punch- ಜೊತೆಗೆ ಸ್ಥಳಿಯ ಸುದ್ದಿಗಳು…

ಟಾಟಾ ‘ಪಂಚ್‌’ ಸಣ್ಣ ಎಸ್‌ಯುವಿ ಬುಕಿಂಗ್‌ ಆರಂಭ, ಕಾರಿನ ವಿಶೇಷತೆಗಳ ಮಾಹಿತಿ ಇಲ್ಲಿದೆ

ಎಸ್‌ಯುವಿ ವಲಯದಲ್ಲಿ ಹಲವು ವಿನೂತನ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವ ಟಾಟಾ ಮೋಟಾರ್ಸ್‌ ಈಗ, ಟಾಟಾ ಪಂಚ್‌ ಎಂಬ ಸಣ್ಣ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. 

All-new Tata PUNCH launched

ಬೆಂಗಳೂರು: ಎಸ್‌ಯುವಿ ವಲಯದಲ್ಲಿ ಹಲವು ವಿನೂತನ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವ ಟಾಟಾ ಮೋಟಾರ್ಸ್‌ ಈಗ, ಟಾಟಾ ಪಂಚ್‌ ಎಂಬ ಸಣ್ಣ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. 

ಇದು ಭಾರತದ ಮೊದಲ ಸಬ್‌-ಕಾಂಪಾಕ್ಟ್‌ ಅಂದರೆ ಸಣ್ಣ ಎಸ್‌ಯುವಿಯಾಗಿದೆ. ಇದರ ಬುಕಿಂಗ್‌ ಈಗಾಗಲೇ ಆರಂಭಗೊಂಡಿದ್ದು, ಜನರು 21 ಸಾವಿರ ರೂ. ಪಾವತಿಸಿ, ಆನ್‌ಲೈನ್‌ ಮೂಲಕ ಕಾಯ್ದಿರಿಸಬಹುದಾಗಿದೆ. ಕಡಿಮೆ ಬಜೆಟ್‌ನಲ್ಲಿ ಎಸ್‌ಯುವಿ ಮಾದರಿಯ ಕಾರನ್ನು ಇಷ್ಟಪಡುವ ಜನರಿಗೆ ಇದು ಉತ್ತಮ ಆಯ್ಕೆಯಾಗಲಿದೆ. ಇದನ್ನು ತಯಾರಿಸಲು ಭಾರತ, ಬ್ರಿಟನ್‌ ಹಾಗೂ ಇಟಲಿಯ ಟಾಟಾ ಮೋಟಾರ್ಸ್‌ ಡಿಸೈನ್‌ ಸ್ಟುಡಿಯೋಗಳು ಒಟ್ಟಾಗಿ ಕೆಲಸ ಮಾಡಿವೆಯಂತೆ. ಗಾತ್ರದಲ್ಲಿ ಸಣ್ಣದಾದರೂ, ಒಂದು ಸ್ಪೇಷಿಯಸ್‌ ಎಸ್‌ಯುವಿಯನ್ನು ನೀಡುವ ಗುರಿಯನ್ನು ಟಾಟಾ ಹೊಂದಿದೆ ಎನ್ನಲಾಗಿದೆ.

ಅಲ್ಫಾ ಆರ್ಕಿಟೆಕ್ಚರ್‌ ತಂತ್ರಜ್ಞಾನದಿಂದ ತಯಾರಾಗಿರುವ ಟಾಟಾ ಪಂಚ್, 3,827 ಮಿಲಿಮೀಟರ್‌ ಉದ್ದ, 1,945ಎಂಎಂ ಅಗಲ, 1,615ಎಂಎಂ ಉದ್ದ, 2,445ಎಂಎಂ ವೀಲ್ ಬೇಸ್, 366 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.  ಅಂತೆಯೇ 1.2 ಲೀಟರ್‌ ಪೆಟ್ರೋಲ್‌ ಇಂಜಿನ್ ಒಳಗೊಂಡಿದ್ದು, ಇದು ಎಸ್‌ಯುವಿಯ ಲುಕ್‌ ಹೊಂದಿದೆ ಹಾಗೂ ಹ್ಯಾಚ್ ಬ್ಯಾಕ್‌ನ ಗಾತ್ರ ಹೊಂದಿದೆ. ಆದರೆ, ಇದರ 187 ಮಿಮಿ ಗ್ರೌಂಡ್‌ ಕ್ಲಿಯರೆನ್ಸ್‌ ಇದನ್ನು ಎಸ್‌ಯುವಿ ವಿಭಾಗಕ್ಕೆ ಸೇರಿಸುತ್ತದೆ. ಗ್ರೈನೈಡ್‌ ಗ್ರೇ ಡಾಷ್‌ಬೋರ್ಡ್‌ ಇದೆ… ಸೀಟಿನ ತುಂಬೆಲ್ಲಾ ಟಾಟಾದ ಸಿಗ್ನೇಚರ್‌ ಟ್ರೈ ಆ್ಯರೋ ಪಾಟ್ರನ್‌ ಇದೆ.

