ಡೆಲ್ಟಾಗಿಂತಲೂ ವೇಗವಾಗಿ ಹರಡುವ ಕೊರೋನಾದ ಹೊಸ ರೂಪಾಂತರಿ ಎವೈ.4.2 ಪತ್ತೆ: ಭಾರತದಲ್ಲಿ ಹೈ ಅಲರ್ಟ್
ಸಾರ್ಸ್ ಸಿಒವಿ2 ನ ಡೆಲ್ಟಾ ರೂಪಾಂತರಿಯಲ್ಲಿ ಹೊಸ ತಳಿ ಬ್ರಿಟನ್ ಹಾಗೂ ಅಮೆರಿಕದಲ್ಲಿ ಪತ್ತೆಯಾಗಿದ್ದು, ಭಾರತದ ಕೋವಿಡ್-19 ಜಿನೋಮಿಕ್ ಕಣ್ಗಾವಲು ಯೋಜನೆ ಹೈ ಅಲರ್ಟ್ ನಲ್ಲಿದೆ.
ಸಾಹಿತ್ಯ & ಸಾಂಸ್ಕೃತಿಕ ಅಭಿವೃದ್ಧಿ ಮಹತ್ವ
ಸಿದ್ದಾಪುರ : ಸೌಲಭ್ಯಗಳ ಅಭಿವೃದ್ಧಿಯಾದರೆ ಮಾತ್ರ ಸಮಾಜ ಅಭಿವೃದ್ಧಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಸಮಾಜದ ಬೆಳವಣಿಗೆಯಲ್ಲಿ ಸಾಂಸ್ಕೃ ತಿಕ ಹಾಗೂ ಸಾಹಿತ್ಯಿಕ ಸಮೃದ್ಧಿಯ ಅಂಶಗಳೂ ಪ್ರಮುಖವಾಗುತ್ತದೆ ಎಂದು ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ಪಟ್ಟರು.
ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡವು, ಬೆಂಗಳೂರಿನ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ, ಸ್ಥಳೀಯ ಸಂಸ್ಕೃತಿ ಸಂಪದದ ಸಹಯೋಗದಲ್ಲಿ ಪಟ್ಟಣದ ಶಂಕರ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ‘ನಾಟ್ಯಶ್ರೀ ಯಕ್ಷ ಹೃದಯಾಂತರಂಗ-2021’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಾಂಸ್ಕೃತಿಕವಾಗಿಯೂ ನಾಡನ್ನು ಬೆಳೆಸುವ ಪ್ರಯತ್ನ ನಡೆಯಬೇಕು. ನಮ್ಮ ಸುಸಂಸ್ಕೃತವಾದ ಸಂಸ್ಕಾರ ಬೆಳೆಸುವಲ್ಲಿ ಯಕ್ಷಗಾನದ ಕೊಡುಗೆ ದೊಡ್ಡದುʼ ಎಂದರು.
ಯಲ್ಲಾಪುರದ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ‘ ಯಕ್ಷಗಾನದ ಸಂಘಟಕರ ಬಗ್ಗೆ ಕೂಡ ವಿಚಾರ ಸಂಕಿರಣಗಳು ನಡೆಯಬೇಕು. ಸಂಘಟಕ ಇಲ್ಲದಿದ್ದರೆ ಕಲೆ, ಕಲಾವಿದ ಇರಲು ಸಾಧ್ಯವಿಲ್ಲʼ ಎಂದರು.
ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿಯ ಮಿರ್ಜಾನ ಶಾಖಾ ಮಠದ ನಿಶ್ಚಲಾನಂದ ಸ್ವಾಮೀಜಿ,ವೈದ್ಯ ಡಾ. ಎಂ.ಕೆ.ಭಟ್ಟ ಸೊರಬ ಮೊದಲಾದವರು ಇದ್ದರು.
