

ಗಾಂಜಾ ದಾಸ್ತಾನಿನ ಇನ್ನೊಂದು ಪ್ರಕರಣ ಸಿದ್ಧಾಪುರದಲ್ಲಿ ಪತ್ತೆಯಾಗಿದೆ. ವಿವರ ಹೀಗಿದೆ. ಕೆರೆಗದ್ದೆ ಮೇಲಿನ ಸರಕುಳಿಯ ಕಟ್ಯಾ ಮಾಚಾ ಗೌಡ ಬೀಜ ಮತ್ತು
ಹೂವುಗಳ ಒಣ ಗಾಂಜಾ ಸಂಗ್ರಹಿಸಿಟ್ಟಿ ದ್ದು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಶಿರಸಿಯ ಅಬಕಾರಿ ಇಲಾಖೆ ಅಧಿಕಾರಿಗಳು ಮಾಲು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿವರ ಹೀಗಿದೆ.
ದಿನಾಂಕ:02_11_2021ರಂದು ರಾತ್ರಿ 9__45 ಗಂಟೆಗೆ ಸಿದ್ದಾಪುರ ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಗದ್ದೆ, ಮೇಲಿನ ಸರಕುಳಿ ಗ್ರಾಮದ ನಿವಾಸಿಯಾದ ಕಟ್ಯಾ ಮಾಚ ಗೌಡ ಮನೆಯಲ್ಲಿ ದಾಳಿ ನಡೆಸಲಾಗಿ, ಸದರಿ ಆರೋಪಿಯು ತನ್ನ ಮನೆಯ ಒಳಗಡೆ ಇಡಲಾಗಿರುವ ಟೆಲಿವಿಷನ್ ಸೆಟ್ ನ ಹಿಂಭಾಗದಲ್ಲಿ ಎರಡು ಚೀಲಗಳಲ್ಲಿ ಬೀಜ ಮತ್ತು ಹೂವುಗಳನ್ನು ಒಳಗೊಂಡ ಒಣ ಗಾಂಜಾವನ್ನು ಹೊಂದಿರುವುದು ಕಂಡು ಬಂದಿರುತ್ತದೆ.. ಚೀಲಗಳಲ್ಲಿ ಇದ್ದ ಮಾದಕ ವಸ್ತುಗಳನ್ನು ಡಿಜಿಟಲ್ ತೂಗು ಯಂತ್ರದಲ್ಲಿ ತೂಗಲಾಗಿ, ಒಂದನೆಯ ಚೀಲದಲ್ಲಿ 483 ಗ್ರಾಮ್ ಹಾಗೂ ಇನ್ನೊಂದು ಚೀಲದಲ್ಲಿ 360 ಗ್ರಾಮ್ ಈ ರೀತಿಯಲ್ಲಿ ಒಟ್ಟು 843 ಗ್ರಾಮ್ ಮಾದಕ ವಸ್ತುವನ್ನು ಮಾರಾಟಕ್ಕಾಗಿ ಹೊಂದಿರುವುದನ್ನು ಪತ್ತೆಹಚ್ಚಿ ಅವುಗಳನ್ನು ಜಪ್ತುಪಡಿಸಿ, ಆರೋಪಿಯನ್ನು ದಸ್ತಗೀರ್ ಮಾಡಿ, ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ..
ದಾವಣಗೆರೆ: 67 ಕೆಜಿ ಪಂಗೋಲಿನ್ ಚಿಪ್ಪು ವಶ, 18 ಮಂದಿ ಬಂಧನ
ಶಿವಮೊಗ್ಗ ರಸ್ತೆಯ ಹರಿಹರದ ಬಳಿಯ ಡಾಬಾದಿಂದ ಸುಮಾರು 67 ಕೆಜಿ ಪಂಗೋಲಿನ್ ಚಿಪ್ಪುಗಳನ್ನು ಸಾಗಿಸುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ: ಶಿವಮೊಗ್ಗ ರಸ್ತೆಯ ಹರಿಹರದ ಬಳಿಯ ಡಾಬಾದಿಂದ ಸುಮಾರು 67 ಕೆಜಿ ಪಂಗೋಲಿನ್ ಚಿಪ್ಪುಗಳನ್ನು ಸಾಗಿಸುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮದ ಬಗ್ಗೆ ಮಾಹಿತಿ ಪಡೆದ ಡಿಸಿಆರ್‌ಬಿ ಡಿಎಸ್‌ಪಿ ಬಿ.ಎಸ್.ಬಸವರಾಜು ಮತ್ತು ತಂಡ ಶಿವಬಸವ ಡಾಬಾ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಎರಡು ವ್ಯಾನ್‌ಗಳಲ್ಲಿ ಪ್ಯಾಂಗೋಲಿನ್ ಸ್ಕೇಲ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ಇದರೊಂದಿಗೆ 18 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಪ್ರಕರಣವನ್ನು ಸಹ ದಾಖಲಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚೀನಾ ಔಷಧಿಗೆ ಮುಳ್ಳುಹಂದಿ ಚಿಪ್ಪು ಬಳಕೆ ಮಾಡುವುದರಿಂದ ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಈ ದಂಧೆ ನಡೆಯುತ್ತಿದ್ದು, ಹೀಗಾಗಿ ಅಳಿವಿನಂಚಿನಲ್ಲಿರುವ ಈ ಸಸ್ತನಿಯನ್ನು ರಕ್ಷಿಸಬೇಕಾಗಿದೆ. (ಕ.ಪ್ರ.ಡಾ.)
ಶ್ರೀಮತಿ ಶೈಲಜಾ ಕೋಟೆ, ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ರವರ ನಿರ್ದೇಶನದಂತೆ, ವನಜಾಕ್ಷಿ ಎಮ್. ಅಬಕಾರಿ ಉಪ ಆಯುಕ್ತರು ಉ.ಕ. ಜಿಲ್ಲೆ ಕಾರವಾರ ರವರ ಮಾರ್ಗದರ್ಶನದಲ್ಲಿ, ಮಹೇಂದ್ರ ಎಸ್. ನಾಯ್ಕ ಅಬಕಾರಿ ಉಪ_ ಅಧೀಕ್ಷಕರು(ಪ್ರಭಾರ)ಉಪ -ವಿಭಾಗ ಶಿರಸಿ ಇವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಜ್ಯೋತಿಶ್ರೀ ಜಿ. ನಾಯ್ಕ ಅಬಕಾರಿ ನಿರೀಕ್ಷಕರು ಶಿರಸಿ ವಲಯ ಇವರು ಪ್ರಕರಣ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿಕೊಂಡಿದ್ದು, ದಾಳಿಯಲ್ಲಿ ಡಿ. ಎನ್. ಶಿರಸಿಕರ ಅಬಕಾರಿ ಉಪ-ನಿರೀಕ್ಷಕರು ಶಿರಸಿ ವಲಯ, ಸಿಬ್ಬಂದಿಗಳಾದ ನಿರ್ಮಲಾ ಎಮ್. ನಾಯ್ಕ ಪ್ರಸನ್ನ ಯು. ನೇತ್ರಕರ್, ಬಸವರಾಜ ಒಂಟಿ, ಗಂಗಾಧರ vi ಕಲ್ಲೇದ್,ಕುಮಾರೇಶ್ವರ ಅಂಗಡಿ,ಸವಿತಾ ಎಸ್. ಲಂಕೇರ ಹಾಗೂ ವಾಹನ ಚಾಲಕರಾದ ಎನ್. ಕೆ. ವೈದ್ಯ ಮತ್ತು ಬಿ. ಎಮ್. ಗಾಯಕವಾಡ ಇವರುಗಳು ಪಾಲ್ಗೊಂಡಿದ್ದರು… ಜಪ್ತು ಪಡಿಸಿದ ಗಾಂಜಾ ದ ಅಂದಾಜು ಮೌಲ್ಯ 25000ರೂಪಾಯಿಗಳು.