ಟಾಟಾ ಪಂಚ್‌ ಅನ್ನು ಪುಣೆಯಲ್ಲಿ ಲೇಜರ್‌ ಬ್ರೇಜಿಂಗ್‌ನಂತಹ ತಂತ್ರಜ್ಞಾನ ಬಳಸಲಾಗಿದೆ. ಇದು ಪ್ಯೂರ್‌, ಅಡ್ವೆಂಚರ್‌ , ಅಕಂಪ್ಲಿಸ್ಡ್‌, ಕ್ರಿಯೇಟಿವ್ ಎಂಬ ನಾಲ್ಕು ಪರ್ಸೋನಾಗಳಲ್ಲಿ ಲಭ್ಯವಿರಲಿದೆ. ಇದು ಬಿಳಿ, ಕೇಸರಿ, ಕೆಂಪು ನೀಲಿ,ಗ್ರೇ, ಬ್ರಾನ್ಸ್‌, ಟ್ರಾಪಿಕಲ್‌ ಮಿಸ್ಟ್‌ ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಕೆಲವು ಎಸ್‌ಯುವಿಗಳಲ್ಲಿ ಕಪ್ಪು-ಬಿಳಿ ಬಣ್ಣಗಳ ಡ್ಯುಯಲ್‌ ಟೋನ್‌ ಸನ್‌ರೂಫ್‌ ಆಯ್ಕೆಗಳು ಕೂಡ ಇರಲಿವೆ.