ಪ್ರಶಸ್ತಿ ಪ್ರದಾನ : ಶ್ರೀಪಾದ ಜೋಷಿ ಬಾಡಲಕೊಪ್ಪ(ಹೊಸ್ತೋಟ ಮಂಜುನಾಥ ಭಾಗವತರ ಸ್ಮರಣೆಯಲ್ಲಿ ಯಕ್ಷ ಬಸವ ಪ್ರಶಸ್ತಿ), ಮಂಜುನಾಥ ಗೌಡ ಹಕ್ಕಲಕೇರಿ(ಎಂ.ಎ.ಹೆಗಡೆ ಸ್ಮರಣೆಯಲ್ಲಿ ಯಕ್ಷ ಭೈರವ ಪ್ರಶಸ್ತಿ), ವಿದ್ವಾನ್ ಗಣಪತಿ ಭಟ್ ಮಟ್ಟೆಗದ್ದೆ( ಮಹಾಬಲೇಶ್ವರ ಭಟ್ಟ ದಾಸನಹುಡಿಲು ಸ್ಮರಣೆಯಲ್ಲಿ ವಿದ್ವತ್ ಸನ್ಮಾನ), ವಿದ್ವಾನ್ ಸೂರ್ಯನಾರಾಯಣ ಶಾಸ್ತ್ರಿ ನೆಲೆಮಾವು(ಗುರುವಂದನೆ), ಎಂ.ಚಂದ್ರಶೇಖರ ಹೆಬ್ಬಾರ(ಮಿತ್ರ ಕೃತಜ್ಞತೆ) ಅವರನ್ನು ಸನ್ಮಾನಿಸಲಾಯಿತು. ಗಣಪತಿ ಭಟ್ಟ ಮಟ್ಟೆಗದ್ದೆ ಅನಿಸಿಕೆ ವ್ಯಕ್ತಪಡಿಸಿದರು.
ನಾಟ್ಯಶ್ರೀ ಕಲಾತಂಡದ ಸಂಚಾಲಕ ವಿದ್ವಾನ್ ದತ್ತಮೂರ್ತಿ ಭಟ್ಟ ಸ್ವಾಗತಿಸಿದರು. ಎಂ.ಕೆ.ನಾಯ್ಕ ನಿರೂಪಿಸಿದರು.
ಸಂಸ್ಕೃತಿ ಪ್ರತಿಪಾದನೆ-
ಸಿದ್ದಾಪುರ : ನಮಗೆ ನಮ್ಮ ಸಂಸ್ಕೃ ತಿಯೇ ಆಶ್ರಯ ನೀಡುತ್ತದೆ. ನಮಗೆ ಪಾಶ್ಚಾತ್ಯ ಸಂಸ್ಕೃತಿಯ ಅರಿವು ನಮಗೆ ಸಾಕು. ಅದನ್ನೇ ಅನುಸರಿಸಬೇಕಾಗಿಲ್ಲ ಎಂದು ಶಿವಮೊಗ್ಗ ಬಸವಕೇಂದ್ರದ ಡಾ.ಬಸವಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡದ ಆಶ್ರಯದಲ್ಲಿ, ಬೆಂಗಳೂರಿನ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಹಾಗೂ ಸಂಸ್ಕೃತಿ ಸಂಪದದ ಸಹಯೋಗದಲ್ಲಿ, ದೀವಗಿಯ ರಾಮಾನಂದ ಅವಧೂತರು, ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಹಾಗೂ ವಿದ್ವಾಂಸ ಎಂ.ಎ.ಹೆಗಡೆ ದಂಟ್ಕಲ್ ಅವರ ಸ್ಮರಣೆಯಲ್ಲಿ, ಪಟ್ಟಣದ ಶಂಕರ ಮಠದಲ್ಲಿ ಏರ್ಪಡಿಸಿರುವ ‘ನಾಟ್ಯಶ್ರೀ ಯಕ್ಷ ಹೃದಯಾಂತರಂಗ-2021ʼ ಕಾರ್ಯಕ್ರಮವನ್ನುಮಂಗಳವಾರ ಉದ್ಘಾಟಿಸಿ ಅವರುಮಾತನಾಡಿದರು.
