ಮಾದ್ಲಮನೆ ಸಾಯಿ ದೇವಾಲಯಕ್ಕೆ ಬಡಿದ ಸಿಡಿಲು,ಹಾನಿ

ಸಿದ್ಧಾಪುರ ಕಲಕೈ ಗ್ರಾಮದ ಮಾದ್ಲ ಮನೆ ಮಜರೆಯ ಶ್ರೀ ಸಾಯಿಮಂದಿರ ದೇವಸ್ಥಾನಕ್ಕೆ ಸಿಡಿಲು ಬಡಿದು, ದೇವಸ್ಥಾನದ ಮೈಕ್ ಸೆಟ್, ದೇವಸ್ಥಾನದ ವಿದ್ಯುತ್ ಸಂಪರ್ಕ& ಪಾತ್ರೆಗಳು ಹಾಳಾಗಿವೆ. ದೇವಸ್ಥಾನದ ಗೋಡೆ ಬಿರುಕು ಬಿಟ್ಟಿದ್ದು . ಇದರಿಂದ ಅಂದಾಜು ಹಾನಿ 1,50,000 ರೂ ಆಗಿದೆ. ಈ ಘಟನೆಯಿಂದ ಯಾವುದೇ ಜೀವ ಹಾನಿ ಸಂಭವಿಸಿರುವುದಿಲ್ಲ. ಈ ಘಟನೆ 21/10/2021ರಂದು(ಗುರುವಾರ) ಸಂಜೆ 4-45ರ ಹೊತ್ತಿಗೆ ಸಂಭವಿಸಿದೆ.

ದೇಶದಲ್ಲಿ ದೊಡ್ಡದಾದ ಹೊಸ ಕೋವಿಡ್ ಅಲೆ ಬರುವ ಸಾಧ್ಯತೆಯಿಲ್ಲ- ತಜ್ಞರ ಹೇಳಿಕೆ

ಕೋವಿಡ್-2ನೇ ಅಲೆಯಂತಹ ವಿನಾಶಕಾರಿ ಅಲೆ ದೇಶದಲ್ಲಿ ಬರುವ ಸಾಧ್ಯತೆಯಿಲ್ಲ, ಆದರೆ,  ಪ್ರಕರಣಗಳ ಸಂಖ್ಯೆ ಕಡಿಮೆಯಾದ ಮಾತ್ರಕ್ಕೆ ಸಾಂಕ್ರಾಮಿಕ ಈಗ ಅಂತ್ಯವಾಯಿತು ಅಂತಾ ಭಾವಿಸುವುದಕ್ಕೆ ಅರ್ಥವಿಲ್ಲ ಎಂದು ಅನೇಕ ತಜ್ಞರು ಶುಕ್ರವಾರ ಹೇಳಿದ್ದಾರೆ.

Covid-19_Casual_Images1

ನವದೆಹಲಿ: ಕೋವಿಡ್-2ನೇ ಅಲೆಯಂತಹ ವಿನಾಶಕಾರಿ ಅಲೆ ದೇಶದಲ್ಲಿ ಬರುವ ಸಾಧ್ಯತೆಯಿಲ್ಲ, ಆದರೆ,  ಪ್ರಕರಣಗಳ ಸಂಖ್ಯೆ ಕಡಿಮೆಯಾದ ಮಾತ್ರಕ್ಕೆ ಸಾಂಕ್ರಾಮಿಕ ಈಗ ಅಂತ್ಯವಾಯಿತು ಅಂತಾ ಭಾವಿಸುವುದಕ್ಕೆ ಅರ್ಥವಿಲ್ಲ ಎಂದು ಅನೇಕ ತಜ್ಞರು ಶುಕ್ರವಾರ ಹೇಳಿದ್ದಾರೆ.

ದೀಪಾವಳಿ ಹಬ್ಬ ಮುಂದಿರುವಂತೆ ಪ್ರಕರಣಗಳ ಸಂಖ್ಯೆ ಹೆಚ್ಚಳದ ಮುನ್ನೆಚ್ಚರಿಕೆಯೊಂದಿಗೆ ಭರವಸೆ ನೀಡಿರುವ ತಜ್ಞರು, ಕೋವಿಡ್ ಗ್ರಾಫ್ ಇಳಿಕೆ ಕೇವಲ ಚಿತ್ರದ ಭಾಗವಾಗಿದೆ. ಮರಣ ಪ್ರಮಾಣದಂತಹ ಅಂಶಗಳನ್ನು ನೋಡಿದರೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡುವಿಕೆಯ ಅಗತ್ಯವಿದೆ. ಉದಾಹರಣೆಗೆ ಇಂಗ್ಲೆಂಡ್ ನಂತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


 