ಸನ್ಮಾನ ಸಮಾರಂಭ
ಸಿದ್ದಾಪುರ, ಕಾನಸೂರು
ಕಾಳಿಕಾ ಭವಾನಿ ಪ್ರೌಢಶಾಲೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಿ.ವಿ.ಹೆಗಡೆ ಹೊರಾಲೆ ಹಾಗೂ ನಿವೃತ್ತ ಮುಖ್ಯಾಧ್ಯಾಪಕಿ ಶ್ರೀಮತಿ ಶಾಂತಾ ಪ್ರಾತಃಕಾಲ ರಿಗೆ ಸಭಾಧ್ಯಕ್ಷ ಶ ಎಸ್. ಎಂ. ಹೆಗಡೆ ಕಾನ್ಸೂರು ಸನ್ಮಾನಿಸಿದರು. ಇಬ್ಬರು ಸನ್ಮಾನಿತರು ಮಾತನಾಡಿ ತಮ್ಮ ಅವಧಿಯಲ್ಲಿ ಸಹಕರಿಸಿದ ಎಲ್ಲರನ್ನೂ ಹೆಸರಿಸಿ ಧನ್ಯವಾದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶ್ರೀ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ರೇಷ್ಮಾ ಗಣೇಶ ಹೆಗಡೆ ಹಾಗೂ ಎಸ್.ಎನ್.ಸುನಯ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಇವರನ್ನು ಸಂಸ್ಥೆಯ ಅಧ್ಯಕ್ಷ ಶ್ರೀ ಎಸ್. ಎಂ. ಹೆಗಡೆ ಕಾನಸೂರು ಸನ್ಮಾನಿಸಿದರು.
ಸನ್ಮಾನಿತ ವಿದ್ಯಾರ್ಥಿಗಳು ಮಾತನಾಡಿ ತಮ್ಮ ಈ ಸಾಧನೆಗೆ ಉತ್ತಮ ಶಿಕ್ಷಕ ವೃಂದ ಹಾಗೂ ಪಾಲಕರ ಪ್ರೋತ್ಸಾಹವೇ ಕಾರಣ ಎಂದರು. ವಿದ್ಯಾರ್ಥಿಗಳು ದಾಸರಾಗದೆ ಕಠಿಣ ಪರಿಶ್ರಮ ಆತ್ಮವಿಶ್ವಾಸ ಹಾಗೂ ಶ್ರದ್ಧೆಯಿಂದ ಅಭ್ಯಾಸಮಾಡಿ ಜೀವನದಲ್ಲಿ ನಿಶ್ಚಿತ ಗುರಿಯನ್ನು ತಲುಪಬಹುದೆಂದು ತಮ್ಮ ಬಾಲ್ಯವನ್ನು ನೆನೆಯುತ್ತ ಹಾಗೂ ಅಮೆರಿಕಾದ ಅನುಭವಗಳನ್ನು ಸೇರಿಸಿ ಡಾಕ್ಟರ್ ಕೆ.ಡಿ.ಭಟ್ ಯು.ಎಸ್.ಎ. ಮುಖ್ಯ ಅತಿಥಿಯಾಗಿ ನುಡಿದರು.
ಹಾಗೂ ಮಕ್ಕಳು ವಿನಯಶೀಲತೆ ಬೆಳೆಸಿಕೊಳ್ಳಬೇಕೆಂದರು.
ಆಡಳಿತ ಮಂಡಳಿಯ ಸದಸ್ಯರಾದ ಶಂಕರ ಭಾಗವತ್, ನಾಗೇಂದ್ರ ಮುತ್ಮುರ್ಡು, ಎಂ.ಡಿ. ಭಟ್ ಸನ್ಮಾನಿತರ ಗುಣಗಾನ ಮಾಡಿದರು. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಅಧ್ಯಾಪಕ ಜಿ.ಐ.ಹೆಗಡೆ ಸನ್ಮಾನಕ್ಕೆ ಪ್ರತಿಕ್ರಿಯಿಸಿದರು.
ಕಾರ್ಯದರ್ಶಿ ಕೆ.ಆರ್. ಹೆಗಡೆ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ಮೀನಾ ಬೋರ್ಕರ್ ವಂದಿಸಿದರು. ರಮೇಶ್ ಹೆಗಡೆ ಹಾಗೂ ಮಾರುತಿ ಕಾಕನೂರು ಕಾರ್ಯಕ್ರಮ ನಿರ್ವಹಿಸಿದರು.
ತರಬೇತಿ- ಮನುವಿಕಾಸ ಸಂಸ್ಥೆ, ಇಡಲ್ ಗೀವ್ ಮತ್ತು ದಲ್ಯಾನ್ ಫೌಂಡೇಶನ್ ಸಹಯೋಗದಲ್ಲಿ ಇಂದು ಲಯನ್ಸ್ ಕ್ಲಬ್ ಸಿದ್ದಾಪುರ ಬಾಲಭವನ ದಲ್ಲಿ ಸ್ವ ಸಹಾಯ ಸಂಘಗಳ ಪರಿಕಲ್ಪನೆ ತರಬೇತಿಯನ್ನ ಹಮ್ಮಿಕೊಂಡಿದ್ದು ಪ್ರಾಸ್ತಾವಿಕವಾಗಿ MG ಹೆಗಡೆ ಯವರು ಮನುವಿಕಾಸ ಸಂಸ್ಥೆಯ ಬಗ್ಗೆ ಮಾತನಾಡಿದರು. ಉದ್ಘಾಟಕರಾಗಿ ಮಹಿಳಾ ಸಾಂತ್ವನ ವೇದಿಕೆಯ ಅಧ್ಯಕ್ಷೆ ಶ್ರೀಮತಿ ವತ್ಸಲಾ ಹೆಗಡೆ ಹಾಗೂ KDCC ಬ್ಯಾಂಕಿನ ಶ್ರೀಮತಿ ಸುಮಿತ್ರಾ ಹಾಗೂ ಮನು ವಿಕಾಸ ಸಂಸ್ಥೆಯ MG ಹೆಗಡೆ, ಪ್ರಗತಿ ಮಿತ್ರ ಕೋ ಆಪರೇಟಿವ್ ನ ವಿನಯ್ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿದರು.
ಮಹಿಳಾ ಸಾಂತ್ವನ ವೇದಿಕೆಯ ಶ್ರೀಮತಿ ವತ್ಸಲ ಹೆಗಡೆ ಮಾತನಾಡಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಗಳಬಗ್ಗೆ ಹಾಗೂ ಅದರಿಂದ ಹೂರಬರಲು ಇರುವ ಕಾನೂನಿನ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಮಹಿಳಾ ಸಹಾಯ ವಾಣಿ ಸಂಖ್ಯೆ ಯನ್ನು ನೀಡಿದರು , ಮಹಿಳೆಯರು ಆರ್ಥಿಕವಾಗಿ ಸಾಮಾಜಿಕ ವಾಗಿ ಮುಂದೆಬರಲು ಸ್ವ ಸಹಾಯ ಸಂಘ ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ತಿಳಿಸಿದರು . ಹಾಗೆಯೇ KDCC ಬ್ಯಾಂಕಿನ ಸುಮಿತ್ರಾ ಮೇಡಂ ಮಾತನಾಡಿ ಬ್ಯಾಂಕಿ ನಿಂದ ಮಹಿಯೆಯರಿಗೆ ಸಿಗುವ ಸಾಲ ಸೌಲಭ್ಯ ದ ಕುರಿತು ಸಮಗ್ರ ಮಾಹಿತಿ ನೀಡಿದರು .
ಮಹಿಳಾ ಸ್ವ ಸಹಾಯ ಸಂಘ ದವರಿಗೆ ಬ್ಯಾಗ್ ನ್ನು ವಿತರಿಸಲಾಯಿತು. ಸಂಸ್ಥೆಯ MG ಹೆಗಡೆ ಸ್ವ ಸಹಾಯ ಮಹಿಳಾ ಸದಸ್ಯರಿಗೆ ಮನುವಿಕಾಸ ಸಂಸ್ಥೆ ಯಿಂದ ಸಿಗುವ , ಕೆರೆ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಸ್ವ ಉದ್ಯೋಗ ತರಬೇತಿ,ಹಾಗೂ ಸಂಘ ಗಳ ನಿರ್ವಹಣೆಯ ಕುರಿತು ಸಮಗ್ರವಾಗಿ ಮಾಹಿತಿಯನ್ನು ನೀಡಿದರು . ಸಂಸ್ಥೆಯ ಪುನೀತ್ ಸ್ವಾಗತಿಸಿದರು , ರವಿ ಸರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಇದರ 90 ಡಿಗ್ರಿ ಓಪನ್‌ ಆಗುವ ಡೋರ್‌ಗಳು, ಹಾಗೂ ಸ್ಪೇಷಿಯಸ್‌ ಲೆಗ್‌ ರೂಂ ಎಲ್ಲಾ ವಯಸ್ಸಿನ ಜನರಿಗೆ ಆರಾಮದಾಯಕ ಪ್ರಯಾಣ ಒದಗಿಸುತ್ತದೆ. 7 ಇಂಚಿನ ಹಿಂದಿನ ಸೀಟಿನಲ್ಲಿ 3 ಪ್ರಯಾಣಿಕರು ಅರಾಮಾಗಿ ಕುಳಿತುಕೊಳ್ಳಬಹುದಾಗಿದೆ.