ಮೈಲಾರ ಕ್ಷೇತ್ರದ ಧರ್ಮಕರ್ತ ಗುರೂಜಿ ವೆಂಕಪ್ಪಯ್ಯ ಒಡೆಯರ್ ಸ್ವಾಮೀಜಿ ಮಾತನಾಡಿ, ಎಲ್ಲ ಗಾನಗಳಲ್ಲಿ ಯಕ್ಷಗಾನವೇ ಶ್ರೇಷ್ಟವಾದುದು ಎಂದರು.
ಯಲ್ಲಾಪುರದ ಸಂಕಲ್ಪ ಸಂಸ್ಥೆಯ ಮುಖ್ಯಸ್ಥರಾದ ಪ್ರಮೋದ ಹೆಗಡೆ, ಯಕ್ಷಗಾನ ಇಂದಿನ ಯುವಜನರಿಗೆ ಇಷ್ಟವಾಗುತ್ತಿದೆ. ನಗರ ಸೇರಿರುವ ಯುವಕರು ಈಗಿನ ಪರಿಸ್ಥಿತಿಯಲ್ಲಿ ಹಳ್ಳಿಗಳಿಗೆ ಬಂದು, ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರ ಯಕ್ಷಗಾನದ ಪ್ರೀತಿ ಇಲ್ಲಿ ಪ್ರಕಟವಾಗುತ್ತಿದ್ದು, ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನಗಳಿಗೆ ಬರುತ್ತಿದ್ದಾರೆ. ಇದು ಬದಲಾಗಿರುವ ಮುಂದಿನ ಪೀಳಿಗೆ ಕೂಡ ಯಕ್ಷಗಾನವನ್ನು ಬಿಡುವುದಿಲ್ಲ ಎಂಬುದನ್ನು ತೋರಿಸುತ್ತದೆ ಎಂದರು.
ತಾಲ್ಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಿದ್ದರು.ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಡಾ. ಎಂ.ಪ್ರಭಾಕರ ಜೋಷಿ, ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಮಾತನಾಡಿದರು. ʼಕೋವಿದʼಪುಸ್ತಕಬಿಡುಗಡೆಗೊಳಿಸಲಾಯಿತು.
ಕೇಶವ ಹೆಗಡೆ ಕೊಳಗಿ ಸಂಗಡಿಗರು ಪ್ರಾರ್ಥನಾಗೀತೆ ಹಾಡಿದರು. ನಾಟ್ಯಶ್ರೀ ಕಲಾ ತಂಡದ ಸಂಚಾಲಕ ವಿದ್ವಾನ್ ದತ್ತಮೂರ್ತಿ ಭಟ್ಟ ಸ್ವಾಗತಿಸಿದರು. ಗಣಪತಿ ಹೆಗಡೆ ಗುಂಜಗೋಡು ನಿರೂಪಿಸಿದರು.
ನವದೆಹಲಿ: ಸಾರ್ಸ್ ಸಿಒವಿ2 ನ ಡೆಲ್ಟಾ ರೂಪಾಂತರಿಯಲ್ಲಿ ಹೊಸ ತಳಿ ಬ್ರಿಟನ್ ಹಾಗೂ ಅಮೆರಿಕದಲ್ಲಿ ಪತ್ತೆಯಾಗಿದ್ದು, ಭಾರತದ ಕೋವಿಡ್-19 ಜಿನೋಮಿಕ್ ಕಣ್ಗಾವಲು ಯೋಜನೆ ಹೈ ಅಲರ್ಟ್ ನಲ್ಲಿದೆ.
