

ಸಿದ್ಧಾಪುರ ಶಿರಳಗಿ ಮೂಲದ ಶಿಕ್ಷಕಿ ಪಲ್ಲವಿ ಆನಂದ ಪಾಟೀಲ್ ಹೊಸನಗರ ಹರಿದ್ರಾವತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಲ್ಲವಿ ಪಾಟೀಲ್ ಕೆಲವು ವರ್ಷಗಳ ಹಿಂದೆ ನಗರದ ಎಸ್.ವಿ. ಹೈಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತಿದ್ದರು. ಶಿರಳಗಿಯ ಕೃಷಿಕ ಆನಂದ ಶಿವಲಿಂಗ ಪಾಟೀಲ್ ರ ಮಗಳು ಪಲ್ಲವಿ ಪಾಟೀಲ್ ರನ್ನು ಹೊಸನಗರ ಹರಿದ್ರಾವತಿಯ ಹುಡುಗನಿಗೆ ವಿವಾಹ ಮಾಡಿ ಕಳುಹಿಸಲಾಗಿತ್ತು. ವಿವಾಹಿತ ಪಲ್ಲವಿ ಪಾಟೀಲ್ 6 ವರ್ಷಗಳ ಹಿರಿಯ ಮಗಳು ಮತ್ತು ಒಂದೂವರೆ ವರ್ಷದ ಹೆಣ್ಣು ಶಿಶುವನ್ನು ಹೊಂದಿದ್ದರು. ಆತ್ಮಹತ್ಯೆಯ ನಿಖರ ಕಾರಣ ತಿಳಿದು ಬಂದಿಲ್ಲ. ಇಬ್ಬರು ಹೆಣ್ಣು ಮಕ್ಕಳ ತಾಯಿ ಪಲ್ಲವಿ ಪಾಟೀಲ್ ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಾಳಿಸುದ್ದಿ ಹರಿದಾಡುತ್ತಿದೆ ಆದರೆ ಪಲ್ಲವಿ ಮಕ್ಕಳನ್ನು ಬಿಟ್ಟು ತಾನೊಬ್ಬಳೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಬಗ್ಗೆ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ ಎಂದು ಸಮಾಜಮುಖಿಯ ಪಕ್ಕಾ ಮಾಹಿತಿದಾರರು ಸ್ಪಷ್ಟಪಡಿಸಿದ್ದಾರೆ.



ಹಳೆ ಸಂಘದ ಅವಧಿ ಕೊನೆಗೊಂಡಿದ್ದರಿಂದ ಸಂಘದ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಪಿ ಬಿ ಹೊಸೂರ ಹಾಗೂ ಕಾರ್ಯದರ್ಶಿಯಾಗಿ ಸುರೇಶ ಮಡಿವಾಳ ಕಡಕೇರಿ ಯವರನ್ನು ಸರ್ವ ಸಮ್ಮಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಉಳಿದ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಅಧ್ಯಕ್ಷ , ಕಾರ್ಯದರ್ಶಿಗಳಿಗೆ ನೀಡಲಾಯಿತು.