ಇದಲ್ಲದೆ, ಎಲ್‌ಇಡಿ ಟೈಲ್‌ಲ್ಯಾಂಪ್‌, ಟಚ್‌ ಸ್ಕ್ರೀನ್ ಇನ್ಫೊಟೈನ್‌ಮೆಂಟ್‌, ನ್ಯಾಚುರಲ್‌ ವಾಯ್ಸ್‌ ರೆಕನ್ಷಿಷನ್‌ ಟೆಕ್ನಾಲಜಿ, ಅಡ್ವಾನ್ಸ್‌ ಅಡ್ರೆಸಿಂಗ್‌ ಸಿಸ್ಟಮ್‌ ಹಾಗೂ ಎರಡು ಏರ್‌ಬ್ಯಾಗ್‌, ಎಬಿಎಸ್‌, ಬ್ರೇಕ್‌ ಸ್ವೇ ಕಂಟ್ರೋಲ್, ಪ್ಯಾರಾಮೆಟ್ರಿಕ್‌ ಅಲಾರ್ಮ್ ಸಿಸ್ಟಮ್‌, ಸೀಟ್‌ ಬೆಲ್ಟ್‌ ಅಲಾರ್ಮ್‌ಗಳು ಇದನ್ನು ಐಷಾರಾಮಿ ಹಾಗೂ ಸುರಕ್ಷಾ ವಾಹನವನ್ನಾಗಿಸುತ್ತದೆ.

ಇದರಲ್ಲಿ ಒಂದು ಸ್ಪೇರ್‌ ಚಕ್ರದ ಜೊತೆಗೆ, ಟೈರ್‌ ಪಂಕ್ಚರ್‌ ಸರಿಪಡಿಸುವ ಉಪಕರಣಗಳನ್ನು ಕೂಡ ನೀಡಲಾಗುತ್ತದೆ. ಟಾಟಾಮೊಟಾರ್ಸ್‌ ಪ್ರಕಾರ, ಅಕ್ಟೋಬರ್‌ ತಿಂಗಳಲ್ಲಿ ಈ ಕಾರು ಬಿಡುಗಡೆಯಾಗುವ ನಿರೀಕ್ಷೆಯಿದೆ. ಅದರ ನಿರ್ದಿಷ್ಟ ದರ ಕೂಡ ಮುಂದಿನ ದಿನಗಳಲ್ಲಿ ಬಹಿರಂಗಗೊಳ್ಳಲಿದೆ. ಈಗ 5ರಿಂದ 6 ಲಕ್ಷ ರೂ. ಶೋರೂಂ ದರ ಎಂದು ಹೇಳಲಾಗುತ್ತಿದೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *