ಗೋವಾ ಸೇರಿದಂತೆ ದೇಶದ ಕೆಲವು ರಾಜ್ಯಗಳ ಪ್ರವಾಸೋದ್ಯಮದ ಪ್ರಮುಖ ಮೂಲ ಕ್ಯಾಸಿನೋ ಪ್ರಾರಂಭ ದ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಪರಿಸರ ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಯಾಸಿನೋ ಪ್ರಾರಂಭಿಸುವ ಹೊಸ ಚಿಂತನೆ ಬಗ್ಗೆ ಸೋಮುವಾರ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಕಾರವಾರದಲ್ಲಿ ಪ್ರಕಟಿಸಿದ್ದರು. ಶಿವರಾಮ ಹೆಬ್ಬಾರರ ರಾಜ್ಯೋತ್ಸವ ಭಾಷಣದ ಪ್ರಮುಖ ಅಂಶವಾಗಿದ್ದ ಕ್ಯಾಸಿನೋ ಪ್ರಾರಂಭದ ಬಗ್ಗೆ ಜಿಲ್ಲೆಯಾದ್ಯಂತ ವಿರೋಧದ ಅಲೆ ಎದ್ದಿದೆ.ಇದು ಜಿಲ್ಲೆಗೆ ಕಳಂಕ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಉತ್ತರ ಕನ್ನಡ ಜಿಲ್ಲೆ ಅರಣ್ಯ, ಪರಿಸರ ಪ್ರವಾಸೋದ್ಯಮದ ಪ್ರಮುಖ ಜಿಲ್ಲೆ. ಈ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ನೆಪದಲ್ಲಿ ಕ್ಯಾಸಿನೋ ಪ್ರಾರಂಭ ಗೋವಾ ಸಂಸ್ಕೃತಿಗೆ ಆಹ್ವಾನ ಕೊಟ್ಟಂತೆ ಜಿಲ್ಲೆಯಲ್ಲಿ ಜನಸಾಮಾನ್ಯರ ಅನೇಕ ಸಮಸ್ಯೆಗಳಿವೆ ಅಂಥ ಸಮಸ್ಯೆ, ಸವಾಲು ಸ್ವೀಕರಿಸದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಮ್ಮ ವೈಯಕ್ತಿಕ ಅಭಿಪ್ರಾಯ, ಯೋಜನೆ ಹೇಳಿದ್ದಾರೋ ಇದು ಬಿ.ಜೆ.ಪಿ.ಯ ಯೋಚನೆ, ಯೋಜನೆಯೋ ಎನ್ನುವ ಪ್ರಶ್ನೆ ಎದ್ದಿದೆ.
ಗೋವಾ ಮಾದರಿಯ ಕ್ಯಾಸಿನೋ ಪ್ರಾರಂಭದ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಜಿಲ್ಲಾಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಅರಣ್ಯ ಭೂಮಿ ಸಾಗುವಳಿದಾರರು ಮತ್ತು ಇತರ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸದ ಜಿಲ್ಲಾಡಳಿತ ಕ್ಯಾಸಿನೋ ಪ್ರಾರಂಭಕ್ಕೆ ಮುಂದಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಜನರ ಮನೋಭಾವ, ಅಭಿಪ್ರಾಯಕ್ಕೆ ವಿರೋಧ ಎಂದಿದೆ.
ಈ ಬಗ್ಗೆ ಮಾತನಾಡಿದ ಅರಣ್ಯಭೂಮಿ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ಕ್ಯಾಸಿನೋ ಪ್ರಾರಂಭದಿಂದ ಉತ್ತರ ಕನ್ನಡ ಜಿಲ್ಲೆಯ ಭಾಗ್ಯದ ಬಾಗಿಲು ತೆರೆಯಲ್ಲ ಬದಲಾಗಿ ಗೋವಾದ ಮೋಜಿನ ಸಂಸ್ಕೃತಿಗೆ ಇಲ್ಲಿ ಅವಕಾ ಶ ಮಾಡಿದಂತಾಗುತ್ತದೆ. ಕ್ಯಾಸಿನೋ ಕ್ಕೆ ಅವಕಾಶ ಮಾಡುವ ಜಿಲ್ಲಾಡಳಿತದ ನಿರ್ಧಾರ ಜನವಿರೋಧಿಯಾಗಿದೆ ಎಂದು ತಿಳಿಸಿದ್ದಾರೆ ಜನರ ಅಗತ್ಯ ಬೇಡಿಕೆಗಳಿಗೆ ಸ್ಫಂದಿಸದ ಸರ್ಕಾರ ಕ್ಯಾಸಿನೋ ಮೂಲಕ ಜಿಲ್ಲೆಯ ಸಂಸ್ಕೃತಿ-ಸಂಸ್ಕಾರಕ್ಕೆ ಅಪಚಾರ ಎಂದಿದ್ದಾರೆ. .ಉತ್ತರ ಕನ್ನಡ ಜಿಲ್ಲೆಯ ಜನ ಕ್ಯಾಸಿನೋ ಮೋಜಿಗಾಗಿ ಜಿಲ್ಲೆಯಿಂದ ಗೋವಾಕ್ಕೆ ಹೋಗಿ ಬರುತ್ತಿರುವ ವಿದ್ಯಮಾನದ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರರ ರಾಜ್ಯೋತ್ಸವ ದಿಕ್ಸೂಚಿಗೆ ತೀವೃ ವಿರೋಧ ವ್ಯಕ್ತವಾಗಿರುವುದು ವಿಶೇಶವಾಗಿದೆ.