ ಇಬ್ರಾಹಿಂ ಅವರು ಸಭೆ ನಡೆಸಿ ಮಾತುಕತೆ ನಡೆಸಿದ್ದರು.
ಈ ವೇಳೆ ಅಲ್ಪಸಂಖ್ಯಾತರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ನಾನು ಕೆಲ ಮೂಲಭೂತ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡಿದ್ದೆ. ಆದರೆ, ಇದಕ್ಕೆ ಕೆಪಿಸಿಸಿ ಯಾವುದೇ ರೀತಿಯ ಉತ್ತರವನ್ನು ನೀಡಲಿಲ್ಲ. ಅಲ್ಪಸಂಖ್ಯಾತ ನಾಯಕರೇಕೆ ಕೆಪಿಸಿಸಿ ಅಧ್ಯಕ್ಷರಾಗಬಾರದು? ಸ್ವಾತಂತ್ರ್ಯ ಬಂದಾಗಿನಿಂದಲೂ ಈ ವರೆಗೂ ನಮ್ಮ ಸಮುದಾಯದ ಯಾವುದೇ ನಾಯಕನಿಗೂ ಆ ಸ್ಥಾನವನ್ನು ನೀಡಿಲ್ಲ. ಕನಿಷ್ಠ, ಸಮುದಾಯದ ಒಬ್ಬ ನಾಯಕನನ್ನು ಉಪ ಮುಖ್ಯಮಂತ್ರಿಯಾಗಿ ಘೋಷಿಸಿ ಎಂದು ಕೇಳಿದ್ದೆ. ಆದರೆ, ಅದಾವುದಕ್ಕೂ ಉತ್ತರ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2023ರ ಜನವರಿ ವೇಳೆಗೆ ಖಾಲಿಯಿರಲಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಸ್ಥಾನಕ್ಕೆ ಇಬ್ರಾಹಿಂ ಅವರು ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಅದಕ್ಕಿಂತಲೂ ದೊಡ್ಡ ಸ್ಥಾನ ಪಕ್ಷದ ಅಧ್ಯಕ್ಷ ಸ್ಥಾನವನ್ನೇ ನೀಡುವ ಆಫರ್ ನೀಡಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ 2023 ವಿಧಾನಸಬೆ ಚುನಾವಣೆಗೂ ಮುನ್ನ ಇಬ್ರಾಹಿಂ ಅವರು ಜೆಡಿಎಸ್ ಪಕ್ಷ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಏತನ್ಮಧ್ಯೆ, ಇಬ್ರಾಹಿಂ ಅಲ್ಪಸಂಖ್ಯಾತರ ವೇದಿಕೆಯನ್ನು ಆರಂಭಿಸಲು ಸಜ್ಜಾಗಿದ್ದಾರೆಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತ ಸಮುದಾಯದ ಕೆಲವು ಉನ್ನತ ನಾಯಕರು ಮತ್ತು ವಿಚಾರವಾದಿಗಳು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದಲ್ಲಿ, ಪಕ್ಷದಿಂದ ಜೆಡಿಎಸ್ ಗೆ ಮತ್ತು ಎಐಎಂಐಎಂನಂತಹ ಇತರ ಪಕ್ಷಗಳಿಗೆ ಸೇರ್ಪಡೆಗೊಳ್ಳಲು ಮುಂದಾಗಿರುವವರ ಕುರಿತು ಪರಿಶೀಲನೆ ನಡೆಸಲು ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಆದರೆ, ಈ ಕುರಿತು ಸುದ್ದಿಗಳನ್ನು ಕಾಂಗ್ರೆಸ್ ನಾಯಕ ರಿಜ್ವಾನ್ ಹರ್ಷದ್ ಅವರು ತಿರಸ್ಕರಿಸಿದ್ದಾರೆ. ಇತರೆ ಪಕ್ಷಗಳಿಗೆ ಸೇರ್ಪಡೆಗೊಳ್ಳುವ ಪರಿಸ್ಥಿತಿಗಳು ಎದುರಾಗಿದ್ದೇ ಆದರೆ, ಪರಿಸ್ಥಿತಿ ಎದುರಿಸಲು ಒಬ್ಬ ಸಾಮೂಹಿಕ ನಾಯಕ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ. (kpc)
https://samajamukhi.net/2021/10/14/ibbani-a-harpanahalli-poem/
ಸಿದ್ದಾಪುರ ತಾಲೂಕಿನ ಕುಡೆಗೋಡು ಗ್ರಾಮದಲ್ಲಿ ಒಂಟಿ ನಳಿಕೆಯ ನಾಡ ಬಂದೂಕು ಪತ್ತೆ ಆರೋಪಿ ಬಂಧನ
ಆರೋಪಿತನಾದ ಬಲವಿಂದ್ರ ತಂದೆ ತಿಮ್ಮ ಹಸ್ಲರ 24 ವರ್ಷ ವರ್ಷ ವೃತ್ತಿ ಕೂಲಿ, ಸಾ: ಕುಡೇಗೋಡು ಸಿದ್ದಾಪುರ ಈತನು ಸಿದ್ದಾಪುರ ತಾಲೂಕಿನ ಕುಡೆಗೋಡು ಗ್ರಾಮದಲ್ಲಿ ಒಂಟಿ ನಳಿಕೆಯ ನಾಡ ಬಂದೂಕನ್ನು ಯಾವುದೇ ಅಧಿಕೃತ ಪರವಾನಗೆ ಇಲ್ಲದೆ ಅನಧಿಕೃತವಾಗಿ ತನ್ನ ಮನೆಯ ಪಕ್ಕದಲ್ಲಿ ಕಟ್ಟಿಗೆ ಶೇಖರಿಸಿಡಲು ಮಾಡಿರುವ ಶೆಡ್ಡಿನಲ್ಲಿ ಇಟ್ಟುಕೊಂಡಿದ್ದಾಗ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐ ಸಿಬ್ಬಂದಿ ಗಳೊಂದಿಗೆ ದಾಳಿಮಾಡಿ
ಒಂಟಿ ನಳಿಕೆಯ ನಾಡ ಬಂದೂಕಿನೊಂದಿಗೆ ಆರೋಪಿತರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