ಹೊಸ ರೂಪಾಂತರಿ ವೈರಾಣು ಡೆಲ್ಟಾ ರೂಪಾಂತರಿಗಿಂತಲೂ ವೇಗವಾಗಿ ಹರಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
https://imasdk.googleapis.com/js/core/bridge3.485.1_en.html#goog_757264284
ಹೊಸ ರೂಪಾಂತರಿಯನ್ನು ಎ.ವೈ 4.2 ಎಂದು ಗುರುತಿಸಲಾಗಿದ್ದು, ಬ್ರಿಟನ್ ನಲ್ಲಿ ಈ ಹೊಸ ತಳಿಯನ್ನು “ವೇರಿಯೆಂಟ್ ಅಂಡರ್ ಇನ್ವೆಸ್ಟಿಗೇಷನ್” ಎಂದು ಘೋಷಿಸಲಾಗಿದೆ. ಈ ವರೆಗೂ ಭಾರತದಲ್ಲಿ ಈ ರೂಪಾಂತರಿ ತಳಿಯ ಸೋಂಕು ಪತ್ತೆಯಾಗಿಲ್ಲ. 68,000 ಸ್ಯಾಂಪಲ್ ಗಳನ್ನು ಕೋವಿಡ್-19 ಸೋಂಕಿತರಿಂದ ಸಂಗ್ರಹಿಸಲಾಗಿದ್ದು, ಜಿನೋಮ್ ಸೀಕ್ವೆನ್ಸಿಂಗ್ ಗೆ ಒಳಪಟ್ಟಿದೆ.
ಎವೈ.4.2 ತಳಿ ಪತ್ತೆಯಾಗಿರುವುದರಿಂದ ಭಾರತದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಹೆಚ್ಚು ಮಾದರಿಗಳನ್ನು ಸಂಗ್ರಹಿಸಲಾಗುವುದು ಈ ಮೂಲಕ ಎವೈ 4.2 ನಿಂದ ಬರುವ ಸೋಂಕುಗಳ ಪತ್ತೆ ಸಾಧ್ಯತೆಯನ್ನು ತಪ್ಪಿಸುವುದಿಲ್ಲ ಇದರಿಂದ ಸೋಂಕಿತರಾದವರನ್ನು ತ್ವರಿತವಾಗಿ ಗುರುತಿಸಲಾಗುತ್ತದೆ ಎಂದು ಐಎನ್ ಎಸ್ಎ ಸಿಒಜಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವಾರ ಬ್ರಿಟನ್ ಆರೋಗ್ಯ ಭದ್ರತಾ ಏಜೆನ್ಸಿ ಡೆಲ್ಟಾ ರೂಪಾಂತರಿಯ ಸಬ್ ಟೈಪ್ ಕೊರೋನಾ ವೈರಾಣು ದೇಶದಲ್ಲಿ ಹರಡುತ್ತಿರುವುದನ್ನು ಘೋಷಿಸಿತ್ತು. ಅಮೆರಿಕಾದ ಬಳಿಕ ಬ್ರಿಟನ್ ಜಾಗತಿಕವಾಗಿ ಅತಿ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳನ್ನು ವರದಿ ಮಾಡುತ್ತಿರುವ ರಾಷ್ಟ್ರವಾಗಿದೆ. ಸೆ.27 ರಂದು ಪ್ರಾರಂಭವಾದ ವಾರದಲ್ಲಿ ಸಾರ್ಸ್ ಸಿಒವಿ2 ನ ಎಲ್ಲಾ ಜೆನೆಟಿಕ್ ಸೀಕ್ವೆನ್ಸ್ ಗಳ ಪೈಕಿ ಹೊಸದಾಗಿ ಪತ್ತೆಯಾಗಿರುವ ವೈರಾಣು ತಳಿ ಶೇ.6 ರಷ್ಟು ಇದೆ.
ಹೊಸ ರೂಪಾಂತರಿ ತಳಿ ಏರುಗತಿಯಲ್ಲಿದ್ದು ಡೆಲ್ಟಾ ರೂಪಾಂತರಿಗಿಂತಲೂ ಶೇ.10 ರಷ್ಟು ವೇಗವಾಗಿ ಇದು ಹರಡಬಲ್ಲದು ಎನ್ನಲಾಗುತ್ತಿದ್ದು ಅಮೆರಿಕದಲ್ಲೂ ಈ ತಳಿಯ ಸೋಂಕು ವರದಿಯಾಗಿದೆ. (kpc)