ದೇಶದಲ್ಲಿ 100 ಕೋಟಿ ಗೂ ಅಧಿಕ ಡೋಸ್  ಕೋವಿಡ್ ಲಸಿಕೆ ನೀಡಿಕೆ ಸಾಧನೆ ನಂತರ ಹೇಳಿಕೆ ನೀಡಿರುವ ವೈರಾಣು ಶಾಸ್ತ್ರಜ್ಞ ಶಾಹೀದ್ ಜಮೀಲ್, ಲಸಿಕೆ ಪ್ರಮಾಣದಲ್ಲಿ ಗಮನಾರ್ಹ ರೀತಿಯಲ್ಲಿ ಪ್ರಗತಿಯಾಗಿದೆ ಆದರೆ, ಇದು ಮತ್ತಷ್ಟು ಹೆಚ್ಚಾಗಬೇಕಾದ ಅಗತ್ಯಿವಿದೆ ಎಂದಿದ್ದಾರೆ.

ಇನ್ನೂ ಸಾಂಕ್ರಾಮಿಕ ಅಂತ್ಯಗೊಂಡ ಹಂತದಲ್ಲಿರುವುದಾಗಿ ನಾನು ಖಚಿತಪಡಿಸುವುದಿಲ್ಲ, 100 ಕೋಟಿ ಡೋಸ್ ಲಸಿಕೆ ನೀಡಿಕೆಯಲ್ಲಿ ಸಾಧನೆಗಾಗಿ ಸಂಭ್ರಮಿಸುತ್ತಿದ್ದು,ಇನ್ನೂ ಕೆಲವು ದೂರ ತಲುಪಬೇಕಾಗಿದೆ. ಸಾಂಕ್ರಾಮಿಕ ಅಂತ್ಯದತ್ತ ಸಾಗುತ್ತಿದ್ದೇವೆ. ಆದರೆ, ಇನ್ನೂ ನಿಯಂತ್ರಣವಾಗಿಲ್ಲ ಎಂದು ಹರಿಯಾಣದ ಅಶೋಕ ವಿಶ್ವವಿದ್ಯಾನಿಲಯದ ಅತಿಥಿ ಪ್ರೊಫೆಸರ್ ಜಮೀಲ್ ಹೇಳಿದ್ದಾರೆ.

ದೇಶದ ಕೆಲವು ಭಾಗಗಳಲ್ಲಿ ಸಾಂಕ್ರಾಮಿಕ ಅಂತ್ಯದ ಸನ್ನಿಹದಲ್ಲಿರುವ  ಸಾಧ್ಯತೆಯಿದೆ, ಆದರೆ ಇದನ್ನು ದೃಢೀಕರಿಸಲು ಅಗತ್ಯವಾದ ದತ್ತಾಂಶಗಳು ಸುಲಭವಾಗಿ ಲಭ್ಯವಿಲ್ಲ ಎಂದು ಭಾರತದ ಕೋವಿಡ್ ಗ್ರಾಫ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಯುಕೆಯ  ಮಿಡ್ಲ್‌ಸೆಕ್ಸ್ ವಿಶ್ವವಿದ್ಯಾಲಯದ ಗಣಿತದ ಹಿರಿಯ ಉಪನ್ಯಾಸಕ ಮುರಾದ್ ಬಣಜಿ ಹೇಳುತ್ತಾರೆ.  

ಉದಾಹರಣೆಗೆ ಲಸಿಕೆ ಪಡೆದ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ ಅಥವಾ ಅದಕ್ಕೂ ಮುಂಚಿನ ಸೋಂಕು  ಸೇರಿದಂತೆ ಹಲವಾರು ಅಂಶಗಳು ತಮಗೆ ತಿಳಿದಿಲ್ಲ, ಕೋವಿಡ್ -19 ಯಾವಾಗ ನಿರ್ಮೂಲನೆಯಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಇನ್ನೂ ಅದು ಹರಡದಂತೆ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದು ಬಜಣಿ ತಿಳಿಸಿದ್ದಾರೆ. 

“ಕೋವಿಡ್ -19 ದೇಶಕ್ಕೆ ಭವಿಷ್ಯದಲ್ಲಿ ಮಹತ್ವದ ಬೆದರಿಕೆಯನ್ನುಂಟುಮಾಡುತ್ತದೆಯೇ? ಎಂಬುದನ್ನು ನಿರ್ಧರಿಸಲು ನಾವು ಇನ್ನೂ ಎರಡು ತಿಂಗಳು ಕಾಯಬೇಕು ಎಂದು ನಾನು ನಂಬುತ್ತೇನೆ  ಎಂದು ವಾಷಿಂಗ್ಟನ್‌ನ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್  ಅಂಡ್ ಪಾಲಿಸಿಯ ನಿರ್ದೇಶಕ ಲಕ್ಷ್ಮಿನಾರಾಯಣ ಅವರು ಪಿಟಿಐ ಸುದ್ದಿಸಂಸ್ಥೆಗೆ ಇಮೇಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *